For Quick Alerts
ALLOW NOTIFICATIONS  
For Daily Alerts

Vasthu tips: ಮನೆಯಲ್ಲಿ ಫ್ಯಾಮಿಲಿ ಫೋಟೋ ಹಾಕೋದಾದ್ರೆ ಈ ದಿಕ್ಕಿನಲ್ಲಿ ಮಾತ್ರ ಇಡಿ!

|

ಪ್ರತಿಯೊಂದು ಮನೆಯಲ್ಲೂ ಸಹ ಫ್ಯಾಮಿಲಿ ಫೋಟೋ ಇರೋದು ಸಾಮಾನ್ಯ. ಅಷ್ಟೇ ಅಲ್ಲ, ತಮ್ಮ ಅಮೂಲ್ಯ ಕ್ಷಣಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು, ತಮ್ಮ ಮನೆಯ ಗೋಡೆಗಳಲ್ಲಿ ನೇತುಹಾಕುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ಇಂತಹ ತಮ್ಮ ಫ್ಯಾಮಿಲಿ ಅಥವಾ ತಮ್ಮ ಸ್ನೇಹಿತರ ಫೋಟೋವನ್ನು ಎಲ್ಲೆಂದರಲ್ಲಿ ಇಡುವುದು ಸರಿಯಲ್ಲ.

123
ವಾಸ್ತು ಶಾಸ್ತ್ರದ ಪ್ರಕಾರ, ಫ್ಯಾಮಿಲಿ ಫೋಟೋವನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕಂತೆ. ಇಲ್ಲವಾದಲ್ಲಿ ಅದು ನಿಮ್ಮ ಮನೆಯ ಸದಸ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಂತೆ. ಹಾಗಾದರೆ, ಮನೆಯಲ್ಲಿ ಧನಾತ್ಮಕತೆ ತುಂಬಿರಲು ಫ್ಯಾಮಿಲಿ ಅಥವಾ ಸ್ನೇಹಿತರ ಫೋಟೋವನ್ನು ಯಾವ ದಿಕ್ಕಿನಲ್ಲಿ ಹಾಕುವುದು ಉತ್ತಮ? ಈ ಲೇಖನ ಓದಿ ನಿಮಗೆ ತಿಳಿಯುತ್ತೆ.

ವಾಸ್ತು ಪ್ರಕಾರ, ಫ್ಯಾಮಿಲಿ ಫೋಟೋ ಹಾಕಲು ಯಾವ ದಿಕ್ಕು ಉತ್ತಮ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಈ ದಿಕ್ಕಿನಲ್ಲಿ ಫ್ಯಾಮಿಲಿ ಫೋಟೋ ಹಾಕಬೇಡಿ!

ಈ ದಿಕ್ಕಿನಲ್ಲಿ ಫ್ಯಾಮಿಲಿ ಫೋಟೋ ಹಾಕಬೇಡಿ!

ಸಾಮಾನ್ಯವಾಗಿ ಮನೆಯೊಳಗೆ ಫ್ಯಾಮಿಲಿ ಫೋಟೋ ಹಾಕುವುದು ವಾಡಿಕೆ. ಆದ್ರೆ ಈ ಫೋಟೋವನ್ನು ಒಟ್ಟಾರೆಯಾಗಿ ನೇತುಹಾಕುವುದು ಸರಿಯಲ್ಲ. ನೀವು ನಿಮ್ಮ ಖುಷಿಗೆ ಹಾಕಿದದರೂ, ವಾಸ್ತು ಪ್ರಕಾರ ಅದು ಕೆಲವೊಂದು ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ, ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಪೂರ್ವ ಅಥವಾ ಉತ್ತರ ಮೂಲೆಯಲ್ಲಿ ಕುಟುಂಬ ಅಥವಾ ಸ್ನೇಹಿತರ ಪೋಟೋವನ್ನು ಎಂದಿಗೂ ಇಡಬಾರದು. ಇದು ಮನೆಯ ಸದಸ್ಯರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಫ್ಯಾಮಿಲಿ ಫೋಟೋಗಳನ್ನು ಯಾವ ದಿಕ್ಕಿನಲ್ಲಿ ಇಡುವುದು ಶುಭ?

ಫ್ಯಾಮಿಲಿ ಫೋಟೋಗಳನ್ನು ಯಾವ ದಿಕ್ಕಿನಲ್ಲಿ ಇಡುವುದು ಶುಭ?

ವಾಸ್ತು ಶಾಸ್ತ್ರದ ಪ್ರಕಾರ, ನಿಮ್ಮ ಮನೆಯಲ್ಲಿ ಕುಟುಂಬದ ಫೋಟೋಗಳನ್ನು ಇಡಲು ಉತ್ತಮ ಸ್ಥಳವೆಂದರೆ ನೈಋತ್ಯ ಗೋಡೆ. ಈ ದಿಕ್ಕಿನಲ್ಲಿ ಫೋಟೋಗಳನ್ನು ಹಾಕುವುದರಿಂದ ಸಂಬಂಧಗಳಲ್ಲಿ ಶಕ್ತಿ ಮತ್ತು ಮಾಧುರ್ಯ ಹೆಚ್ಚಾಗುತ್ತದೆ. ಇದರಿಂದ ಧನಾತ್ಮಕ ಶಕ್ತಿಯ ಹರಿವು ಮನೆಯಲ್ಲಿ ಉಳಿಯುತ್ತದೆ, ಇದು ಮನೆಯ ಪ್ರತಿಯೊಬ್ಬ ಸದಸ್ಯರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.

* ನಿಮ್ಮ ಫೋಟೋಗಳಲ್ಲಿ ನೀರಿನ ಅಂಶವಿದ್ದರೆ, ಅಂತಹ ಚಿತ್ರಗಳನ್ನು ಹಾಕಲು ಉತ್ತಮ ಸ್ಥಳವೆಂದರೆ ಮನೆಯ ಉತ್ತರ ಗೋಡೆ.

* ಚಿತ್ರಗಳಲ್ಲಿ ಬೆಂಕಿಗೆ ಸಂಬಂಧಿಸಿದ ಅಂಶವಿದ್ದರೆ, ಅವುಗಳನ್ನು ದಕ್ಷಿಣದ ಗೋಡೆಯ ಮೇಲೆ ಮಾತ್ರ ಇಡಬೇಕು. ಇದರರ್ಥ ನೀವು ಯಾವುದೋ ಬೆಂಕಿಯ ಹತ್ತಿರ ಅಥವಾ ಇನ್ನೆಲ್ಲೋ ಬೀಚ್ ಬದಿ ತೆಗೆಸಿಕೊಂಡ ಫೋಟೋ ಇದ್ದರೆ ಅವುಗಳನ್ನು ಈ ದಿಕ್ಕಿನಲ್ಲಿ ಹಾಕುವುದು ಉತ್ತಮ.

ಪೂರ್ವಜರ ಚಿತ್ರ ಹಾಕಲು ಸರಿಯಾದ ದಿಕ್ಕು ಯಾವುದು?

ಪೂರ್ವಜರ ಚಿತ್ರ ಹಾಕಲು ಸರಿಯಾದ ದಿಕ್ಕು ಯಾವುದು?

ಹೆಚ್ಚಿನವರು, ಮನೆಯಲ್ಲಿ ತಮ್ಮ ಹಿರಿಯರ ಅಥವಾ ಪೂರ್ವಜರ ಫೋಟೋವನ್ನು ಇಟ್ಟಿರುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಪೂರ್ವಜರ ಚಿತ್ರ ಹಾಕಬೇಕೆಂದರೆ ಅದಕ್ಕೆ ದಕ್ಷಿಣ ದಿಕ್ಕು ಉತ್ತಮ. ಈ ದಿಕ್ಕನ್ನು ಹೊರತುಪಡಿಸಿ, ಬೇರೆಲ್ಲೂ ಪೂರ್ವಜರ ಫೋಟೋ ಹಾಕುವುದು ಒಳ್ಳೆಯದಲ್ಲ. ಮುಖ್ಯವಾಗಿ ದೇವರ ಕೋಣೆಯಲ್ಲಿ ಈ ಪೂರ್ವಜರ ಫೋಟೊವನ್ನುಇಡಬಾರದು ಎಂಬುದನ್ನು ನೆನಪಿನಲ್ಲಿಡಿ.

ಮನೆ ಮನಸ್ಸುಗಳಿಗೆ ಯಾವ ಫೋಟೋ ಅಥವಾ ಚಿತ್ರ ಒಳ್ಳೆಯದು?

ಮನೆ ಮನಸ್ಸುಗಳಿಗೆ ಯಾವ ಫೋಟೋ ಅಥವಾ ಚಿತ್ರ ಒಳ್ಳೆಯದು?

ನೀವು ಪ್ರಾಣಿ ಮತ್ತು ಪಕ್ಷಿಗಳ ಚಿತ್ರವನ್ನು ಹುಡುಕುತ್ತಿದ್ದರೆ, ಎರಡು ಬಿಳಿ ಹಂಸಗಳ ಚಿತ್ರವನ್ನು ಹಾಕಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಅಂತಹ ಚಿತ್ರವನ್ನು ಹಾಕುವುದು ಸಂಬಂಧಗಳನ್ನು ಬಲಪಡಿಸುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಇರುತ್ತದೆ.

ಮನೆಯಲ್ಲಿ ಹಣ್ಣುಗಳಿಗೆ ಸಂಬಂಧಿಸಿದ ಚಿತ್ರಗಳು ಮತ್ತು ವರ್ಣಚಿತ್ರಗಳನ್ನು ಹೊಂದುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ಊಟದ ಕೋಣೆಯಲ್ಲಿ ವಿವಿಧ ಹಣ್ಣುಗಳು ಅಥವಾ ಹಣ್ಣಿನ ಬಟ್ಟಲುಗಳೊಂದಿಗೆ ಚಿತ್ರಗಳನ್ನು ನೇತುಹಾಕಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಅದೃಷ್ಟ ಮತ್ತು ಸಂತೋಷ ನೆಲೆಸುವುದು.

English summary

family or friends picture should never be placed in the eastern or northern corner of the house

Here we talking about vastu tips: family or friends picture should never be placed in the eastern or northern corner of the house, read on
Story first published: Thursday, June 30, 2022, 11:45 [IST]
X
Desktop Bottom Promotion