Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ತುಳಸಿ ಗಿಡ ಇದ್ದರೆ ಈ ತಪ್ಪು ಮಾಡಬೇಡಿ: ಬಡತನ ಬೆನ್ನಟ್ಟುತ್ತೆ..!
ಹಿಂದೂಗಳ ಮನೆಯಲ್ಲಿ ಸಾಮಾನ್ಯವಾಗಿ ತುಳಸಿ ಕಟ್ಟೆ ಇದ್ದೇ ಇರುತ್ತೆ. ಈ ತುಳಸಿ ಗಿಡಕ್ಕೆ ಪೂಜೆ ಮಾಡಿ ನಂತರ ನಿತ್ಯದ ಕೆಲಸಗಳು ನಡೆಯುತ್ತವೆ. ತುಳಸಿ ಪೂಜೆ ಕೂಡ ಹಿಂದೂ ಧರ್ಮದಲ್ಲಿ ಅತ್ಯುತ್ತಮ ಮಹತ್ವ ಪಡೆದುಕೊಂಡಿದೆ. ದೀಪಾವಳಿಯಲ್ಲಿ ತುಳಸಿ ಪೂಜೆಗೆ ಮಹತ್ವವಿದೆ. ಹಾಗೆ ಮನೆಯ ಮುಂದೆ ನೇರವಾಗಿ ತುಳಸಿ ಗಿಡ ನೆಡುತ್ತಾರೆ.
ಈ ತುಳಸಿ ಗಿಡಗಳು ಪಂಚಲೋಹಗಳಿಂದ ಸುತ್ತವರೆದ ಕಟ್ಟೆಯನ್ನು ಹೊಂದಿರುತ್ತದೆ. ತುಳಸಿ ಗಿಡ ಮಾಡುವಾಗಲೂ ವಾಸ್ತುವಿನ ಪ್ರಕಾರಣವಾಗಿ ಮಾಡಲಾಗುತ್ತದೆ. ಅಂದರೆ ತುಳಸಿ ಗಿಡಕ್ಕೆ ದೇವಾಲಯದಷ್ಟು ಶ್ರೇಷ್ಟತೆಯನ್ನು ನೀಡಲಾಗಿದೆ. ತುಳಸಿ ಗಿಡ ಸುತ್ತು ಬರುವುದು ಆಧ್ಯಾತ್ಮಿಕ ದೃಷ್ಟಿಯಿಂದ ಬಹಳ ಉತ್ತಮ ಎಂದು ಹೇಳಲಾಗಿದೆ.

ಹಾಗೆ ತುಳಸಿ ಗಿಡಕ್ಕೆ ನಾವು ಪೂಜೆ ಸಲ್ಲಿಸುವುದು ವಿಶೇಷ ಧನಾತ್ಮಕ ಶಕ್ತಿಯ ಆಗಮನಕ್ಕೆ ಕಾರಣವಾಗಲಿದೆ. ಹೀಗಾಗಿ ಎಲ್ಲರ ಮನೆಯ ಮುಂದೆ ನಾವು ತುಳಸಿ ಗಿಡ ನೋಡುತ್ತೇವೆ. ಹಾಗೆ ತುಳಸಿ ಗಿಡವನ್ನು ಹೇಗೆ ನೆಡಬೇಕು ಎಂಬ ನಿಯಮಗಳಿವೆ. ಯಾವ ದಿನ ನೆಡಬೇಕು, ಹೇಗೆ ನೆಡಬೇಕು ಎಂಬುದನ್ನು ವಾಸ್ತು ಪ್ರಕಾರವಾಗಿ ಹೇಳಲಾಗಿದೆ.
ಹಾಗೆ ತುಳಸಿ ಪೂಜೆಯ ವೇಳೆ ಈ ರೀತಿ ತಪ್ಪುಗಳ ಮಾಡುವುದು ಅಕ್ಷಮ್ಯ ಎಂದು ಪರಿಗಣಿಸಲಾಗಿದೆ. ಇಂತಹ ತಪ್ಪುಗಳ ಮಾಡುವುದು ನಿಮಗೆ ದುರಾದೃಷ್ಟ ತರಲಿದೆ. ಹಾಗೆ ಮನೆಗೆ ಬಡತನ ಬಂದೊದಗಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ತುಳಸಿ ಪೂಜೆಯಲ್ಲಿ ಯಾವೆಲ್ಲಾ ತಪ್ಪುಗಳನ್ನು ಮಾಡಬಾರದು? ಯಾವ ತಪ್ಪುಗಳ ಮಾಡಿದರೆ ಸಮಸ್ಯೆ ಎದುರಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತುಳಸಿ ನೆಡುವ ಸ್ಥಳ
ತುಳಸಿ ಗಿಡವನ್ನು ಪೂರ್ವ ದಿಕ್ಕಿಗೆ ಮುಖ ಮಾಡಿ ಇರಬೇಕು ಎಂಬ ನಿಯಮವಿದೆ. ಅಥವಾ ನಾವು ಪೂರ್ವಕ್ಕೆ ಮುಖ ಮಾಡಿ ನಿಂತು ಪೂಜೆ ಸಲ್ಲಿಸುವಂತೆ ರಚನೆ ಇರಬೇಕು. ಆದ್ರೆ ಕೆಲವರು ತುಳಸಿಯನ್ನು ಉತ್ತರ ದಿಕ್ಕಿನತ್ತ ಮುಖ ಮಾಡಿ ನಿರ್ಮಿಸಿರುತ್ತಾರೆ. ಈ ರೀತಿಯ ರಚನೆಯಿಂದ ಮನೆಗೆ ಕೆಟ್ಟ ಅನುಭವವಾಗಲಿದೆ. ಹಾಗೆ ಬಡತನ ನಿಮ್ಮನ್ನು ಕಾಡಲಿದೆ ಎಂದು ಹೇಳಲಾಗುತ್ತದೆ.
ಒಣಗಿದ ತುಳಸಿ ಗಿಡ
ತುಳಸಿ ಗಿಡಗಳು ಒಣಗಿದರೆ ಅದನ್ನು ಕತ್ತರಿಸಿ ಎಸೆಯಬೇಕು. ಒಣಗಿದ ಗಿಡಕ್ಕೆ ಪೂಜೆ ಸಲ್ಲಿಸುವುದು ದರಿದ್ರದ ಸಂಕೇತವಾಗಿದೆ. ತುಳಸಿ ಒಣಗಿದಾಗ ಅದು ಯಾವುದೇ ಶಕ್ತಿಯನ್ನು ಹೊಂದಿರುವುದಿಲ್ಲ. ಈ ತುಳಸಿ ಗಿಡಕ್ಕೆ ಪೂಜೆ ಮಾಡುವುದು ಬಡತನಕ್ಕೆ ದಾರಿಯಾಗಲಿದೆ.
ತುಳಸಿಗಿಡ ಯಾವಾಗ ನೆಡಬೇಕು?
ತುಳಸಿ ಗಿಡ ನೆಡಲು ಕೂಡ ದಿನವನ್ನು ಗೊತ್ತು ಮಾಡಲಾಗಿದೆ. ಗುರುವಾರದಂದು ತುಳಸಿ ನೆಟ್ಟರೆ ಒಳ್ಳೆಯದು. ಅದರಲ್ಲೂ ಕಾರ್ತಿಕ ಮಾಸದ ಗುರುವಾರದಲ್ಲಿ ತುಳಸಿ ನೆಡುವುದು ಅತ್ಯಂತ ಶ್ರೇಷ್ಠ ಎಂದು ನಂಬಲಾಗಿದೆ.
ಕಲಶದಿಂದ ನೀರು ನೀಡಿ
ತುಳಸಿ ಗಿಡಕ್ಕೆ ನೀರು ಹಾಕುವುದು ಕೂಡ ಶ್ರೇಷ್ಠ ಕೆಲಸವಾಗಿದೆ, ಅದರಲ್ಲೂ ತುಳಸಿಗೆ ಕಲಶದಿಂದಲೇ ನೀರು ಹಾಕಬೇಕು. ನೀವು ಪ್ಲಾಸ್ಟಿಕ್ ಪಾತ್ರೆ, ಡಬ್ಬಿ, ಬಾಟಲಿಯಲ್ಲಿ ಎಂದಿಗೂ ನೀರು ಹಾಕಬೇಡಿ ಇದು ತುಳಸಿ ಗಿಡದ ಬೆಳವಣಿಗೆ ಕುಂಠಿತಗೊಳಸುತ್ತದೆ. ಹಾಗೆ ಮನೆಗೂ ಇದು ಉತ್ತಮವಲ್ಲ.
ತುಳಸಿ ಇಡುವ ಜಾಗ
ಕೆಲವರ ಮನೆಯಲ್ಲಿ ಅಂಗಳಲ್ಲಿ ತುಳಸಿ ಗಿಡ ಇರುತ್ತದೆ. ಹಾಗೆ ಜಾಗವಿಲ್ಲದವರು ಮನೆಯ ಒಳಗೆ ಪಾಟ್‌ನಲ್ಲಿ ತುಳಸಿ ಬೆಳೆಸುತ್ತಾರೆ. ಎಂದಿಗೂ ಅಡುಗೆ ಮನೆಯ ಪಕ್ಕ, ಬಾತ್‌ರೂಮ್ ಪಕ್ಕ ಹಾಗೂ ಮಲಗುವ ಕೋಣೆಯ ಹತ್ತಿರ ಈ ತುಳಸಿ ಗಿಡವನ್ನು ಇಡಬಾರದು. ದೇವರ ಕೋಣೆಯ ಸಮೀಪದಲ್ಲಿ ಮಾತ್ರವೇ ತುಳಸಿ ಗಿಡ ಇಡಬೇಕು ಎಂದು ಹೇಳಲಾಗಿದೆ. ಏಕೆಂದರೆ ತುಳಸಿ ಗಿಡದಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಎಂದು ನಂಬಲಾಗಿದೆ.



Click it and Unblock the Notifications
