Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
Origin of Laddu: ಲಡ್ಡು ಮೊದಲು ತಯಾರಾಗಿದ್ದೆಲ್ಲಿ? ದ್ವಾಪರ ಯುಗಕ್ಕೂ ಲಡ್ಡುಗೂ ಸಂಬಂಧ ಇದ್ಯಾ?
ಹಿಂದೂಗಳ ಯಾವುದೇ ಹಬ್ಬ ಆದ್ರೂ ಕೂಡ ಅಲ್ಲಿ ಸಿಹಿ ತಿಂಡಿಗಳು ಇರಲೇ ಬೇಕು. ಸಿಹಿ ತಿಂಡಿಗಳಲ್ಲಿ ಮುಖ್ಯವಾಗಿ ಲಡ್ಡು ಇಲ್ಲದೇ ಯಾವುದೇ ಹಬ್ಬಗಳು ಪೂರ್ತಿಯಾಗೋದಿಲ್ಲ. ಸಾಮಾನ್ಯವಾಗಿ ಲಡ್ಡು ಅಂದ್ರೆ ಎಲ್ಲರಿಗೂ ಇಷ್ಟ.
ಹೆಚ್ಚಾಗಿ ಬೂಂದಿ ಲಡ್ಡು ಎಲ್ಲಾ ಕಡೆ ಲಭ್ಯವಾಗುತ್ತೆ. ಆದ್ರೆ ಇತ್ತೀಚಿಗಂತೂ ವಿಧವಿಧವಾದ ಲಡ್ಡುಗಳು ಲಭ್ಯವಾಗುತ್ತದೆ. ಯಾವುದನ್ನು ತಿನ್ನೋದು ಯಾವುದನ್ನು ಬಿಡೋದು ಅನ್ನೋ ಗೊಂದಲ ಶುರುವಾಗುತ್ತೆ. ಅಷ್ಟೊಂದು ವೆರೈಟಿ ಲಡ್ಡುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.

ಅವುಗಳೆಂದರೆ ಮೋತಿಚೂರ್ ಲಡ್ಡು, ಬೇಸನ್ ಲಡ್ಡು, ತೆಂಗಿನ ಕಾಯಿ ಲಡ್ಡು, ಡ್ರೈ ಪ್ರೂಟ್ಸ್ ಲಡ್ಡು ಇತ್ಯಾದಿ. ಹೀಗೆ ಹೇಳುತ್ತಾ ಹೋದರೆ ಲಡ್ಡುಗಳ ಒಟ್ಟಿ ಮುಗಿಯೋದಿಲ್ಲ. ಒಂದಕ್ಕಿಂತ ಒಂದು ಲಡ್ಡು ವಿಶೇಷವಾಗಿರುತ್ತೆ. ಇನ್ನೂ ರುಚಿ ಬಗ್ಗೆ ಎರಡು ಮಾತಿಲ್ಲ. ಬಾಯಲ್ಲಿಟ್ಟರೆ ಕರಗಿ ಹೋಗುತ್ತೆ. ಈ ಲಡ್ಡುಗಳ ಕಾನ್ಸೆಪ್ಟ್ ಶುರುವಾಗಿದ್ದೇ ಬಹು ವಿಶೇಷ. ಅಷ್ಟಕ್ಕು ಈ ಲಡ್ಡುಗಳ ಪರಂಪರೆ ಶುರುವಾಗಿದ್ಹೇಗೆ? ಈ ಲಡ್ಡುವನ್ನು ಮೊದಲಿಗೆ ತಯಾರು ಮಾಡಿದ್ಯಾರು ಅನ್ನೋದನ್ನು ತಿಳಿಯೋಣ.
ಲಡ್ಡು ಮೊದಲಿಗೆ ತಯಾರಾಗಿದ್ಯಾವಾಗ?
ಇತಿಹಾಸಕಾರರ ಪ್ರಕಾರ ಕ್ರಿಸ್ತ ಪೂರ್ವ 300-500 ರ ಶತಮಾನದಲ್ಲೇ ಮೊದಲ ಬಾರಿಗೆ ಲಡ್ಡುವನ್ನು ಗುರುತಿಸಲಾಗಿತ್ತಂತೆ. ಪ್ರಾಚೀನ ಭಾರತೀಯ ವೈದ್ಯನಾದ ಸುಶ್ರುತನು ತನ್ನ ರೋಗಿಗಳಿಗೆ ಆಯುರ್ವೇದ ಔಷಧಿಗಳನ್ನು ನೀಡಲು ಸಿಹಿಯನ್ನು ಬಳಸುತ್ತಿದ್ದನೆಂದು ಹೇಳಲಾಗುತ್ತದೆ. ಈ ಚಿಕ್ಕ ಚಿಕ್ಕ ಸಿಹಿಯ ಚೆಂಡುಗಳು ರೋಗಿಗಳಿಗೆ ಸೇವಿಸಲು ತುಂಬಾನೇ ಸುಲಭವಾಗಿತ್ತಂತೆ. ಎಳ್ಳು, ಬೆಲ್ಲ ಮತ್ತು ಕಡಲೆಕಾಳುಗಳಿಂದ ತಯಾರಿಸಿದ ಲಡ್ಡುಗಳನ್ನು ಔಷಧಿ ರೂಪದಲ್ಲಿ ನೀಡಲಾಗ್ತಿತ್ತಂತೆ.
ತೆಂಗಿನಕಾಯಿ ಲಡ್ಡು
ತೆಂಗಿನಕಾಯಿ ಲಡ್ಡು ತಿನ್ನೋದಕ್ಕೆ ತುಂಬಾನೇ ರುಚಿಕರವಾಗಿರುತ್ತದೆ. ತೆಂಗಿನಕಾಯಿ ಲಡ್ಡು ಮೊದಲಿಗೆ ಆರಂಭವಾಗಿದ್ದು ದಕ್ಷಿಣ ಭಾರತದಿಂದ ಅಂತ ಹೇಳಲಾಗುತ್ತದೆ. ಅದ್ರಲ್ಲೂ ಚೋಳರ ಆಳ್ವಿಕೆ ಸಮಯದಲ್ಲಿ ತೆಂಗಿನಕಾಯಿಯ ಲಡ್ಡು ಹೆಚ್ಚು ಪ್ರಚಲಿತದಲ್ಲಿತ್ತು. ಯುದ್ಧಕ್ಕೆ ಹೊರಡುವ ಸಂದರ್ಭದಲ್ಲಿ ಸೈನಿಕರು ಮತ್ತು ಪ್ರಯಾಣಿಕರು ಲಡ್ಡುಗಳನ್ನು ಬುತ್ತಿಯಲ್ಲಿ ಪ್ಯಾಕ್ ಮಾಡಿ ತೆಗೆದುಕೊಂಡು ಹೋಗುತ್ತಿದ್ದರಂತೆ. ಇದರಿಂದ ಅವರನ್ನು ಹಸಿವನ್ನು ನೀಗಿಸಿಕೊಳ್ತಿದ್ರಂತೆ.
ಲಡ್ಡು ಜೊತೆಗೆ ಗಣೇಶ ಹಾಗೂ ಕೃಷ್ಣನಿಗೆ ಇರುವ ಸಂಬಂಧವೇನು?
ಲಡ್ಡುವಿನ ವಿಶೇಷತೆಯ ಬಗ್ಗೆ ಪೌರಾಣಿಕ ಕಥೆಗಳಲ್ಲಿಯೂ ಕೂಡ ಉಲ್ಲೇಖವಾಗಿದೆ. ಗಣೇಶನಿಗೂ ಲಡ್ಡುವಿಗೂ ಸಂಬಂಧವಿದೆ. ಆದರೆ ಆಗಿನ ಕಾಲದ ಲಡ್ಡು ಈಗಿನ ಹಾಗಿರಲಿಲ್ಲ. ಮೊದಲೆಲ್ಲಾ ಗಣೇಶನಿಗೆ ಲಡ್ಡು ನೀಡಲಾಗ್ತಿತ್ತಂತೆ. ಮೋದಕ ಗಣೇಶನಿಗೆ ಬಲು ಇಷ್ಟ. ಮೋದಕವನ್ನೂ ಕೂಡ ಸಿಹಿ ಹಾಗೂ ತೆಂಗಿನಕಾಯಿಯಿಂದ ತಯಾರು ಮಾಡಲಾಗುತ್ತದೆ. ಕೃಷ್ಣನ ತಾಯಿಯೂ ಗಣೇಶನ ಭಕ್ತಳಾಗಿದ್ದು, ಆಕೆಯು ಮೋದಕವನ್ನು ಮೊದಲು ತಯಾರು ಮಾಡಿದ್ದಳೆಂದು ಹೇಳಲಾಗುತ್ತದೆ.
ಮೋದಕ ಮತ್ತು ಗಣೇಶನ ಪ್ರೀತಿ ನಮಗೆಲ್ಲರಿಗೂ ತಿಳಿದಿದೆ. ಇನ್ನೂ ಈ ಮೊದಕವನ್ನು ತಯಾರು ಮಾಡೋದು ತುಂಬಾನೇ ಸುಲಭ. ಅಕ್ಕಿ ಹಿಟ್ಟನ್ನು ತಯಾರಿಸಿ ಅದರ ಒಳಗಡೆ ಬೆಲ್ಲ ಹಾಗೂ ತೆಂಗಿನ ಕಾಯಿಯ ಮಿಶ್ರಣವನ್ನು ಹಾಕಿ ಹಬೆಯಲ್ಲಿ ಬೇಯಿಸಲಾಗುತ್ತದೆ. ಇನ್ನೂ ಕೃಷ್ಣನಿಗೆ ಸಿಹಿ ಆಹಾರ ತುಂಬಾನೇ ಇಷ್ಟ ಆಗಿದ್ರಿಂದ ಅದನ್ನು ಕೃಷ್ಣ ಕದಿಯುತ್ತಾನೆಂದು ಆತನ ಕೈಗಳನ್ನು ಕಟ್ಟಲಾಗ್ತಿತ್ತಂತೆ. ಇನ್ನೂ ದ್ವಾಪರ ಯುಗದಲ್ಲೂ ಕೂಡ ಲಡ್ಡುವಿನ ಉಲ್ಲೇಖ ಇತ್ತೆಂದು ಹೇಳಲಾಗುತ್ತದೆ.
ತಿರುಪತಿ ಲಡ್ಡು!
ಲಡ್ಡು ಅಂದಾಕ್ಷಣ ನೆನಪಾಗೋದು ತಿರುಪತಿ. ತಿರುಪತಿ ತಿಮ್ಮಪ್ಪನ ಪ್ರಸಾದವನ್ನಾಗಿ ಲಡ್ಡುವನ್ನು ವಿತರಣೆ ಮಾಡಲಾಗುತ್ತದೆ. ತಿರುಪತಿ ತಿಮ್ಮಪ್ಪನ ದೇಗುಲದಲ್ಲಿ ಲಭ್ಯವಾಗುವ ವಿಶೇಷ ಲಡ್ಡು ಬಹುಶಃ ಬೇರೆಲ್ಲೂ ಲಭ್ಯವಾಗೋದಿಲ್ಲ ಅನ್ಸುತ್ತೆ. ತಿರುಪತಿಯಲ್ಲಿ ಆಗಸ್ಟ್ 2, 1715ರಿಂದ ಲಡ್ಡುವನ್ನು ವಿತರಣೆ ಮಾಡಲಾಗ್ತಿದ್ಯಂತೆ. ಈ ಪರಂಪರೆಯನ್ನು ಇನ್ನೂ ಕೂಡ ಅಲ್ಲಿ ಪಾಲಿಸಿಕೊಂಡು ಬರಲಾಗ್ತಿದೆ. ಇನ್ನೂ ವಿಶೇಷ ಅಂದ್ರೆ ತಿರುಪತಿ ಲಡ್ಡನ್ನು ದೇವಾಲಯದ ಒಳಗಡೆ ತಯಾರು ಮಾಡಲಾಗುತ್ತದೆ.
ಲಡ್ಡು ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ಅಚ್ಚುಮೆಚ್ಚು. ಕೆಲವೊಂದು ತಿಂಡಿಗಳು ಫೇಮಸ್ ಆದಾಗ ಮಾತ್ರ ನಾವು ಅದರ ಮೂಲವನ್ನು ಹುಡುಕುವ ಪ್ರಯತ್ನ ಮಾಡುತ್ತೇವೆ. ಇಂತಹ ತಿಂಡಿಗಳು ಖಂಡಿತ ಒಂದಲ್ಲ ಒಂದು ವಿಶೇಷತೆಯನ್ನು ಹೊಂದಿರುತ್ತದೆ. ಅವುಗಳ ಚಾರಿತ್ರೆ ಎಂದಿಗೂ ಅಳಿಸಿಹೋಗುವಂತಹದಲ್ಲ.



Click it and Unblock the Notifications

