Latest Updates
-
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು!
ಮೊಟ್ಟೆ ವಾಸನೆಯನ್ನು ಈ ನಾಲ್ಕು ವಿಧಾನಗಳಿಂದ ತೆಗೆಯಿರಿ
ಮೊಟ್ಟೆ ಒಂದು ಮನೆಬಳಕೆಯ ಸಾಮಾಗ್ರಿಯಾಗಿದ್ದು ಅದರ ವಾಸನೆ ಅದನ್ನು ಬಳಸಿದ ಎಲ್ಲೆಡೆಯೂ ಶಾಶ್ವತವಾಗಿ ನೆಲೆಸಿರುತ್ತದೆ. ಚಮಚ, ರೆಫ್ರಿಜರೇಟರ್, ಶೆಲ್ಫ್, ಫ್ಲೋರ್ ಹೀಗೆ ಎಲ್ಲೆಂದರಲ್ಲಿ ಅದರ ದುರ್ಗಂಧ ಪಸರಿಸಿರುತ್ತದೆ. ನಿಮ್ಮ ಅಡುಗೆಕೋಣೆಯಲ್ಲಿ ಸ್ವಚ್ಛಮಾಡದೇ ಅದನ್ನು ಹಾಗೆಯೇ ಬಿಟ್ಟಿದ್ದರೆ ಕೂಡ ಕೆಲವು ದಿನಗಳವರೆಗೆ ಅದರ ವಾಸನೆ ಹಾಗೆಯೇ ಇರುತ್ತದೆ.
ಆಮ್ಲಜನಕದ ಪ್ರಸ್ತುತತೆಯಿಲ್ಲದೆ ಬ್ಯಾಕ್ಟೀರಿಯಾವು ಮೊಟ್ಟೆಯಲ್ಲಿರುವ ಸಲ್ಫೇಟ್ ಅನ್ನು ಜೈವಿಕ ವಸ್ತುವನ್ನಾಗಿ ಛೇದಿಸಿದಾಗ ರಾಸಾಯನಿಕ ಗ್ಯಾಸ್ ಹೈಡ್ರೋಜನ್ ಸಲ್ಫೈಡ್‌ನ ಉತ್ಪಾದನೆಯಿಂದಾಗಿ ಮೊಟ್ಟೆಯ ಕೊಳೆತ ವಾಸನೆ ಹರಡುತ್ತದೆ ಎಂದು ವಿಜ್ಞಾನ ಹೇಳುತ್ತದೆ.
ಆದರೆ ಈ ದುರ್ಗಂಧದ ಬಗೆಗೆ ನಿಮ್ಮ ಚಿಂತೆಯನ್ನು ದೂರೀಕರಿಸಲು ಈ ಲೇಖನದಲ್ಲಿ ನಾವು ನಾಲ್ಕು ಸರಳ ವಿಧಾನಗಳನ್ನು ತಿಳಿಸುತ್ತಿದ್ದು ಅವುಗಳ ಬಳಕೆಯನ್ನು ಮಾಡಿ ಸಮಸ್ಯೆಯನ್ನು ದೂರೀಕರಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಪಾತ್ರೆಗಳಿಂದ ಮೊಟ್ಟೆ ವಾಸನೆಯನ್ನು ತೆಗೆಯುವುದು ಹೇಗೆ?
*ಲಿಂಬೆಯೊಂದಿಗೆ:
ಲಿಂಬೆಯ ಸಹಾಯದೊಂದಿಗೆ ಮೊಟ್ಟೆಯ ದುರ್ಗಂಧವನ್ನು ಹೋಗಲಾಡಿಬಹುದು. ಮೊಟ್ಟೆಯ ಕಲೆಯಾಗಿರುವಲ್ಲಿ ಲಿಂಬೆ ರಸವನ್ನು ಚಿಮುಕಿಸಿ. ಸ್ವಲ್ಪ ನಿಮಿಷಗಳ ಕಾಲ ಹಾಗೆಯೇ ಬಿಡಿ ಮತ್ತು ಬಟ್ಟೆಯಿಂದ ಆ ಜಾಗವನ್ನು ಒರೆಸಿ. ಇದು ದುರ್ಗಂಧವನ್ನು ತ್ವರಿತವಾಗಿ ಹೋಗಲಾಡಿಸುತ್ತದೆ.
*ರೋಸ್ ವಾಟರ್ ಬಳಸಿ:
ಕಲೆಯು ಕಠಿಣ ಮತ್ತು ಗಡುಸಾಗಿದ್ದರೆ, ಅದನ್ನು ನಿವಾರಿಸುವ ಸರಳ ವಿಧಾನವೆಂದರೆ ರೋಸ್ ವಾಟರ್ ಅನ್ನು ಬಳಸುವುದಾಗಿದೆ. ರೋಸ್ ವಾಟರ್‌ನಿಂದ ಕಲೆಯಾದ ಜಾಗವನ್ನು ಶೀಘ್ರವಾಗಿ ತೊಳೆಯಬಹುದು ಮತ್ತು ಹಣ್ಣುಗಳ ತಾಜಾ ಪರಿಮಳವನ್ನೂ ಅನುಭವಿಸಬಹುದು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ನಿಮ್ಮ ಅಡುಗೆ ಕೋಣೆಯ ಸ್ವಚ್ಛತೆ ಹೀಗಿರಲಿ!
*ವಿನೇಗರ್‌ನೊಂದಿಗೆ:
ನಿಮ್ಮ ಮನೆಯಲ್ಲಿ ಪಸರಿಸಿರುವ ಮೊಟ್ಟೆಯ ದುರ್ವಾಸನೆಯನ್ನು ಹೋಗಲಾಡಿಸಲು ಆಪಲ್ ಸೀಡರ್ ವಿನೇಗರ್ ಅನ್ನು ನಿಮಗೆ ಬಳಸಬಹುದು. ಹತ್ತಿ ಬಟ್ಟೆಯನ್ನು ತೆಗೆದುಕೊಂಡು ಸ್ವಲ್ಪ ವಿನೇಗರ್‌ನಲ್ಲಿ ಅದನ್ನು ಅದ್ದಿ ಮತ್ತು ಕಲೆಯಾಗಿರುವ ಜಾಗದಲ್ಲಿ ಬಟ್ಟೆಯಿಂದ ಒರೆಸಿ ಕಲೆ ಮಾಯ ಮತ್ತು ದುರ್ವಾಸನೆ ಕೂಡ ಹೊರಟು ಹೋಗುತ್ತದೆ. ಇದನ್ನು ದಿನದಲ್ಲಿ ಮೂರು ಗಂಟೆಗಳಷ್ಟು ಕಾಲ ಮಾಡಬೇಕು ಇದರಿಂದ ಮನೆಯಲ್ಲಿರುವ ವಾಸನೆ ಮಾಯವಾಗುತ್ತದೆ.
*ಕಿತ್ತಳೆ ಸಿಪ್ಪೆಯ ಮೂಲಕ:
ಮೊಟ್ಟೆ ವಾಸನೆಯನ್ನು ತೊಡೆಯಲು ಕಿತ್ತಳೆ ಸಿಪ್ಪೆ ಪರಿಣಾಮಕಾರಿ ವಿಧಾನವಾಗಿದೆ. ನಿಮ್ಮ ಮನೆಯನ್ನು ದುರ್ವಾಸನೆಯಿಂದ ಮುಕ್ತಿಗೊಳಿಸಲು ಇದೊಂದು ಸುಲಭ ಮತ್ತು ನೈಸರ್ಗಿಕ ವಿಧಾನವಾಗಿದೆ.



Click it and Unblock the Notifications