Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪರೀಕ್ಷೆಯ ಒತ್ತಡ ಕಡಿಮೆ ಮಾಡುವುದು ಹೇಗೆ? ಇಲ್ಲಿವೆ 5 ಟಿಪ್ಸ್!!
ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳು ಅಂದರೆ ಅದು ಪರೀಕ್ಷಾ ಸಮಯ ಆಗಿರಲಿದೆ. ಈ ಸಮಯದಲ್ಲಿ ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಎಲ್ಲಿಲ್ಲದ ಒತ್ತಡ. ಈಗಂತು ಪರೀಕ್ಷೆ ಹತ್ತಿರ ಬಂತೆಂದರೆ ಮಕ್ಕಳನ್ನೂ ಸೇರಿ ಪೋಷಕರು ಕೂಡ ಆತಂಕ ಹಾಗೂ ಒತ್ತಡಕ್ಕೆ ಒಳಗಾಗುವುದು ನೋಡಬಹುದು. ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲರೂ ಉತ್ತಮ ಅಂಕ ಗಳಿಸಿ ಉತ್ತೀರ್ಣರಾಗಬೇಕು ಎಂಬ ಬಯಕೆಯಲ್ಲಿರುತ್ತಾರೆ.
ಆದ್ರೆ ಇತ್ತಿಚಿಗೆ ಮಕ್ಕಳಲ್ಲಿ ಮೂಡುವ ಈ ಒತ್ತಡವು ಅವರ ಜೀವಕ್ಕೂ ಅಪಾಯ ತಂದೊಡ್ಡುವುದು ನೋಡಿದ್ದೇವೆ. 2022ರಲ್ಲಿ ಬರೋಬ್ಬರಿ 1,70,924 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ವರದಿ ಇದೆ. ಅದರಲ್ಲಿ ಪರೀಕ್ಷೆ ಹಾಗೂ ಫಲಿತಾಂಶ ಸಂಬಂಧಿ ಆತ್ಮಹತ್ಯೆಗಳು ಕೂಡ ಸೇರಿವೆ. ಇಷ್ಟೊಂದು ಪ್ರಮಾಣದಲ್ಲಿ ಈ ಪರೀಕ್ಷೆ ಎಂಬುದು ಮಕ್ಕಳಲ್ಲಿ ಒತ್ತಡ ಹಾಗೂ ಆತಂಕ ಹುಟ್ಟಿಸಿದೆ.

ಅದರಲ್ಲೂ ನಗರ ಪ್ರದೇಶದಲ್ಲಿ ಈ ಪ್ರಮಾಣ ಹೆಚ್ಚಾಗಿರುವುದು ನೋಡಬಹುದು. ಉತ್ತಮ ಅಂಕ ಬಂದರೆ ಮಾತ್ರವೇ ಹೆಸರಾಂತ ಶಾಲೆ ಕಾಲೇಜುಗಳಲ್ಲಿ ಸುಲಭವಾಗಿ ಪ್ರವೇಶಾತಿ ಸಿಗಲಿದೆ ಎಂಬ ಕಾರಣಕ್ಕೆ ಮನೆಯಲ್ಲಿ ಹಾಗೂ ಶಾಲೆಯ ಕಡೆಯಿಂದಲೂ ಅವರ ಮೇಲೆ ಒತ್ತಡ ಇರಲಿದೆ. ಹೀಗಾಗಿ ಅಪಾಯಗಳು ಎದುರಾಗಲಿರುವುದು ನೋಡಬಹುದು.
ಇತ್ತೀಚಿಗೆ ಉಡುಪಿಯ ಫರಂಗಿಪೇಟೆ ವಿದ್ಯಾರ್ಥಿಯೊಬ್ಬ ಪರೀಕ್ಷಾ ಭಯದಿಂದ ಮನೆ ಬಿಟ್ಟುಹೋಗಿದ್ದ ಪ್ರಕರಣ ಇಲ್ಲಿ ನೆನಪು ಮಾಡಿಕೊಳ್ಳಬಹುದು. ದೇವಸ್ಥಾನಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಆತ 10 ದಿನವಾದರು ಪತ್ತೆಯಾಗಿರಲಿಲ್ಲ. ಪೋಲೀಸರ ತೀವ್ರ ತನಿಖೆಯ ಬಳಿಕ ಆತನ ಸುಳಿವು ಪತ್ತೆಯಾಗಿತ್ತು. ಹಾಗೆ ಆತ ಪರೀಕ್ಷೆಯ ಭಯದಿಂದ ಮನೆ ಬಿಟ್ಟಿರುವುದಾಗಿಯೂ ಹೇಳಿಕೊಂಡಿದ್ದ. ಈ ಘಟನೆ ಕೂಡ ಪರೀಕ್ಷಾ ಭಯ ಹಾಗೂ ಆತಂಕ್ಕೆ ಸೂಕ್ತ ಸಾಕ್ಷಿ ಎನ್ನಬಹುದು.
ಹಾಗಾದ್ರೆ ಮಕ್ಕಳಲ್ಲಿನ ಈ ಪರೀಕ್ಷಾ ಭಯ ಹೋಗಲಾಡಿಸಲು ಪೋಷಕರು ಏನು ಮಾಡಬೇಕು? ಆವರಲ್ಲಿನ ಪರೀಕ್ಷಾ ಭಯ ನಿವಾರಣೆ ಮಾಡುವುದು ಹೇಗೆ? ನಿಮ್ಮಲ್ಲೂ ಈ ಭಯವಿದ್ದರೆ ಅದರಿಂದ ಹೊರಬರಲು ವಿದ್ಯಾರ್ಥಿಗಳು ಏನು ಮಾಡಬೇಕು ಎನ್ನುವುದನ್ನು ನಾವಿಂದು ತಿಳಿದುಕೊಳ್ಳೋಣ.
ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಿ
ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿಸುವುದು ಕೂಡ ಅವರಲ್ಲಿನ ಪರೀಕ್ಷಾ ಭಯವನ್ನು ದೂರ ಮಾಡಲು ಸಹಕಾರಿಯಾಗಲಿದೆ. ಅವರಿಗೆ ಪರೀಕ್ಷೆಯಲ್ಲಿನ ಅಂಕಗಳ ಕುರಿತು, ಭವಿಷ್ಯದ ಕುರಿತು ಭಯ ಹುಟ್ಟಿಸುವಂತೆ ವಿವರಿಸುವ ಬದಲಾಗಿ ಅವರಲ್ಲಿ ಪರೀಕ್ಷೆಯಿಂದಾಗುವ ಲಾಭದ ಕುರಿತು ಹಾಗೆ ಅವರ ಸಾಮರ್ಥ್ಯದ ಕುರಿತು ತಿಳುವಳಿಕೆ ಹೇಳುವುದು ಬಹಳ ಉತ್ತಮ.
ಪ್ರಮುಖ ವಿಷಯಗಳಿಗೆ ಆದ್ಯತೆ ನೀಡುವುದು
ಪಠ್ಯದಲ್ಲಿರುವ ಎಲ್ಲಾ ವಿಷಯಗಳ ಓದಿ ಮುಗಿಸುವ ಬದಲಾಗಿ ಪ್ರಮುಖ ವಿವಾರಗಳನ್ನು ಬಹುತೇಕ ಖಚಿತ ರೀತಿಯಲ್ಲಿ ತಿಳಿದುಕೊಳ್ಳುವುದು. ಒಂದು ವೇಳೆ ಆ ಪ್ರಶ್ನೆ ಪರೀಕ್ಷೆಯಲ್ಲಿ ಬಾರದೆ ಇದ್ದರೂ ಆತನಿಗೆ ಆ ಪ್ರಶ್ನೆಗೆ ಉತ್ತರ ನಿಖರವಾಗಿ ಬರುವಂತೆ ಓದಿಕೊಳ್ಳುವುದು. ಇದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಯಾವುದೇ ಪ್ರಶ್ನೆ ಇದ್ದರೂ ಉತ್ತರಿಸುವ ಮನೋಬಲ ಬೆಳೆಯಲಿದೆ.
ಟಿವಿ ಮೊಬೈಲ್‌ನಿಂದ ದೂರವೇ ಇರಿ
ಪರೀಕ್ಷಾ ಸಮಯದಲ್ಲಿ ಟಿವಿ ಹಾಗೂ ಮೊಬೈಲ್ ಸಂಪರ್ಕದಿಂದ ದೂರವೇ ಇರಿ. ಏಕೆಂದರೆ ಮೊಬೈಲ್ ನಿಮ್ಮಲ್ಲಿ ಮತ್ತಷ್ಟು ಒತ್ತಡ ಹಾಗೂ ಆತಂಕ ಹೆಚ್ಚಿಸುವ ಕಾರ್ಯ ಮಾಡಬಹುದು. ಹಾಗೆ ಟಿವಿ ನಿಮ್ಮ ಸಮಯ ಹಾಳು ಮಾಡಬಹುದು. ಓದಿನ ನಡುವೆ ವಿಶ್ರಾಂತಿ ಪಡೆಯುವಾಗ ಮಾತ್ರವೇ ಮೊಬೈಲ್ ಬಳಸಲು ಮುಂದಾಗಿ. ಮೊಬೈಲ್ ಬಳಕೆಯ ನಡುವೆ ಓದುವುದು ಉಚಿತವಲ್ಲ.
ಹಳೆಯ ಪ್ರಶ್ನೆ ಪತ್ರಿಕೆ ಸಂಗ್ರಹಿಸಿ ಉತ್ತರ ನೋಡುವುದು
ಪರೀಕ್ಷೆಯಲ್ಲಿ ಹಳೆಯ ಪ್ರಶ್ನೆ ಪತ್ರಿಕೆಗಳು ಬಹಳ ಸಹಕಾರಿಯಾಗಲಿದೆ. ಅದರಲ್ಲೂ ಯಾವೆಲ್ಲಾ ಪ್ರಶ್ನೆ ಮರಳಿ ಬಂದಿವೆ ಎಂಬುದನು ಪರಿಶೀಲಿಸಿ. ಅಂತಹ ಪ್ರಶ್ನೆಗಳಿದ್ದರೆ ಖಂಡಿತ ಅವುಗಳ ಮೇಲೆ ಹೆಚ್ಚು ಗಮನವಿಡಿ. ಈ ರೀತಿ ಮಾಡುವುದು ನಿಮ್ಮ ಅರಿವಿಲ್ಲದೆ ಆತ್ಮವಿಶ್ವಾಸ ಹೆಚ್ಚಿಸಲಿದೆ. ಬಹುಬೇಗ ಪರೀಕ್ಷೆ ಎದುರಿಸುವ ಬಲ ನೀಡಲಿದೆ.
ಉತ್ತಮ ನಿದ್ರೆ ಮತ್ತು ವಿಶ್ರಾಂತಿ
ನೀವು ಎಷ್ಟು ಓದಿನ ಕಡೆ ಗಮನವಿಡುತ್ತೀರೋ ಅಷ್ಟೇ ವಿಶ್ರಾಂತಿ ಮತ್ತು ನಿದ್ರೆಯ ಕಡೆಗೂ ಗಮನವಿಡಿ. ನಿದ್ರೆ ಬಿಟ್ಟು ಓದುವುದು ಒಳ್ಳೆಯ ಅಭ್ಯಾಸವಲ್ಲ. ಹಾಗೆ ದಿನವಿಡಿ ವಿಶ್ರಾಂತಿ ನೀಡದೆ ಓದುವುದು ಕೂಡ ವ್ಯರ್ಥವಾಗಲಿದೆ. 6ರಿಂದ 7 ಗಂಟೆಯ ನಿದ್ರೆ ಅವಶ್ಯವಾಗಿ ಮಾಡಿ. ಹಾಗೆ ಓದುವಾಗ ಮಧ್ಯದಲ್ಲಿ ಕನಿಷ್ಠ 10 ನಿಮಿಷದ ವಿಶ್ರಾಂತಿ ತೆಗೆದುಕೊಳ್ಳುತ್ತಿರುವುದು ಉತ್ತಮ.



Click it and Unblock the Notifications