Latest Updates
-
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ!
ಮನೆ ಬಾಗಿಲ ಬಳಿ ಈ ವಸ್ತು ಇಟ್ಟರೆ ಸುಖ, ಶಾಂತಿ, ಸಂಪತ್ತು ವೃದ್ಧಿ: ಯಾವುದೆಲ್ಲಾ ಗೊತ್ತಾ?
ಮನೆಯಲ್ಲಿ ಪ್ರತಿಯೊಂದು ವಸ್ತುವಿಡಲು ಸಹ ವಾಸ್ತು ಪ್ರಕಾರವಾದ ಜಾಗವಿದೆ, ಸ್ಥಳವಿದೆ. ವಾಸ್ತು ಶಾಸ್ತ್ರದಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರವೂ ಇದೆ. ಆದರೆ ಕೆಲವೊಂದು ನಮ್ಮ ಅರಿವಿಲ್ಲದೆಯೂ ವಾಸ್ತು ಪ್ರಕಾರವೇ ನೆರವೇರುತ್ತದೆ. ಆದರೆ ಇನ್ನು ಕೆಲವು ವಿಚಾರಗಳು ರೂಢಿ ಸಂಪ್ರದಾಯದಲ್ಲಿ ಬೆರೆತು ಹೋಗಿರುತ್ತದೆ.
ರೂಢಿಯಲ್ಲಿ ಬೆರೆತು ಹೋದ ಕೆಲವು ಸಂಪ್ರದಾಯದಲ್ಲಿ ಮನೆಯ ದ್ವಾರ ಬಾಗಿಲ ಹೊಸ್ತಿಲ ಮೇಲೆ ಧಾನ್ಯ ಕಟ್ಟುವುದು. ಇದು ವಾಸ್ತುಶಾಸ್ತ್ರದಲ್ಲಿ ಹೇಳಲಾದ ವಿಧಾನವಾಗಿದ್ದರೂ ಇದು ಸಂಪ್ರದಾಯದಲ್ಲಿ ಬೆರೆತು ಹೋಗಿದೆ. ಹೀಗಾಗಿ ಬಹುಪಾಲು ಜನರ ಮನೆಯಲ್ಲಿ ಈ ಶಾಸ್ತ್ರ ಇಂದಿಗೂ ಆಚರಣೆಯಲ್ಲಿದೆ. ಆದರೆ ಹಲವರಿಗೆ ಇದು ವಾಸ್ತು ಶಾಸ್ತ್ರದ ಪ್ರಕಾರವೆಂಬುದು ತಿಳಿದಿರುವುದಿಲ್ಲ.

ಇದೇ ರೀತಿಯ ಹತ್ತಾರು ವಿಚಾರಗಳು ವಾಸ್ತು ಶಾಸ್ತ್ರದಂತೆ ನಡೆಯುತ್ತದೆ. ಇನ್ನು ನಿಮ್ಮ ಮನೆ ಮತ್ತು ಜೀವನದಲ್ಲಿ ಯಶಸ್ಸು ಸಾಧಿಸಲು ವಾಸ್ತು ಶಾಸ್ತ್ರವು ಮಾರ್ಗವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ನೀವು ಈ ವಸ್ತುಗಳನ್ನು ನಿಮ್ಮ ಮನೆಯ ಮುಖ್ಯ ಬಾಗಿಲಿನ ಹೊರಗೆ ಇರಿಸಿದರೆ, ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯ ಜೊತೆಗೆ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗುತ್ತೀರಿ ಎನ್ನಲಾಗಿದೆ.
ತೋರಣ ಕಟ್ಟುವುದು
ಮನೆಯ ಪ್ರವೇಶದ್ವಾರದಲ್ಲಿ ತೋರಣವನ್ನು ನೇತುಹಾಕುವುದು ಭಾರತೀಯ ಮನೆಗಳ ಹಳೆಯ ಸಂಪ್ರದಾಯವಾಗಿದೆ, ವಿಶೇಷವಾಗಿ ದೀಪಾವಳಿಯಂತಹ ಹಬ್ಬಗಳಲ್ಲಿ, ಜನರು ತಮ್ಮ ಮನೆಗಳಲ್ಲಿ ವಿವಿಧ ರೀತಿಯ ಸುಂದರವಾದ ತೋರಣವನ್ನು ಕಟ್ಟುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯಿಂದ ನಕಾರಾತ್ಮಕತೆಯನ್ನು ತೊಡೆದುಹಾಕಲು ನೀವು ಬಯಸಿದರೆ, ನೀವು ಮಾವು, ಅರಳಿ ಮರದ ಎಲೆಗಳಿಂದ ಮಾಡಿದ ತೋರಣವನ್ನು ಮುಖ್ಯ ದ್ವಾರದಲ್ಲಿ ಕಟ್ಟಬೇಕು.
ಗುಲಾಬಿ ದಳಗಳ ಇಡುವುದು
ಒಂದು ಗಾಜಿನ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಮತ್ತು ಅದರಲ್ಲಿ ಕೆಲವು ಗುಲಾಬಿ ಹೂವಿನ ದಳಗಳನ್ನು ಹಾಕಿ ನಿಮ್ಮ ಮನೆಯ ಹೊರಗೆ ಇರಿಸುವುದು. ವಾಸ್ತು ಪ್ರಕಾರ ಇದು ತುಂಬಾ ಮಂಗಳಕರವಂತೆ. ಮನೆಯ ಹೊರಗಿನ ಇಂತಹ ವಸ್ತುಗಳು ಸಂಪತ್ತು ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತವೆ ಮತ್ತು ನಿಮ್ಮ ಮನೆಯ ಪ್ರವೇಶವನ್ನು ಹೆಚ್ಚು ಸುಂದರವಾಗಿಸುತ್ತದೆ ಎಂದು ಹೇಳಲಾಗುತ್ತದೆ.
ಲಕ್ಷ್ಮಿ ದೇವಿ ಪಾದದ ಸ್ಟಿಕ್ಕರ್
ತಮ್ಮ ಮನೆಯ ಹೊರಗೆ ಲಕ್ಷ್ಮಿ ದೇವಿಯ ಪಾದಗಳ ಸ್ಟಿಕ್ಕರ್‌ಗಳು ಅಥವಾ ಚಿತ್ರಗಳನ್ನು ಹಾಕುವುದು ಆಕೆಯನ್ನು ಬರಮಾಡಿಕೊಳ್ಳುವ ವಿಧಾನವಂತೆ. ಲಕ್ಷ್ಮಿ ಹಣದ ರೂಪದಲ್ಲಿ ಮಾತ್ರ ಬರುವುದಿಲ್ಲವಂತೆ. ಬೇರೆ ಬೇರೆ ವಸ್ತುಗಳ ರೂಪದಲ್ಲೂ ಮನೆಗೆ ಸಂಪತ್ತಾಗಿ ಬರಬಹುದು ಎಂಬುದು ವಾಸ್ತು ಶಾಸ್ತ್ರದ ಉಲ್ಲೇಖವಾಗಿದೆ. ಇದನ್ನು ಹಿಂದೂ ಧರ್ಮದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಇದನ್ನು ಮಾಡುವುದರಿಂದ ನಮ್ಮ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಮನೆ ಹೊರಗಿನ ಗೋಡೆಗೆ ಸ್ವಸ್ತಿಕ್ ಚಿಹ್ನೆ ಬರೆಯುವುದು
ನೀವು ಹಲವು ಮನೆಗಳ ಪ್ರವೇಶ ದ್ವಾರ ಇಲ್ಲವೆ ಗೋಡೆಯ ಮೇಲೆ ಸ್ವಸ್ತಿಕ್ ಚಿಹ್ನೆ ಬರೆದಿರುವುದನ್ನು ನೋಡಬಹುದು. ವಾಸ್ತು ಶಾಸ್ತ್ರದ ಪ್ರಕಾರ ಸ್ವಸ್ತಿಕ್ ನಮಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಸ್ವಸ್ತಿಕ್ ರೋಗಗಳು ಮತ್ತು ದುಃಖವನ್ನು ಸಹ ಕಡಿಮೆ ಮಾಡುತ್ತದೆ ಮತ್ತು ಇದನ್ನು ಮನೆಯಲ್ಲಿ ಸ್ಥಾಪಿಸುವುದು ತುಂಬಾ ಮಂಗಳಕರವಾಗಿದೆ.
ಮನೆ ಮುಂದೆ ವಿಂಡ್ ಚೈಮ್ ಹಾಕುವುದು
ಮನೆಯ ದ್ವಾರಕ್ಕೆ ನೇರವಾಗಿ ವಿಂಡ್ ಚೈಮ್ ಹಾಕುವುದರಿಂದ ಮನೆಯಲ್ಲಿ ನೆಮ್ಮದಿ ಇರಲಿದೆ ಎಂದು ವಾಸ್ತುಶಾಸ್ತ್ರ ಹೇಳುತ್ತದೆ. ವಿಂಡ್ ಚೈಮ್ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಆಕರ್ಷಿಸುವುದರೊಂದಿಗೆ ಅದೃಷ್ಟ ಮತ್ತು ಯಶಸ್ಸನ್ನು ತರುತ್ತದೆ.



Click it and Unblock the Notifications
