ಇವು ಸಾಮಾನ್ಯ ಗಿಡಗಳಲ್ಲ, ಮನೆಯ ಅದೃಷ್ಟ ದೇವತೆ..!

By Lekhaka

ಇಂದು ವಾಸ್ತುವಿನ ಮಹತ್ವವನ್ನು ಹೆಚ್ಚು ಹೆಚ್ಚು ಜನರು ಅರಿಯುತ್ತಿದ್ದಾರೆ. ಹೊಸ ಮನೆ ಕಟ್ಟುವವರು ವಾಸ್ತುಸಲಹೆಯನ್ನು ಪಡೆದೇ ಆ ಪ್ರಕಾರ ಮುಂದುವರೆಯುತ್ತಿದ್ದಾರೆ. ಅಷ್ಟೇ ಏಕೆ, ಬಹುಮಳಿಗೆಗಳ ಫ್ಯಾಟ್ ವ್ಯವಸ್ಥೆಯೂ ವಾಸ್ತು ಪ್ರಕಾರವೇ ನಿರ್ಮಿಸಲಾಗುತ್ತಿದೆ. ನಮಗೆ ವಾಸ್ತು ಹೇಗೋ ಹಾಗೇ ಚೀನೀಯರಿಗೆ ಫೆಂಗ್ ಶುಯಿ. ಮನೆಯ ವಿನ್ಯಾಸದಲ್ಲಿ ಈ ಎರಡೂ ವಿಷಯಗಳು ತಿಳಿಸುವ ಮಾಹಿತಿಗಳಲ್ಲಿ ಸಾಕಷ್ಟು ಸಾಮ್ಯವಿದೆ.

ಉದಾಹರಣೆಗೆ ಪೂರ್ವದಿಕ್ಕಿನಲ್ಲಿ ಮನೆಬಾಗಿಲಿಡುವುದು. ಎರಡೂ ವಿಧಾನಗಳು ಸೂರ್ಯನ ಮೊದಲ ಕಿರಣಕ್ಕೆ ಆದ್ಯತೆ ನೀಡುತ್ತವೆ. ಎರಡೂ ವಿಧಾನಗಳ ಪ್ರಕಾರ ಪ್ರಧಾನ ಬಾಗಿಲು ಪೂರ್ವ, ತಪ್ಪಿದರೆ ಉತ್ತರ ತಪ್ಪಿದರೆ ಈಶಾನ್ಯ ದಿಕ್ಕಿನಲ್ಲಿರಬೇಕು. ಬೇರೆ ದಿಕ್ಕಿನಲ್ಲಿರುವ ಬಾಗಿಲುಗಳಿಂದ ದುಷ್ಟಶಕ್ತಿ ಪ್ರವೇಶಿಸುತ್ತವೆ.

ಅಂತೆಯೇ ಮನೆಯ ಅಕ್ಕಪಕ್ಕ, ಹಿತ್ತಲು ಮತ್ತು ಒಳಭಾಗದಲ್ಲಿ ನೆಡುವ ಗಿಡಮರಗಳ ಬಗ್ಗೆಯೂ ಈ ಎರಡೂ ಶಾಸ್ತ್ರಗಳು ಹಲವು ಸಾಮ್ಯವಿರುವ ಮಾಹಿತಿಗಳನ್ನು ಹೊಂದಿವೆ. ಎರಡೂ ಶಾಸ್ತ್ರಗಳು ಮನೆ, ಕಛೇರಿ ಮತ್ತು ಪರಿಸರದಲ್ಲಿ ಗಿಡಮರಗಳನ್ನು ಬೆಳೆಸುವಂತೆ ಸೂಚಿಸುತ್ತವೆ, ಇವು ಶಕ್ತಿಯ ಸಮಾನವಾದ ಹರಿವಿಗೆ ಕಾರಣ ಎಂದು ತಿಳಿಸುತ್ತವೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ಪಡೆಯೋಣ. ಫೆಂಗ್ ಶುಯಿ ಸಲಹೆ ನೀಡುವ ಗಿಡಗಳು:

ಬಿದಿರು

ಬಿದಿರು

ಮನೆಯ ಅಕ್ಕಪಕ್ಕದಲ್ಲಿ ಬಿದಿರಿನ ಮೆಳೆ ಇರುವುದು ಶ್ರೇಯಸ್ಕರ ಎಂದು ಫೆಂಗ್‌ಶುಯಿ ಹೇಳುತ್ತದೆ. ಬಿದಿರು, ಅದರಲ್ಲೂ ಕಮಲ ಬಿದಿರು (Lotus bamboo) ಬೆಳೆಸುವುದು ಸುಲಭವಾಗಿದ್ದು ಕಡಿಮೆ ಆರೈಕೆ ಬೇಡುತ್ತದೆ. ಇದು ನಿಮ್ಮ ಮನೆಗೆ ಅದೃಷ್ಟವನ್ನು ತರುತ್ತದೆ. ಬಿದಿರು ಸಂತೋಷ, ಸಮೃದ್ಧಿ, ಆರೋಗ್ಯ ಮತ್ತು ಧನವನ್ನು ಮನೆಗೆ ತರಲು ನೆರವಾಗುತ್ತದೆ.

ಮೆಕ್ಕೆಜೋಳದಂತಹ ಬಿದಿರಿನ ಗಿಡ (Mass Cane Floor Plant)

ಮೆಕ್ಕೆಜೋಳದಂತಹ ಬಿದಿರಿನ ಗಿಡ (Mass Cane Floor Plant)

ಕಾರ್ನ್ ಗಿಡ ಎಂದೂ ಕರೆಯಲಾಗುವ ಈ ಗಿಡ ಬುಡದಲ್ಲಿ ಬಿದಿರನ್ನೂ, ತುದಿಯಲ್ಲಿ ಮೆಕ್ಕೆಜೋಳವನ್ನೂ ಹೋಲುವುದರಿಂದ ಈ ಹೆಸರು ಬಂದಿದೆ. ಇದು ಕಛೇರಿ ಅಥವಾ ಮನೆಯ ಒಳಭಾಗದಲ್ಲಿದ್ದರೆ ಕೆಲಸಗಳು ಸುಗಮವಾಗುವುವು ಎಂದು ಫೆಂಗ್ ಶುಯಿ ತಿಳಿಸುತ್ತದೆ.

Image courtesy-Daily bhaskar

ಬೋನ್ಸಾಯ್ ಅಥವಾ (Dwarf Jade)

ಬೋನ್ಸಾಯ್ ಅಥವಾ (Dwarf Jade)

ದೊಡ್ಡ ಮರಗಳಾಗಬಲ್ಲವನ್ನು ಪುಟ್ಟ ಕುಂಡದಲ್ಲಿಟ್ಟು ಪೋಷಿಸಿದ ಗಿಡಗಳು ಮನೆಯೊಳಗಿದ್ದರೆ ಧನಾತ್ಮಕ ಶಕ್ತಿ ಆವರಿಸಿರುತ್ತದೆ. ಇದರ ಎಲೆಗಳು ಸಹಾ ಐದು ಭಾಗಗಳಾಗಿರುವುದರಿಂದ ಕೈಯ ಐದು ಬೆರಳುಗಳನ್ನು ಪ್ರತಿನಿಧಿಸುತ್ತದೆ. ಇದು ಮನೆಗೆ ಅದೃಷ್ಟವನೂ ತರುತ್ತದೆ ಎಂದು ಫೆಂಗ್ ಶುಯಿ ತಿಳಿಸುತ್ತದೆ.

Image courtesy- Daily-bhaskar

ಪೀಸ್ ಲಿಲ್ಲಿ (Peace Lilly)

ಪೀಸ್ ಲಿಲ್ಲಿ (Peace Lilly)

ದಟ್ಟಹಸಿರು ಬಣ್ಣದ ಎಲೆಗಳು ಮತ್ತು ಬಾವುಟದಂತಹ ಹೂವುಗಳಿಂದ ಆಕರ್ಷಕವಾಗಿ ಕಾಣುವ ಈ ಗಿಡವನ್ನು ಮನೆಯ ಯಾವುದೇ ಕೋಣೆಯಲ್ಲಿಟ್ಟರೂ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಲು ನೆರವಾಗುತ್ತದೆ.

ಛತ್ರಿ ಗಿಡ (Arboricola Floor Plant)

ಛತ್ರಿ ಗಿಡ (Arboricola Floor Plant)

ಛತ್ರಿಗಿಡ ಎಂದೂ ಕರೆಯಲಾಗುವ ಅರ್ಬೋರಿಕೋಲಾ ಗಿಡ ಕಛೇರಿ ಅಥವಾ ಮನೆಯೊಳಗಿದ್ದರೆ ಅದೃಷ್ಟಕರ ಎಂದು ನಂಬಲಾಗಿದೆ.

Image courtesy- Daily-bhaskar

ಪುಟ್ಟ ಈಚಲು ಗಿಡ (Cat Palm Floor Plant)

ಪುಟ್ಟ ಈಚಲು ಗಿಡ (Cat Palm Floor Plant)

ಈಚಲು ಮರದ ಹೃಸ್ವ ರೂಪ ಪಡೆದಿರುವ ಈ ಗಿಡ ಮನೆಯ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ, ಮನೆಯ ಸುಖ, ಸಮೃದ್ಧಿಯನ್ನೂ ಹೆಚ್ಚಿಸುವುದು. ಈಗ ಭಾರತದ ವಾಸ್ತು ಸಲಹೆ ನೀಡುವ ಗಿಡಗಳ ಬಗ್ಗೆ ಮುಂದಿನ ಸ್ಲೈಡ್ ನಲ್ಲಿ ಅರಿಯೋಣ..

Image courtesy- Daily-bhaskar

ಮುಳ್ಳುಗಳಿರುವ ಗಿಡಗಳಿರಬಾರದು

ಮುಳ್ಳುಗಳಿರುವ ಗಿಡಗಳಿರಬಾರದು

ಮನೆಯ ಸುತ್ತಮುತ್ತ ಮುಳ್ಳುಗಳಿರುವ ಗಿಡಗಳಿರಬಾರದು. ಉದಾಹರಣೆಗೆ ಬಾಬುಲ್ ಗಿಡ. ಇವು ಮನೆಯಲ್ಲಿ ಜಗಳವನ್ನು ಹುಟ್ಟುಹಾಕುತ್ತವೆ.

Image courtesy- Daily bhaskar

ಮುಳ್ಳುಗಳಿರುವ ಗಿಡಗಳಿರಬಾರದು

ಮುಳ್ಳುಗಳಿರುವ ಗಿಡಗಳಿರಬಾರದು

ಹುಣಸೆ ಮತ್ತು ಗಂಧದ ಮರಗಳು ಭೂತಗಳ ವಾಸಸ್ಥಾನವಾದುದರಿಂದ ಇವು ಮನೆಯಿಂದ ದೂರವಿದ್ದಷ್ಟೂ ಉತ್ತಮ. ಒಂದು ವೇಳೆ ಈ ಮರಗಳಿರುವ ತೋಪು ಹತ್ತಿರವಿದ್ದರೆ ಆ ಸ್ಥಳದಲ್ಲಿ ಮನೆ ಕಟ್ಟದಿರುವುದೇ ವಾಸಿ.

Image courtesy- Daily bahskar

ಮರಗಳನ್ನು ನೆಡುವುದರಿಂದ

ಮರಗಳನ್ನು ನೆಡುವುದರಿಂದ

ಮನೆಯ ಪೂರ್ವ ಅಥವಾ ಈಶಾನ್ಯ ಭಾಗದಲ್ಲಿ ಎತ್ತರ ಬೆಳೆಯುವ ಮರಗಳನ್ನು ನೆಡುವುದರಿಂದ ಋಣಾತ್ಮಕ ಶಕ್ತಿಗಳು ಮನೆಯನ್ನು ಪ್ರವೇಶಿಸುವುದರಿಂದ ತಡೆಯಬಹುದು.

ಮರಗಳನ್ನು ನೆಡುವುದರಿಂದ

ಮರಗಳನ್ನು ನೆಡುವುದರಿಂದ

ಎತ್ತರಕ್ಕೆ ಬೆಳೆಯುವ ಅಶೋಕ, ಬೇವು, ತೆಂಗಿನ ಮರ ಮತ್ತು ಗಿಡಗಳಾದ ತುಳಸಿ ಮತ್ತು ಅರಿಶಿನಗಳು ನಿಮ್ಮ ಮನೆಯೊಳಗೆ ದುಷ್ಟಶಕ್ತಿಗಳು ಪ್ರವೇಶಿಸುವುದನ್ನು ತಡೆಯುತ್ತವೆ ಹಾಗೂ ಇತರ ಸಸ್ಯಗಳಿಂದ ಎದುರಾಗಬಹುದಾಗಿದ್ದ ಕೆಟ್ಟ ಪ್ರಭಾವವನ್ನೂ ಕಡಿಮೆಗೊಳಿಸುತ್ತವೆ.

ಮರಗಳನ್ನು ನೆಡುವುದರಿಂದ

ಮರಗಳನ್ನು ನೆಡುವುದರಿಂದ

ಹತ್ತಿಗಿಡ, ರೇಷ್ಮೆ ಹತ್ತಿಗಿಡ (Silky cotton plant) ಮತ್ತು ತಾಳೆ ಮರಗಳು ಮನೆಯ ಆವರಣದಲ್ಲಿರುವುದು ದುರಾದೃಷ್ಟವನ್ನು ತರುತ್ತದೆ ಎಂದು ವಾಸ್ತು ತಿಳಿಸುತ್ತದೆ.

ವಿಶೇಷ ಟಿಪ್ಪಣಿ: ಮನೆಯ ಅಕ್ಕಪಕ್ಕ ಯಾವುದೇ ಗಿಡ ಅಥವಾ ಮರ ಸಾಯುತ್ತಿದ್ದರೆ ಅದನ್ನು ಆದಷ್ಟು ಬೇಗ ಅಲ್ಲಿಂದ ತೆಗೆಸಿ. ಒಣಗಿದ ಹೂವುಗಳು ಸಹಾ ದುರಾದೃಷ್ಟವನ್ನು ತರಬಹುದು.

Image courtesy - Daily bhaskar

X
Desktop Bottom Promotion