Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬೆಡ್ ಶೀಟ್ ಮೇಲಿನ ರಕ್ತದ ಕಲೆ ತೆಗೆಯಲು ಟಿಪ್ಸ್!
ಸುಂದರ ಬೆಡ್ ಶೀಟ್‌ಗಳು ನಿಮ್ಮ ಹಾಸಿಗೆಯನ್ನು ಅಲಂಕರಿಸುತ್ತವೆಯೇ? ಆದರೆ ಈ ಸುಂದರ ಅಲಂಕರಣ ವಸ್ತು, ಹಾಸಿಗೆಯ ಮೇಲೆ ಯಾವುದಾದರೂ ಕೊಳೆಗಳಾಗಿದ್ದು ಅದನ್ನು ತೆಗೆಯಲು ಗೊತ್ತಾಗದೇ ಆತಂಕಕ್ಕೊಳಗಾಗಿದ್ದೀರೇ? ಹಾಗಾದರೆ ಮುಂದೆ ಓದಿ, ಈ ಲೇಖನ ನಿಮಗಾಗಿ!
ಕಾರ್ಪೆಟ್ ಕ್ಲೀನ್ ಮಾಡಲು ಕೀ ಇಲ್ಲಿದೆ
ಬೆಡ್ ಶೀಟ್ ನಿಂದ ರಕ್ತ ಕಲೆಗಳನ್ನು ತೆಗೆದುಹಾಕುವುದು ಸುಲಭದ ಕೆಲಸವಲ್ಲ ಮತ್ತು ಜನರು ಕೆಲವೊಮ್ಮೆ ಇಡೀ ತಮ್ಮ ಬೆಡ್ ಶೀಟ್ ಅಥವಾ ಹಾಸಿಗೆಯನ್ನೇ ಬಿಸಾಡುವ ಸಾಧ್ಯತೆಗಳಿರುತ್ತವೆ. ಕೆಲವರು ಡ್ರೈ ಕ್ಲೀನಿಂಗ್ ಮೇಲೆ ಭಾರಿ ಹಣ ಖರ್ಚು ಮಾಡುತ್ತಾರೆ ಕೂಡ. ಆದರೆ ಕೊನೆಗೆ ಹಣಕಳೆದುಕೊಳ್ಳಬೇಕಾಗುತ್ತದೆಯೇ ಹೊರತು ಯಾವುದೇ ಉತ್ತಮ ಪರಿಣಾಮಗಳೂ ಉಂಟಾಗುವುದಿಲ್ಲ!

ನೀವು ಒಮ್ಮೆ ಬೆಡ್ ಶೀಟ್ ಅನ್ನು ಬಿಸಾಡಿದರೆ ಮತ್ತೆ ಹೊಸದನ್ನು ಕಂಡುಕೊಳ್ಳಲು ಭಾರಿ ಮೊತ್ತದ ಹಣ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ, ನೀವು ಈ ಕೆಳಗಿನ ಸಲಹೆಗಳು ತೆಗೆದುಕೊಂಡು ಸುಲಭವಾಗಿ ಮುಂದಿನ ಬಾರಿ ನಿಮ್ಮ ಬೆಡ್ ಶೀಟ್‌ಗಳನ್ನು ರಕ್ತದ ಕಲೆಯಿಂದ ಸ್ವಚ್ಛಗೊಳಿಸಿ. ಈ ಕೆಳಗೆ ಹಾಸಿಗೆಯ ರಕ್ತದ ಕಲೆಗಳನ್ನು ತೆಗೆಯಲು ಹೇಗೆ ಕೆಲವು ಸಲಹೆಗಳನ್ನು ನೀಡಲಾಗಿದೆ.
ನಿಮ್ಮ ಯೋಗ ಮ್ಯಾಟ್ ಅನ್ನು ಈ ರೀತಿಯಾಗಿ ಸ್ವಚ್ಛಗೊಳಿಸಿ!
ನಿಮಗೆ ತಕ್ಷಣ ಕಲೆ ಕಂಡುಬಂದರೆ:
ನೀವು ತಕ್ಷಣ ಬೆಡ್ ಶೀಡ್‌ಗಳ ಮೇಲೆ ಕಲೆಯನ್ನು ಗುರುತಿಸಿದರೆ ಅದನ್ನು ಕೂಡಲೇ ತಣ್ಣೀರಿನಲ್ಲಿ ನೆನೆಸಿ ಮತ್ತು ಲಾಂಡ್ರಿ ಮಾಡಿ. ಇದು ಬೆಡ್ ಶೀಟ್ ನಿಂದ ರಕ್ತದ ಕಲೆಗಳನ್ನು ತೆಗೆದುಹಾಕುವಲ್ಲಿ ಒಂದು ಉತ್ತಮ ವಿಧಾನವಾಗಿದೆ. ನಿಮ್ಮ ಸಾಮಾನ್ಯ ಡಿಟರ್ಜಂಟ್ (ಮಾರ್ಜಕ) ಗಳನ್ನು ಬಳಸಿ ಈ ಕಲೆಗಳನ್ನು ಚೆನ್ನಾಗಿ ತೆಗೆಯಬಹುದು. ನೀವು ಇದನ್ನು ಸ್ವಚ್ಛಗೊಳಿಸಲು ಅಧಿಕ ಹಣ ಖರ್ಚು ಮಾಡಬೇಕಿಲ್ಲ.
ಕಲೆ ಒಣಗಿದ್ದರೆ:
ನೀವು ತಕ್ಷಣ ಕಲೆಯನ್ನು ಗಿರಿತಿಸದೇ ಅದು ಬಟ್ಟೆಯ ಮೇಲೆಯೇ ಒಣಗಿದ್ದರೆ, ಹಾಸಿಗೆಯ ಬಟ್ಟೆಯನ್ನು ಬಿಸಾಡುವ ಅಥವಾ ಡ್ರೈ ಕ್ಲೀನ್‌ಗೆ ಕೊಡುವ ಯೋಚನೆ ಮಾಡಬೇಡಿ. ಇದಕ್ಕೆ ಪರಿಹಾರ ಇಲ್ಲಿದೆ. ಒಣಗಿದ ಬೆಡ್ ಶೀಟ್ ನಿಂದ ರಕ್ತ ಕಲೆಗಳನ್ನು ತೆಗೆದುಹಾಕುವಲ್ಲಿ ಹೈಡ್ರೋಜನ್ ಪೆರಾಕ್ಸೈಡ್ ಬಳಸಬಹುದು. ಆದಾಗ್ಯೂ, ನೀವು ಇಲ್ಲ ಹೈಡ್ರೋಜನ್ ಪೆರಾಕ್ಸೈಡ್ ಬಳಸುವಾಗ ನೀರಿನಲ್ಲಿ ನಿಮ್ಮ ಬೆಡ್ ಶೀಟ್ ಅನ್ನು ನೆನೆಸಿಡಬಾರದು. ಹೈಡ್ರೋಜನ್ ಪೆರಾಕ್ಸೈಡ್ ನೀರಿನಲ್ಲಿ ನೆನೆಸಿದ ಬಟ್ಟೆಗಳ ಮೇಲೆ ಉತ್ತಮ ಪರಿಣಾಮ ಉಂಟುಮಾಡಲಾರದು. ಕಲೆ ತೆಗೆಯಲು ಪೇಪರ್ ಟವೆಲ್ ಬಳಸಿ. ಇದು ಹಾಸಿಗೆ ಬಟ್ಟೆಯ ಮೇಲಿನ ರಕ್ತದ ಕಲೆಗಳನ್ನು ತೆಗೆಯುವುದು ಹೇಗೆ ಎಂಬುದಕ್ಕೆ ಉತ್ತಮ ಟಿಪ್ಸ್!
ಶಾಂಪೂ ಮ್ಯಾಜಿಕ್:
ನೀವು ಸಾಮಾನ್ಯವಾಗಿ ಬಳಸುವ ಯಾವುದೇ ಶಾಂಪೂ ಬೆಡ್ ಶೀಟ್ ನಿಂದ ರಕ್ತದ ಕಲೆಗಳನ್ನು ತೆಗೆದುಹಾಕುವಲ್ಲಿ ಮ್ಯಾಜಿಕ್ ನಂತೆ ಕೆಲಸ ಮಾಡಬಹುದು! ನೀವು ಒಂದು ಸಾಮಾನ್ಯ ಅಥವಾ ದುಬಾರಿ ಶಾಂಪೂವನ್ನು ಬಳಸಬಹುದು ಈ ಎರಡೂ ಶಾಂಪೂವನ್ನೂ ಕಲೆತೆಗೆಯಲು ಬಳಸಬಹುದು. ನಿಮ್ಮ ನೆಚ್ಚಿನ ಎಂದು ಹಾಸಿಗೆಯ ಬಟ್ಟೆಯಲ್ಲಿ ರಕ್ತದ ಕಲೆ ತೆಗೆಯುವುದು ಹೇಗೆ ಎಂದು ಚಿಂತೆಯಾಗಿದ್ದರೆ ಮೊದಲು ಈ ಶಾಂಪೂವನ್ನು ಬಳಸಿ. ಕೆಲವೇ ನಿಮಿಷಗಳಲ್ಲಿ ಪರಿಣಾಮವನ್ನು ಕಾಣಬಹುದು. ಇದು ಬೆಡ್ ಶೀಟ್ ನಿಂದ ಕಲೆಗಳನ್ನು ತೆಗೆದುಹಾಕುವಲ್ಲಿ ಉತಮ ಕೆಲಸ ಮಾಡುತ್ತದೆ.
ಅಡಿಗೆ ಸೋಡಾ:
ಅಡಿಗೆ ಸೋಡಾ ಬಳಸಿ, ಬೆಡ್ ಶೀಟ್ ನಿಂದ ರಕ್ತದ ಕಲೆಗಳನ್ನು ತೆಗೆದುಹಾಕುವುದು ಸುರಕ್ಷಿತ ಮತ್ತು ಅಗ್ಗದ ವಿಧಾನಗಳಲ್ಲಿ ಒಂದಾಗಿದೆ. ಬೇಕಿಂಗ್ ಪೌಡರ್ ಮತ್ತು ತಣ್ಣೀರಿನ ಎರಡು ಭಾಗಗಳ ದ್ರಾವಣವನ್ನು ಕಲೆಗಳಿರುವ ಬಟ್ಟೆಗಳ ಮೇಲೆ ಹಚ್ಚಿ. ನಂತರ 30 ನಿಮಿಷಗಳ ಹಾಗೆಯೇ ಬಿಟ್ಟು ನಂತರ ಒಣ ಬಟ್ಟೆಯಿಂದ ರಬ್ ಮಾಡಿ. ಇದು ಬೆಡ್ ಶೀಟ್ ನಿಂದ ಕಲೆಗಳನ್ನು ತೆಗೆದುಹಾಕುವಲ್ಲಿ ಸರಳವಾದ ಉಪಾಯ ಎಂದು ನಿಮಗನ್ನಿಸುತ್ತಿಲ್ಲವೇ?
ಮೀಟ್ ಟೆಂಡರೈಸರ್:
ನೀವು ನಿಮ್ಮ ಬೆಡ್ ಶೀಟ್ ಗಳ ಮೇಲಿರುವ ರಕ್ತದ ಕಲೆಗಳು ಒಣಗಿ, ಅದನ್ನು ತೆಗೆಯುವುದು ಹೇಗೆ ಎಂದು ಚಿಂತೆಗೊಳಾಗಿದ್ದೀರೆ? ಹಾಗಾದರೆ ಮೀಟ್ ಟೆಂಡರೈಸರ್ ಸುಲಭದ ವಿಧಾನ. ಮೀಟ್ ಟೆಂಡರೈಸರ್, ರಕ್ತದಲ್ಲಿ ಪ್ರೋಟೀನ್ ತೆಗೆಯುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು ಒಂದು ಉತ್ತಮ ರಕ್ತದ ಕಲೆ ತೆಗೆಯುವ ಮಾರ್ಗವಾಗಿದೆ. ಮುಂದಿನ ಬಾರಿ ನೀವು ತಕ್ಷಣ ರಕ್ತದ ಕಲೆಯನ್ನು ತೆಗೆಯಲು ಬಯಸಿದರೆ ಈ ವಿಧಾನವನ್ನು ಪ್ರಯತ್ನಿಸಿ.



Click it and Unblock the Notifications
