Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮನೆ ಮುಂದೆ ಈ ಗಿಡಗಳಿದ್ದರೆ ಲಕ್ಷ್ಮಿ ಮನೆಯೊಳಗೆ ನೆಲೆಸುತ್ತಾಳೆ..!
ಮನೆ ಕಟ್ಟುವಾಗ ವಾಸ್ತು ಪ್ರಕಾರವಾಗಿ ಕಟ್ಟಲಾಗುತ್ತದೆ, ವಾಸ್ತುಶಸ್ತ್ರದಲ್ಲಿ ಹಾಗೂ ಸಂಖ್ಯಾಶಾಸ್ತ್ರಗಳ ಕೆಲವು ನಿಯಮಗಳ ಅನ್ವಯ ಮನೆಯ ಅಡಿಪಾಯದಿಂದ ಹಿಡಿದು ಎಲ್ಲಾ ಪ್ರಕ್ರಿಯೆಗಳು ನಡೆಯುತ್ತವೆ. ಏಕೆಂದರೆ ವಾಸ್ತುವಿನಲ್ಲಿ ಹೇಳುವಂತೆ, ದೋಷಯುಕ್ತ ಮನೆ ನಿರ್ಮಾಣವು ಇಡೀ ಮನೆಯ ಶಾಂತಿ ಹಾಳು ಮಾಡುತ್ತದೆ.
ಆದರೆ ಮನೆಯಲ್ಲಿ ವಾಸ್ತು ಸಮಸ್ಯೆಗಳು ಕಂಡುಬಂದಾಗ ಏನು ಮಾಡಬೇಕು? ಕೆಲವೊಮ್ಮೆ ಹಲವು ನೂರಾರು ರೀತಿಯ ಸಲಹೆ ನೀಡುತ್ತಾರೆ. ಆದ್ರೆ ನಾವಿಂದು ಕೆಲವೊಂದು ಗಿಡಗಳ ನೆಡುವುದರಿಂದ ಆಗುವ ಲಾಭದ ಕುರಿತು ತಿಳಿಸುತ್ತೇವೆ. ಸದಸ್ಯರು ಇಲ್ಲವೆ ಮನೆಯಲ್ಲಿ ವಾಸ್ತು ದೋಷ ಕಂಡುಬಂದರೆ ಹೇಗೆ ಅದನ್ನು ಪರಿಹರಿಸಬೇಕು? ಇದಕ್ಕೆ ಯಾವ ಗಿಡ ಅಥವಾ ಸಸ್ಯದಲ್ಲಿ ಪರಿಹಾರ ನೀಡಲಾಗಿದೆ ಎಂಬುದನ್ನು ನಾವಿಂದು ತಿಳಿಯೋಣ.

ಮನೆ ಮುಂಭಾಗದಲ್ಲಿ ಕೆಲವೊಂದು ಗಿಡ ನೆಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗಲಿದೆ. ದೇವಿಯ ಅನುಗ್ರಹಕ್ಕಾಗಿ ಯಾವ ಗಿಡ ಇಡಬೇಕು ಎಂಬುದನ್ನು ನೋಡೋಣ.
ತುಳಸಿ ಗಿಡ
ಎಲ್ಲರ ಮನೆಯಲ್ಲೂ ತುಳಸಿ ಗಿಡ ಇದ್ದೇ ಇರುತ್ತದೆ. ಅದ್ರಲ್ಲೂ ಮನೆಯ ದ್ವಾರಕ್ಕೆ ನೇರವಾಗಿ ತುಳಸಿ ಕಟ್ಟೆ ಇರಬೇಕು. ಜೊತೆಗೆ ಎರಡು ರೀತಿಯ ತುಳಿಸಿ ಗಿಡ ಇದ್ದರೆ ಇನ್ನಷ್ಟು ಒಳ್ಳೆಯದು. ಒಂದು ಲಕ್ಷ್ಮಿ ತುಳಸಿ ಹಾಗೂ ಮತ್ತೊಂದು ವಿಷ್ಣು ತುಳಸಿ. ಒಂದು ಕಂದು ಬಣ್ಣದಲ್ಲಿರುವ ತುಳಸಿಯನ್ನು ನೀವು ನೋಡಿರಬಹುದು, ಇರನ್ನು ರಾಮ ತುಳಸಿ ಅಂತಲೂ ಕರೆಯುತ್ತಾರೆ. ಈ ಗಿಡಗಳು ಮನೆಯ ಮುಂಭಾಗದಲ್ಲಿರಬೇಕು ಜೊತೆಗೆ ಅದಕ್ಕೆ ನೀರು ಹಾಕಿ ಸಲಹಬೇಕು.
ಬಿಲ್ವ ಪತ್ರೆ
ಕೆಲವರು ಇದನ್ನು ಬಿಲ್ಪತ್ರೆ ಅಂತಲೂ ಕರೆಯುತ್ತಾರೆ. ಇದು ಸಣ್ಣ ಮಡಕೆಯಲ್ಲಿ ಹಾಕಿ ಮನೆ ಮುಂದೆ ನಡೆಬೇಕು ಎನ್ನಲಾಗಿದೆ. ಇದು ಲಕ್ಷ್ಮಿಯ 16 ಸ್ಥಾನಗಳಲ್ಲಿ ಬಿಲ್ವ ವೃಕ್ಷವೂ ಒಂದಾಗಿದೆ. ಹೀಗಾಗಿ ಲಕ್ಷ್ಮಿಯ ಅನುಗ್ರಹಕ್ಕಾಗಿ ಈ ಗಿಡ ನೆಡಬೇಕು ಎಂದು ಹೇಳಲಾಗಿದೆ. ಇದಕ್ಕೆ ತಾಮ್ರದ ಪಾತ್ರೆಯಿಂದ ನೀರು ಹಾಕಬೇಕು ಎಂದು ಹೇಳಲಾಗಿದೆ.
ಅಲೂವೇರಾ
ಅಲೂವೇರಾ ಗಿಡ ಮನೆಯಲ್ಲಿ ಇರಬೇಕು. ಮನೆಯ ಮುಂದಿನ ಬಲಗಡೆಯ ಮೂಲೆಯಲ್ಲಿ ನೇತುಹಾಕುತ್ತಾರೆ. ಇದರಿಂದ ಮಾಠ ಮಂತ್ರದಂತಹ ಕಾರ್ಯಗಳು ವಿಫಲಾವಾಗುತ್ತದೆ ಎಂದು ನಂಬಲಾಗುತ್ತದೆ. ಇದು ನೀರಿಲ್ಲದೆಯೂ ಬೆಳೆಯುತ್ತದೆ. ಇದನ್ನು ಮನೆಯಲ್ಲಿ ಇಟ್ಟರೆ ಧನಾತ್ಮಕ ಶಕ್ತಿ ನೆಲೆಸುತ್ತದೆ ಎನ್ನಲಾಗಿದೆ.
ಮನಿ ಪ್ಲಾಂಟ್
ನೀವು ಮನಿ ಪ್ಲಾಂಟ್ ನೋಡಿರುತ್ತೀರಿ. ರೆಂಬೆ ಕೊಂಬೆ ಇರದೆ ಇದು ಬೆಳಯುತ್ತದೆ. ಇದನ್ನು ನೆಲದ ಮೇಲೆ ಹರಡಲು ಬಿಡಬಾರದು. ಇದಕ್ಕೆ ಹಗ್ಗ ಅಥವಾ ತಂತಿ ಹಾಕಿ ಅದನ್ನು ಮೇಲೆ ಹೋಗುವಂತೆ ಬಿಡಬೇಕು. ಈ ಗಿಡಕ್ಕೆ ನೀರು ಹಾಕಿ ಬೆಳೆಸಬೇಕು.
ಅರಶಿನ
ಅರಶಿನದ ಗಿಡವನ್ನು ಒಂದು ಪಾಟ್‌ನಲ್ಲಿ ನೆಡಬೇಕು. ಲಕ್ಷ್ಮಿ ಹಾಗೂ ಗೌರಮ್ಮನಿಗೆ ಈ ಲಕ್ಷ್ಮಿ ಗಿಡ ತುಂಬಾ ಇಷ್ಟ, ಯಾವ ಮನೆಯಲ್ಲಿ ಅರಶಿನ ಗಿಡ ನೆಟ್ಟು ಬೆಳೆಸುತ್ತಾರೋ ಆ ಮನೆಯಲ್ಲಿ ಮಹಿಳೆಯರಿಗೆ ಶ್ರೇಯವಂತೆ. ಅಲ್ಲದೆ ಅರಶಿನ ದರಿದ್ರತನವನ್ನು ದೂರ ಮಾಡುತ್ತದೆ ಎಂದು ನಂಬಲಾಗಿದೆ.
ಬಾಳೆಗಿಡ ಮತ್ತು ಕಬ್ಬು
ಯಾವುದೇ ಶುಭ ಸಮಾರಂಭದಲ್ಲಿ ಬಾಳೆಗಿಡ ಹಾಗೂ ಕಬ್ಬಿನ ಬಳಕೆ ಮಾಡುತ್ತೇವೆ. ಅಂದರೆ ಇದು ದೇವರಿಗೆ ಅಂತ್ಯಂತ ಶ್ರೇಷ್ಟ. ಬಾಳೆಗಿಡದಲ್ಲಿ ಲಕ್ಷ್ಮಿ ದೇವಿ ನೆಲೆಸಿರುತ್ತಾಳೆ ಎಂದು ನಂಬಲಾಗಿದೆ. ಇನ್ನು ಕಬ್ಬು ಸಹ ಲಕ್ಷ್ಮಿ ನಾರಾಯಣನಿಗೆ ಶ್ರೇಷ್ಟವಾದ ಗಿಡವಾಗಿದೆ.
ಇದೆಲ್ಲಾ ಗಿಡಗಳು ನಿಮ್ಮ ಮನೆ ಮುಂದೆ ಇದ್ದರೆ ಲಕ್ಷ್ಮಿ ಅನುಗ್ರಹವಾಗಲಿದೆ, ಆಕೆ ಸದಾ ಮನೆಯಲ್ಲಿ ನೆಲೆಸುತ್ತಾಳೆ ಎಂದು ನಂಬಲಾಗಿದೆ.



Click it and Unblock the Notifications
