Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
Origin of Payasa : ಶ್ರೀ ಕೃಷ್ಣನೇ ಪಾಯಸದ ಸೃಷ್ಟಿ ಕರ್ತನಾ? ಮೊದಲ ಪಾಯಸ ತಯಾರಾಗಿದ್ದೆಲ್ಲಿ?
ದಕ್ಷಿಣ ಭಾರತದಲ್ಲಿ ಮದುವೆ ಸೇರಿದಂತೆ ಬೇರ್ಯಾವುದೇ ಸಮಾರಂಭಗಳಲ್ಲಿ ಪಾಯಸ ಇಲ್ಲದೇ ಹಬ್ಬದೂಟ ಸಂಪೂರ್ಣವಾಗೋದಿಲ್ಲ. ಊಟದ ನಂತರ ಎಲೆಗೆ ಪಾಯಸ ಬಿದ್ದರೇನೇ ಸಂತೃಪ್ತಿಯಾಗೋದು. ಪಾಯಸಕ್ಕೆ ಶತ ಶತಮಾನಗಳ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ರಾಜಮನತನಗಳಲ್ಲಿ ನಿತ್ಯವೂ ಊಟದ ಬಳಿಕ ಪಾಯ ಸೇವಿಸುವ ಸಂಪ್ರದಾಯವಿತ್ತಂತೆ. ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿಯೂ ಈ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬರಲಾಗುತ್ತಿದೆ.
ಪಾಯಸ ಸಿಹಿ ತಿಂಡಿಗಳ ರಾಣಿ ಇದ್ದ ಹಾಗೆ. ಪಾಯಸ, ಪಾಯಸಂ ಹೀಗೆ, ಉತ್ತರ ಭಾರತದಲ್ಲಿ ಖೀರ್ ಹೀಗೆ ಪಾಯಸವನ್ನು ನಾನಾ ಹೆಸರುಗಳಿಂದ ಕರೆಯಲಾಗುತ್ತದೆ. "ಖೀರ್" ಎನ್ನುವ ಪದ ಹಾಲಿನ ಸಂಸ್ಕೃತ ಪದವಾದ ಶೀರ್‌ನಿಂದ ಬಂದಿದೆ. ಇನ್ನೂ ದಕ್ಷಿಣ ಭಾರತದಲ್ಲಿ ಪಾಯಸ ತಯಾರಿಸುವಾಗ ಹಾಲಿಗಿಂತ ಹೆಚ್ಚಾಗಿ ತೆಂಗಿನ ಹಾಲು ಮತ್ತು ಬೆಲ್ಲವನ್ನು ಸೇರಿಸಿ ತಯಾರು ಮಾಡಲಾಗುತ್ತದೆ. ಅಷ್ಟಕ್ಕು ಪಾಯಸ ಎನ್ನುವ ಕಲ್ಪನೆ ಮೊದಲು ಶುರುವಾಗಿದ್ದು ಹೇಗೆ? ಇದನ್ನು ತಯಾರು ಮಾಡಿದ್ಯಾರು ಅನ್ನೋದನ್ನು ತಿಳಿಯೋಣ.

ಪಾಯಸವನ್ನು ಮೊದಲು ತಯಾರು ಮಾಡಿದ್ಯಾರು?
ಪಾಯಸಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಇದರ ಹಿಂದೆ 'ಚದುರಂಗದ ಹಲಗೆಯ ದಂತಕಥೆ' ಅಡಗಿದೆ. ಈ ಕಥೆಯ ಪ್ರಕಾರ ಕೇರಳದ ಚೆಂಬಕಸ್ಸೆರಿಯ ರಾಜನು ಚದುರಂಗದ ಮಹಾನ್ ಅಭಿಮಾನಿಯಾಗಿದ್ದನು ಮತ್ತು ಅದ್ಭುತ ಆಟಗಾರನಾಗಿದ್ದನು. ಒಮ್ಮೆ ಅವನು ಬಡ ಬ್ರಾಹ್ಮಣನನ್ನು ಹಿಡಿದು ಚದುರಂಗದ ಆಟಕ್ಕೆ ಸವಾಲು ಹಾಕಿದನು. ಆ ಬ್ರಾಹ್ಮಣನು ಬೇರೆ ಯಾರೂ ಅಲ್ಲ, ಆತನೇ ಭಗವಾನ್ ಕೃಷ್ಣ. ರಾಜನ ಸವಾಲನ್ನು ಸ್ವೀಕರಿಸಿದ ಕೃಷ್ಣ ಅವನೊಂದಿಗೆ ಚದುರಂಗದಾಟವನ್ನು ಪ್ರಾರಂಭಿಸುತ್ತಾನೆ.
ಬ್ರಾಹ್ಮಣನನ್ನು ಪ್ರೇರೇಪಿಸುವ ಸಲುವಾಗಿ ರಾಜನು ಚದುರಂಗದ ಆಟದಲ್ಲಿ ಗೆದ್ದರೆ ಏನು ಬೇಕಾದರೂ ಸಿಗುತ್ತದೆ ಎಂದು ಹೇಳಿದನು. ರಾಜನ ಮಾತಿಗೆ ಒಪ್ಪಿಕೊಂಡ ಬ್ರಾಹ್ಮಣನ ರೂಪದಲ್ಲಿದ್ದ ಕೃಷ್ಣನು ಗೆದ್ದರೆ ಅಕ್ಕಿಯನ್ನು ನೀಡಬೇಕು ಅಂತ ಹೇಳುತ್ತಾನೆ. ಇದರ ಜೊತೆಗೆ ಕೃಷ್ಣ ಒಂದು ಷರತ್ತನ್ನು ಕೂಡ ಹಾಕುತ್ತಾನೆ. ಅದೇನೆಂದರೆ ರಾಜನು ಸೋತಾಗಲೆಲ್ಲಾ ಚದುರಂಗಕ್ಕೆ ಅಕ್ಕಿಯನ್ನು ಹಾಕಬೇಕು. ಪ್ರತಿ ಬಾರಿ ಸೋತಾಗಲೂ ಆ ಸಂಖ್ಯೆಯನ್ನು ದ್ವಿಗುಣ ಗೊಳಿಸುವಂತೆ ಹೇಳುತ್ತಾನೆ.
ರಾಜನು ಷರತ್ತಿಗೆ ಒಪ್ಪಿದ ನಂತರ ಆಟ ಶುರುವಾಗುತ್ತದೆ. ರಾಜನು ಬ್ರಾಹ್ಮಣ ರೂಪದಲ್ಲಿದ್ದ ಕೃಷ್ಣನ ಎದುರು ಪ್ರತಿಬಾರಿ ಸೋಲುತ್ತಾನೆ. ಹೀಗೆ ರಾಜನು ಅಕ್ಕಿಯನ್ನು ಹಾಕುತ್ತಾ ಹೋಗುತ್ತಾನೆ. ಅದು ದೊಡ್ಡ ರಾಶಿಯಾಗಿ ಬೆಳೆಯುತ್ತಾ ಹೋಗುತ್ತದೆ. ಬೃಹತ್ ರಾಶಿಯನ್ನು ನೋಡಿದ ರಾಜನು ಆಘಾತಕ್ಕೆ ಒಳಗಾಗುತ್ತಾನೆ. ಕೊನೆಗೆ ಕೃಷ್ಣನು ರಾಜನಿಗೆ ತನ್ನ ನಿಜ ರೂಪವನ್ನು ಬಹಿರಂಗ ಪಡಿಸುತ್ತಾನೆ.
ನಂತರ ಅದೇ ಅಕ್ಕಿಯಿಂದ ದೇವಾಲಯಕ್ಕೆ ಬಂದ ಭಕ್ತಾದಿಗಳಿಗೆ ಪಾಯಸವನ್ನು ಬಡಿಸಲಾಗುತ್ತದೆ. ಹೀಗಾಗಿ ಕೇರಳದ ಅಂಬಲಪುಳದ ದೇವಾಲಯದಲ್ಲೇ ಮೊದಲು ಪಾಯಸವನ್ನು ಮಾಡಿ ಬಡಿಸಲಾಗಿತ್ತು ಅಂತ ಹೇಳಲಾಗುತ್ತದೆ. ಕೇರಳ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲಿ ಅನೇಕ ಕೃಷ್ಣ ದೇವಾಲಯಗಳಿದ್ದು, ಇಂದಿಗೂ ದೇವಾಲಯದಲ್ಲಿ ಈ ಪದ್ಧತಿಯನ್ನು ಪಾಲನೆ ಮಾಡಿಕೊಂಡು ಬರಲಾಗುತ್ತಿದೆ.
ಪುರಿಯ ಇಂಜಿನಿಯರಿಂದ ತಯಾರಾಗಿತ್ತಾ ಪಾಯಸ?
ಇನ್ನೊಂದು ಕಥೆಯ ಪ್ರಕಾರ ಪಾಯಸ ಒಡಿಶಾದ ಪುರಿಯ ದೇವಸ್ಥಾನದಲ್ಲಿ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತದೆ. ಒಡಿಶಾದ ಕೋನಾರ್ಕ್ ದೇವಸ್ಥಾನದಲ್ಲಿ 'ಗೋಯಿಂದಾ ಗೋಡಿ' ಎಂಬ ಸಿಹಿ ತಿನಿಸು ಬಹಳ ಜನಪ್ರಿಯವಾಗಿತ್ತು. ದೇವಾಲಯದ ಕಟ್ಟಡದ ಅಡಿಪಾಯದ ಪ್ರಮುಖ ಎಂಜಿನಿಯರಿಂಗ್ ವೈಶಿಷ್ಟ್ಯವನ್ನು ವಿವರಿಸುವಲ್ಲಿ ಈ ಪಾಯಸ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಲಾಗುತ್ತದೆ. ಸಾಕಷ್ಟು ಪ್ರಯತ್ನ ಪಟ್ಟರೂ ಕೂಡ ದೇವಸ್ಥಾನದ ಕಟ್ಟಡ ನಿರ್ಮಾಣ ಕಷ್ಟವಾಗುತ್ತಂತೆ.
ಈ ಸಂದರ್ಭದಲ್ಲಿ ಮುಖ್ಯ ಇಂಜಿನಿಯರ್ ಮಗನ ತಲೆಗೆ ಒಂದು ಉಪಾಯ ಹೊಳೆದಿತ್ತಂತೆ. ಮತ್ತು ಸೇತುವೆಯ ಮೇಲೆ ಅಡಿಪಾಯವನ್ನು ಹೇಗೆ ನಿರ್ಮಿಸುವುದು ಎಂದು ವಿವರವಾಗಿ ವಿವರಿಸಲು ಶುರು ಮಾಡುತ್ತಾನಂತೆ. ಈ ವಿಧಾನವನ್ನು ಬಿಸಿ ಹಾಲಿರುವ ಬಟ್ಟಲಿನಲ್ಲಿ ಅಕ್ಕಿ ಕಾಳುಗಳನ್ನು ಬೀಳಿಸುವ ಮೂಲಕ ಆರಂಭ ಮಾಡುತ್ತಾನಂತೆ. ಇದನ್ನೇ ಸೇತುವೆ ನಿರ್ಮಾಣದ ಉದಾಹರಣೆಯನ್ನಾಗಿ ನೀಡುತ್ತಾನಂತೆ. ನಂತರ ಅದರಿಂದ ಸಿಹಿಯನ್ನು ತಯಾರು ಮಾಡಲಾಯಿತ್ತಂತೆ. ಮತ್ತು ಆ ಭಕ್ಷ್ಯವು 'ಗೋಯಿಂಡಾ ಗೋಡಿ' ಎಂದು ಜನಪ್ರಿಯವಾಯಿತು. ದಂತಕಥೆಯ ಪ್ರಕಾರ, ಈ ಖಾದ್ಯವನ್ನು ಅಶೋಕನ ಅರಮನೆಯಲ್ಲಿ ಸಂಜೆಯ ತಿಂಡಿಯಾಗಿಯೂ ನೀಡಲಾಗುತ್ತಿತ್ತು ಅಂತಾನೂ ಹೇಳಲಾಗುತ್ತದೆ.
ಪಾಯಸದಲ್ಲಿ ಎಷ್ಟು ವಿಧಗಳಿವೆ
ಹಲವು ವಿಧದ ಪಾಯಸವನ್ನು ತಯಾರು ಮಾಡಲಾಗುತ್ತದೆ. ತಮಗಿಷ್ಟದ ಸಾಮಾಗ್ರಿಯಿಂದ ಜನ ಪಾಯಸ ತಯಾರಿಸಿ ತಿನ್ನುತ್ತಾರೆ. ದಕ್ಷಿಣ ಭಾರತಕ್ಕೆ ಹೋಲಿಸಿದ್ರೆ ಉತ್ತರ ಭಾರತದಲ್ಲಿ ವಿಭಿನ್ನ ಶೈಲಿಯಲ್ಲಿ ಪಾಯಸವನ್ನು ತಯಾರು ಮಾಡಲಾಗುತ್ತದೆ. ಉತ್ತರ ಭಾರತೀಯರು ಹಾಲು ಮತ್ತು ಸಕ್ಕರೆಯಿಂದ ಪಾಯಸ ತಯಾರು ಮಾಡಲಾಗುತ್ತದೆ. ಇನ್ನೂ ದಕ್ಷಿಣ ಭಾರತದಲ್ಲಿ ತೆಂಗಿನ ಹಾಲು ಮತ್ತು ಬೆಲ್ಲ ಸೇರಿಸಿ ಪಾಯಸ ತಯಾರು ಮಾಡಲಾಗುತ್ತದೆ.
- ಅಕ್ಕಿ ಪಾಯಸ
- ರವೆ ಪಾಯಸ
- ಕರ್ಜೂರ ಪಾಯಸ
- ಕಡ್ಲೆ ಬೇಳೆ ಪಾಯಸ
- ಸಾಗು ಪಾಯಸ
- ಸೋರೆಕಾಯಿ ಪಾಯಸ
- ಶಾವಿಗೆ ಪಾಯಸ
- ಡ್ರೈ ಫ್ರೂಟ್ಸ್ ಪಾಯಸ
- ಇತ್ಯಾದಿ
ಪಾಯಸ ಭಾರತದ ಹಿರಿಮೆಗೆ ಒಂದು ಕಿರೀಟ ಇದ್ದ ಹಾಗೆ. ಪಾಯಸದ ರುಚಿಗೆ ಸರಿಸಾಟಿ ಬೇರ್ಯಾವುದೇ ಭಕ್ಷ್ಯವು ಇರೋದಕ್ಕೆ ಸಾಧ್ಯವಿಲ್ಲ.



Click it and Unblock the Notifications

