Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ಮಾರುಕಟ್ಟೆಯಿಂದ ಪತಂಜಲಿ ಮೆಣಸಿನ ಪುಡಿ ವಾಪಸ್..! ನಕಲಿ ಪುಡಿ ಪತ್ತೆ ಮಾಡೋದು ಹೇಗೆ ಗೊತ್ತಾ?
ನಾವು ನಿತ್ಯ ಅಡುಗೆ ಕೆಲಸಕ್ಕೆ ಖಾರದ ಪುಡಿ ಬಳಸಿಯೇ ಬಳಸುತ್ತೇವೆ. ನಿತ್ಯ ಒಂದಲ್ಲಾ ಒಂದು ಖಾದ್ಯ ಮಾಡುವಾಗ ಖಾರದ ಪುಡಿಯಂತು ಇರಲೇಬೇಕು. ಊಟದ ರುಚಿ ಹೆಚ್ಚಸಿಬೇಕಾದರೆ ಸರಿಯಾದ ಪ್ರಮಾಣದಲ್ಲಿ ಖಾರದ ಪುಡಿ ಬಳಸಬೇಕು. ಈಗ ಮಾರುಕಟ್ಟೆಯಲ್ಲಿ ಹತ್ತಾರು ಬಗೆಯ ಖಾರದ ಪುಡಿ ಸಿಗುತ್ತೆ. ಕೆಲವೊಂದು ಕಡುಕೆಂಪು ಬಣ್ಣದಲ್ಲಿದ್ದರೆ ಮತ್ತೆ ಕೆಲವು ಖಾರ ಹೆಚ್ಚಾಗಿರುವ ಪುಡಿ ಸಿಗುತ್ತದೆ.
ಆದ್ರೆ ಈಗ ಪತಂಜಲಿ ಸಂಸ್ಥೆಯು ತನ್ನ ಎಲ್ಲಾ ಖಾರದ ಪುಡಿ ಪ್ಯಾಕೆಟ್‌ಗಳನ್ನು ಈಗ ಮಾರುಕಟ್ಟೆಯಿಂದ ಹಿಂಪಡೆದಿದೆ. ಆಹಾರ ಸುರಕ್ಷತಾ ನಿಯಂತ್ರಕವು ಬಾಬಾ ರಾಮ್‌ದೇವ್ ನೇತೃತ್ವದ ಸಂಸ್ಥೆಗೆ ಸುರಕ್ಷತಾ ಮಾನದಂಡಗಳ ಉಲ್ಲಂಘನೆಗಾಗಿ ಮೆಣಸಿನ ಪುಡಿಯನ್ನು ಸಂಪೂರ್ಣವಾಗಿ ಮಾರುಕಟ್ಟಯಿಂದ ಹಿಂಪಡೆಯುವಂತೆ ಸೂಚಿಸಿದೆ.

ಪತಂಜಲಿ ಉತ್ಪನ್ನವನ್ನು ಪರಿಶೀಲನೆ ನಡೆಸುವಾಗ ಖಾರದ ಪುಡಿಯು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ನಿಯಮ 2011ರ ಅನ್ವಯ ನಿಯಮ ಪಾಲನೆ ಮಾಡಿಲ್ಲ ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಹೀಗಾಗಿ ಮಾರುಕಟ್ಟೆಯಿಂದ ಎಲ್ಲಾ ಪ್ಯಾಕೆಟ್‌ಗಳ ಹಿಂಪಡೆಯಲು ಸೂಚಿಸಲಾಗಿದೆ. ಸುರಕ್ಷಿತಾ ಮಾನದಂಡಗಳ ಪೂರೈಸದ ಹೊರತು ಪತ್ತೆ ಈ ಖಾರದ ಪುಡಿ ಮಾರುಕಟ್ಟೆಯಲ್ಲಿ ಲಭ್ಯವಾಗುವುದಿಲ್ಲ.
ಹಾಗಾದ್ರೆ ಮಾರುಕಟ್ಟೆಯಲ್ಲಿ ಸಿಗುವಂತಹ ಖಾರದ ಪುಡಿಯಲ್ಲಿ ನಕಲಿ ಪುಡಿಗಳ ಪತ್ತೆ ಮಾಡುವುದು ಹೇಗೆ?
ಸಾಮಾನ್ಯವಾಗಿ ಖಾರದ ಪುಡಿಗಳಿಗೆ ಏನನ್ನು ಮಿಶ್ರಣ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳಿ. ಖಾರದ ಪುಡಿಗೆ ಹೆಚ್ಚಾಗಿ ಕೆಂಪು ಇಟ್ಟಿಗೆ ಪುಡಿ, ಮರಳು, ಮರದ ಪುಡಿ, ಪಿಷ್ಟ, ಸೋಪಿನ ಪುಡಿ ಹೀಗೆ ಕೆಲವೊಂದು ವಸ್ತುಗಳನ್ನು ಬೆರೆಸುವುದು ನೋಡಬಹುದು. ಹಾಗೆ ಮೆಣಸಿನ ಪುಡಿ ಬಣ್ಣದಿಂದ ಕೂಡಿರಲಿ ಎಂಬ ಕಾರಣಕ್ಕೆ ಕೃತಕ ಬಣ್ಣ ಸೇರಿಸುವುದು ಕೂಡ ನೋಡಬಹುದು. ಹಾಗಾದ್ರೆ ಈ ನಕಲಿ ಪುಡಿಯನ್ನು ಕಂಡು ಹಿಡಿಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಕೆಂಪು ಮೆಣಸಿನ ಪುಡಿಗೆ ಯಾವುದೇ ವಸ್ತು ಹಾಕಿದ್ದಾರೆ ಎಂಬ ಅನುಮಾನ ಬಂದರೆ ಅಥವಾ ಅದನ್ನು ಪರೀಕ್ಷಿಸಲು ನೀವು ಮುಂದಾದರೆ ಒಂದು ಗಾಜಿನ ಲೋಟದಲ್ಲಿ ನೀರು ಹಾಕಿ ಬಳಿಕ ಖಾರದ ಪುಡಿಯನ್ನು ಅದಕ್ಕೆ ಹಾಕಿ. ಒಂದು ವೇಳೆ ನೀರಿನ ಬಣ್ಣ ಕೆಂಪಾಗುವ ಜೊತೆಗೆ ತಳದಲ್ಲಿ ಉಳಿಯುವ ವಸ್ತುಗಳನ್ನು ನೀಡು ಕೈ ಮೇಲೆ ಹಾಕಿಕೊಂಡು ಪರೀಕ್ಷಿಸಬಹುದು. ಅಲ್ಲಿ ಮಾರದ ಹೊಟ್ಟು, ಇಟ್ಟಿಗೆ ಪುಡಿ ಅಥವಾ ಯಾವುದೇ ವಸ್ತು ಹಾಕಿದ್ದರೆ ನೀರಿನಲ್ಲಿ ಮಿಶ್ರಣವಾಗದೆ ಉಳಿದುಬಿಡುತ್ತದೆ.
ಇನ್ನು ಮೆಣಸಿನ ಪುಡಿಯನ್ನು ಒಂದು ಪ್ಲೇಟ್‌ನಲ್ಲಿ ಹಾಕಿಕೊಂಡು ಬಳಿಕ ಅದಕ್ಕೆ ಉಪ್ಪು ಮಿಶ್ರಿತ ನೀರು ಅಥವಾ ಅಯೋಡಿನ್ ಹನಿಗಳನ್ನು ಚಿಮುಕಿಸಿ. ಈ ವೇಳೆ ಮೆಣಸಿನ ಪುಡಿ ನೀಲಿ ಬಣ್ಣಕ್ಕೆ ತಿರುಗಿದರೆ ಅದು ಕಲಬೆರಕೆ ಆಗಿದೆ ಎಂದರ್ಥ ಅದರಲ್ಲೂ ಪಿಷ್ಠವನ್ನು ಮಿಶ್ರಣ ಮಾಡಿದ್ದಾರೆ ಎಂದು ತಿಳಿಸುತ್ತೆ. ಹಾಗೆ ಒಂದು ಗ್ಲಾಸ್‌ನಲ್ಲಿ ನೀರು ತೆಗೆದುಕೊಂಡು ಅದಕ್ಕೆ ಈ ಖಾರದ ಪುಡಿ ಹಾಕಿ ಮಿಶ್ರಣ ಮಾಡಿ. ಬಳಿಕ ಅದರ ನೀರನ್ನು ತೆಗೆದು ಕೈ ಮೇಲೆ ಹಾಕಿಕೊಂಡು ಉಜ್ಜಿಕೊಳ್ಳಿ ಒಂದು ವೇಳೆ ಸೋಪಿನ ಪುಡಿಯನ್ನು ಮಿಶ್ರಣ ಮಾಡಿದರೆ ನೊರೆ ಬರುತ್ತದೆ.



Click it and Unblock the Notifications
