Latest Updates
-
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು?
ಮನೆಯ ವಾಸ್ತು ದೋಷವನ್ನು ಸುಲಭವಾಗಿ ದೂರಗೊಳಿಸುವುದು ಹೇಗೆ?
ಕೆಲವೊಮ್ಮೆ ಸಮಸ್ಯೆಗಳಿಗೆ ಕಾರಣಗಳು ಸ್ಪಷ್ಟವಾಗಿ ತಿಳಿಯುತ್ತವೆ ಹೀಗಾದ ಸಂದರ್ಭದಲ್ಲಿ ಇದಕ್ಕೆ ಪರಿಹಾರ ಸುಲಭವಾಗಿರುತ್ತದೆ ಆದರೆ ಸಮಸ್ಯೆಯ ಮೂಲವೇ ತಿಳಿಯದ ಸಂದರ್ಭದಲ್ಲಿ ಪರಿಹಾರವಾದರೂ ಹೇಗೆ ಕಂಡುಹಿಡಿಯಲು ಸಾಧ್ಯ. ಹೀಗೆ ನಿಮ್ಮ ಜೀವನದಲ್ಲೂ ಹಲವು ಬಾರಿ ಯಾವುದೇ ಸರಿಯಾದ ಕಾರಣವಿಲ್ಲದೆ ಸಮಸ್ಯೆಗಳು ಎದುರಾಗಿರಬಹುದು.
ಯಾವುದೇ ವೈದ್ಯರಲ್ಲಿ ಹೋದರೂ ಅನಾರೋಗ್ಯವೇ ಗುಣವಾಗುವುದಿಲ್ಲ, ಯಾವುದೇ ವ್ಯವಹಾರದಲ್ಲೂ ಲಾಭವಾಗುವುದಿಲ್ಲ ಹೀಗೆ ಅನೇಕ ವೇಳೆ ಏನೇ ಮಾಡಿದರೂ ನಷ್ಟವೇ ಆಗುತ್ತಿರಬಹುದು. ನಿಮ್ಮ ಪ್ರಯತ್ನದ ಹೊರತಾಗಿಯೂ ನಿಮ್ಮ ಯಶಸ್ಸಿನಲ್ಲಿ ನಿಮ್ಮ ಕೈ ಹಿಡಿಯುವ ಇನ್ನೂ ಅನೇಕ ವಿಷಯಗಳಿವೆ.
ಪ್ರಾಚೀನ ಭಾರತೀಯ ಋಷಿ-ಮುನಿಗಳು ಕಠೋರ ಪರಿಶ್ರಮದಿಂದ ವಾಸ್ತುಶಾಸ್ತ್ರದ ಸಂಶೋಧನೆ ಮಾಡಿದ್ದಾರೆ. ವಾಸ್ತುಶಾಸ್ತ್ರ ಎಂದರೆ ನಮ್ಮ ಸುತ್ತ ಮುತ್ತಲಿನ ವಾತಾವರಣ, ನಿಸರ್ಗ, ಸೌರಮಂಡಲ ಮತ್ತು ವಿವಿಧ ಗ್ರಹಗಳಿಂದ ಬರುವ ಆಯಸ್ಕಾಂತ ಲಹರಿಗಳ ಮೇಲೆ ಆಧಾರಿತ ವಾಸ್ತುವಿನ ರಚನೆ ಮತ್ತು ನಿರ್ಮಾಣಕ್ಕೆ ಸಂಬಂಧಿಸಿದ ಶಾಸ್ತ್ರ. ಇಲ್ಲಿ ಕೊಟ್ಟಿರುವ ಕೆಲವು ಸಲಹೆಗಳು ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಲಿದೆ.

ಅನಾವಶ್ಯಕ ವಸ್ತುಗಳನ್ನು ಕಡಿಮೆ ಮಾಡುವುದು:
ಮನೆಯಲ್ಲಿನ ಅನಾವಶ್ಯಕ ವಸ್ತುಗಳನ್ನು ಕಡಿಮೆ ಮಾಡಿ ಉಳಿದ ವಸ್ತುಗಳನ್ನು ಸುವ್ಯವಸ್ಥಿತವಾಗಿ ಇಡಬೇಕು.

ಮನೆಯ ಶಯನ ಗೃಹ:
ಮನೆಯ ಶಯನ ಗೃಹದಲ್ಲಿ ನೀರು ಅಥವಾ ಜಲಪಾತದ ಚಿತ್ರಗಳನ್ನು ಇಡಬೇಡಿ. ಇವು ನಿಮ್ಮ ಮನೆಗೆ ದುಷ್ಪರಿಣಾಮಗಳನ್ನು ಉಂಟುಮಾಡುತ್ತವೆ.

ಮನೆಯ ಮಧ್ಯಭಾಗ:
ಮನೆಯ ಮಧ್ಯಭಾಗ ನಿಮ್ಮ ಮನೆಯ ಮುಖ್ಯ ಭಾಗವಾಗಿದ್ದು ಇಲ್ಲಿಂದ ಮನೆಯ ಎಲ್ಲಾ ಮುಖ್ಯ ಕೆಲಸ ಕಾರ್ಯಗಳು ನಡೆಯುತ್ತವೆ. ಇದು ಯಾವಾಗಲೂ ತೆರೆದಿರಬೇಕು ಹಾಗೂ ಅಡೆ ತಡೆ ರಹಿತವಾಗಿರಬೇಕು. ಇಲ್ಲಿ ಗೋಡೆ ಇದ್ದರೆ ಉದರ ಸಂಬಂಧಿ ಹಾಗೂ ಆರ್ಥಿಕ ಸಮಸ್ಯೆಗಳು ಉದ್ಭವಿಸುತ್ತವೆ. ಹೀಗಾಗಿ ಇಲ್ಲಿ ಒಂದು ಝೀರೋ ವಾಲ್ಟ್ ನ ನೀಲಿ ಬಣ್ಣದ ಒಂದು ಬಲ್ಪನ್ನು ಹಚ್ಚಿಡಿ ಹಾಗೂ ಇದು ದಿನ ಇಪ್ಪತ್ತನಾಲ್ಕು ಗಂಟೆಯೂ ಬೆಳಗುತ್ತಿರಲಿ.

ಮನೆಯ ಧನಾತ್ಮಕತೆಯನ್ನು ಹೆಚ್ಚಿಸಿಕೊಳ್ಳಿ:
ನಿಮ್ಮ ಮನೆಯ ಮಧ್ಯಭಾಗದಲ್ಲಿ ನಿಲ್ಲಿ ಹಾಗೂ ಕೈಯಲ್ಲಿ ಕಂಪಾಸನ್ನು ಹಿಡಿದುಕೊಳ್ಳಿ ಹಾಗೂ ನಿಮ್ಮ ಮನೆಯ ದಿಕ್ಕುಗಳ ಬಗ್ಗೆ ಸ್ಪಷ್ಟವಾಗಿ ತಿಳಿಯಿರಿ. ನಿಮ್ಮ ಮನೆಯ ಮುಖ್ಯ ದ್ವಾರ ನಿಮ್ಮ ಮನೆಯ ಬಾಯಿಯಾಗಿದ್ದು ಅದು ನಿಮ್ಮ ಮನೆಗೆ ಶಕ್ತಿಯನ್ನು ತರುತ್ತದೆ. ಮನೆಯ ನೈಋತ್ಯ ಭಾಗಕ್ಕೆ ಮುಖ್ಯದ್ವಾರ ಇರುವ ಮನೆಯನ್ನು ಎಂದೂ ಆರಿಸಿಕೊಳ್ಳಬೇಡಿ. ಇದರಿಂದಾಗಿ ಮನೆಗೆ ದುಷ್ಟ ಶಕ್ತಿಗಳ ಆಗಮನವಾಗಿ ಮನೆಯಲ್ಲಿ ಅಶಾಂತಿ ಮನೆ ಮಾಡುತ್ತದೆ. ಈಗ ನೀವಿರುವ ಮನೆಯಲ್ಲಿ ಮುಖ್ಯದ್ವಾರ ನೈಋತ್ಯ ದಿಕ್ಕಿನಲ್ಲಿಯೇ ಇದೆ ಎಂದಾದರೆ ಎರಡು ಹನುಮಾನ್ ಟೈಲ್ಸ್ ಗಳನ್ನು ಹಾಕಿ ಹಾಗೂ ವ್ಯತ್ಯಾಸ ಗಮನಿಸಿ.



Click it and Unblock the Notifications
