Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಮನೆಯಲ್ಲಿ ನಕರಾತ್ಮಕ ಶಕ್ತಿ ದೂರ ಮಾಡಿ ಧನಾತ್ಮಕ ಶಕ್ತಿ ಹೆಚ್ಚಿಸಲು ಫಿಶ್ ಅಕ್ವೇರಿಯಂ ಯಾವ ದಿಕ್ಕಿನಲ್ಲಿಡಬೇಕು?
ಬಹುತೇಕ ಮನೆಗಳಲ್ಲಿ ಫಿಶ್ ಅಕ್ವೇರಿಯಂ ಇರುತ್ತದೆ, ಇದನ್ನು ಹಾಗೆಯೇ ಇಡುವುದಕ್ಕಿಂತ ವಾಸ್ತು ಪ್ರಕಾರ ಇಟ್ಟರೆ ಮನೆಗೆ ಇನ್ನೂ ಒಳ್ಳೆಯದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. .
ಅಕ್ವೇರಿಯಂ ಅನ್ನು ವಾಸ್ತು ಶಾಸ್ತ್ರ ಪ್ರಕಾರ ಇಡದಿದ್ದರೆ, ನಾವು ಇಟ್ಟ ಅಕ್ವೇರಿಯಂನ ಸ್ಥಾನ ಸರಿಯಾಗಿ ಇರದಿದ್ದರೆ ಇದರಿಂದ ವಾಸ್ತು ದೋಷ ಉಂಟಾಗುವುದು, ಇದರಿಂದ ಮನೆಯ ಸಂತೋಷ ಹಾಳಾಗುವುದು,ಮನೆಯ ಸದಸ್ಯರ ನಡುವೆ ಹೊಂದಾಣಿಕೆ ಹಾಳಾಗುವುದು,ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ ಹೀಗೆ ವಿವಿಧ ಬಗೆಯ ಸಮಸ್ಯೆ ಉಂಟಾಗಬಹುದು. ಹಾಗಾಗಿ ಯಾವತ್ತೂ ಅಕ್ವೇರಿಯಂ ಇಡುವಾಗ ವಾಸ್ತು ಪ್ರಕಾರ ಇಟ್ಟರೆ ಒಳ್ಳೆಯದು.

ಯಾವ ದಿಕ್ಕಿನಲ್ಲಿಡಬೇಕು: ಅಕ್ವೇರಿಯಂ ಅನ್ನು ಮನೆಯ ಹಾಲ್‌ನ ಈಶಾನ್ಯ ಮೂಲೆಯಲ್ಲಿ ಇಡಬೇಕು, ಇದರಿಂದ ಮನೆಯವರ ಉತ್ತಮ ಬಾಂಧವ್ಯವಿರುತ್ತದೆ, ಸಂಬಂಧಗಳು ತುಂಬಾ ಚೆನ್ನಾಗಿರುತ್ತದೆ. ಇನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಟ್ಟರೆ ಆರ್ಥಿಕವಾಗಿ ಉತ್ತಮ ಪ್ರಯೋಜನ ನೀಡುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.ಹಾಗಾಗಿ ಮನೆಯ ಹಾಲ್‌ನಲ್ಲಿ ಅಕ್ವೇರಿಯಂ ಇಡುವಾಗ ಅದರ ದಿಕ್ಕು ಕೂಡ ಮುಖ್ಯವಾಗುತ್ತದೆ. ಸರಿಯಾದ ದಿಕ್ಕಿನಲ್ಲಿ ಅಕ್ವೇರಿಯಂ ಇದ್ದರೆ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುವುದು.
ಅಕ್ವೇರಿಯಂ ಎಲ್ಲಿಡಬಾರದು?
ಅಕ್ವೇರಿಯಂ ಅನ್ನು ಕಿಚನ್‌ನಲ್ಲಿಇಡಬಾರದು, ಕಿಚನ್‌ನಲ್ಲಿ ಅಕ್ವೇರಿಯಂ ಇಟ್ಟರೆ ಮನೆ ನೆಮ್ಮದಿ ಹಾಳಾಗುವುದು, ಬೆಡ್ ರೂಂನಲ್ಲಿಯೂ ಅಕ್ವೇರಿಯಂ ಇಡಬರದು ಬಳಸದೇ ಇರುವ ಬೆಡ್‌ರೂಂನಲ್ಲಿ ಇಡಬಹುದು.
ಪ್ರಮುಖಧ್ವಾರದ ಎಡ ಭಾಗದಲ್ಲಿ ಅಕ್ವೇರಿಯಂ ಇರಬೇಕು
ಮನೆಗೆ ಬರುವಾಗ ಮುಖ್ಯಧ್ವಾರದ ಎಡ ಭಾಗದಲ್ಲಿಅಕ್ವೇರಿಯಂ ಇದ್ದರೆ ಒಳ್ಳೆಯದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ, ಹೀಗೆ ಇಡುವುದರಿಂದ ಮನೆಯಲ್ಲಿ ನೆಮ್ಮದಿ ಹೆಚ್ಚಾಗುವುದು. ಅಲ್ಲದೆ ಮನೆಯ ಹಾಲ್‌ನಲ್ಲಿ ಕುಳಿತಾಗ ಆ ಅಕ್ವೇರಿಯಂನ ಮೀನುಗಳನ್ನು ನೋಡಿದಾಗ ಮಾನಸಿಕ ಒತ್ತಡ ಕೂಡ ಕಡಿಮೆಯಾಗುವುದು.
ಮೀನು ಸತ್ತು ಹೋದರೆ ಏನರ್ಥ?
ಅಕ್ವೇರಿಯಂನಲ್ಲಿದ್ದ ಮೀನು ಸತ್ತು ಹೋದರೆ ಮನೆಗೆ ಬಂದ ಕಷ್ಟ ಮೀನು ಕೊಂಡೋಯ್ತು ಎಂದು ನಂಬಲಾಗಿದೆ. ಒಂದು ಮೀನು ಸತ್ತರೆ ಆ ಮೀನು ಬದಲಿಗೆ ಬೇರೆ ಮೀನು ತಂದು ಬಿಡಿಬೇಕು. ಮೀನು ಸತ್ತು ಹೋದರೆ ಆತಂಕ ಪಡಬೇಡಿ. ಕೆಲವರಿಗೆ ಸಾಕಿದ ಮೀನಿನ ಜೊತೆಗೆ ಕೂಡ ಒಂದು ಒಳ್ಳೆಯ ಸಂಬಂಧ ಇರುತ್ತದೆ. ಆ ಮೀನು ನಿಮ್ಮನ್ನು ನೆಗೆಟಿವ್ ಎನರ್ಜಿಯಿಂದ ರಕ್ಷಣೆ ನೀಡಿತು, ದೊಡ್ಡದಾಗಿ ಬರಬೇಕಾಗಿರುವುದು ಚಿಕ್ಕದಾಗಿ ಹೋಯ್ತು ಎಂದು ಭಾವಿಸಿ.
ಫಿಶ್ ಅಕ್ವೇರಿಯಂ ದೊಡ್ಡದಿದ್ದರೆ
ಫಿಶ್ ಅಕ್ವೇರಿಯಂ ಗಾತ್ರ ದೊಡ್ಡದಿದ್ದರೆ ಪೂರ್ವದ ಕಡೆ ಇಟ್ಟರೆ ಋಣಾತ್ಮಕ ಶಕ್ತಿ ತಡೆಗಟ್ಟಬಹುದು ಎಂದು ಹೇಳಲಾಗುವುದು. ಈ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಸಂಪತ್ತು, ಸಮೃದ್ಧಿ ಹೆಚ್ಚಾಗುವುದು.
ಅಕ್ವೇರಿಯಂನಲ್ಲಿ ಎಷ್ಟು ಮೀನಿದ್ದರೆ ಒಳ್ಳೆಯದು?
ಅಕ್ವೇರಿಯಂನಲ್ಲಿ ಒಂದು ಕಪ್ಪು 8 ಗೋಲ್ಡನ್ ಬಣ್ಣದ ಒಟ್ಟು 9 ಮೀನುಗಳಿದ್ದರೆ ಶುಭ ಎಂದು ಪರಿಗಣಿಸಲಾಗಿದೆ.
ಫಿಶ್ ಅಕ್ವೇರಿಯಂ ಬದಲಿಗೆ ಮೀನಿನ ಪ್ರತಿಮೆ ಇಡಬಹುದು
ನಿಮಗೆ ಅಕ್ವೇರಿಯಂ ಇಡುವುದು ಇಷ್ಟವಿಲ್ಲ ಅಥವಾ ಅಕ್ವೇರಿಯಂ ನಿಭಾಯಿಸುವುದು ಕಷ್ಟ ಎಂದಾದರೆ ಮೀನಿನ ಆಕೃತಿಯನ್ನು ಪೂರ್ವ ಅಥವಾ ಈಶಾನ್ಯ ಭಾಗದಲ್ಲಿ ಇಟ್ಟರೆ ಸಾಕು, ಋಣಾತ್ಮಕ ಶಕ್ತಿ ಕಡಿಮೆಯಾಗುವುದು.
ಅನೇಕ ಬಗೆಯ ಮೀನುಗಳು ದೊರೆಯುತ್ತದೆ, ಶತ್ರು ಮೀನುಗಳನ್ನು ಜೊತೆಯಾಗಿ ಬಿಡಬೇಡಿ, ಚೆನ್ನಾಗಿ ಹೊಂದಿಕೊಂಡುಹೋಗುವ ಮೀನನ್ನು ಮಾತ್ರ ಜೊತೆಗೆ ಬಿಡಿ.
ಮೀನಿನ ಅಕ್ವೇರಿಯಂನಲ್ಲಿ ಹೂವುಗಳು, ಬಣ್ಣದ ಕಲ್ಲುಗಳು ಇವುಗಳನ್ನು ಹಾಕಿಡಬಹುದು. ಅಕ್ವೇರಿಯಂ ನೋಡಲು ಸುಂದರವಾಗಿದ್ದಷ್ಟು ಮನಸ್ಸಿಗೆ ಹಿತ ಅನಿಸುವುದು.



Click it and Unblock the Notifications