Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ನಿಮ್ಮನ್ನು ಆವರಿಸಿರುವ 'ನೆಗೆಟಿವ್ ಎನರ್ಜಿ' ತೆಗೆಯಲು ಫವರ್‌ಫುಲ್ ಟಿಪ್ಸ್
ನಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನು ನಾವು ಊಹಿಸಲು ಸಾಧ್ಯವಿಲ್ಲ ಎನ್ನುವುದು ಎಷ್ಟು ನಿಜವೂ, ನಾನು ಏನು ಬಯಸುತ್ತೇವೆ ಅದರಂತೆ ಜೀವನ ಬದಲಾಗುತ್ತದೆ ಎಂಬುವುದು ಕೂಡ ಅಷ್ಟೇ ನಿಜ. ಹೌದು ಆದ್ದರಿಂದಲೇ ಪಾಸಿಟಿವ್ ಥಿಂಕಿಂಗ್ ಇರಬೇಕು ಅಂದರೆ ಒಳಿತನ್ನೇ ಯೋಚಿಸಬೇಕೆಂದು ಹೇಳುವುದು.

ಅಲ್ಲದೆ ನಾವು ಏನು ಯೋಚಿಸುತ್ತೇವೆ ಅದು ನಮ್ಮ ದೇಹದ ಮೇಲೂ ಪರಿಣಾಮ ಬೀರುವುದು. ಇದರಿಂದ ಮನಸ್ಸಿನ ನೆಮ್ಮದಿ ಹಾಳಾಗುವುದು. ನಾವು ಕೆಟ್ಟದ್ದನ್ನುಯೋಚಿಸಿದರೆ ಒಂದೊಂದೇ ಆರೋಗ್ಯ ಸಮಸ್ಯೆ ಶುರುವಾಗುತ್ತದೆ. ಅದೇ ಒಳ್ಳೆಯ ಆಲೋಚನೆ ಇದ್ದರೆ ದೇಹದ ಆರೋಗ್ಯ ಕೂಡ ಚೆನ್ನಾಗಿರುತ್ತದೆ.
ಇನ್ನು ಕೆಲವೊಮ್ಮೆ ನಾವು ಏನಾದರೂ ಒಳ್ಳೆಯದು ಯೋಚಿಸಿದರೂ ಬೇರೆಯವರ ನೆಗೆಟಿವ್ ಥಿಂಕಿಂಗ್ ನಿಮ್ಮನ್ನು ಪ್ರಭಾವಿಸಬಹುದು. ಇಲ್ಲಿ ನಾವು ನೆಗೆಟಿವ್ ಎನರ್ಜಿ ದೂರ ಮಾಡಲು ಪವರ್‌ಫುಲ್ ಟಿಪ್ಸ್ ನೀಡಿದ್ದೇವೆ ನೋಡಿ:

ನಿಮ್ಮ ಸುತ್ತ ನೆಗೆಟಿವಿಟಿ ತುಂಬಿದೆಯೇ?
ನಿಮ್ಮ ಸುತ್ತ ನೆಗೆಟಿವಿಟ್ ಅಂದರೆ ನಕಾರಾತ್ಮಕ ಶಕ್ತಿ ತುಂಬಿದೆಯೇ ಎಂಬುವುದನ್ನು ನೀವು ಗಮನಿಸಯೇ ಇರುವುದಿಲ್ಲ. ಕೆಲವೊಮ್ಮೆ ನಿಮಗೆ ಗೊತ್ತಿಲ್ಲದೆಯೇ ಅದರ ಪ್ರಭಾವಕ್ಕೆ ಒಳಗಾಗಿರುತ್ತೀರಿ. ಇದರಿಂದ ನಿಮಗೇ ಅಪಾಯ. ನಿಮ್ಮ ಸುತ್ತ ಇರುವ ನಕಾರಾತ್ಮಕ ಶಕ್ತಿ ಇದ್ದರೆ ನಿಮ್ಮಲ್ಲಿ ಈ ಲಕ್ಷಣಗಳು ಕಂಡು ಬರುವುದು:
- ನಿಮಗೆ ಸಮಧಾನವಿರುವುದಿಲ್ಲ
- ಸರಿಯಾಗಿ ನಿದ್ದೆ ಬರುವುದಿಲ್ಲ
- ತುಂಬಾ ಮಾನಸಿಕ ಒತ್ತಡ, ನಿಶ್ಯಕ್ತಿ
- ಕೆಟ್ಟ-ಕೆಟ್ಟ ಆಲೋಚನೆಗಳು ಬರುವುದು
- ಬೇರೆಯವರ ನೆಗೆಟಿವ್ ಆಲೋಚನೆಗಳು ನಿಮ್ಮ ಮೇಲೆ ಪ್ರಭಾವ ಬೀರುವುದು
- ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಸಾಕಷ್ಟು ಗೊಂದಲ
- ಮನೆಯಲ್ಲಿ ಅಥವಾ ಆಫೀಸ್‌ನಲ್ಲಿ ಕೆಲ ವ್ಯಕ್ತಿಗಳನ್ನು ಭೇಟಿ ಮಾಡಿದ ಬಳಿಕ ಕಿರಿಕಿರಿ ಅನಿಸುವುದು.

ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುವುದು ಹೇಗೆ?
ನೀವು ಯಾರನ್ನಾದರೂ ಭೇಟಿ ಮಾಡಿದಾಗ ಅಥವಾ ನೋಡಿದಾಗ ನಿಮ್ಮ ಶಕ್ತಿ ಕುಂದಿದ ಅನುಭವ ಉಂಟಾಗುವುದೇ? ಆ ವ್ಯಕ್ತಿಯನ್ನು ಭೇಟಿಯಾದಾಗ ಅಥವಾ ಅವರ ಜೊತೆ ಮಾತನಾಡಿದಾಗ ಸಿಟ್ಟು, ಹತಾಶೆ ಉಂಟಾಗುತ್ತಿದ್ದರೆ ಅದಕ್ಕೆ ಕಾರಣವೇನು ಎಂಬುವುದನ್ನು ಕೂಡ ಯೋಚಿಸಿ. ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಚಿಕ್ಕ ವಿಷಯಕ್ಕೆ ತಪ್ಪು ಕಲ್ಪನೆ ಮೂಡಿರುತ್ತದೆ, ಅವುಗಳನ್ನು ಸರಿಪಡಿಸಿದರೆ ಎಲ್ಲಾ ಸರಿ ಹೋಗುವುದು. ಇಲ್ಲಾ ಆ ವ್ಯಕ್ತಿ ಜೊತೆ ಹೊಂದಾಣಿಕೆ ಸಾಧ್ಯನೇ ಇಲ್ಲ ಎನ್ನುವುದಾದರೆ ಅವರ ಮಾತನಾಡುವುದು ಅಥವಾ ಅವರ ಜೊತೆ ಕಳೆಯುವ ಸಮಯ ಕಡಿಮೆ ಮಾಡಿ.

ಧ್ಯಾನ ಮಾಡಿ ಮನಸ್ಸನ್ನು ಶಾಂತಗೊಳಿಸಿ
ದಿನದಲ್ಲಿ 30 ನಿಮಿಷ ಧ್ಯಾನ ಮಾಡಿ ನೋಡಿ, ನಿಮ್ಮ ಮನಸ್ಸಿನಲ್ಲಿ ಸಾಕಷ್ಟು ಬದಲಾವಣೆಯಾಗುವುದು. ನಿಮ್ಮ ಆಲೋಚನೆಗಳು ಬದಲಾಗುವುದು. ನೀವು ತೆಗೆದುಕೊಳ್ಳುವ ನಿರ್ಧಾರದಲ್ಲಿ ಸ್ಪಷ್ಟತೆ ಮೂಡುವುದು. ಇದರ ಜೊತೆಗೆ ಇತರ ವ್ಯಾಯಾಮ ಮಾಡುವುದು, ಮ್ಯೂಸಿಕ್ ಕೇಳುವುದು, ಬುಕ್ ಓದುವುದು ಮಾಡಬಹುದು. ಇದರಿಂದ ನಕಾರಾತ್ಮಕ ಆಲೋಚನೆಗೆ ನಿಮ್ಮ ಮನಸ್ಸಿನಲ್ಲಿ ಜಾಗವಿಲ್ಲದಾಗುವುದು.

ಮನೆಯನ್ನು ಸ್ವಚ್ಛವಾಗಿಡಿ
ನಾವು ಇರುವ ಪರಿಸರ ಕೂಡ ನಮ್ಮ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಸುಂದರವಾದ ವಸ್ತುಗಳನ್ನು ನೋಡಿದಾಗ ಮನಸ್ಸಿಗೆ ಖುಷಿಯಾಗುತ್ತದೆ. ಅದರಂತೆಯೇ ಆಲೋಚನೆಗಳು ಕೂಡ ಚೆನ್ನಾಗಿರುತ್ತದೆ. ಮನೆಯನ್ನು ಅಂದವಾಗಿಡಿ. ಮನೆ ಮುಂದೆ ಕೈ ತೋಟ ಬೆಳೆಯಿರಿ. ಇಲ್ಲಾ ಹೂ ಕುಂಡಗಳಲ್ಲಿ ಗಿಡ ಬೆಳೆಯಿರಿ. ಇವೆಲ್ಲಾ ಖುಷಿ ಕೊಡುವುದರ ಜೊತೆಗೆ ಮನಸ್ಸಿಗೆ ಕ್ರಿಯೇಟಿವಿಟಿ ತುಂಬುವುದು.

ನೀವು ಎಷ್ಟು ಬಾರಿ ದೂರುತ್ತೀರಿ ಎನ್ನುವುದನ್ನು ಗಮನಿಸಿ
ನಿಮ್ಮ ಬಗ್ಗೆ ಇನ್ನೊಬ್ಬರು ದೂರು ಹೇಳುವುದು ಅಲ್ಲ, ನೀವು ಬೇರೆಯವರ ಬಗ್ಗೆ ಎಷ್ಟು ಬಾರಿ ದೂಷಿಸುತ್ತೀರಿ ಎಂಬುವುದನ್ನು ಗಮನಿಸಿ. ನೀವು ಬೇರೆಯವರ ತಪ್ಪುಗಳನ್ನು ಕಂಡು ಹಿಡಿದು ದೂಷಿಸುತ್ತಿದ್ದರೆ ಇದರಿಂದ ನಿಮ್ಮಲ್ಲಿ ಧನಾತ್ಮಕ ಶಕ್ತಿ ಕಡಿಮೆಯಾಗಿ ನಕಾರಾತ್ಮಕ ಶಕ್ತಿ ಹೆಚ್ಚುವುದು. ಆದ್ದರಿಂದ ಬೇರೆಯವರ ಬಗ್ಗೆ ಆಲೋಚನೆ ಮಾಡುವುದನ್ನು ಬಿಡಿ, ನಿಮಗಾಗಿ ಬದುಕಿ, ಇದರಿಂದ ಖುಷಿ ಸಿಗುವುದು, ಮನಸ್ಸಿನಲ್ಲಿ ನೆಮ್ಮದಿ ಇರುವುದು.

ಉಪ್ಪು ಹಾಕಿ ನಕಾರಾತ್ಮಕ ಶಕ್ತಿ ಹೋಗಲಾಡಿಸಿ
ಕೆಲವೊಮ್ಮೆ ನಂಬಿಕೆಗಳು ಕೂಡ ಕೆಲಸ ಮಾಡುತ್ತದೆ. ನಿಮ್ಮ ಕೋಣೆಯ ನಾಲ್ಕು ದಿಕ್ಕಿನಲ್ಲಿ ಹಾಕಿ 48 ಗಂಟೆಗಳ ಬಳಿಕ ಗುಡಿಸಿ ಬಿಸಾಡಿ, ನಂತರ ಅಗರಬತ್ತಿ ಹಚ್ಚಿಡಿ. ಉಪ್ಪು ನಕಾರಾತ್ಮಕ ಶಕ್ತಿ ತೆಗೆಯುತ್ತದೆ ಎಂಬ ನಂಬಿಕೆ ಇದೆ.

ಪ್ರಕೃತಿ ಜೊತೆ ಜೀವಿಸಿ
ಕೃತಕ ಬೆಳಕಿನಲ್ಲಿ ಹೆಚ್ಚು ಸಮಯ ಇರುವುದಕ್ಕಿಂತ ಸೂರ್ಯನ ಬೆಳಕಿನಲ್ಲಿ ತುಂಬಾ ಹೊತ್ತು ಕಳೆಯಿರಿ. ಮನೆ ಸುತ್ತ ಹಸಿರು ವಾತಾವರಣ ಇರಲಿ. ಒಣಗಿದ ಗಿಡಗಳದ್ದರೆ ಅದನ್ನು ತೆಗೆಯಿರಿ. ಹೀಗೆ ಮಾಡುವುದರಿಂದ ಮನಸ್ಸಿನಲ್ಲಿ ಧನಾತ್ಮಕ ಆಲೋಚನೆಗಳು ತುಂಬುವುದು. ಮನಸ್ಸು ಹಾಗೂ ದೇಹ ಆರೋಗ್ಯವಾಗಿರುವುದು



Click it and Unblock the Notifications
