Latest Updates
-
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ಈ ಸರಳ ಆಹಾರ ಬದಲಾವಣೆ ನಿಮ್ಮನ್ನು ಹೀಟ್ಸ್ಟ್ರೋಕ್ನಿಂದ ರಕ್ಷಿಸುತ್ತದೆ! -
ರೆಡ್ ಕಾರ್ಪೆಟ್ನಿಂದ ನಿಮ್ಮ ವಾರ್ಡ್ರೋಬ್ಗೆ: ಕಾನ್ 2026ರ ಈ ಫ್ಯಾಷನ್ ಟ್ರೆಂಡ್ಸ್ ಈಗ ಸಿಕ್ಕಾಪಟ್ಟೆ ವೈರಲ್! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
45 ಡಿಗ್ರಿ ಬಿಸಿಲಲ್ಲಿ ಮದುವೆ ಪ್ಲಾನ್ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಎಚ್ಚರಿಕೆ ಮರೆಯದಿರಿ! -
ಶಾಖದ ಅಲೆ ಎಚ್ಚರಿಕೆ: ಎಸಿ ಇಲ್ಲದೆ ಮನೆಯನ್ನು ತಂಪಾಗಿಡಲು ಮತ್ತು ನಿಮ್ಮ ಗಿಡಗಳನ್ನು ಬಿಸಿಲಿನಿಂದ ರಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್!
ಮಂಡಿ, ಕಾಲು, ಸೊಂಟ ನೋವಿಗೆ ಚಿಟಿಕೆಯಲ್ಲೇ ಇದೆ ಪರಿಹಾರ.! ಈ ಎಣ್ಣೆ ಮನೆಯಲ್ಲೇ ತಯಾರಿಸಿ..!!
ನಮಗೆ ವಯಸ್ಸಾದಂತೆ ಬಂದಂತೆಲ್ಲಾ ನಮ್ಮ ದೇಹದ ಹಲವು ಭಾಗಗಳು ನಿಧಾನವಾಗಿ ಶಕ್ತಿ ಕಳೆದುಕೊಳ್ಳುತ್ತವೆ. ಅದರಲ್ಲೂ ಮೂಳೆಗಳು ಸವೆಯಲು ಆರಂಭಿಸುತ್ತವೆ. ನಾವು ಬದುಕಿರುವಷ್ಟು ವರ್ಷವೂ ಮೂಳೆಗಳು ಅಷ್ಟೇ ಬಲವಾಗಿ ಇರುವುದಿಲ್ಲ ಬದಲಿಗೆ ಸವೆಯುವುದು, ನೋವು ಕಾಣಿಸಿಕೊಳ್ಳುವುದು ನಡೆಯತ್ತದೆ. ನಮ್ಮ ಶರೀರದ ಹೆಚ್ಚಿನ ಭಾರವನ್ನು ಹೊರುವ ಗಂಟುಗಳೆಂದರೆ ಪಾದಗಳು ಮತ್ತು ಮೊಣಕಾಲು ಅಥವಾ ಮೊಣಗಂಟು. ಹಾಗೆ ಬಹುಮುಖ್ಯವಾಗಿ ಸೊಂಟದ ಮೂಳೆ ಯಾವಾಗಲು ನೋಯುತ್ತಿರುತ್ತದೆ.
ವಯಸ್ಸಾದರವರು ಸೊಂಟ ನೋವು ಎಂದು ಓಡಾಡುವುದು ಸಾಮಾನ್ಯವಾಗಿ ನಾವು ನೋಡಬಹುದು. ಏಕೆಂದರೆ ನಮ್ಮ ಇಡೀ ದೇಹದ ತೂಕವೆಲ್ಲಾ ಈ ಸೊಂಟದ ಮೂಲೆಯ ಮೇಲೆ ಬೀಳುತ್ತದೆ. ಕುಳಿತುಕೊಂಡಿರುವಾಗ, ಮಲಗುವಾಗ, ಓಡಾಡುವಾಗ ಸೊಂಟ ಹಾಗೂ ಕಾಲಿನ ಭಾಗದ ಮೂಳೆಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ.

ಸೊಂಟ ನೋವಿಗೆ ಮೆಡಿಕಲ್ ನಲ್ಲಿ ಸಿಗುವಂತಹ ಔಷಧಿ ತಾತ್ಕಾಲಿಕ ಪರಿಹಾರ ನೀಡುತ್ತದೆ. ಆದರೆ ಇಂತಹ ಔಷದಿಯಿಂದ ಅಡ್ಡಪರಿಣಾಮವೇ ಹೆಚ್ಚು. ಸೊಂಟ ನೋವಿಗೆ ಯಾವುದೇ ಅಡ್ಡಪರಿಣಾಮವಿಲ್ಲದ ನೈಸರ್ಗಿಕ ಚಿಕಿತ್ಸೆ ಮಾಡಬಹುದು. ಹಾಗೆ ಮಂಡಿ ನೋವಿ, ಸೊಂಟ ನೋವು, ಕಾಲಿನ ಮೂಳೆ ಸೇರಿ ಎಲ್ಲಾ ಮೂಳೆ ನೋವಿಗೂ ಮನೆಯಲ್ಲೇ ಮದ್ದು ಮಾಡಬಹುದು, ಇದರಿಂದ ಯಾವುದೇ ಅಡ್ಡಪರಿಣಾಮವಿಲ್ಲದೆ ಸುರಕ್ಷಿತ ರೀತಿಯಲ್ಲಿ ಈ ನೋವುಗಳನ್ನು ಕ್ಷಣದಲ್ಲಿ ಹೋಗಲಾಡಿಸಬಹುದು. ಹಾಗಾದ್ರೆ ಈ ನೋವುಗಳಿಂದ ಪಾರಾಗಲು ಏನು ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈ ನೋವುಗಳಿಗೆ ಅತ್ಯಂತ ಸೂಕ್ತ ಹಾಗೂ ಸರಳ ಉಪಾಯ ಅಂದ್ರೆ ಅದು ಹರಳೆ ಎಲೆ ಔಷಧಿ. ಹರಳೆಣ್ಣೆ ತೆಗೆಯುವಂತಹ ಗಿಡವೇ ಈ ಹರಳೆ ಎಲೆ ಗಿಡ ಅಥವಾ ಔಡಲಗಿಡ. ನೀವು ನಿವಾರಣೆಯಲ್ಲಿ ಈ ಗಿಡದ ಎಲೆಗಳಿಗೆ ಮೊದಲ ಸ್ಥಾನವಿದೆ. ಕೇವಲ 3ರಿಂದ 4 ದಿನ ನಿರಂತರವಾಗಿ ಈ ಎಲೆಯಿಂದ ತಯಾರಿಸಲ್ಪಟ್ಟ ಎಣ್ಣೆ ಹಚ್ಚುವುದು ನಿಮ್ಮ ಎಂತಹ ನೋವು ಇದ್ದರೂ ಮಾಯವಾಗುವಂತೆ ಮಾಡುತ್ತದೆ.
ಮೊದಲು ಔಡಲ ಎಲೆಗಳನ್ನು ಕಿತ್ತು ತಂದು ತೊಳೆದು ಒಂದು ಕಡೆ ಇಟ್ಟುಕೊಳ್ಳಿ. 10 ಎಲೆಗಳನ್ನು ಇಟ್ಟುಕೊಂಡು ಇಡಿ, ಈ ಹರಳೆ ಎಣ್ಣೆ ಗಿಡ ನೀವು ನೋಡಿರಬಹುದು. ಈ ಗಿಡದ ಬೀಜದಿಂದ ಹರಳೆಣ್ಣೆ ತೆಗೆಯಲಾಗುತ್ತದೆ. ಈ ಎಲೆಯನ್ನು ಚೆನ್ನಾಗಿ ತೊಳೆದಿಡಬೇಕು, ಅನಂತರ ಇದನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು ಇಲ್ಲವೆ ಜಜ್ಜಿಕೊಂಡು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು.
ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಸ್ವಲ್ಪ ಹರಳೆಣ್ಣೆಯನ್ನು ಹಾಕಿಕೊಂಡು 1 ನಿಮಿಷದ ಬಳಿಕ ಇದಕ್ಕೆ ರುಬ್ಬಿಕೊಂಡಿರುವ ಹರಳೆ ಎಲೆಯ ಪೇಸ್ಟ್ ಅನ್ನು ಹಾಕಿಕೊಂಡು ಕುದಿಯಲು ಬಿಡಬೇಕು. ಸಣ್ಣ ಉರಿಯಲ್ಲಿ 10 ನಿಮಿಷ ಕುದಿಬಂದ ಬಳಿಕ ಒಲೆ ಆಫ್ ಮಾಡಿಕೊಂಡು ಬಿಸಿ ಬಿಸಿ ಇದ್ದಾಗಲೇ ಇದನ್ನು ಎಲ್ಲೆಲ್ಲಿ ನೋವು ಇದೆಯೋ ಅಲ್ಲಿ ಹಚ್ಚಿಕೊಳ್ಳಬೇಕು. ವಾರದಲ್ಲಿ ಮೂರರಿಂದ ನಾಲ್ಕು ಬಾರಿ ಹೀಗೆ ಹಚ್ಚಿಕೊಂಡ ಬಳಿಕ ನಿಮ್ಮಲ್ಲಿ ನೋವು ಕಡಿಮೆಯಾಗುತ್ತದೆ. ನೀವು ಕೂಡ ಮನೆಯಲ್ಲಿ ಸುಲಭವಾಗಿ ಇದನ್ನು ಮಾಡಿಕೊಳ್ಳಬಹುದು. ಇದರಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ.
ಇನ್ನು ಮಂಡಿ ನೋವು ಇದ್ದರೆ ಇದರ ಎಲೆಯನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು. ನಂತರ ನೋವು ಇರುವ ಮಂಡಿಗೆ ಎಣ್ಣೆ ಹಚ್ಚಿ ಬಳಿಕ ಈ ಎಲೆಯನ್ನು ಕಟ್ಟಿಕೊಂಡು ಮೇಲಿನಿಂದ ಬಟ್ಟೆ ಕಟ್ಟಿಕೊಳ್ಳಬೇಕು. ಹೀಗೆ ಮಾಡೋದ್ರಿಂದ ಕೂಡ ಮಂಡಿ ನೋವನ್ನು ಕಡಿಮೆ ಮಾಡಬಹುದು. ಇಂತಹ ಒಂದು ವಿಧಾನದಲ್ಲಿ ಬಳಸಿ ನೋಡಿ. ನಿಮಗೂ ನೋವು ಕಡಿಮೆಯಾಗುವ ಅನುಭವವಾಗಬಹುದು.



Click it and Unblock the Notifications