Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
ಭಾರತದಲ್ಲಿ ಹೆಚ್ಚಾಗುತ್ತಿದೆ H3N2 ವೈರಸ್: ಯಾರಿಗೆ ಅಪಾಯ ಅಧಿಕ, ಈ ವೈರಸ್ ತಡೆಗಟ್ಟಲು ನೀವೇನು ಮಾಡಬೇಕು?
H3N2 ವೈರಸ್ ಆತಂಕ ಭಾರತದಲ್ಲಿ ಹೆಚ್ಚಾಗುತ್ತಿದೆ. ಈಗಾಗಲೇ 3000ಕ್ಕೂ ಅಧಿಕ ಜನರಿಗೆ ಈ ವೈರಸ್ ಬಾಧಿಸಿದೆ, 8 ಜನರು ಈ ವೈರಸ್‌ಗೆ ಬಲಿಯಾಗಿದ್ದಾರೆ.

H3N2 ವೈರಸ್ ಮೊಟ್ಟ ಮೊದಲಿಗೆ 2010ರಲ್ಲಿ ಹಂದಿಗಳಲ್ಲಿ ಕಂಡು ಬಂದಿತ್ತು, ಅದಾದ ಮೇಲೆ ಕೆಲವೊಂದು ದೇಶಗಳಲ್ಲಿ ಈ ವೈರಸ್ ಕಂಡು ಬಂದಿತ್ತು. ಈ ವರ್ಷ ಭಾರತದಲ್ಲಿ ಈ ವೈರಸ್ ಕಂಡು ಬಂದಿದ್ದು ಕೊರೊನಾದಂಥ ಸಂಕಷ್ಟ ಈ ವೈರಸ್ ತಂದೊಡ್ಡಬಹುದೇ ಎಂಬ ಆತಂಕ ಎದುರಾಗಿದೆ.
ಕೇಂದ್ರ ಆರೋಗ್ಯ ಇಲಾಖೆ ಜನರು H3N2ವೈರಸ್ ಕುರಿತು ಆತಂಕ ಬೀಳಬೇಡಿ, ಬದಲಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ, ಈ ವೈರಸ್ ಅಪಾಯ ತಡೆಗಟ್ಟಬಹುದು ಎಂದು ಹೇಳಿದೆ.
H3N2 ವೈರಸ್ ಹೇಗೆ ಹರಡುತ್ತಿದೆ?
ಈ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವುದು, ಮನುಷ್ಯರಿಂದ ಮನುಷ್ಯರಿಗೆ ಕೂಡ ಹರಡುವುದು. ಈ ವೈರಸ್ ತಗುಲಿದ ವ್ಯಕ್ತಿ ಕೆಮ್ಮಿದಾಗ, ಸೀನಿದಾಗ ಈ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು. ವಾತಾವರಣದಲ್ಲಿ ವೈರಸ್ ಇದ್ದರೆ ಉಸಿರಾಟದ ಮೂಲಕ ಕೂಡ ಈ ವೈರಸ್ ಮನುಷ್ಯನ ದೇಹಕ್ಕೆ ಸೇರುವುದು.
H3N2 ಅಪಾಯಕಾರಿಯಾಗಿದೆ
H3N2 ವೈರಸ್ ತಗುಲಿದರೆ ಅದರ ಲಕ್ಷಣಗಳು ತುಂಬಾನೇ ಅಪಾಯಕಾರಿಯಾಗಿದೆ. ಈ ವೈರಸ್ ತಗುಲಿದ ರೋಗಗಳಲ್ಲಿ ಹೆಚ್ಚಿನವರಿಗೆ ಐಸಿಯು ಚಿಕಿತ್ಸೆ ಅವಶ್ಯಕವಾಗಿದೆ. ಹೆಚ್ಚಿನವರಲ್ಲಿ ಉಸಿರಾಟದ ತೊಂದರೆ ಕಂಡು ಬರುತ್ತಿದೆ. ವ್ಯಕ್ತಿಯಲ್ಲಿ ತುಂಬಾನೇ ನಿಶ್ಯಕ್ತಿ ಕಂಡು ಬರುವುದು. ಆದ್ದರಿಂದ ಈ ವೈರಸ್ ತುಂಬಾ ಅಪಾಯಕಾರಿಯಾಗಿದೆ.
H3N2 ವೈರಸ್ ಹರಡುವುದು ಹೇಗೆ?
* ಜ್ವರ, ಶೀತ, ಕೆಮ್ಮುಈ ಲಕ್ಷಣಗಳಿದ್ದರೆ ಹೊರಗಡೆ ಹೋಗದಿರುವುದು ಒಳ್ಳೆಯದು.
* ಬೇರೆಯವರ ಜೊತೆ ಬೆರೆಯಲು ಹೋಗಬೇಡಿ, ಮನೆಯಲ್ಲಿ ವಯಸ್ಸಾದವರು, ಗರ್ಭಿಣಿಯರು, ಮಕ್ಕಳು ಇದ್ದರೆ ಅವರಿಂದ ದೂರವಿರಿ.
* ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿ.
* ಆಗಾಗ ಮೂಗು, ಮುಖವನ್ನು ಮುಟ್ಟಬೇಡಿ.
* ಮೊದಲಿಗೆ ಆ್ಯಂಟಿಬಯೋಟಿಕ್ಸ್ ತೆಗೆದುಕೊಳ್ಳಬೇಡಿ.
* ಕೈಗಳನ್ನು ಆಗಾಗ ಸೋಪು ಹಚ್ಚಿ ತೊಳೆಯಿರಿ, ಹೊರಗಡೆ ಹೋಗುವಾಗ ಸ್ಯಾನಿಟೈಸರ್ ಬಳಸಿ.
ಭಾರತದಲ್ಲಿ ಈ ವೈರಸ್ ತಡೆಗಟ್ಟಲು ನಾವೆಲ್ಲಾ ಮುನ್ನೆಚ್ಚರಿಕೆವವಹಿಸುವುದು ಅವಶ್ಯಕ, ಇಲ್ಲದಿದ್ದರೆ ಅಪಾಯ
ಮನೆಯಲ್ಲಿ ವಯಸ್ಸಾದವರು, ಗರ್ಭಿಣಿಯರು, ಚಿಕ್ಕ ಮಕ್ಕಳಿದ್ದರೆ ಈ ವೈರಸ್ ಅವರ ಮೇಲೆ ತುಂಬಾನೇ ಗಂಭೀರ ಪರಿಣಾಮ ಬೀರಬಹುದು, ಆದ್ದರಿಂದ ತಡೆಗಟ್ಟಲು ಪ್ರಯತ್ನಿಸುವುದು ಒಳ್ಳೆಯದು.
ಯಾರಿಗೆ H3N2 ಅಪಾಯ ಅಧಿಕ?
* 60 ವರ್ಷ ಮೇಲ್ಪಟ್ಟವರಿಗೆ
* ನ್ಯೂಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದರೆ
* ಉಸಿರಾಟದ ತೊಂದರೆ ಇರುವವರಿಗೆ
* ಗರ್ಭಿಣಿಯರಿಗೆ
* ಅಸ್ತಮಾ ಸಮಸ್ಯೆ ಇರುವವರಿಗೆ
* 5 ವರ್ಷದ ಕೆಳಗಿನ ಮಕ್ಕಳಿಗೆ
* ಇತರ ಆರೋಗ್ಯ ಸಮಸ್ಯೆಯಿದ್ದರೆ
ಮುನ್ನೆಚ್ಚರಿಕೆ ವಹಿಸಿ
ಈ ವೈರಸ್ ಭಾರತದ ಮೇಲೆ ಕೆಟ್ಟ ಪರಿಣಾಮ ಬೀರುವ ಮುನ್ನ ಇದನ್ನು ನಾವು ಮುನ್ನಚ್ಚೆರಿಕೆ ತೆಗೆದುಕೊಳ್ಳುವ ಮೂಲಕ ತಡೆಗಟ್ಟಬೇಕಾಗಿದೆ. ಕೊರೊನಾ ಸಮಯದಲ್ಲಿ ಪಾಲಿಸಿದ ಮುನ್ನೆಚ್ಚರಿಕೆ ಕ್ರಮ ಅಂದರೆ ಮಾಸ್ಕ್ ಧರಿಸುವುದು, ಜನರು ಗುಂಪು ಇರುವ ಕಡೆ ಹೋಗದೇ ಇರುವುದು ಈ ನಿಯಮಗಳನ್ನು ಪಾಲಿಸಿ.



Click it and Unblock the Notifications


