Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಸುಂದರ ಕೈ ತೋಟಕ್ಕೆ ನೈಸರ್ಗಿಕ ಕ್ರಿಮಿನಾಶಕ

ಈ ಕ್ರಿಮಿನಾಶಕಗಳನ್ನು ಹೇಗೆ ತಯಾರಿಸಬಹುದು ಎಂದು ತಿಳಿಯೋಣ:
1. ಮೊಟ್ಟೆ ಸಿಪ್ಪೆ ಮತ್ತು ಉಪ್ಪು: ಮೊಟ್ಟೆಯ ಸಿಪ್ಪೆ ಮತ್ತು ಸ್ವಲ್ಪ ಉಪ್ಪನ್ನು ಗಿಡದ ಬುಡಕ್ಕೆ ಹಾಕಬೇಕು. ಇದು ಸಸ್ಯಗಳನ್ನು ಹಾಳು ಮಾಡುವ ಬಸವನ ಹುಳು, ಗೊಂಡೆ ಹುಳುಗಳನ್ನು ನಾಶಪಡಿಸುತ್ತದೆ.
2. ಈರುಳ್ಳಿ : ಬೆಳ್ಳುಳ್ಳಿ, ಈರುಳ್ಳಿಯ ಎಸಳುಗಳನ್ನು ನೀರಿನೊಂದಿಗೆ ಬೆರೆಸಿ, ಹಿಂಡಿ ಮಣ್ಣಿನ ಮೇಲೆ ಹಾಕಿದರೆ ಹುಳುಗಳನ್ನು ನಾಶ ಪಡಿಸುತ್ತದೆ ಮತ್ತು ಹಾರುವ ಚಿಟ್ಟೆಗಳನ್ನು ನಿಯಂತ್ರಣ ಮಾಡುತ್ತದೆ. ಇದನ್ನು ತರಕಾರಿ ಎಣ್ಣೆಯೊಂದಿಗೆ ಬೆರೆಸಿ ಹಾಕಿದರೆ ಮತ್ತಷ್ಟು ಪರಿಣಾಮಕಾರಿಯಾಗಿರುತ್ತದೆ.
3. ಬೆಳ್ಳುಳ್ಳಿ: ಬೆಳ್ಳುಳ್ಳಿ ಸಿಪ್ಪೆ ಸಮೇತ ಎಸಳುಗಳನ್ನು ಎರಡು ಮೆಣಸಿನ ಕಾಯಿಯೊಂದಿಗೆ ಬ್ಲೀಚ್ ಸೇರಿಸಿ ನೀರಿನೊಂದಿಗೆ ಬೆರೆಸಿ ಸಿಂಪಡಿಸಿದರೆ ಎಂತಹ ಹುಳುವಿದ್ದರೂ ನಿಯಂತ್ರಣಕ್ಕೆ ಬರುತ್ತದೆ. ಇದನ್ನು ಎಲೆಯ ಕೆಳಗೆಯೂ ಸಿಂಪಡಿಸಬೇಕು.
4. ಸೋಪು: ಪಾತ್ರೆ ತೊಳೆಯುವ ಸೋಪುಗಳನ್ನು ಸಹ ಕ್ರಿಮಿನಾಶಕದಂತೆ ಬಳಸಬಹುದು. ನೀರಿನೊಂದಿಗೆ ದ್ರವರೂಪದಲ್ಲಿ ಸೋಪನ್ನು ಬೆರೆಸಿ ಗಿಡಗಳಿಗೆ ಸಿಂಪಡಿಸಬೇಕು. ಹಣ್ಣು, ತರಕಾರಿಗಳ ಮೇಲೆ ಸಿಂಪಡಿಸಬಾರದು. ಇದನ್ನು ಆಗಾಗ್ಗೆ ಮಾತ್ರ ಉಪಯೋಗಿಸಬೇಕು.
5. ಟೊಮೊಟೊ: ಟೊಮೊಟೊಗಳ ಎಲೆಯಲ್ಲಿ ಕ್ರಿಮಿಗಳನ್ನು ನಾಶ ಮಾಡುವಂತ ಸತ್ವವಿರುವುದರಿಂದ ಇವುಗಳ ಎಲೆಯನ್ನು ಬಳಸಬಹುದು. ಎಲೆಯನ್ನು ಚಿಕ್ಕದಾಗಿ ಕತ್ತರಿಸಿ ಒಂದು ಕಪ್ ಎಲೆಗೆ ಒಂದು ಕಪ್ ನೀರು ಬೆರೆಸಿ 24 ಗಂಟೆ ನೆನೆಯಿಸಿ ಸೋಸಿದ ನೀರನ್ನು ಗಿಡಕ್ಕೆ ಸಿಂಪಡಿಸಬೇಕು. ಇದು ಗಿಡಗಳ ಬೆಳವಣಿಗೆಗೆ ಮಾರಕವಾಗಿರುವ ಕ್ರಿಮಿಗಳನ್ನು ನಾಶಪಡಿಸುತ್ತದೆ.
6. ಬೇವಿನ ಎಣ್ಣೆ: ಬೇವಿನ ಎಣ್ಣೆಯ ಸಿಂಪಡಿಸುವುದರಿಂದ ಕ್ರಿಮಿಗಳೂ ನಾಶವಾಗುವುದು ಮಾತ್ರವಲ್ಲ, ಮತ್ತೆ ಕ್ರಿಮಿಗಳು ಮರುಕಳಿಸದಂತೆ ಮಾಡುತ್ತದೆ. ಇದು ಇನ್ನೂ ಅನೇಕ ಸಸ್ಯ ಸಂಬಂಧಿ ರೋಗಗಳನ್ನು ತಡೆಗಟ್ಟುತ್ತದೆ.
7. ಕಾಫಿ ಪುಡಿ ಉಳಿಕೆ: ಕಾಫಿ ಪುಡಿಯ ಉಳಿಕೆಯನ್ನು ಗಿಡಗಳ ಸುತ್ತ ಹಾಕಿದರೆ ಗಿಡಗಳು ಚೈತನ್ಯ ಪಡೆದುಕೊಳ್ಳುತ್ತವೆ.
8. ಎರೆಹುಳ: ಎರೆಹುಳುವನ್ನು ಮಣ್ಣಿನಲ್ಲಿ ಹಾಕುವುದರಿಂದ ಫಲವತ್ತತೆ ಹೆಚ್ಚಾಗಿ ಗಿಡಗಳಿಗೆ ಸೂಕ್ತ ಪೋಷಕಾಂಶ ದೊರೆಯುತ್ತದೆ.



Click it and Unblock the Notifications
