For Quick Alerts
ALLOW NOTIFICATIONS  
For Daily Alerts

ಕಷ್ಟವಾಗದಿರಲಿ ಕಾಟನ್ ಸೀರೆ ನಿರ್ವಹಣೆ

|
Cotton Saree Maintainance
ಕಾಟನ್ ಬಟ್ಟೆ ಹೆಚ್ಚು ಕಂಫರ್ಟೆಬಲ್. ಕಾಟನ್ ಸೀರೆ ಮಹಿಳೆಯರಿಗೆ ಡಿಫರೆಂಟ್ ಲುಕ್ ಕೊಡುತ್ತೆ. ಆದರೆ ಕಾಟನ್ ನಿರ್ವಹಣೆ ತುಂಬಾ ಕಷ್ಟ ಅಂತ ಇಷ್ಟ ಇದ್ದರೂ ಕಾಟನ್ ಬಟ್ಟೆ ಕೊಳ್ಳದವರೂ ಇದ್ದಾರೆ.

ಒಂದೇ ಒಗೆತಕ್ಕೆ ಬಣ್ಣ ಮಾಸಿದಂತೆ ಕಾಣುವ ಕಾಟನ್ ಬಟ್ಟೆ ಖರೀದಿಸಲು ಹಿಂಜರಿಯುತ್ತಾರೆ. ಆದ್ದರಿಂದ ಕಾಟನ್ ಬಟ್ಟೆಗಳನ್ನು ನಿರ್ವಹಿಸುವ ಸುಲಭ ವಿಧಾನವನ್ನು ತಿಳಿದುಕೊಂಡರೆ ಇನ್ನು ಮುಂದೆ ಕಾಟನ್ ಖರೀದಿಸಲು ಚಿಂತಿಸಬೇಕಿಲ್ಲ.

ಕಾಟನ್ ವಸ್ತ್ರಗಳ ನಿರ್ವಹಣೆಗೆ ಸಲಹೆಗಳು:
1. ನೀವು ಕಾಟನ್ ಬಟ್ಟೆಯನ್ನು ಮೊದಲ ಬಾರಿ ಒಗೆಯುತ್ತಿದ್ದೀರ ಎಂದಾದರೆ ಅದನ್ನು ಬೆಚ್ಚಗಿನ ನೀರಿನಲ್ಲಿ ಕಲ್ಲುಪ್ಪು ಬೆರೆಸಿ 15-20 ನಿಮಿಷ ನೆನೆಸಬೇಕು. ಇದು ಸೀರೆ ಬಣ್ಣ ಕಳೆದುಕೊಳ್ಳದಂತೆ ನೋಡಿಕೊಳ್ಳುತ್ತದೆ ಮತ್ತು ಬೇಗನೆ ಬಣ್ಣ ಮಾಸದಿರಲು ಸಹಾಯಕವಾಗುತ್ತದೆ.

2. ನೀರಿನಲ್ಲಿ ಅಂಟವಾಳದ ಕಾಯಿ (ಸೋಪ್ ನಟ್ಸ್ )ಗಳನ್ನು ನೆನೆಹಾಕಿ ಆ ನೀರಿನಲ್ಲಿ ಕಾಟನ್ ಬಟ್ಟೆ ನೆನೆಹಾಕಿದರೆ ಬಟ್ಟೆಯನ್ನು ಹೊಸದರಂತೆ ಮತ್ತು ಹೆಚ್ಚು ಕಾಲ ಬಾಳಿಕೆ ಬರುವಂತೆ ನೋಡಿಕೊಳ್ಳುತ್ತದೆ.

3. ಅಂಗಡಿಗಳಲ್ಲಿ ಲಭ್ಯವಿರುವ ದ್ರವರೂಪದ ಸ್ಟಾರ್ಚ್ ಗಳನ್ನು ಬಳಸಿದರೂ ಬಟ್ಟೆಯನ್ನು ಕಾಪಾಡಿಕೊಳ್ಳುವುದು ಸಾಧ್ಯವಿದೆ.

4. ಸ್ಟಾರ್ಚ್ ಹಾಕಿದ ಬಳಿಕ ಬಟ್ಟೆಯಲ್ಲಿ ಸ್ಟಾರ್ಚ್ ಒಂದೆಡೆಯೇ ಉಳಿದುಕೊಳ್ಳದಂತೆ ಚೆನ್ನಾಗಿ ಒದರಿ ಹಾಕಬೇಕು. ಇಲ್ಲದಿದ್ದರೆ ಬಟ್ಟೆ ಬಿಳಿಬಿಳಿಯಾಗಿ ಕಾಣುತ್ತದೆ.

5. ಕಾಟನ್ ಬಟ್ಟೆಗಳನ್ನು ಹಿಂಬದಿಗೆ ಮಡಚಿ ನೆರಳಿನಲ್ಲಿ ಒಣಗಿಸಬೇಕು.

6. ಒಣಗಿದ ನಂತರ ಐರನ್ ಮಾಡಿ, ಹ್ಯಾಂಗರ್ ಗಳಿಗೆ ಬಟ್ಟೆಯನ್ನು ಹಾಕಬೇಕು. ಇದರಿಂದ ಸುಕ್ಕು ಮೂಡುವುದಿಲ್ಲ.

English summary

Maintainance of Cotton Sarees | Cotton Cloths Easy Maintainance Tips | ಕಾಟನ್ ಸೀರೆಗಳ ನಿರ್ವಹಣೆ | ಕಾಟನ್ ಬಟ್ಟೆಗಳ ಸುಲಭ ನಿರ್ವಹಣೆಗೆ ಸಲಹೆ

Cotton is always comfortable and warm. The more you wash the softer it becomes, so maintaining the crispness needs smart thinking. Look for the simple tips to maintain and keep your cotton sarees and salwars as new as ever.
Story first published: Saturday, September 10, 2011, 16:02 [IST]
X
Desktop Bottom Promotion