Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮನೆಯಲ್ಲಿ ಕುಂಕುಮ ಮಾಡೋದು ಹೇಗೆ ಗೊತ್ತಾ? ಸುಲಭದ ವಿಧಾನ ಇದು..!
ಮನೆಯಲ್ಲಿ ಪೂಜೆ, ಶುಭ ಕಾರ್ಯ ನಡೆಯುವಾಗ ಹತ್ತಾರು ವಸ್ತುಗಳ ಒಟ್ಟು ಮಾಡಬೇಕಾಗುತ್ತದೆ. ಅದರಲ್ಲೂ ಪೂಜಾ ಕಾರ್ಯಗಳು ನಡೆಯುವಾಗ ಒಂದು ವಸ್ತು ಇಲ್ಲದಿದ್ದರೂ ಆ ಕೆಲಸ ಸಂತೃಪ್ತಿ ತರುವುದಿಲ್ಲ. ಹಾಗೆ ಈಗಂತು ಪೂಜಾ ಸಾಮಗ್ರಿಗಳ ಒಂದು ಸೆಟ್ ಅಂಗಡಿಯಲ್ಲಿ ಸಿಗುತ್ತದೆ. ಇದರಲ್ಲಿ ಪೂಜೆಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಕೂಡ ಹಾಕಿರುತ್ತಾರೆ. ಹಾಗೆ ಇದರ ಬೆಲೆ ಕೂಡ ದುಬಾರಿಯಾಗಿರುತ್ತೆ.
ಇನ್ನು ಪೂಜೆಯ ವಿವಾರದಲ್ಲಿ ಮುಖ್ಯವಾಗಿ ಬೇಕಾಗಿರುವ ಹಲವು ವಸ್ತುಗಳ ಪೈಕಿ ಅರಶಿಣ ಕುಂಕುಮ ಕೂಡ ಒಂದು. ಇದೆರಡು ವಸ್ತು ಇಲ್ಲದಿದ್ದರೆ ಪೂಜೆ ಆರಂಭಿಸೋದೆ ಕಷ್ಟವಾಗಿತ್ತೆ. ಹೀಗಾಗಿ ಮನೆಯಲ್ಲಿ ಯಾವಾಗಲು ಅರಶಿಣ ಕುಂಕುಮ ಇದ್ದೇ ಇರುತ್ತೆ. ಈಗ ಮಾರುಕಟ್ಟೆಯಲ್ಲಿ ಸಿಗುವಂತಹ ಅರಶಿಣ, ಕುಂಕುಮವು ರಾಸಾಯನಿಕದಿಂದ ತುಂಬಿರುತ್ತೆ ಎಂಬುದು ನಿಮಗೆಲ್ಲಾ ಗೊತ್ತಿರೋ ವಿಚಾರವೆ.

ಗಾಢ ಬಣ್ಣ ಬರಲಿ ಎಂಬ ಕಾರಣಕ್ಕೆ ಅನೇಕ ರಾಸಾಯನಿಕ ಬಳಸಿಕೊಂಡು ಈ ಕುಂಕುಮ ಮಾಡುತ್ತಾರೆ. ಕೆಲವೊಮ್ಮೆ ಕುಂಕುಮ ಬಳಸಿದಾಗ ಅಲರ್ಜಿಯಂತಾಗುವುದು ಇಲ್ಲವೆ ಅದರ ಬಣ್ಣ ಎಷ್ಟು ತೊಳೆದರು ಹಾಗೆಯೇ ಉಳಿಯುವುದು, ಬಟ್ಟೆ ಮೇಲೆ ಬಿದ್ದರೆ ಕಲೆಯಾಗುವುದು ಆಗುತ್ತದೆ. ಅದರರ್ಥ ಹಚ್ಚು ರಾಸಾಯನಿಕ ಬಳಿಸಿರುವುದು ಎಂದು ತಿಳಿಯುತ್ತೆ.
ಆದ್ರೆ ಪೂಜೆಗೆ ಈ ರಾಸಾಯನಿಕ ಯುಕ್ತ ಕುಂಕುಮಕ್ಕಿಂತಲೂ ನೈಸರ್ಗಿಕ ವಸ್ತುಗಳ ಮಿಶ್ರಣ ಬಳಸಿದರೆ ಸಾಕು. ಕೆಲವೊಂದು ದೇವಾಯಲಯದಲ್ಲಿ ಈ ರಾಸಾಯನಿಕಯುಕ್ತ ಕುಂಕುಮಗಳನ್ನು ಪೂಜೆಗೆ ಬಳಸುವುದೇ ಇಲ್ಲ. ಬದಲಿಗೆ ಮನೆಯಲ್ಲಿ ಮಾಡಿದ ಕುಂಕುಮ ಬಳಸುತ್ತಾರೆ.
ಮನೆಯಲ್ಲಿ ಕುಂಕುಮ ಮಾಡಿಕೊಳ್ಳೋದು ಹೇಗೆ?
ಮನೆಯಲ್ಲಿ ನಾವೇ ಖುದ್ದು ಈ ಕುಂಕುಮವನ್ನು ಮಾಡಿಕೊಳ್ಳಬಹುದು. ಸಾಂಪ್ರದಾಯಿಕ ಶೈಲಿಯಲ್ಲಿ ಸುಲಭವಾಗಿ ಕುಂಕುಮ ಮಾಡಿಕೊಳ್ಳಬಹುದು. ಹಾಗಾದ್ರೆ ನಾವಿಂದು ಮನೆಯಲ್ಲಿ ಕೆಲವು ವಸ್ತುಗಳ ಬಳಸಿಕೊಂಡು ಕುಂಕುಮ ಮಾಡಿಕೊಳ್ಳುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಹಾಗೆ ಯಾವ ವಿಧಾನದ ಮೂಲಕ ಕುಂಕುಮ ಮಾಡಬಹುದು ಎಂಬುದನ್ನು ತಿಳಿಯೋಣ.
ಕುಂಕುಮ ಮಾಡಿಕೊಳ್ಳಲು ಕೆಲವೊಂದು ಪೂರ್ವ ತಯಾರಿಯ ಅಗತ್ಯವಿದೆ. ಸಾಂಪ್ರದಾಯಿಕ ಶೈಲಿಯ ಕುಂಕುಮ ಮಾಡಲು ಅರಶಿಣ ಬೇಕಾಗುತ್ತದೆ. ಅದು ಮನೆಯಲ್ಲಿ ಬೆಳೆದಿರುವ ಅಥವಾ ಅಂಗಡಿಯಿಂದ ತಂದಿರುವ ಒಣಗಿದ ಅರಶಿಣ ಕೊಂಬುಗಳಾದರೆ ಒಳಿತು.
ಕುಂಕುಮ ಮಾಡಲು ಯಾವೆಲ್ಲಾ ವಸ್ತುಗಳು ಬೇಕು
ಅರಶಿಣ ಕೊಂಬು
ನಿಂಬೆ ಕಾಯಿ ಅಥವಾ ಹುಳಿ
ಬಿಳಿಗಾರ
ಸ್ಪಟಿಕ
ಬಿಳಿಗಾರ ಎಂದರೆ ಒಂದು ರೀತಿ ಕಲ್ಲಿನ ಪುಡಿಯಾಗಿದೆ. ಅಂಗಡಿಗಳಲ್ಲಿ ಸಿಗುತ್ತದೆ. ಹಾಗೆ ರಂಗೋಲಿ ಹಾಕಲು ಈ ಕಲ್ಲಿನ ಪುಡಿ ಬಹಳ ಶ್ರೇಷ್ಠ ಎಂದು ಕೂಡ ಹೇಳಲಾಗುತ್ತದೆ.
ಕುಂಕುಮ ಮಾಡುವುದು ಹೇಗೆ?
ಮೊದಲು ಅರಶಿಣವನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಈಗ ದೊಡ್ಡ ಬೌಲ್‌ಗೆ ನಿಂಬೆ ರಸ ಹಾಕಿಕೊಂಡು ಅದಕ್ಕೆ ಬಿಳಿಗಾರದ ಪುಡಿ, ಸ್ಪಟಿಕದ ಪುಡಿಯನ್ನು ಸಮ ಪ್ರಮಾಣದಲ್ಲಿ ಹಾಕಿಕೊಂಡು ಕಲಸಿಕೊಳ್ಳಿ. ಇದು ನಿಂಬೆ ರಸದಲ್ಲಿ ಚೆನ್ನಾಗಿ ಬೆರೆಯಬೇಕು. ನಿಂಬೆ ರಸ ಮಾತ್ರ ಉಳಿದು ಬೇರೆಲ್ಲಾ ವಸ್ತು ಕರಗಿಬಿಡುತ್ತದೆ. ನಂತರ ಈ ಮಿಶ್ರಣಕ್ಕೆ ಅರಶಿಣ ಕೊಂಬನ್ನು ಹಾಕಿಕೊಳ್ಳಬೇಕು. ಹಾಗೆ ಅರಶಿಣ ಈ ಮಿಶ್ರಣದಲ್ಲಿ ಮುಳುಗಬೇಕು.
ಹೀಗೆ ಅರಶಿಣವನ್ನು ಕನಿಷ್ಟ ಎರಡು ದಿನ ನೆನೆಸಿ ಬಳಿಕ ಅರಶಿಣ ತೆಗೆದು ನೆರಳಿನಲ್ಲಿ ಒಣಗಿಸಬೇಕು. ಈ ಅರಶಿಣ ಈಗಾಗಲೇ ಕೆಂಪು ಬಣ್ಣಕ್ಕೆ ತಿರುಗಿರುತ್ತದೆ. ಮನೆಯ ನೆರಳಿನಲ್ಲಿ ಸುಮಾರು 1 ವಾರ ಒಣಗಿಸಬೇಕು. ಪುಡಿಯಾಗುವಷ್ಟು ಒಣಗಬೇಕು. ವಾರದ ಬಳಿಕ ಈ ಅರಶಿಣ ಮುರಿದರೆ ತುಂಡಾಗುವಂತೆ ಇರಬೇಕು.
ಆದ್ರೆ ಇದನ್ನು ಹುಡಿ ಮಾಡುವುದು ಬಹಳ ಕಷ್ಟ. ಮಿಕ್ಸಿಯಲ್ಲಿ ಪುಡಿಯಾಗುವುದಿಲ್ಲ, ಹೀಗಾಗಿ ಒಂದು ಬಾಣಲೆಗೆ ಹಾಕಿ ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಿ. ಅರಶಿಣ ಕಪ್ಪಾಗದಂತೆ ಬಿಸಿ ಮಾಡಿದರೆ ಸಾಕು. ನಂತರ ಮಿಕ್ಸಿಗೆ ಹಾಕಿ ಪುಡಿ ಮಾಡಬಹುದು. ಇಲ್ಲವೆ ಕಲ್ಲಿನಲ್ಲಿ ಕುಟ್ಟಿಕೊಂಡು ಸಣ್ಣ ಸಣ್ಣ ಪುಡಿಯಾದ ಬಳಿಕ ಪುನಃ ಮಿಕ್ಸಿ ಜಾರ್‌ಗೆ ಹಾಕಿಕೊಂಡು ಪುಡಿ ಮಾಡಿಕೊಳ್ಳಬಹುದು. ನಂತರ ಜರಡಿ ಹಿಡಿದು ನುಣ್ಣನೆಯ ಪುಡಿ ತೆಗೆದುಕೊಳ್ಳಿ.
ಆದ್ರೆ ಇದು ಧೂಳಿನಂತೆ ಇರುತ್ತದೆ. ಇದು ಗಟ್ಟಿಯಾಗಬೇಕಾದರೆ 1 ಕೆ.ಜಿ ಕುಂಕುಮಕ್ಕೆ 100 ಮಿಲಿ ತುಪ್ಪ ಹಾಕಿ ಮಿಕ್ಸ್ ಮಾಡಿಕೊಳ್ಳಬೇಕು. ಹೀಗೆ ಮಾಡಿದಾಗ ಕುಂಕುಮ ಗಟ್ಟಿಯಾಗುತ್ತದೆ. ಇಷ್ಟಾದರೆ ಮನೆಯಲ್ಲೇ ಕುಂಕುಮ ರೆಡಿಯಾಗುತ್ತದೆ.



Click it and Unblock the Notifications
