Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ದೀಪಾವಳಿಯಲ್ಲಿ ಮನೆಗೆ ಈ ವಸ್ತು ತನ್ನಿ: ಲಕ್ಷ್ಮಿ ಆಶೀರ್ವಾದ ನಿಮ್ಮ ಮೇಲಿರಲಿದೆ!
ದೀಪಾವಳಿ ಹತ್ತಿರವಾಗುತ್ತಿದೆ. ದೀಪಾವಳಿ ಅಂದ್ರೆ ಮನೆಯಲ್ಲಿ ಸಂಭ್ರಮ ಇರಲಿದೆ. ಹಾಗೆ ದೀಪಾವಳಿಯಲ್ಲಿ ನಾವು ಹಲವು ರೀತಿಯ ಸಂಪ್ರದಾಯಗಳ ಅನುಸರಿಸುತ್ತೇವೆ. ಹಾಗೆ ದೀಪಾವಳಿಯಲ್ಲಿ ನಾವು ಲಕ್ಷ್ಮಿ ಪೂಜೆ ಮಾಡುವುದು ಸಾಮಾನ್ಯ. ಮನೆಯಲ್ಲಿ ಸಂಪತ್ತು, ಐಶ್ವರ್ಯ ಹೆಚ್ಚಾಗಲಿ ಎಂಬ ಕಾರಣಕ್ಕೆ ನಾವು ಲಕ್ಷ್ಮಿ ದೇವಿಯ ಪೂಜಿಸುತ್ತೇವೆ.
ಈ ಬಾರಿ ಅಕ್ಟೋಬರ್ 20ರಂದು ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ಮನೆಯಲ್ಲಿ ಈ ದಿನ ಲಕ್ಷ್ಮಿ ದೇವಿಗೆ ವಿಶೇಷ ಪೂಜೆಗಳ ಮಾಡುವುದು ನೋಡಬಹುದು. ದೀಪಾವಳಿಯ ಆರಂಭದ ಪೂಜೆ ಇಲ್ಲಿಂದಲೇ ಆರಂಭವಾಗುತ್ತದೆ. ದೀಪಾವಳಿಯಲ್ಲಿ ಲಕ್ಷ್ಮಿ ವಿಶೇಷ ಆಶೀರ್ವಾದ ಮಾಡುತ್ತಾಳೆ ಎಂದು ಹೇಳಲಾಗುತ್ತದೆ.

ಇನ್ನು ಈ ಸಮಯದಲ್ಲಿ ನಾವು ಕೆಲವೊಂದು ವಸ್ತುವನ್ನು ಮನೆಗೆ ತಂದರೆ ಶುಭವಾಗುತ್ತದೆ ಎಂದು ಪುರಾಣಗಳು, ಶಾಸ್ತ್ರಗಳು ಹೇಳಿವೆ. ಅದ್ರಲ್ಲೂ ದೀಪಾವಳಿಯಲ್ಲಿ ಈ ವಸ್ತುವನ್ನು ಮನೆಗೆ ತಂದರೆ ವಿಶೇಷವಾಗಿ ಲಕ್ಷ್ಮಿ ದೇವಿಯ ಕೃಪೆಗೆ ನಾವು ಪಾತ್ರರಾಗಬಹುದಂತೆ. ಹಾಗಾದ್ರೆ ಯಾವೆಲ್ಲಾ ವಸ್ತುಗಳಿಂದ ಲಕ್ಷ್ಮಿ ದೇವಿ ಸಂತೃಪ್ತಳಾಗುತ್ತಾಳೆ. ಯಾವ ವಸ್ತು ದೀಪಾವಳಿಯಲ್ಲಿ ಮನೆಗೆ ತಂದರೆ ಶುಭವಾಗುತ್ತೆ ಎಂಬುದನ್ನು ನೋಡೋಣ.
- ಹೊಸ ಲಕ್ಷ್ಮಿ ಫೋಟೋ, ಗಣೇಶ ಮತ್ತು ಕುಬೇರರ ಮೂರ್ತಿಗಳು
- ಹಸಿ ಅರಿಶಿನ
- ದಕ್ಷಿಣವರ್ತಿ ಶಂಖ
- ಪೊರಕೆ
- ಹಸು
- ಚಿನ್ನ ಅಥವಾ ಬೆಳ್ಳಿ ನಾಣ್ಯಗಳು
- ವಾಹನ
- ವೀಳ್ಯದೆಲೆ, ಬಿಲ್ವ ಮತ್ತು ತುಳಸಿ ಎಲೆಗಳು
- ಕಮಲ ಬೀಜ ಮತ್ತು ಕಮಲದ ಹೂವು
- ಐದು ದೊಡ್ಡ ಮಣ್ಣಿನ ದೀಪಗಳು ಮತ್ತು 25 ಸಣ್ಣ ಮಣ್ಣಿನ ದೀಪಗಳು
ದೀಪಾವಳಿಯ ಸಮಯದಲ್ಲಿ ಈ ಎಲ್ಲಾ ವಸ್ತುಗಳನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗಿದೆ. ಶಾಸ್ತ್ರದ ಪ್ರಕಾರ, ಹಬ್ಬಗಳ ಮೊದಲು ಈ ವಸ್ತುಗಳ ಮನೆಗೆ ತರಬೇಕು ಎಂದು ಹೇಳಲಾಗಿದೆ. ಲಕ್ಷ್ಮಿ, ಗಣೇಶ ಮತ್ತು ಕುಬೇರರ ಹೊಸ ವಿಗ್ರಹಗಳು ದೀಪಾವಳಿ ಪೂಜೆಗಾಗಿ ಖರೀದಿಸುವುದು ಉತ್ತಮ ಶುಭ ತರಲಿದೆ. ನೀವು ಚಿನ್ನ ಅಥವಾ ಬೆಳ್ಳಿ ವಿಗ್ರಹಗಳನ್ನು ಸಹ ಖರೀದಿಸಬಹುದು. ಮಣ್ಣಿನ ಮೂರ್ತಿಗಳನ್ನು ಕೂಡ ಖರೀದಿಸಬಹುದು.
ಹಾಗೆ ದೀಪಾವಳಿಯ ಸಮಯದಲ್ಲಿ ಹಸಿ ಅರಿಶಿನವನ್ನು ಖರೀದಿಸುವುದು ಶುಭವೆಂದು ಪರಿಗಣಿಸಲಾಗುತ್ತದೆ. ದೀಪಾವಳಿಯಂದು ಲಕ್ಷ್ಮಿ ಪೂಜೆಯ ಸಮಯದಲ್ಲಿ ಈ ಅರಶಿಣವನ್ನು ಬಳಸುವುದು ಅದೃಷ್ಟಕರ ಎಂದು ಹೇಳಲಾಗುತ್ತದೆ. ಹಾಗೆ ಪೂಜೆಯ ಸಮಯದಲ್ಲಿ ದಕ್ಷಿಣವರ್ತಿ ಶಂಖ ಖರೀದಿಸುವುದು ಕೂಡ ಅದೃಷ್ಟಕರ ಎಂದು ಹೇಳಲಾಗಿದೆ. ಇದನ್ನು ಪೂಜಾ ಕೋಣೆಯಲ್ಲಿ ಇರಿಸಿ ಪೂಜೆ ಮಾಡುವುದು ಶುಭ ಎಂದು ಹೇಳಲಾಗುತ್ತದೆ. ಹಾಗೆ ಈ ದಿನದಂದು ಹೊಸ ಪೊರಕೆಯನ್ನು ಮನೆಗೆ ತರುವುದರಿಂದ ಲಕ್ಷ್ಮಿ ದೇವಿ ಮನೆಗರ ಬರುವಳು ಎಂದು ನಂಬಲಾಗಿದೆ. ಹಾಗೆ ಹಸುಗಳನ್ನು ಈ ದಿನ ಖರೀದಿಸಿ ತರುತ್ತಾರೆ, ಇದು ಮನೆಗೆ ಐಶ್ವರ್ಯ ತರಲಿದೆ ಎನ್ನಲಾಗಿದೆ. ಇದು ಲಕ್ಷ್ಮಿ ದೇವಿಯ ಪ್ರತೀಕ ಹಾಗೆ ಮುಕ್ಕೋಟಿ ದೇವರ ಆವಾಸ ಸ್ಥಾನ ಎಂಬ ನಂಬಿಕೆಯ ಹಿನ್ನೆಲೆ ಈ ದಿನ ಖರೀದಿಸಲಾಗುತ್ತದೆ.
ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ದೀಪಾವಳಿಯಂದು ಪಫ್ಡ್ ರೈಸ್ ಮತ್ತು ಬಾತಾಶವನ್ನು ಖರೀದಿಸಬೇಕು ಎಂದು ನಂಬಲಾಗಿದೆ. ಚಿನ್ನ ಅಥವಾ ಬೆಳ್ಳಿ ನಾಣ್ಯಗಳ ಖರೀದಿಸುವುದು ಕೂಡ ನಿಮ್ಮ ಸಂಪತ್ತು ಹೆಚ್ಚಾಗಲು ಕಾರಣವಾಗಲಿದೆ. ಇದಲ್ಲದೆ ವೀಳ್ಯದೆಲೆ, ಬಿಲ್ವ ಮತ್ತು ತುಳಸಿ ಎಲೆಗಳು ಕೂಡ ಈ ದಿನ ಮನೆಗೆ ತರುವುದು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ.
ಹಾಗೆ ದೀಪಾವಳಿಯ ಸಮಯದಲ್ಲಿ 5 ದೊಡ್ಡ ಕಣ್ಣಿನ ದೀಪಗಳು, ಹಾಗೆ 25 ಮಣ್ಣಿನ ದೀಪಗಳ ಖರೀದಿಸಿ, ಅಲಂಕರಿಸುವುದು ಮನೆಯ ಸಂಪತ್ತು ವೃದ್ಧಿಯಾಗಲಿದೆ ಎಂದು ಹೇಳಲಾಗಿದೆ. ಹಾಗೆ ಲಕ್ಷ್ಮಿ ಪೂಜೆಯ ದಿನ ಅಥವಾ ದೀಪಾವಳಿಯ ಸಮಯದಲ್ಲಿ ಶುಭವಾಗಲಿದೆ.



Click it and Unblock the Notifications