Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಉಷ್ಣ, ಕಣ್ಣುಉರಿ, ಉರಿಶೀತ ಎಲ್ಲದಕ್ಕೂ ಒಂದೇ ಪರಿಹಾರ: ಮನೆಯಲ್ಲೇ ಮಾಡಿ ಈ ಮದ್ದು!!
ಚಳಿಗಾಲದ ಸಮಯದಲ್ಲಿ ಚರ್ಮ ಒಣಗುವುದು ಸಾಮಾನ್ಯ. ಅದೆ ರೀತಿ ಹಗಲಿನಲ್ಲಿ ಬಿಸಿಲು ಹಾಗೆ ರಾತ್ರಿ ಸಮಯದಲ್ಲಿನ ಚಳಿಗಾಳಿಯ ಕಾರಣಕ್ಕೆ ಹಲವು ರೀತಿಯ ಅನಾರೋಗ್ಯ ಸಮಸ್ಯೆಗಳಿಗೆ ತುತ್ತಾಗುವುದು ನೋಡಬಹುದು. ಅದ್ರಲ್ಲಿ ಹೆಚ್ಚಾಗಿ ಶೀತ, ಕೆಮ್ಮು, ಗಂಟಲು ನೋವು ಅಥವಾ ತಲೆನೋವು, ಕಣ್ಣು ಉರಿಯಂತಹ ಸಮಸ್ಯೆಗಳಿಗೆ ತುತ್ತಾಗುವುದು ನೋಡಬಹುದು. ಅದ್ರಲ್ಲೂ ಮಕ್ಕಳಲ್ಲಿ ಈ ರೀತಿಯ ಸಮಸ್ಯೆ ಹೆಚ್ಚಾಗಿಯೇ ಕಂಡುಬರಲಿದೆ.
ಹಗಲಿನ ಬಿಸಿಲು ಹಾಗೆ ಸಂಜೆ ಸಮಯದಲ್ಲಿ ಚಳಿಯಿಂದ ಈ ಸಮಸ್ಯೆ ಉಂಟಾಗಬಹುದು. ದೇಹವು ಈ ವಾತಾವರದಲ್ಲಿನ ಕ್ಷಿಪ್ರ ಬದಲಾವಣೆಗೆ ಹೊಂದಿಕೊಳ್ಳಲು ಆಗದೆ ಇದ್ದಾಗ ಕಾಲೋಚಿತ ಸಮಸ್ಯೆಯನ್ನು ಅನುಭವಿಸುತ್ತೀರಿ. ಇದು ನಿಮ್ಮ ನಿತ್ಯದ ಕೆಲಸ ಕಾರ್ಯಗಳಿಗೆ ಹಾಗೆ ಹಲವು ರೀತಿಯಲ್ಲಿ ನಿಮ್ಮ ಆರೋಗ್ಯದ ವಿಚಾರದಲ್ಲಿ ಹಾನಿ ಉಂಟಾಗಲಿದೆ. ನೀವು ಮೆಡಿಕಲ್ ಮಾತ್ರೆಗಳು, ಔಷಧಿಗಳ ತೆಗೆದುಕೊಂಡರೂ ಕೂಡ ಈ ಕಿರಿಕಿರಿಯಿಂದ ಪಾರಾಗುವುದು ಕಷ್ಟವಾಗುತ್ತೆ.

ಹಾಗೆ ಚಳಿಗಾಲದ ಈ ಸಮಸ್ಯೆಗಳಿಗೆ ಮನೆಯಲ್ಲೇ ನೀವು ಮದ್ದು ಮಾಡಿ ಈ ಕಿರಿಕಿರಿಯಿಂದ ಹೊರಬರಬಹುದು. ಹಾಗಾದ್ರೆ ಶೀತ, ಕೆಮ್ಮು, ನೆಗಡಿಯಂತಹ ಸಮಸ್ಯೆಗೆ ಮನೆಯಲ್ಲಿ ಹೇಗೆ ಮದ್ದು ಮಾಡಬೇಕು? ಮಾಡುವ ವಿಧಾನವೇನು? ಎಂಬ ಕುರಿತು ತಿಳಿಯೋಣ.
ಶೀತ, ಕೆಮ್ಮು, ನೆಗಡಿಗೆ ಆರ್ಯುವೇದದಲ್ಲಿ ಹತ್ತಾರು ಪರಿಹಾರ ಹೇಳಲಾಗಿದೆ. ಆದ್ರೆ ನಾವಿಂದು ಮನೆಯಲ್ಲೇ ಸಿಗುವ ವಸ್ತುಗಳನ್ನು ಬಳಸಿಕೊಂಡು ಸುಲಭವಾಗಿ ಮಾಡಿಕೊಳ್ಳಬಹುದಾದ ಔಷಧಿ ಕುರಿತಾಗಿ ತಿಳಿದುಕೊಳ್ಳೋಣ.
ಉಷ್ಣ, ಕಣ್ಣುಉರಿ, ಉರಿಶೀತಕ್ಕೆ ಮದ್ದು ಮಾಡಲು ಬೇಕಾಗುವ ವಸ್ತುಗಳು
ಕೊತ್ತಂಬರಿ ಕಾಳು
ಜೀರಿಗೆ
ನೀರು
ಉಷ್ಣ, ಕಣ್ಣುಉರಿ, ಉರಿಶೀತಕ್ಕೆ ಮದ್ದು ಮಾಡುವುದು ಹೇಗೆ?
ಮೊದಲು ಒಂದು ಕುಟ್ಟಾಣಿ ತೆಗೆದುಕೊಂಡು ಅದಕ್ಕೆ 1 ಸ್ಪೂನ್ ಕೊತ್ತಂಬರಿ ಕಾಳು, ಅರ್ಧ ಸ್ಪೂನ್ ಜೀರಿಗೆ ಹಾಕಿ ಜಜ್ಜಿಕೊಳ್ಳಬೇಕು. ಕುಟಾಣಿ ಇಲ್ಲದಿದ್ದರೆ ಸಣ್ಣ ಮಿಕ್ಸಿ ಜಾರ್‌ನಲ್ಲಿ 1 ಸುತ್ತು ರುಬ್ಬಿದರೆ ಸಾಕು. ಇದು ತರಿತರಿಯಾಗಿ ಪುಡಿಯಾಗಬೇಕು.
ನಂತರ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 2 ಗ್ಲಾಸ್ ನೀರು ಹಾಕಿ ಕುದಿಬರಲು ಬಿಡಿ. ನೀರು ಸ್ವಲ್ಪ ಬಿಸಿಯಾದ ಬಳಿಕ ಪುಡಿ ಮಾಡಿಕೊಂಡಿದ್ದ ಜೀರಿಗೆ ಕೊತ್ತಂಬರಿ ಕಾಳಿನ ಪುಡಿ ಹಾಕಿ ಕುದಿಬರಲು ಬಿಡಬೇಕು. ಸಣ್ಣ ಉರಿಯಲ್ಲಿ 4ರಿಂದ 5 ನಿಮಿಷ ಚೆನ್ನಾಗಿ ಕುದಿಸಿಕೊಳ್ಳಬೇಕು.
ಇದು ಕುದಿಬಂದ ಬಳಿಕ ಜರಡಿಯಲ್ಲಿ ಇದನ್ನು ಸೋಸಿಕೊಳ್ಳಬೇಕು. ಹಾಗೆ ಬಿಸಿಯಾಗಿದ್ದರೆ ಸ್ವಲ್ಪ ತಣ್ಣಗಾಗಲು ಬಿಡಿ. ಅನಂತರ ಇದನ್ನು ಹಾಗೆಯೇ ಕುಡಿಯಬಹುದು; ಸಿಹಿ ಬೇಕಿದ್ದರೆ ಬೆಲ್ಲ ಹಾಕಿಕೊಳ್ಳಬಹುದು. ಇದನ್ನು ವಾರದಲ್ಲಿ 2 ದಿನ ಸೇವಿಸಿದರೆ ನೆಗಡಿ, ಶೀತ, ಉರಿಶೀತ, ಕಣ್ಣು ಉರಿ ಸೇರಿ ಹಲವು ಅನಾರೋಗ್ಯ ಸಮಸ್ಯೆಗಳಿಂದ ನಿವಾರಣೆ ಪಡೆಯಬಹುದು. ಮಾಡೋದು ಕೂಡ ಬಹಳ ಸುಲಭ. ಹಾಗೆ ಇದರ ಪುಡಿಯನ್ನು ಹೆಚ್ಚು ಪ್ರಮಾಣದಲ್ಲಿ ಮಾಡಿ ಇಟ್ಟುಕೊಂಡಿದ್ದರೆ ನಿಮಗೆ ಯಾವಾಗ ಬೇಕೋ ಆಗ ಮಾಡಿಕೊಳ್ಳಬಹುದು.
ಇದನ್ನು ಮಕ್ಕಳಿಗೆ ಕೂಡ ಮಾಡಿ ಕುಡಿಯಲು ನೀಡಬಹುದು. ಕಹಿ ಎನಿಸಿದರೆ ಬೆಲ್ಲ ಮತ್ತು ಹಾಲು ಹಾಕಿ ನೀಡಬಹುದು. ರಾತ್ರಿ ಮಲಗುವ ಮುನ್ನ ಇದನ್ನು ಕುಡಿದು ಮಲಗಿದರೆ ಗಾಢ ನಿದ್ರೆ ಅನುಭವಿಸಬಹುದು. ಹಾಗೆ ತಲೆನೋವು, ಕಣ್ಣುಉರಿಯಂತಹ ಸಮಸ್ಯೆಗಳಿಗೂ ಪರಿಹಾರ ನೀಡಲಿದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಮಾಡಿ ಕುಡಿದು ಅದರಿಂದ ಪರಿಹಾರ ಪಡೆದು ನೋಡಿ.



Click it and Unblock the Notifications
