Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪಗ್ ನಾಯಿಯ ಆರೋಗ್ಯದ ಕಡೆಗೂ ಗಮನ ಕೊಡಿ

ಪಗ್ ಆರೋಗ್ಯ ಕಾಪಾಡಲು ಸುಲಭ ಸಲಹೆ:
1. ಕ್ರಿಮಿನಿರೋಧಕ ಸ್ಪ್ರೇ: ಕ್ರಿಮಿ ಕೀಟಗಳು ನಾಯಿಯ ಕೂದಲಿಗೆ ಸೇರಿಕೊಂಡು ಆರೋಗ್ಯ ತೊಂದರೆ ಉಂಟು ಮಾಡುತ್ತದೆ. ಇಂತಹ ಸಮಯದಲ್ಲಿ ಪಶು ವೈದ್ಯರನ್ನು ಸಂಪರ್ಕಿಸಿ ಕ್ರಿಮಿ ನಿರೋಧಕ ಕ್ರೀಂ ಹಾಗೂ ಸೊಳ್ಳೆ ನಿರೋಧಕ ಮತ್ತು ಕ್ರಿಮಿ ನಿರೋಧಕ ಸ್ಪ್ರೇಗಳನ್ನು ನಾಯಿಗೆ ಬಳಸಬಹುದು. ನಾಯಿಯನ್ನು ಆಗಾಗ್ಗೆ ಸ್ನಾನ ಮಾಡಿಸುವುದೂ ಕೂಡ ಕ್ರಿಮಿಯನ್ನು ದೂರವಿಡಲು ಸಹಾಯಕ.
2. ಹೆಚ್ಚು ತೂಕವಿರದಿರಲಿ: ಪಗ್ ದುಂಡಗಿದ್ದರೇನೆ ಚೆಂದ. ಆದರೆ ಅತಿ ದಪ್ಪಗಾದರೆ ಆರೋಗ್ಯಕ್ಕೆ ಮಾರಕವಾಗಬಹುದು. ಬೊಜ್ಜಿನ ಸಮಸ್ಯೆ ಹೆಚ್ಚಿಸಿ ಅತಿಯಾದ ತೂಕ ನಾಯಿಗೆ ಕಾಲು ನೋವನ್ನೂ ಕೊಡಬಹುದು. ಅದರಲ್ಲೂ ಪಗ್ ಗೆ ಬೊಜ್ಜು ಹೆಚ್ಚಾದರೆ ಕಣ್ಣು ಮತ್ತು ಕಿಡ್ನಿಗೆ ತೊಂದರೆ ಉಂಟಾಗುತ್ತದೆ.
3. ಲಘು ವ್ಯಾಯಾಮ ಸಾಕು: ನಾಯಿಯನ್ನು ಆರೋಗ್ಯ ತೊಂದರೆಯಿಂದ ದೂರವಿರಿಸಲು ಲಘು ವ್ಯಾಯಾಮ ಸಾಕು. ಪಗ್ ಗೆ ದಿನವೂ ನಡಿಗೆ ಇರಲಿ. ತುಂಬಾ ಬಿಸಿಲಿದ್ದಾಗ ನಾಯಿಯನ್ನು ಹೊರಗೆ ತಿರುಗಿಸುವುದು ಬೇಡ. ಹಾಗೆಯೇ ಪಗ್ ಗೆ ತುಂಬಾ ವ್ಯಾಯಾಮವನ್ನೂ ಮಾಡಿಸಬಾರದು. 10-15 ನಿಮಿಷ ನಡಿಗೆ ಇದ್ದರೆ ಪಗ್ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ.
4. ತುಂಬಾ ಉಷ್ಣತೆ ಹೊಂದಿರುವ ನಾಯಿ: ನಾಯಿಯ ದೇಹದ ಉಷ್ಣತೆಯನ್ನು ಆಗಾಗ್ಗೆ ಪರೀಕ್ಷಸುತ್ತಿರಬೇಕು. ಪಗ್ ನಾಯಿಗಳಿಗೆ ಬೇಗನೆ ಉಷ್ಣವಾಗುತ್ತದೆ. ತುಂಬಾ ಬಿಸಿಲಿದ್ದಾಗ ಅದಕ್ಕೆ ತಂಪು ವಾತಾವರಣವನ್ನು ಒದಗಿಸಬೇಕು. ಅದರ ದೇಹ ಬಿಸಿಯಾಗಿದ್ದು ಕಂಡುಬಂದರೆ ಅದರ ಹೊಟ್ಟೆ ಮೇಲೆ 5 ನಿಮಿಷ ಐಸ್ ಇಡಬಹುದು.
5. ಕಿವಿ ಮತ್ತು ಚರ್ಮದ ಸೋಂಕು: ಪಗ್ ನಾಯಿಗೆ ಕಿವಿಯ ಸಮಸ್ಯೆ ಸಾಮಾನ್ಯವಾಗಿರುತ್ತೆ. ಪಗ್ ಕಿವಿ ತುಂಬಾ ಚಿಕ್ಕದಿದ್ದು, ಸುಕ್ಕುಗಳಿಂದ ಕೂಡಿರುವುದರಿಂದ ಅದರೊಳಗೆ ಬ್ಯಾಕ್ಟೀರಿಯಾ ಮತ್ತು ಇನ್ನಿತರ ಕ್ರಿಮಿಗಳು ಬೇಗನೆ ಸೇರಿಕೊಳ್ಳುತ್ತವೆ. ಆದ್ದರಿಂದ ಪಗ್ ಕಿವಿ ಮತ್ತು ಮುಖವನ್ನು ಆಗಾಗ್ಗೆ ಶುದ್ಧ ಮಾಡುತ್ತಿರಬೇಕು. ಮೆತ್ತಗಿನ ಟಿಶ್ಯೂ ಅಥವಾ ಹತ್ತಿಯ ಉಂಡೆಯನ್ನು ಕ್ಲೀನ್ ಮಾಡಲು ಬಳಸಬಹುದು. ಪಗ್ ಗೆ ಗಾಯವಾದ ತಕ್ಷಣವೇ ಚಿಕಿತ್ಸೆ ನೀಡಬೇಕು.



Click it and Unblock the Notifications
