Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಮನೆ ನವೀಕರಣ ಮಾಡುತ್ತಿದ್ದೀರಾ? ತಪ್ಪದೇ ಲೇಖನ ಓದಿ
ಹಳೆಯ ಮನೆಗೊಂದು ಅಥವಾ ಜಾಗಕ್ಕೊಂದು ಹೊಸ ರೂಪ ಕೊಡುವುದು ಎಂದರೆ ಅಷ್ಟು ಸುಲಭದ ಮಾತಲ್ಲ. ಹೊಸತನ್ನು ಕಟ್ಟುವುದಾದರೂ ಅಷ್ಟು ಕಷ್ಟ ಎನಿಸದೇನೋ, ಆದರೆ ಹಳೆಯದನ್ನು ರಿಪೇರಿ ಮಾಡುವುದು ಕಷ್ಟ ಎಂದು ಹೇಳುವುದುಂಟು. ಆದರೂ ಕೆಲವು ಅನಿವಾರ್ಯಕ್ಕಾಗಿ, ಹವ್ಯಾಸಕ್ಕಾಗಿ ಅಥವಾ ವಿಭಿನ್ನ ನೋಟಕ್ಕಾಗಿ ನವೀಕರಣ ಮಾಡುವುದು ಸರ್ವೇಸಾಮಾನ್ಯ. ಆದರೆ ನವೀಕರಣವು ಯಾವುದೇ ಒತ್ತಡವನ್ನು ಸೃಷ್ಟಿ ಮಾಡಬಾರದು.
ಸಂಬಂಧದಲ್ಲಿ ಅಥವಾ ಕುಟುಂಬದಲ್ಲಿ ನವೀಕರಣವು ಹಲವು ರೀತಿಯ ಸಮಸ್ಯೆಗೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಆರ್ಥಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿ ಒತ್ತಡ ಸೃಷ್ಟಿಸಬಹುದು ಅಥವಾ ಯಾವಾಗಲೂ ಆಗುವ ನವೀಕರಣವು ಮನೆಯ ಇತರ ಸದಸ್ಯರ ಕಿರಿಕಿರಿಗೆ ಕಾರಣವಾಗಬಹುದು ಅಥವಾ ನೀವು ಮಾಡುವ ನವೀಕರಣ ಮತ್ತೊಬ್ಬರಿಗೆ ಇಷ್ಟವಾಗದೇ ಇರಬಹುದು. ಈ ರೀತಿ ಮನೆಯಲ್ಲಿ ಮಾಡುವ ಬದಲಾವಣೆಯು ಒತ್ತಡಕ್ಕೆ ಕಾರಣವಾಗಬಹುದು. ಹಾಗಾದ್ರೆ ಈ ಒತ್ತಡವನ್ನು ನಿರ್ವಹಿಸುವುದು ಹೇಗೆ? ಮನೆಯ ನವೀಕರಣ ವ್ಯವಸ್ಥೆಯಿಂದಾಗಿ ಆಗುವ ಒತ್ತಡವನ್ನು ನಿಭಾಯಿಸುವುದು ಹೇಗೆ ಎಂಬಿತ್ಯಾದಿ ವಿಚಾರಗಳ ಬಗ್ಗೆ ನಾವು ಈ ಲೇಖನದಲ್ಲಿ ತಿಳಿಸುತ್ತಿದ್ದೇವೆ.

ಮದುವೆ ಆದ ಹೊಸತರಲ್ಲಿ ಸಾಮಾನ್ಯವಾಗಿ ಹೊಸ ಮನೆಗೆ ಹೋದ ಕೂಡಲೇ ಕೆಲವು ರೀತಿಯ ಬದಲಾವಣೆಯನ್ನು ಪ್ರತಿ ಮಹಿಳೆಯೂ ಬಯಸುತ್ತಾಳೆ ಮತ್ತು ಆಕೆಯ ಮನಸ್ಥಿತಿಗೆ ತಕ್ಕಂತೆ ಮನೆಯ ನವೀಕರಣಕ್ಕೆ ಮುಂದಾಗುತ್ತಾಳೆ. ಅದು ಕೇವಲ ಪೇಯಿಂಟ್ ಮಾಡುವುದೇ ಆಗಿರಬಹುದು, ಬಾತ್ ರೂಮಿನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುವುದು, ಮಲಗುವ ಕೋಣೆಯಲ್ಲಿ ಹೊಸತನವನ್ನು ಬಯಸುವುದು ಇತ್ಯಾದಿ. ಇದೆಲ್ಲವನ್ನು ಸ್ವತಃ ಮಾಡುವುದಕ್ಕೆ ಮುಂದಾಗಲೂಬಹುದು ಅಥವಾ ಗುತ್ತಿಗೆದಾರರನ್ನು ನೇಮಿಸುವುದಕ್ಕೂ ಮುಂದಾಗಬಹುದು.
ನವೀಕರಣವನ್ನು ಕೈಗೊಳ್ಳುವಾಗ ಒತ್ತಡ ಕಡಿಮೆ ಮಾಡಿಕೊಳ್ಳುವುದರಿಂದಾಗಿ ಕುಟುಂಬ ಜೀವನವನ್ನು ಸುಂದರವಾಗಿ ಇಟ್ಟುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಮತ್ತು ಸರಿಯಾದ ಪ್ಲಾನಿಂಗ್ ನಿಂದಾಗಿ ನಿಮ್ಮ ನವೀಕರಣ ವಿಚಾರದಲ್ಲಿ ನಿಮಗಾಗುವ ಚಿಂತೆಯನ್ನು ದೂರ ಮಾಡಿಕೊಳ್ಳಬಹುದು. ಅದಕ್ಕಾಗಿ ನೀವು ಕೆಲವು ಸಲಹೆಗಳನ್ನು ಅನುಸರಿಸಿಕೊಂಡರೆ ಒಳ್ಳೆಯದು.

ವಾಸ್ತವವಾಗಿರುವುದು ಮತ್ತು ಬಜೆಟ್ ಹೊಂದಿಸುವುದು
ನೈಜವಾಗಿರುವ ಗುರಿಯನ್ನು ಹೊಂದಿಸಿಕೊಳ್ಳಿ ಮತ್ತು ಯಾವ ಬಜೆಟ್ ಅನ್ನು ನೀವು ಹೊಂದಿಸಬಹುದು ಎಂಬ ಬಗ್ಗೆ ಪ್ಲಾನ್ ಮಾಡಿಕೊಳ್ಳಿ. ಆರ್ಥಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಬಜೆಟ್ ಪ್ಲಾನ್ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮನೆಯ ಅಲಂಕಾರಕ್ಕಾಗಿ ಅಥವಾ ನಿಮ್ಮ ಕ್ರಿಯೇಟಿವಿಟಿಗಾಗಿ ಹೆಚ್ಚು ದುಬಾರಿ ವಸ್ತುಗಳ ಖರೀದಿಯ ಅಗತ್ಯತೆಯ ಬಗ್ಗೆ ವಿಮರ್ಷೆ ಮಾಡಿಕೊಳ್ಳಿ. ಯಾವುದೇ ಒಂದು ನಿರ್ಧಿಷ್ಟ ನವೀಕರಣಕ್ಕೆ ದುಬಾರಿ ವಸ್ತುವನ್ನು ಖರೀದಿಸುವ ಮುನ್ನ ಅದರ ಅಗತ್ಯತೆಯ ಬಗ್ಗೆ ಆಲೋಚನೆ ಮಾಡಿ. ನಿಮಗೆ ಅಗತ್ಯವಿರುವ ನವೀಕರಣದ ವಸ್ತುಗಳು ಸಿಗುವ ಬೇರೆಬೇರೆ ಜಾಗಗಳಲ್ಲಿನ ಬೆಲೆಯ ಬಗ್ಗೆ ತಿಳಿದುಕೊಳ್ಳಿ. ಅವುಗಳ ಪೂರೈಕೆದಾರರು ಎಲ್ಲಿದ್ದಾರೆ? ಯಾರು ಅತೀ ಕಡಿಮೆಗೆ ಅಥವಾ ಕೈಗೆಟುಕುವ ಬೆಲೆಗೆ ಮಾರಾಟ ಮಾಡುತ್ತಿರುತ್ತಾರೆ ಎಂಬ ಬಗ್ಗೆ ತಿಳಿದು ಖರೀದಿ ಮಾಡಿದರೆ ಬಹಳ ಒಳ್ಳೆಯದು. ಕೆಲವು ಕಡೆಗಳಲ್ಲಿ ಚೌಕಾಸಿ ಮಾಡುವುದಕ್ಕೆ ಅವಕಾಶವಿರುತ್ತದೆ. ಅಂತಹ ಕಡೆಗಳಲ್ಲಿ ಚೌಕಾಸಿಗೆ ಹಿಂಜರಿಯುವುದು ಸರಿಯಲ್ಲ.

ನವೀಕರಣವನ್ನು ಒಂದು ಯೋಜನೆಯಂತೆ ನಿರ್ವಹಿಸಿ
ಆಗಿರುವ ಕೆಲಸದ ಬಗ್ಗೆ ಮತ್ತು ಮುಂದೆ ಆಗಬೇಕಿರುವ ಕೆಲಸದ ಬಗ್ಗೆ ಮತ್ತು ವ್ಯಾಪಾರಿಗಳ ಸಂಪರ್ಕದ ವಿವರಗಳು, ಮುರಿದ ಮತ್ತು ಹಾನಿಯಾದ ವಸ್ತುಗಳ ವಿವರಗಳು ಮತ್ತು ಹೀಗೆ ನವೀಕರಣದ ಸಮಯದಲ್ಲಿನ ಎಲ್ಲಾ ವಿಚಾರಗಳ ಟ್ರ್ಯಾಕ್ ರೆಕಾರ್ಡ್ ಇಟ್ಟುಕೊಳ್ಳಿ. ನವೀಕರಣವನ್ನು ಒಂದು ಪರಿಪಕ್ವವಾಗಿರುವ ಯೋಜನೆಯಂತೆ ರೂಪಿಸಿಕೊಳ್ಳಿ. ಗೊತ್ತು ಗುರಿ ಇಲ್ಲದೆ, ದಿನಾಂಕ ನಿಗದಿಗೊಳಿಸದೆ ಅಥವಾ ಸರಿಯಾದ ರೂಪುರೇಷೆ ಇಲ್ಲದ ಯಾವ ಯೋಜನೆಯೂ ಯಶಸ್ವಿಯಾಗುವುದಕ್ಕೆ ಸಾಧ್ಯವಿಲ್ಲ. ಅದು ನವೀಕರಣಕ್ಕೂ ಹೊರತಾಗಿಲ್ಲ.

ಕುಟುಂಬ ಸದಸ್ಯರ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸದ ಹಂಚಿಕೆ
ಹೆಂಡತಿ ಅಕೌಂಟ್ ನಿರ್ವಹಣೆಯಲ್ಲಿ ಚುರುಕಾಗಿದ್ದು, ಗಂಡ ಚೌಕಾಶಿ ಮಾಡುವುದರಲ್ಲಿ ಉತ್ತಮವಾಗಿದ್ದರೆ ಆಯಾ ಕೆಲಸವನ್ನು ಅವರವರಿಗೆ ಹಂಚಿಕೊಂಡು ಮಾಡುವುದು ಒಳಿತು. ನವೀಕರಣದ ಎಲ್ಲಾ ಸಮಸ್ಯೆಯನ್ನೂ ಒಬ್ಬರೇ ತಮ್ಮ ಹೆಗಲ ಮೇಲೆ ತೆಗೆದುಕೊಳ್ಳುವುದಕ್ಕಿಂತ ಮನೆಯ ಎಲ್ಲಾ ಸದಸ್ಯರು ತಮ್ಮ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹಂಚಿಕೆ ಮಾಡಿಕೊಂಡರೆ ಕೆಲಸವೂ ಚುರುಕಾಗುತ್ತದೆ ಮತ್ತು ನಿಖರವಾಗಿ ಆಗುತ್ತದೆ. ಮಕ್ಕಳೂ ಕೂಡ ಗಾರ್ಡನ್ ಡಿಸೈನ್ ಹೇಗಿರಬೇಕು ಇತ್ಯಾದಿ ಉಪಾಯಗಳನ್ನು ಆನ್ ಲೈನ್ ನಲ್ಲಿ ಹುಡುಕಾಡಿ ಪೋಷಕರಿಗೆ ತಿಳಿಸುವ ಕೆಲಸವನ್ನು ಮಾಡಬಹುದು. ಅಂದರೆ ಮಕ್ಕಳೂ ಕೂಡ ನಿಮ್ಮ ನವೀಕರಣದ ವಿಚಾರದಲ್ಲಿ ಸಹಾಯ ಮಾಡುವುದಕ್ಕೆ ಸಾಧ್ಯವಿದೆ.
ಮನೆಯ ಎಲ್ಲಾ ಸದಸ್ಯರ ಮನಸ್ಥಿತಿಗೆ ಅನುಗುಣವಾಗಿ ನವೀಕರಣವಾದರೆ ಎಲ್ಲರೂ ಸಂತೋಷದಿಂದ ಇರುವುದಕ್ಕೆ ಅನುಕೂಲವಾಗುತ್ತದೆ. ಪ್ರತಿಯೊಬ್ಬರ ಶ್ರಮಕ್ಕೂ ಬೆಲೆ ಇರುತ್ತದೆ. ಪ್ರತಿಯೊಬ್ಬರೂ ಕೆಲಸವನ್ನು ಹಂಚಿಕೊಂಡು ಮಾಡಿದರೆ ಕೆಲಸವೂ ಬೇಗ ಸಾಗುತ್ತದೆ ಮತ್ತು ತೃಪ್ತಿದಾಯವಾಗಿರುತ್ತದೆ. ಕುಟುಂಬದ ಕೆಲಸ ಅಂದ ಮೇಲೆ ಮನೆಯ ಸದಸ್ಯರೆಲ್ಲರ ಭಾಗವಹಿಸುವಿಕೆ ಹೆಚ್ಚು ಪ್ರಶಸ್ತವಾಗಿರುತ್ತದೆ ಮತ್ತು ಕೌಟುಂಬಿಕ ಚರ್ಚೆ ಮನೆಯ ಸಂತೋಷವನ್ನು ಇಮ್ಮಡಿಗೊಳಿಸುತ್ತದೆ.

ನಿಮಗೆ ಅಸಾಧ್ಯವಾದ ಕೆಲಸಕ್ಕೆ ವೃತ್ತಿಪರರ ಸಹಾಯ ಪಡೆಯಿರಿ
ನವೀಕರಣದಲ್ಲಿ ನಿಮಗೆ ಅರ್ಹತೆ ಇಲ್ಲದೇ ಇದ್ದರೆ ಅಥವಾ ನವೀಕರಣದ ಯಾವುದೇ ಒಂದು ವಿಚಾರದಲ್ಲಿ ನಿಮಗೆ ಅನುಭವ ಇಲ್ಲದೆ ಇದ್ದರೆ ಅದನ್ನು ಮಾಡಲು ಹೋಗಬೇಡಿ. ನವೀಕರಣದ ಯಾವುದೇ ಕೆಲಸವನ್ನು ತಪ್ಪಾಗಿ ಮಾಡಿ ಯಡವಟ್ಟು ಮಾಡಿಕೊಂಡು ಒದ್ದಾಡುವುದಕ್ಕೆ ಬದಲಾಗಿ ಸರಿಯಾದ ವ್ಯಕ್ತಿಗಳ ಬಳಿ ಸಲಹೆ ಪಡೆದು ಮುಂದುವರಿಯಿರಿ. ಅನುಭವವಿಲ್ಲದೆ ಕೆಲಸಕ್ಕೆ ಕೈ ಹಾಕುವುದರಿಂದಾಗಿ ಕೇವಲ ಕೆಲಸ ಹಾಳಾಗುವುದು ಮಾತ್ರವಲ್ಲ ಬದಲಾಗಿ ಒತ್ತಡವೂ ಅಧಿಕವಾಗುತ್ತದೆ ಮತ್ತು ಖರ್ಚೂ ಅಧಿಕವಾಗುತ್ತದೆ. ಹಾಗಾಗಿ ತಪ್ಪು ನಿರ್ಧಾರಗಳನ್ನು ನವೀಕರಣದಲ್ಲಿ ತೆಗೆದುಕೊಳ್ಳುವುದಕ್ಕಿಂತ ವೃತ್ತಿಪರರ ಸಹಾಯ ಪಡೆಯಿರಿ. ತಪ್ಪು ಕೆಲಸದಿಂದ ಹಾಳಾಗುವ ಖರ್ಚನ್ನು ವೃತ್ತಿಪರರ ಸಲಹೆಯಿಂದ ಮತ್ತು ಅವರಿಗೆ ಪಾವತಿ ಮಾಡುವ ಮೂಲಕ ಉಳಿತಾಯ ಮಾಡುವುದಕ್ಕೆ ಸಾಧ್ಯವಿದೆ.

ನಾಳೆಯ ಬಗ್ಗೆ ಅತಿಯಾಗಿ ಯೋಚಿಸದೇ ದಿನಾಂತ್ಯಕ್ಕೆ ಖುಷಿಯಾಗಿರಿ
ಇಡೀ ದಿನ ನವೀಕರಣದಿಂದಾಗಿ ನಿಮ್ಮ ಮನಸ್ಸು ಒತ್ತಡಕ್ಕೆ ಸಿಲುಕಿರುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ದಿನಪೂರ್ತಿ ಹೀಗೆ ಕೆಲಸ ಮಾಡಿ ಬಳಲಿದ ನಿಮಗೆ ಮಾರನೇ ದಿನವನ್ನೂ ಕೂಡ ಯೋಚಿಸುವ ಅಗತ್ಯವಿರುತ್ತದೆ ಎಂಬುದು ಕೂಡ ಸತ್ಯವೇ. ಆದರೆ ಅದನ್ನೇ ಅತಿಯಾಗಿ ಯೋಚಿಸಬೇಡಿ. ಮಾರನೇ ದಿನ ಖುಷಿಯಾಗಿರಬೇಕು ಎಂಬ ಉದ್ದೇಶದಿಂದಾಗಿ ದಿನಾಂತ್ಯಕ್ಕೆ ಖುಷಿಯಾಗಿರುವುದನ್ನು ರೂಢಿಸಿಕೊಳ್ಳಿ. ಇವತ್ತು ಮುಗಿದಿರುವ ಕೆಲಸದ ಬಗ್ಗೆ ಸಂತಸದಿಂದಿರಿ. ಕೆಲಸ ಮುಗಿದ ನಂತರ ಸ್ನಾನ ಮಾಡಿ ಫ್ರೆಶ್ ಆಗಿ. ಮನೆಯವರನ್ನು, ಮಕ್ಕಳನ್ನು ಮುದ್ದು ಮಾಡಿ. ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮನ್ನ ನೀವು ಪ್ರೀತಿಸಿ, ಮುದ್ದಿಸಿಕೊಳ್ಳಿ. ಕೇವಲ ಕೆಲಸ ಕೆಲಸ ಎಂದು ನವೀಕರಣದ ಕೆಲಸದಲ್ಲೇ ಬ್ಯುಸಿಯಾಗಬೇಡಿ. ಬದಲಾಗಿ ದಿನಾಂತ್ಯಕ್ಕೆ ರಿಲ್ಯಾಕ್ಸ್ ಆಗಿ.

ಆಗಾಗ ವಿರಾಮ ತೆಗೆದುಕೊಳ್ಳಿ
ಮನೆಯಿಂದ ಸ್ವಲ್ಪ ಹೊರಗಡೆ ಬನ್ನಿ. ಹೌದು ಕಿರಾಣಿ ಅಂಗಡಿಗೆ ತೆರಳಿ, ಕಾರಿನಲ್ಲಿ ಹಾಗೆ ಸುಮ್ಮನೆ ಓಡಾಟ ಮಾಡಿ. ಕೆಲವು ಘಂಟೆಗಳ ವಿರಾಮ ತೆಗೆದುಕೊಳ್ಳಿ. ಮಾರನೇ ದಿನ ಮತ್ತಷ್ಟು ಕಠಿಣವಾಗಿ ಕೆಲಸ ಮಾಡುವುದಕ್ಕೆ ನೀವು ಸಿದ್ಧರಾಗಬೇಕು ಎಂದರೆ ಈ ರೀತಿಯ ವಿರಾಮದ ಅಗತ್ಯವಿದ್ದೇ ಇರುತ್ತದೆ. ಇಷ್ಟವಿದ್ದರೆ ಹೊರಗಡೆ ಊಟ ಮಾಡಿ. ಅಡುಗೆ ಮಾಡುವ ಒದ್ದಾಟದಿಂದ ಸ್ವಲ್ಪ ರಿಲ್ಯಾಕ್ಸ್ ಮಾಡಿಕೊಳ್ಳಿ ಮತ್ತು 24 ಘಂಟೆಯೂ ಮನೆಯ ನವೀಕರಣದ ಬಗ್ಗೆಯೇ ಚಿಂತಿಸುತ್ತಾ ಇರುವುದನ್ನು ಬಿಟ್ಟು ಬಿಡಿ. ಹತ್ತಿರದಲ್ಲೇ ಇರುವ ನಿಮಗಿಷ್ಟವಿರುವ ಜಾಗಕ್ಕೆ ಕುಟುಂಬದವರೊಂದಿಗೆ ಭೇಟಿ ಕೊಟ್ಟು ಬನ್ನಿ. ಅದು ಶಾಪಿಂಗ್ ಮಾಲ್ ಇರಬಹುದು, ದೇವಸ್ಥಾನವೇ ಇರಬಹುದು. ನಿಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ಆಗಿರುವ ಆಯಾಸವನ್ನು ದೂರ ಮಾಡಿಕೊಳ್ಳಿ.



Click it and Unblock the Notifications











