Latest Updates
-
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಮಾಟ-ಮಂತ್ರ ಪ್ರಯೋಗ ಆಗಿದೆಯೇ..? ತಿಳಿಯೋದು ಹೇಗೆ?
ಮಾಟ-ಮಂತ್ರ ಎಂಬ ಪದ ಕೇಳಿದರೆ ಕೆಲವರು ಭಯಕ್ಕೆ ಒಳಗಾಗುತ್ತಾರೆ, ಏಕೆಂದರೆ ಮಾಟ ಮಂತ್ರದಿಂದ ಇಡಿ ಕುಟುಂಬವೇ ಹಾಳಾಗುತ್ತದೆ. ಜೀವನ ಹಾಳಾಗುತ್ತದೆ. ಹೀಗಾಗಿ ಮಾಟ-ಮಂತ್ರ ಇತ್ಯಾದಿಗಳು ಜನರನ್ನು ಕಾಡುತ್ತವೆ. ಎಲ್ಲರು ಮಾಟ ಮಂತ್ರಕ್ಕೆ ಭಯ ಬೀಳುತ್ತಾರೆ. ಮಾಟ-ಮಂತ್ರ ಒರ್ವ ವ್ಯಕ್ತಿಯ ಜೀವನವನ್ನು ನಾಶ ಮಾಡೋದಕ್ಕೆ ಬಳಕೆ ಮಾಡಲಾಗುತ್ತದೆ. ಹೊಟ್ಟೆ ಕಿಚ್ಚು, ಧ್ವೇಷ ಅಥವಾ ಮತ್ಯಾವುದೋ ಕಾರಣಗಳಿಗಾಗಿ ನಿಮ್ಮ ಮೇಲೆ ಮಾಟ ಪ್ರಯೋಗವಾಗಬಹುದು.
ಈಗಂತು ಬೀದಿ ಬೀದಿಯಲ್ಲಿ ಮಾಟ ಮಂತ್ರ ಮಾಡುತ್ತೇವೆ, ವಶೀಕರಣ ಮಾಡುತ್ತೇವೆ. ಶತ್ರು ನಾಶ ಮಾಡುತ್ತೇವೆ ಎಂದು ಹೇಳುವವರು ಸಿಗುತ್ತಾರೆ. ಆದ್ರೆ ನಿಮ್ಮ ಮನೆಗೆ ಅಥವಾ ನಿಮ್ಮ ಮೇಲೆ ಮಾಟ ಮಂತ್ರ ಪ್ರಯೋಗ ಆಗಿದೆಯಾ ಎಂಬುದನ್ನು ಪತ್ತೆ ಮಾಡೋದಾದ್ರು ಹೇಗೆ? ನಿಮ್ಮ ಮನೆಗೆ ಮಾಟ ಮಾಡಿಸಿದ್ದಾರೆ ಎಂದು ತಿಳಿಯುವುದು ಹೇಗೆ?

ಒಮ್ಮೊಮ್ಮೆ ಮನೆ ಹತ್ತಿರ ಅರಶಿನ ಕುಂಕುಮ, ನಿಂಬೆ ಹಣ್ಣು, ಪ್ರಾಣಿ ಬಲಿಯ ಕುರುಹುಗಳು ಪತ್ತೆಯಾದರೆ ಮಾಟ ಮಂತ್ರದ ಅನುಮಾನ ಬರುತ್ತದೆ. ಆದ್ರೆ ನಿಮಗೆ ತಿಳಿಯದೆ ಮಾಟ ಮಂತ್ರ ಮಾಡಿಸಿದ್ದರೆ ಗೊತ್ತಾಗುವುದಾದರು ಹೇಗೆ? ಮಾಟ ತಿಳಿಯಲು ಏನು ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಪದೇ ಪದೇ ಅನಾರೋಗ್ಯ
ನಿಮ್ಮ ಮನೆಯಲ್ಲಿ ಯಾರಾದರು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುವುದು ಉಂಟಾಗುತ್ತಿರುವುದು. ನೀವು ಆಸ್ಪತ್ರೆಗೆ ತೆರಳಿದರೂ ವೈದ್ಯರು ನೀವು ಆರೋಗ್ಯವಾಗಿದ್ದೀರಿ. ಯಾವ ಸಮಸ್ಯೆಯೂ ಕಾಣಿಸುತ್ತಿಲ್ಲ ಎಂದಿರುತ್ತಾರೆ. ಆದರೆ ನಿಮಗೆ ಅನಾರೋಗ್ಯ ಕಾಡಿದಂತಾಗುತ್ತದೆ. ನೆಯಲ್ಲಿ ಯಾವಾಗಲು ಅನಾರೋಗ್ಯ ಸಮಸ್ಯೆ ಕಂಡುಬರುತ್ತದೆ. ಆದರೆ ಯಾವ ಸಮಸ್ಯೆ ಎನ್ನುವುದನ್ನು ಪತ್ತೆ ಮಾಡಲಾಗಿದೆ ಇರುವ ಪರಿಸ್ಥಿತಿ ಇದಾಗಿದೆ. ಕೆಲವೊಮ್ಮೆ ಮನಸ್ಸಿಗೆ ನೆಮ್ಮದಿ ಇರದಿರುವುದು, ತಳಮಳ ಉಂಟಾಗುವುದು ಹೀಗೆ ಹಲವು ಸಮಸ್ಯೆ ಎದುರಾದರೆ ಸಮಸ್ಯೆ ಇದೆ ಎಂದರ್ಥ.
ಆಹಾರದಲ್ಲಿ ಕೂದಲು ಸಿಗುವುದು
ಮನೆಯಲ್ಲಿ ಆಹಾರದಲ್ಲಿ ಕೂದಲು ಸಿಗುವುದು. ಅಂದರೆ ಮನೆಯಲ್ಲಿ ಸಾಮಾನ್ಯವಾಗಿ ಹೆಣ್ಣು ಮಕ್ಕಳಿರುವ ಮನೆಯಲ್ಲಿ ಕೂದಲು ಸಿಗುವುದು ಸಾಮಾನ್ಯ. ಆದರೆ ಪದೇ ಪದೇ ಹೀಗೆ ದಿನವೂ ಇದೇ ರೀತಿ ಆಹಾರದಲ್ಲಿ, ಪ್ರಸಾದದಲ್ಲಿ, ನೀರು ಕುಡಿಯುವಾಗಲೂ ಕೂದಲು ಸಿಗುವುದು ಆಗುತ್ತಲೇ ಇದ್ದರೆ ಮಾಟ ಮಂತ್ರದ ಲಕ್ಷಣವಾಗಿದೆ.
ಮನೆಯಲ್ಲಿ ಆರ್ಥಿಕ ಸಮಸ್ಯೆ
ನೀವು ಎಷ್ಟೇ ದುಡಿಮೆ ಮಾಡಿದರೂ ಮನೆಯೊಳಗೆ ಒಂದು ರೂಪಾಯಿಯೂ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ ಅಲ್ಲೊಂದು ಲಕ್ಷಣವಿದೆ ಎಂದರ್ಥ. ನೀವು ದುಡಿದ ಹಣ ಒಂದೇ ದಿನದಲ್ಲಿ ಖರ್ಚಾಗುವುದು. ಇಲ್ಲವೆ ದುಡಿದ ಹಣವೂ ಖರ್ಚಾಗಿ ಸಾಲ ಮಾಡುವ ಪರಿಸ್ಥಿತಿ ಎದುರಾಗುವುದು. ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಆಗುತ್ತದೆ. ಆದರೆ ಇದೇ ಪರಿಸ್ಥಿತಿ ನಿರಂತರವಾಗಿ ನಡೆಯುತ್ತಿದ್ದರೆ ಎಚ್ಚರಿಕೆ ಬೇಕು. ಏಕೆಂದರೆ ಜೀವನದಲ್ಲಿ ಆರ್ಥಿಕ ಸುಸ್ಥಿತಿ ಇರುತ್ತದೆ. ನಿಧಾನವಾಗಿ ಆರ್ಥಿಕ ಸಮಸ್ಯೆಗಳು ನಿವಾರಣೆಯಾಗುತ್ತಲೇ ಒರುತ್ತವೆ, ಆದರೆ ಇದಕ್ಕೆ ತದ್ವಿರುದ್ಧ ವಾಗಿದ್ದರೆ ಮಾಟ ಮಂತ್ರದ ಲಕ್ಷಣ ಇರಬಹುದು.
ಕೆಟ್ಟ ಕನಸು, ನಿದ್ರೆ ಬಾರದ ಸ್ಥಿತಿ
ಮನೆಯಲ್ಲಿ ರಾತ್ರಿ ಮಲಗಿದ್ದಾಗ ಕೆಟ್ಟ ಕನಸುಗಳು ಇಲ್ಲವೆ ಅನರ್ಥ ಕನಸುಗಳು ಬೀಳುವುದು ನಡೆಯುತ್ತದೆ. ಆದರೆ ಈ ಕನಸಿನ ಅರ್ಥವೇನು ಎಂಬುದೇ ನಿಮಗೆ ಗೊತ್ತಾಗುವುದಿಲ್ಲ. ಜೊತೆಗೆ ಮನೆಯಲ್ಲಿ ಮಲಗಿದರೆ ನಿದ್ರೆ ಬಾರದ ಸ್ಥಿತಿಯಾಗಿದೆ. ಆದರೆ ಹಗಲಿನಲ್ಲಿ ಮಲಗಿದರೆ ನಿದ್ರೆ ಬರುವ ಪರಿಸ್ಥಿತಿಯಾಗಿದೆ.
ಕೌಟುಂಬಿಕ ಸಮಸ್ಯೆ
ಅನ್ಯೋನ್ಯವಾಗಿದ್ದ ದಂಪತಿ ಸಣ್ಣ ಸಣ್ಣ ವಿಚಾರಕ್ಕೂ ಕಿತ್ತಾಡುವುದು, ಜಗಳ ಆಡುವುದು, ಮನಸ್ಥಾಪಗಳು ಉಂಟಾಗುವುದು. ಎಲ್ಲರ ಮನೆಯಲ್ಲಿ ಈ ಸಮಸ್ಯೆ ಇರುವುದು ಸಹಜ. ಆದರೆ ನಿತ್ಯವೂ ಒಂದೇ ರೀತಿಯ ಸಮಸ್ಯೆ ಕಾಡುತ್ತಿದ್ದರೆ ಮಾಟ ಮಂತ್ರದ ಪ್ರಯೋಗವಾಗಿರಬಹುದು.



Click it and Unblock the Notifications
