Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಜನರನ್ನು ನರ್ಸರಿ ಮುಂದೆ ಸಾಲುಗಟ್ಟಿ ನಿಲ್ಲಿಸಿದ ಕ್ರಾಸುಲಾ ಗಿಡ..! ಕಾರಣ ಏನು ಗೊತ್ತಾ?
ಭೂಮಿ ಮೇಲಿರುವ ಹಲವು ಗಿಡಮೂಲಿಕೆಗಳು ಒಂದಲ್ಲಾ ಒಂದು ರೀತಿಯ ವಿಶಿಷ್ಟ ಗುಣಗಳ ಹೊಂದಿದೆ ಎಂಬುದನ್ನು ನಾವು ತಿಳಿದಿದ್ದೇವೆ. ಭಾರತದಲ್ಲಿ ಅನಾದಿ ಕಾಲದೊಂದಲೂ ಔಷಧಿಗಳ ತಯಾರಿಕೆಯಲ್ಲಿ ಹಲವು ಗಿಡಮೂಲಿಕೆಗಳ ಬಳಸಿದ್ದರು. ಇಂದಿಗೂ ಪ್ರಕೃತಿ ಚಿಕಿತ್ಸೆ, ಆಯುರ್ವೇದದಲ್ಲಿ ಹತ್ತು ಹಲವು ಗಿಡಮೂಲಿಕೆ ಔಷಧಿಗಳ ನಾವು ನೋಡಬಹುದು.
ಅಂದ್ರೆ ಒಂದೊಂದು ಗಿಡಗಳು ಕೂಡ ತಮ್ಮದೇ ಆದ ಗುಣಗಳೊಂದಿಗೆ ವಿಶೇಷತೆಗಳ ಹೊಂದಿವೆ. ಹಾಗೆ ಮತ್ತೆ ಕೆಲವು ಗಿಡಗಳನ್ನು ನಾವು ಮನೆಯಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಇಡುವುದು ಕೂಡ ನೋಡಬಹುದು. ಅದರಲ್ಲೂ ಈ ಮನಿ ಪ್ಲಾಂಟ್ ಎಂಬುದು ಬಹಳ ಫೇಮಸ್ ಆಗಿರುವ ಗಿಡಗಳಾಗಿವೆ. ಮನೆಯಲ್ಲಿ ಈ ಗಿಡಗಳ ಇಟ್ಟರೆ ಹಣಕಾಸು ವಿಚಾರದಲ್ಲಿ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂಬ ನಂಬಿಕೆ ಇದೆ.

ಈಗ ಈ ಒಂದು ಸಸ್ಯದ ಹಿಂದೆ ಜನರು ಬಿದ್ದಿದ್ದು ಈ ಗಿಡ ಖರೀದಿಗೆ ಮುಗಿಬಿದ್ದಿದ್ದಾರೆ. ಹೌದು ಮಧ್ಯಪ್ರದೇಶದ ಛತ್ತರ್ ಪುರ್‌ನಲ್ಲಿ ಇಂತಹದೊಂದು ವಿಚಿತ್ರ ಘಟನೆಗಳು ವರದಿಯಾಗಿವೆ, ಅಲ್ಲಿನ ಜನರು ಕುಬೇರ ಸಸ್ಯ ಅಥವಾ ಕ್ರಾಸುಲಾ ಎಂದು ಕರೆಲ್ಪಡುವ ಗಿಡಗಳಿಗಾಗಿ ಮುಗಿಬಿದ್ದಿದ್ದಾರೆ. ಜನರು ಸಿಕ್ಕ ಸಿಕ್ಕ ನರ್ಸರಿಗಳಿಗೆ ಮುಗಿಬಿದ್ದಿದ್ದಾರೆ. ಹೇಗಾದರು ಮಾಡಿ ಈ ಗಿಡ ಮನೆಯಲ್ಲಿ ಇಡಬೇಕು ಎಂದು ಅಲೆದಾಡುತ್ತಿದ್ದಾರೆ.
ಈ ಗಿಡಗಳನ್ನು ಮನೆಯಲ್ಲಿ, ಕಚೇರಿಯಲ್ಲಿ, ಕಟ್ಟಡಗಳಲ್ಲಿ ಇಟ್ಟರೆ ಹಣಕಾಸು ಸಮಸ್ಯೆಗಳು ದೂರಾಗಲಿದೆ ಎಂದು ನಂಬಲಾಗಿದೆ. ಆದ್ರೆ ಈಗ ಏಕಾಏಕಿ ಜನರು ಒಂದೇ ಸಮನೆ ಈ ಗಿಡದ ಹಿಂದೆ ಬೀಳಲು ಕಾರಣವೇನು ಎಂಬುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ದಪ್ಪ ದಂಟಿನ ಹಾಗೂ ಎಲೆಗಳ ಹೊಂದಿರುವ ಈ ಗಿಡವು ಚಿಕ್ಕದಾಗಿ ಬೆಳೆಯುತ್ತದೆ. ಈ ಪ್ರದೇಶದಲ್ಲಿ ಏಕಾಎಕಿ ಈ ಗಿಡಕ್ಕೆ ಬೇಡಿಕೆ ಬಂದಿರುವುದು ಕಂಡು ನರ್ಸರಿ ಮಾಲಿಕರು ಕೂಡ ಅಚ್ಚರಿಗೆ ಒಳಗಾಗಿದ್ದಾರೆ.
ಒಂದೇ ಒಂದು ಗಿಡಗಳು ಮಾರಾಟವಾಗದ ನರ್ಸರಿಗಳಲ್ಲಿ ಈಗ ಈ ಗಿಡಗಳ ಖರೀದಿಗೆ ಸಾಲುಗಟ್ಟಿ ನಿಲ್ಲುತ್ತಿರುವುದು ಜನ ಮರುಳೋ ಜಾತ್ರೆ ಮರುಳೋ ಎಂಬ ಮಾತನ್ನು ಮತ್ತೆ ನೆನಪಿಸುತ್ತಿದೆ. ಕ್ರಾಸ್ಸುಲಾ ಸಸ್ಯ ಒಮ್ಮೆ ನೆಟ್ಟರೆ ಅದರ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅಗತ್ಯವಿಲ್ಲ. ಏಕೆಂದರೆ ಇದಕ್ಕೆ ಹೆಚ್ಚು ನೀರು, ಗೊಬ್ಬರ ಏನು ಸಹ ಬೇಡ. ಹಾಗೆ ಇದನ್ನು ಚಿಕ್ಕ ಜಾಗದಲ್ಲಿ ಇಡಬಹುದು. ಇದನ್ನು ಮನೆ, ಕಚೇರಿಯ ಆಗ್ನೇಯ ಭಾಗದಲ್ಲಿ ಇಟ್ಟರೆ ಮಂಗಳಕರ ಹಾಗೆ ಹಣಕಾಸು ವಿಚಾರದಲ್ಲಿ ನಿಮಗೆ ಲಾಭ ಆಗಲಿದೆ ಎಂಬ ನಂಬಿಕೆ ಇದೆ.
ಸದ್ಯ ಈ ಗಿಡಗಳಿಗೆ ಕೇವಲ 50ರಿಂದ 100 ರೂಪಾಯಿಗೆ ಮಾರಾಟ ಮಾಡುತ್ತಿದ್ದರು ಆದ್ರೆ ಈಗ ಇದೇ ಗಿಡಗಳ ಬೆಲೆ 250 ರೂಪಾಯಿಗೂ ಹೆಚ್ಚು ನೀಡಿ ಖರೀದಿಸುವಂತೆ ಮಾಡಿದೆ. ಅಲ್ಲದೆ ಎಲ್ಲಿಯೂ ಸಿಗುತ್ತಿಲ್ಲ ಎಂಬುದು ಕೂಡ ನಾವು ನೋಡಬಹುದು. ವಾಸ್ತು ಶಾಸ್ತ್ರ ಮತ್ತು ಫೆಂಗ್ ಶೂಯಿ ಪ್ರಕಾರ ಕ್ರಾಸ್ಸುಲಾ ಸಸ್ಯವು ಮನೆಯಲ್ಲಿ ಧನಾತ್ಮಕ ಶಕ್ತಿಯ ಹರಿವನ್ನು ಹೆಚ್ಚಿಸುತ್ತದೆ, ಮಾನಸಿಕ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಇದು ಸುತ್ತಮುತ್ತಲಿನ ಪರಿಸರವನ್ನು ತಾಜಾಗೊಳಿಸುತ್ತದೆ ಮತ್ತು ಸುಂದರಗೊಳಿಸುತ್ತದೆ. ಕೆಲವರು ಇದನ್ನು ಅಲಂಕಾರಕ್ಕಾಗಿಯೂ ಬಳಸುತ್ತಾರೆ.



Click it and Unblock the Notifications