Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಈ ರೀತಿ ನಿಮ್ಮ ಗ್ಯಾಸ್ ಸ್ಟವ್ ಅನ್ನು ಫಳಫಳ ಹೊಳೆಯಿಸಿ!
ನಿಮ್ಮ ಅಡುಗೆಕೋಣೆಯಲ್ಲಿ ನಿಮಗೆ ಕಷ್ಟಕರವಾದ ಸಹಿಸಲು ಸಾಧ್ಯವಾಗದ ವಿಷಯವೆಂದರೆ ಕೊಳೆ ಮೆತ್ತಿದ ಗ್ಯಾಸ್ ಸ್ಟವ್ ಆಗಿದೆ. ಎಣ್ಣೆ ಹೀಗೆ ಪ್ರತಿಯೊಂದು ವಸ್ತು ಗ್ಯಾಸ್‌ನ ಮೇಲೆ ಬಿದ್ದು ತೆಗೆಯಲು ಕಷ್ಟಕರವಾದಂತೆ ಜಿಡ್ಡು ಅಂಟಿಕೊಳ್ಳುತ್ತದೆ. ಇದನ್ನು ಸ್ವಚ್ಛಮಾಡುವುದು ತುಂಬಾ ಕಷ್ಟವಾದ ಮಾತಾಗಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಈ ಉತ್ಪನ್ನಗಳಿಂದ ಹೊಳೆಯುವ ಬಾತ್‌ರೂಮ್ ನಿಮ್ಮದಾಗಲಿ
ಬರ್ನರ್‌ನ ಮೇಲೂ ಈ ಕೊಳಕು ಮೆತ್ತಿಕೊಳ್ಳುತ್ತದೆ. ದಿನವೂ ನಿಮ್ಮ ಗ್ಯಾಸ್ ಸ್ಟವ್ ಅನ್ನು ಸ್ವಚ್ಛಗೊಳಿಸುವುದು ಅದನ್ನು ಹೊಸದರಂತೆ ಇರಿಸುತ್ತದೆ. ಆದ್ದರಿಂದ ವಾರಕ್ಕೆ ಎರಡು ಬಾರಿಯಾದರೂ ಗ್ಯಾಸ್ ಸ್ಟವ್ ಅನ್ನು ಸ್ವಚ್ಛಗೊಳಿಸಬೇಕು. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಸ್ವಚ್ಛಕಗಳು ನಿಮ್ಮ ಗ್ಯಾಸ್ ಸ್ಟವ್ ಅನ್ನು ಹಾನಿಗೊಳಿಸಬಹುದು. ಆದ್ದರಿಂದ ಸರಳವಾದ ನೈಸರ್ಗಿಕ ವಿಧಾನದ ಮೂಲಕ ನಿಮ್ಮ ಗ್ಯಾಸ್ ಸ್ಟವ್ ಅನ್ನು ಸ್ವಚ್ಛಗೊಳಿಸಿ ಹೇಗೆ ಎಂಬುದನ್ನು ನೋಡಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹಲ್ಲಿಗಳಿಂದ ಪರಿಹಾರ ಕಂಡುಕೊಳ್ಳಲು ಮನೆಮದ್ದುಗಳು

ಗ್ರೇಟ್ಸ್ ಅನ್ನು ಸ್ವಚ್ಛಗೊಳಿಸುವುದು:
ಗ್ರೇಟ್ಸ್ ಅನ್ನು ತೆಗೆದು 1/4 ಕಪ್ ಅಮೋನಿಯಾದಲ್ಲಿ ಕೆಲವು ಗಂಟೆಗಳ ಕಾಲ ಮುಳುಗಿಸಿ. ಅಮೋನಿಯಾ ದ್ರಾವಣದಿಂದ ಗ್ರೇಟ್ಸ್‌ಗಳನ್ನು ಹೊರತೆಗೆಯಲು ಕೈಗೆ ಗ್ಲೌವ್ಸ್ ಹಾಕಿಕೊಳ್ಳಿ. ನೀರಿನಿಂದ ತೊಳೆಯಿರಿ. ಗ್ರೇಟ್ಸ್‌ನಲ್ಲಿ ದಪ್ಪನಾಗಿ ಮೆತ್ತಿದ ಕೊಳೆ ನಿವಾರಣೆಯಾಗುತ್ತದೆ.
ಸ್ಟವ್ ಮೇಲ್ಭಾಗ ಸ್ವಚ್ಛಗೊಳಿಸುವುದು:
ಬೇಕಿಂಗ್ ಸೋಡಾವನ್ನು ಸ್ಟವ್ ಮೇಲ್ಬಾಗದ ಮೇಲೆ ಉದುರಿಸಿ ನಂತರ ಬಿಸಿ ನೀರನ್ನು ಸ್ಪ್ರೇ ಮಾಡಿ. 30 ನಿಮಿಷಗಳ ಕಾಲ ಕಾಯಿರಿ ನಂತರ ಎಣ್ಣೆ ಪಸೆಯನ್ನು ನಿವಾರಿಸಲು ಉಜ್ಜಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಪಾತ್ರೆಗಳಿಂದ ಮೊಟ್ಟೆ ವಾಸನೆಯನ್ನು ತೆಗೆಯುವುದು ಹೇಗೆ?
ಬರ್ನರ್‌ಗಳನ್ನು ಸ್ವಚ್ಛಗೊಳಿಸುವುದು:
ಬರ್ನರ್‌ನ ಎಲ್ಲಾ ತೆಗೆಯಬಹುದಾದ ಭಾಗಗಳನ್ನು ಹೊರತೆಗೆಯಿರಿ ಮತ್ತು ಅವುಗಳನ್ನು ಬಿಸಿಯಾದ, ಸೋಪು ನೀರಿನಲ್ಲಿ ಮುಳುಗಿಸಿಡಿ. ಸಣ್ಣ ಪಿನ್ ಅನ್ನು ತೆಗೆದುಕೊಂಡು ಗ್ಯಾಸ್ ಬರ್ನರ್‌ನ ಸಣ್ಣ ಭಾಗಗಳನ್ನು ಸ್ವಚ್ಛಗೊಳಿಸಿ. ದಪ್ಪನೆಯ ಕೊಳಕು ಅಂಟಿಕೊಂಡಿದ್ದರೆ ನೀರು ಮತ್ತು ಬೇಕಿಂಗ್ ಸೋಡಾದ ಪೇಸ್ಟ್ ಅನ್ನು ಬಳಸಿ. ನಿಮ್ಮ ಗ್ಯಾಸ್ ಬರ್ನರ್‌ನ ಭಾಗಗಳನ್ನು ಉಜ್ಜಿ. ಗ್ಯಾಸ್ ಬರ್ನರ್‌ಗಳು ಒಣಗಿದ ನಂತರ ಅದನ್ನು ಗ್ಯಾಸ್‌ಗೆ ಜೋಡಿಸಿ.
ಹೀಗೆ ನಿಮ್ಮ ಕೊಳಕಾದ ಗ್ಯಾಸ್ ಸ್ಟವ್ ಅನ್ನು ಸ್ವಚ್ಛಗೊಳಿಸುವ ಸುಲಭ ವಿಧಾನಗಳಾಗಿವೆ.



Click it and Unblock the Notifications
