Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮನೆಯಲ್ಲಿ ಈ ವಸ್ತು ಖಾಲಿಯಾಗಲು ಬಿಡಬೇಡಿ..! ಖಾಲಿಯಾದರೆ ಇಡೀ ಮನೆಗೆ ದರಿದ್ರವಂತೆ!
ಮನೆಯಲ್ಲಿ ಕೆಲವೊಂದು ವಸ್ತುಗಳು ಖಾಲಿಯಾಗಲು ಬಿಡಬಾರದು. ಏಕೆಂದರೆ ಕೆಲವೊಂದು ವಸ್ತು ಖಾಲಿಯಾದರೆ ಅದರು ಮನೆಗೆ ಶ್ರೇಯಸ್ಸು ತರುವುದಿಲ್ಲ ಎನ್ನಲಾಗುತ್ತದೆ. ಅದರಲ್ಲೂ ಕೆಲವೊಂದು ವಸ್ತುಗಳೂ ಯಾವುದೇ ಕಾರಣಕ್ಕೂ ಖಾಲಿ ಆಗಲೇ ಬಾರದಂತೆ. ಆ ವಸ್ತುಗಳು ಖಾಲಿಯಾದರೆ ವಾಸ್ತು ಪ್ರಕಾರ ನಿಮ್ಮ ಮನೆಗೆ ಒಳಿತು ತರುವುದಿಲ್ಲವಂತೆ. ಅಲ್ಲದೆ ಇದು ಮನೆಯ ಋಣಾತ್ಮಕ ಶಕ್ತಿ ಹೆಚ್ಚಿಸಲಿದೆ ಎನ್ನಲಾಗಿದೆ.
ವಾಸ್ತು ಸಲಹೆಗಳು ನಾವು ಆರ್ಥಿಕವಾಗಿ ಸದೃಢರಾಗಬೇಕಾದರೆ ವಾಸ್ತುವಿನ ವಿಷಯದಲ್ಲಿ ಕೆಲವು ವಿಷಯಗಳನ್ನು ಸರಿಯಾಗಿ ಪಡೆಯುವುದು ಬಹಳ ಮುಖ್ಯ.ಅದರಲ್ಲೂ ಮನೆ ಹೇಗಿರಬೇಕು ಎಂಬುದಕ್ಕೆ ವಾಸ್ತು ಕೇಳಲಾಗುತ್ತದೆ. ವಾಸ್ತು ಪ್ರಕಾರವಾಗಿ ಮೂಲೆಗಳು, ದಿಕ್ಕು, ಕೋಣೆಗಳ ನಿರ್ಮಿಸಲಾಗುತ್ತದೆ. ಆದರೆ ಇಷ್ಟೆಲ್ಲಾ ಹಣ ಖರ್ಚು ಮಾಡಿದ ಬಳಿಕವೂ ಮನೆಯಲ್ಲಿ ವಾಸ್ತು ದೋಷ ಕಂಡುಬರುವುದನ್ನು ನಾವು ನೋಡಬಹುದು.

ವಾಸ್ತು ನಿಮ್ಮ ಮನೆಗೆ ಮತ್ತು ನಿಮಗೆ ಮತ್ತು ನಿಮ್ಮ ಕುಟುಂಬ ಸದಸ್ಯರಿಗೆ ಶಕ್ತಿ ಮತ್ತು ಸಂತೋಷವನ್ನು ತರುತ್ತದೆ. ಮನೆಯ ಸದಸ್ಯರ ಸುಖ ಸಂತೋಷಕ್ಕೂ ಮನೆಯ ವಾಸ್ತವಿಗೂ ಸಂಬಂಧವಿರುತ್ತದೆ. ನಿಮ್ಮ ಮನೆಯಲ್ಲಿರುವ ಪ್ರತಿಯೊಂದು ವಸ್ತುವು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಿರ್ದಿಷ್ಟವಾಗಿ, ಕೆಲವು ನಕಾರಾತ್ಮಕ ಅಂಶಗಳಿವೆ. ಅವುಗಳ ಬಗ್ಗೆ ನಾವು ಹಲವಾರು ನಿಯಮಗಳನ್ನು ಪಾಲಿಸಬೇಕು. ಮುಖ್ಯವಾಗಿ ನಾವು ಕೆಲವು ವಿಷಯಗಳನ್ನು ಖಾಲಿ ಬಿಡಬಾರದು. ಯಾವ ವಸ್ತುಗಳನ್ನು ನೀವು ಮನೆಯಲ್ಲಿ ಖಾಲಿ ಇಡಬಾರದು ಎಂದು ನಿಮಗೆ ತಿಳಿದಿದೆಯೇ?
ಕೆಲವೊಂದು ವಸ್ತುಗಳು ಖಾಲಿಯಾದರೆ ಮನೆಯ ಲಕ್ಷ್ಮಿ ಹೊರಟು ಹೋದಂತೆ. ಜೊತೆಗೆ ಮನೆಯ ಸಂಪತ್ತು ಖಾಲಿಯಾಗಿದಂತೆಯೇ. ಮನೆಯಲ್ಲಿ ಆಹಾರ ಸಂಗ್ರಹಣೆ ಪಾತ್ರೆಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ಎಂದಿಗೂ ಖಾಲಿ ಇಡಬಾರದು. ಹಾಗೆ ಇಡುವುದರಿಂದ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಅದರಲ್ಲೂ ಮನೆಯಲ್ಲಿ ನೀರು ತುಂಬುವ ಪಾತ್ರೆಗಳು ಖಾಲಿಯಾಗಬಾರದಂತೆ. ನೀರು ಖಾಲಿಯಾದಾಗ ಅದಕ್ಕೆ ತುಂಬಿಸಿ ಇಡಬೇಕಂತೆ. ಖಾಲಿಯಾಗಿ ಬಿಡಬಾರದು ಅದರಲ್ಲೂ ಖಾಲಿ ಪಾತ್ರೆಯನ್ನು ಅಡುಗೆ ಮನೆಯಲ್ಲಿ ಇಡಬಾರದು ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ.
ಮನೆಯಲ್ಲಿರುವ ಇತರ ಪಾತ್ರೆಗಳಂತೆ, ನೀರಿನ ಪಾತ್ರೆಗಳು ಬಹಳ ಮುಖ್ಯ. ಅಕ್ಕಿ ತುಂಬಿಡುವ ಪಾತ್ರೆ ಸಹ ಖಾಲಿಯಾಗಬಾರದಂತೆ. ಎಲ್ಲರ ಮನೆಯಲ್ಲೂ ಅಕ್ಕಿಯನ್ನು ಒಂದಲ್ಲಾ ಒಂದು ಪಾತ್ರೆಯಲ್ಲಿ ಹಾಕಿಡುತ್ತಾರೆ. ಈ ಅಕ್ಕಿ ಹಾಕಿರುವ ಪಾತ್ರೆ ಖಾಲಿಯಾದರೆ ಅನಿಷ್ಟವಂತೆ. ಅಕ್ಕಿ ಪಾತ್ರೆಯಲ್ಲಿ ಒಂದು ಕಾಳು ಬಿಡದಂತೆ ಖಾಲಿ ಮಾಡದಂತೆ ಶಾಸ್ತ್ರಕ್ಕಾದರು ಅದರಲ್ಲಿ ಎರಡು ಕಾಳು ಅಕ್ಕಿ ಉಳಿಸಬೇಕಂತೆ ಒಂದು ವೇಳೆ ಅಕ್ಕಿ ಖಾಲಿಯಾದರೆ ಅದು ದರಿದ್ರವಂತೆ. ಜೊತೆಗೆ ಮನೆಯೆ ಒಳಿತಾಗುವುದಿಲ್ಲದಿಲ್ಲವಂತೆ.
ದೇವರ ಕೋಣೆಯಲ್ಲಿ ಹುಂಡಿ ಖಾಲಿ ಮಾಡುವುದು ಸಹ ಮನೆಗೆ ಒಳ್ಳೆಯ ಲಕ್ಷಣವಲ್ಲವಂತೆ. ಎಲ್ಲರ ಮನೆಯಲ್ಲೂ ದೇವರ ಕೋಣೆಯಲ್ಲಿ ನಾಣ್ಯ. ಹಣ ಇಡುತ್ತಾರೆ. ಆದರೆ ಇದನ್ನು ದೇವಸ್ಥಾನದ ಹುಂಡಿಗೆ ಹಾಕುತ್ತಾರೆ. ಹೀಗೆ ಹಾಕುವಾಗ ಮನೆಯಲ್ಲಿರುವ ದೇವರ ಕೋಣೆಯಲ್ಲಿ ನಾಣ್ಯ ಸಂಪೂರ್ಣ ಖಾಲಿ ಮಾಡಬಾರದಂತೆ.
ಮನೆಯಲ್ಲಿ ಅರಶಿನ ಹಾಗೂ ಕುಂಕುಮ ಎಂದಿಗೂ ಖಾಲಿಯಾಗಬಾರದಂತೆ. ನಿತ್ಯ ಪೂಜೆ ಮಾಡುವಾಗ ಅರಶಿಣ ಹಾಗೂ ಕುಂಕುಮ ಬಳಸುತ್ತೇವೆ, ಹೀಗಿರುವಾಗ ಒಂದು ದಿನವೂ ಸಂಪೂರ್ಣವಾಗಿ ಅರಶಿನ ಕುಂಕುಮ ಖಾಲಿಯಾಗಬಾರದಂತೆ. ಹೀಗೆ ಖಾಲಿ ಮಾಡುವುದು ಅನಿಷ್ಟದ ಸಂಕೇತ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.



Click it and Unblock the Notifications

