ಮನೆಯಲ್ಲಿ ಉಂಟಾಗುವ ಅಲರ್ಜಿಯನ್ನು ತಪ್ಪಿಸಲು ಸಲಹೆಗಳು

ಕೆಲವು ಮಂದಿ ತಮ್ಮ ಮನೆಯೊಳಗೆ ಏನಾದರೂ ಒಂದು ವಸ್ತುವಿನಿಂದ ಅಲರ್ಜಿಗೊಳಗಾಗುತ್ತಾರೆ. ಬೆಡ್ ರೂಮ್, ಶೌಚಾಲಯ ಮತ್ತು ಆಟದ ಕೋಣೆಗಳು ಒಳಾಂಗಣ ಅಲರ್ಜಿ ಆಗುವಂತಹ ಪ್ರಮುಖ ಸ್ಥಳಗಳು. ಅಲರ್ಜಿಯಿಂದ ಕೆಂಪುಗುಳ್ಳೆಗಳು, ಹುಣ್ಣು, ಉಸಿರಾಟದ ಸಮಸ್ಯೆಗಳಾದ ಸೀನು, ಕೆಮ್ಮು, ಅಸ್ತಮಾ ಮತ್ತಿತರ ಸಮಸ್ಯೆಗಳಾಗಬಹುದು.

ಈ ವಿಧಾನದಿಂದ ತಾಮ್ರದ ಪಾತ್ರೆಯನ್ನು ಫಳಫಳ ಹೊಳೆಯಿಸಿ

ಪ್ರತಿಯೊಂದು ಅಲರ್ಜಿ ಕೂಡ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಒಮ್ಮೆ ನೀವು ಅಲರ್ಜಿಯ ಕಾರಣ ತಿಳಿದುಕೊಂಡರೆ ನೀವು ಆಗ ಕೆಲವೊಂದು ಕ್ರಮಗಳನ್ನು ತೆಗೆದುಕೊಳ್ಳಬಹುದು.

ನಿಮ್ಮ ಯೋಗ ಮ್ಯಾಟ್ ಅನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ!

ಮನೆಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳಿ:

ಮನೆಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳಿ:

ಅಲರ್ಜಿಗಳು ಮನೆಯೊಳಗೆ ತೂರಿಕೊಳ್ಳಲು ಹಲವಾರು ಕಾರಣಗಳಿರಬಹುದು. ಇದರಲ್ಲಿ ಸಾಮಾನ್ಯ ವಸ್ತುವೆಂದರೆ ಸಿಗರೇಟ್. ಸಿಗರೇಟ್ ನಲ್ಲಿ ಹೆಚ್ಚಿನ ವಿಷವಿರುತ್ತದೆ. ಸಿಗರೇಟಿನ ಹೊಗೆಯಲ್ಲಿ ಹಾನಿಕಾರಕ ರಾಸಾಯನಿಕಗಳಿರುತ್ತದೆ. ಇದು ಮನೆಯೊಳಗೆ ಅಲರ್ಜಿಕಾರಕಗಳನ್ನು ಹೆಚ್ಚಿಸುತ್ತದೆ. ರಾಸಾಯನಿಕ ವಿಷದಿಂದ ಉಂಟಾಗುವ ಅಲರ್ಜಿ ಆರೋಗ್ಯಕ್ಕೆ ತುಂಬಾ ಕೆಟ್ಟದೆಂದು ಸಾಬೀತಾಗಿದೆ. ಒಳಾಂಗಣ ಅಲರ್ಜಿ ತಡೆಯಲು ಒಂದು ಒಳ್ಳೆಯ ಟಿಪ್ಸ್ ಎಂದರೆ ಮನೆಯನ್ನು ಧೂಮಪಾನ ನಿಷೇಧ ವಲಯವಾಗಿ ಮಾಡುವುದು. ಮನೆಯ ಒಳಗಡೆ ಯಾರಿಗೂ ಸಿಗರೇಟ್ ಸೇದಲು ಬಿಡಬೇಡಿ.

ಧೂಳು ತಡೆಯುವುದು:

ಧೂಳು ತಡೆಯುವುದು:

ಹೆಚ್ಚಿನ ಒಳಾಂಗಣ ಅಲರ್ಜಿ ಧೂಳು ಮತ್ತು ಕೊಳೆಯಿಂದ ಉಂಟಾಗುತ್ತದೆ. ಧೂಳಿನಿಂದ ತುರಿಕೆ, ಉಸಿರಾಟದ ಸಮಸ್ಯೆ ಮತ್ತು ಕಿರಿಕಿರಿ ಉಂಟಾಗಬಹುದು. ನಿಮ್ಮ ಮನೆಗೆ ಧೂಳು ಬರದಂತೆ ತಡೆಯಲು ಕೆಲವೊಂದು ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ನಿಯಮಿತವಾಗಿ ಮನೆಯಲ್ಲಿನ ಧೂಳು ತೆಗೆಯುತ್ತಿರಬೇಕು. ಇದನ್ನು ಹೊರತುಪಡಿಸಿ ಮನೆಯ ಪೀಠೋಪಕರಣ ಮತ್ತು ಪರಿಕರಗಳನ್ನು ನಿರ್ಮಲವಾಗಿಡಬೇಕು. ದಿಂಬಿನ ಕವರ್, ಬೆಡ್ ಕವರ್ ಮತ್ತು ಬ್ಲ್ಯಾಂಕೆಟ್ ಗಳನ್ನು ನಿಯಮಿತವಾಗಿ ಒಗೆಯುತ್ತಿರಬೇಕು. ಈ ವಸ್ತುಗಳಲ್ಲಿ ಯಾವಾಗಲೂ ಧೂಳು ತುಂಬಿರುತ್ತದೆ. ಧೂಳು ಒಳಬರದಂತೆ ತಡೆಯಲು ಕಿಟಕಿಗಳನ್ನು ಮುಚ್ಚಿಡಿ.

ಕೀಟ ಮತ್ತು ಸೊಳ್ಳೆ ಬಲೆಗಳನ್ನು ಬಳಸಿ:

ಕೀಟ ಮತ್ತು ಸೊಳ್ಳೆ ಬಲೆಗಳನ್ನು ಬಳಸಿ:

ಕೀಟ, ನೊಣ ಮತ್ತು ಸೊಳ್ಳೆಗಳು ಅಲರ್ಜಿ ಉಂಟುಮಾಡಬಹುದು. ಒಳಾಂಗಣ ಅಲರ್ಜಿ ತಡೆಯಲು ಪ್ರಮುಖ ಟಿಪ್ಸ್ ಎಂದರೆ ಕೀಟ ಬಲೆ ಮತ್ತು ಸೊಳ್ಳೆ ಬಲೆ ಅಳವಡಿಸುವುದು. ಈ ಬಲೆಗಳನ್ನು ಮುಖ್ಯದ್ವಾರ ಮತ್ತು ಕಿಟಕಿಗಳ ಹೊರಗಡೆ ಅಳವಡಿಸಬೇಕು. ಈ ಬಲೆಗಳು ವಿದ್ಯುತ್ ಚಾಲಿತ ಮತ್ತು ಸ್ವಯಂಚಾಲಿತ ವಿಧಾನಗಳಲ್ಲಿ ಲಭ್ಯವಿದೆ. ಮನೆಯ ಒಳಗೆ ಇರುವ ಕೀಟ ಮತ್ತು ಸೊಳ್ಳೆಗಳನ್ನು ಕೊಲ್ಲಲು ಕೆಲವೊಂದು ಸ್ಪ್ರೇ ಬಳಸಬಹುದು.

ಸಾಕುಪ್ರಾಣಿಯ ಆರೈಕೆ:

ಸಾಕುಪ್ರಾಣಿಯ ಆರೈಕೆ:

ಸಾಕುಪ್ರಾಣಿಗಳು ಒಳಾಂಗಣ ಅಲರ್ಜಿಗೆ ಒಂದು ಪ್ರಮುಖ ಕಾರಣ. ನಾಯಿ ಮತ್ತು ಬೆಕ್ಕಿನಂತಹ ಸಾಕುಪ್ರಾಣಿಗಳು ಸಾಕಷ್ಟು ಕೂದಲನ್ನು ಕಳಕೊಳ್ಳುತ್ತವೆ. ಈ ಪ್ರಾಣಿಗಳ ಕೂದಲು ಮತ್ತು ತುಪ್ಪಳವು ಕೆಲವೊಂದು ಜನರಿಗೆ ಅಲರ್ಜಿ ಉಂಟುಮಾಡಬಹುದು. ಒಳಾಂಗಣ ಅಲರ್ಜಿ ತಡೆಯಲು ಒಳ್ಳೆಯ ಟಿಪ್ಸ್ ಎಂದರೆ ಸಾಕುಪ್ರಾಣಿಗಳ ಬಗ್ಗೆ ಸಾಕಷ್ಟು ನಿರ್ವಹಣೆ ಮತ್ತು ಕಾಳಜಿ ಅಗತ್ಯ. ಸಾಕುಪ್ರಾಣಿಗಳನ್ನು ನಿರ್ಮಲವಾಗಿಡಬೇಕು, ಅವುಗಳನ್ನು ನಿಯಮಿತವಾಗಿ ಸ್ನಾನ ಮಾಡಿಸಿ, ಕೂದಲು ಕತ್ತರಿಸುತ್ತಿರಬೇಕು. ಪ್ರಾಣಿಗಳ ಕೂದಲು ಉದುರುವುದನ್ನು ತಡೆಯಲು ಕೆಲವೊಂದು ಶಾಂಪೂ ಮತ್ತು ಕ್ರೀಮ್ ಗಳು ಲಭ್ಯವಿದೆ. ಇದು ಯಾವುದೇ ವ್ಯಕ್ತಿಗೆ ಕಿರಿಕಿರಿ ಉಂಟಾಗುವ ಅಲರ್ಜಿಕಾರಕಗಳನ್ನು ತಡೆಯಲು ಕೆಲವೊಂದು ವಿಧಾನಗಳು.

ಊದುಬತ್ತಿ:

ಊದುಬತ್ತಿ:

ಕೆಲವು ಜನರಿಗೆ ಗಾಢವಾದ ಸುವಾಸನೆ ಬೀರುವ ಸುಗಂಧದ್ರವ್ಯ ಅಥವಾ ರೂಮ್ ಫ್ರೆಶ್ನರ್ ಅಲರ್ಜಿಕಾರವಾಗಿರುತ್ತದೆ. ನೀವು ಇದರಲ್ಲಿ ಒಬ್ಬರಾಗಿದ್ದರೆ ಗಾಢ ಸುಗಂಧ ಬೀರುವ ಪರ್ಫ್ಯೂಮ್, ಊದುಬತ್ತಿ, ರೂಮ್ ಫ್ರೆಶ್ನರ್ ಮತ್ತು ಬಾತ್ ರೂಮ್ ಫ್ರೆಶ್ನರ್ ಗಳನ್ನು ಕಡೆಗಣಿಸಿ. ಕಟುವಾಸನೆಯು ನಿಮಗೆ ಶೀತ, ತಲೆನೋವು ಮತ್ತು ವಾಕರಿಕೆ ತರಿಸಬಹುದು. ಇದನ್ನು ತಪ್ಪಿಸಲು ಒಳ್ಳೆಯ ಟಿಪ್ಸ್ ಎಂದರೆ ಗಾಢ ಸುಗಂಧ ಬೀರುವ ರೂಮ್ ನಿಂದ ಹೊರಹೋಗಿ ಶುದ್ಧಗಾಳಿ ಪಡೆಯಬೇಕು.

Story first published: Monday, May 12, 2014, 14:42 [IST]
X
Desktop Bottom Promotion