Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆರ್ಥಿಕ ಸಮಸ್ಯೆ ದೂರವಿಡಲು ಜ್ಯೋತಿಷ್ಯದ ಮಂತ್ರ

ಆದರೆ ಅದಕ್ಕೆಲ್ಲ ಕಾರಣ ಏನಿರಬಹುದು ಮತ್ತು ಆರ್ಥಿಕ ಸಮಸ್ಯೆ ದೂರವಿಡುವ ದೈವಿಕ ಶಕ್ತಿ ಯಾವುದು ಎಂದು ತಿಳಿಯುವುದೂ ಅಷ್ಟೇ ಮುಖ್ಯ. ಆರ್ಥಿಕ ಮುಗ್ಗಟ್ಟನ್ನು ಉಂಟುಮಾಡುವ ಕೆಲವು ವಿಚಾರ ಮತ್ತು ಅದಕ್ಕಿರುವ ಪರಿಹಾರವನ್ನು ಇಲ್ಲಿ ತಿಳಿದುಕೊಳ್ಳಿ.
* ಬುದ್ಧಿವಂತಿಕೆ ಕೊರತೆ: ಬುದ್ಧಿವಂತಿಕೆಯನ್ನು ಹೇಗೆ ಉಪಯೋಗಿಸಿಕೊಳ್ಳುತ್ತೇವೆ ಮತ್ತು ಹೇಗೆ ಬೆಳೆಸಿಕೊಳ್ಳುತ್ತೇವೆ ಎಂಬುದರ ಮೇಲೆ ಸರ್ವ ಸಮಸ್ಯೆಯ ನಿರ್ವಹಣೆ ನಿಂತಿದೆ. ವೇದದ ಪ್ರಕಾರ, ಶುಕ್ರ, ಗುರು ಮತ್ತು ಮಂಗಳ ಗ್ರಹಗಳ ಆರಾಧನೆಯಿಂದ ಈ ಕುಶಲತೆಯನ್ನು ಮೈಗೂಡಿಸಿಕೊಳ್ಳಬಹುದು ಎನ್ನಲಾಗಿದೆ. ಅಷ್ಟೇ ಅಲ್ಲ, ನಿಮ್ಮ ಜಾತಕದಲ್ಲಿರುವ ಹಣದ ಭವಿಷ್ಯದ ಕುರಿಹಿನಿಂದ ಗ್ರಹಿಸಲಾಗದ ಆ ಬುದ್ಧಿವಂತಿಕೆ ಗುರುತಿಸಲು ಸಾಧ್ಯವಾಗುತ್ತದೆ.
* ನಡತೆ ಮತ್ತು ಆಂತರಿಕ ತೊಂದರೆ: ನಿಮ್ಮ ಪರಿಮಿತಿಯ ಯೋಚನೆಯಲ್ಲೇ ಹೆಚ್ಚು ಕಾಲ ಕಳೆಯುವ ಬದಲು ಹೊರಗಿನ ಪ್ರಪಂಚದ ಜನರೊಂದಿಗೂ ಬೆರೆತರೆ ಹಣವನ್ನು ಒಳ್ಳೆಯ ರೀತಿ ಗಳಿಸಿಕೊಳ್ಳುವ ರೀತಿಯನ್ನು ಕಂಡುಕೊಳ್ಳಬಹುದು. ಅಷ್ಟೇ ಅಲ್ಲ, ಜಾತಕ ಕುಂಡಲಿಯ 2 ಮತ್ತು 3ನೇ ಮನೆಯನ್ನು ಪರಿಶೀಲಿಸಿದರೂ ಆರ್ಥಿಕತೆಯ ಸಂಪೂರ್ಣ ವರದಿ ಪಡೆಯಬಹುದು. ಶುಕ್ರ, ಚಂದ್ರ, ಬುಧ ಗ್ರಹಗಳನ್ನು ಶಾಂತಗೊಳಿಸಿದರೆ ನಿಮ್ಮ ಆಂತರಿಕ ಸಮಸ್ಯೆಯನ್ನು ಸುಲಭವಾಗಿ ನಿವಾರಿಸಲು ಸಹಕಾರಿಯಾಗುತ್ತದೆ.
* ವರ್ತಮಾನ ಅಥವಾ ಭೂತದಲ್ಲಿನ ಕರ್ಮಫಲ: ಭೂತ ಪಾಪ ಕರ್ಮವನ್ನು ಪೂರ್ಣ ಸರಿಮಾಡಲು ಸಾಧ್ಯವಲ್ಲದಿದ್ದರೂ, ಪರಿಹಾರವಂತೂ ಕಂಡುಕೊಳ್ಳಲೇಬೇಕು. ಧನಾತ್ಮಕ ಪ್ರಭಾವಗಳನ್ನು ಹೆಚ್ಚು ಅಳವಡಿಸಿಕೊಳ್ಳುವುದರಿಂದ ಸಮಸ್ಯೆಗಳಿಗೆ ಸ್ವಲ್ಪ ಮಟ್ಟಿಗಾದರೂ ಪರಿಹಾರ ದೊರೆಯುತ್ತದೆ. ನಿಮ್ಮ ಜಾತಕದಿಂದ ವರ್ತಮಾನ ಮತ್ತು ಭೂತ ಕರ್ಮಫಲಗಳನ್ನು ತಿಳಿಯಬಹುದು, ನಿಮ್ಮ ಜನ್ಮ, ಆರ್ಥಿಕತೆ ಮತ್ತು ಕರ್ಮಫಲ ಎಲ್ಲವೂ ಅವಲಂಬಿತವಾಗಿದೆ ಎಂದು ವೇದ ತಿಳಿಸಿದೆ.
* ಸೋಮಾರಿತನ: ಇದು ಹಲವರ ಸಮಸ್ಯೆ. ಕೆಲವು ವ್ಯಾಯಾಮದೊಂದಿಗೆ ದಿನವನ್ನು ಪ್ರಾರಂಭಿಸಿದರೆ ದಿನವಿಡೀ ಚೈತನ್ಯದಿಂದಿರಲು ಸಹಕಾರಿ. ಋಣಾತ್ಮಕ ಅಂಶಗಳನ್ನು ಹೋಗಿಸುವತ್ತ ಗಂಭೀರವಾಗಿ ಚಿಂತಿಸಬೇಕು ಎನ್ನುವುದು ಮನುಷ್ಯ ಕಂಡುಕೊಂಡ ಪರಿಹಾರ. ಇದಕ್ಕೆ ನೀವು ದೈವಬೆಂಬಲ ಬಯಸುವುದಾದರೆ ಶನಿ, ಕೇತು, ರಾಹು ಎಂಬ ಶಕ್ತಿಯುತ ಗ್ರಹಗಳಿಗೆ ಪ್ರಾರ್ಥನೆ ಸಲ್ಲಿಸಿದರೆ ಸೋಮಾರಿತನ ಹೋಗಲಾಡಿಸಿ ಆರ್ಥಿಕತೆಯತ್ತ ಸಾಗುತ್ತಿರುವ ದಾರಿ ಸುಗಮವಾಗುತ್ತದೆ.
* ಸ್ವಾರ್ಥತೆ: ದೌರ್ಬಲ್ಯ ಮತ್ತು ಅಸಾಮರ್ಥ್ಯತೆಯೇ ಸ್ವಾರ್ಥಕ್ಕೆ ದಾರಿ ಎಂಬುದನ್ನು ಮರೆಯಬೇಡಿ. ಯಾವಾಗಲೂ ಧನಾತ್ಮಕತೆ ಚಿಂತನೆ ನಡೆಸಿದರೆ ತಲೆಯಲ್ಲಿ ಕೆಟ್ಟ ಯೋಚನೆಗಳೂ ತುಂಬಿಕೊಳ್ಳುವುದಿಲ್ಲ. ಜ್ಯೋತಿಷ್ಯದ ಪ್ರಕಾರ, ಚಂದ್ರನೊಂದಿಗೆ ಕೆಲವು ಅಶುಭ ಗ್ರಹಗಳು ಸೇರಿ ಮನುಷ್ಯನಲ್ಲಿ ಸ್ವಾರ್ಥತೆ ಉಂಟುಮಾಡುತ್ತದೆ. ಆದ್ದರಿಂದ ಪರಿಹಾರಕ್ಕಾಗಿ ಜ್ಯೋತಿಷಿಗಳನ್ನು ಸಂಪರ್ಕಿಸಿ ಉತ್ತಮ ಸಲಹೆ ಕಂಡುಕೊಳ್ಳಬಹುದು.
* ಹೊಸತನದ ಕೊರತೆ: ಯಾವಾಗಲೂ ಹೊಸತನ್ನು ಯೋಚಿಸಬೇಕು. ಹೊಸತನದ ಕೊರತೆ ಉಂಟಾಗುವುದೇ ಬುಧಗ್ರಹ ಅಶುಭ ಸ್ಥಾನದಲ್ಲಿದ್ದಾಗ. ಆದ್ದರಿಂದ ಒಳಿತಾಗಲು ಪ್ರಾರ್ಥನೆಯ ಮೂಲಕ ಬುಧನ ಆಶೀರ್ವಾದ ಪಡೆಯುವುದನ್ನು ಮರೆಯಬೇಡಿ.
* ಅವಕಾಶ ನಿಮ್ಮದು: ನಿಮಗೆ ಸಿಕ್ಕ ಯಾವುದೇ ಅವಕಾಶವನ್ನು ಕಳೆದುಕೊಳ್ಳಬೇಡಿ. ನಿಮಗೆ ಲಾಭ ತರುವ ಯಾವುದೇ ಅಂಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ. ನಿಮ್ಮ ಆರ್ಥಿಕತ ಸ್ಥಿತಿಗತಿಯನ್ನು ತಿಳಿಯಲು ನಿಮ್ಮ ಜಾತಕವನ್ನು ಮತ್ತು ದಶಾಭುಕ್ತಿಗಳನ್ನು ತಿಳಿದುಕೊಂಡರೆ ಹಣಕಾಸಿನ ಯಶಸ್ಸಿಗೆ ಅಡ್ಡಿಯಾಗಿರುವ ಅಂಶಗಳನ್ನು ತೊಡೆದುಹಾಕಬಹುದು.



Click it and Unblock the Notifications