Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
₹30 ಸಾವಿರ ಕೋಟಿ ಮೌಲ್ಯದ ಕಂಪನಿ ಕಟ್ಟಿದ ರಾಜ್ಯದ ಉದ್ಯಮಿಗೆ ಸ್ಟ್ರೋಕ್.! ಸ್ಟ್ರೋಕ್ ಲಕ್ಷಣವೇನು?
ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಯಾರು ಊಹಿಸದ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಹೃದಯಾಘಾತ, ಶುಗರ್, ಬಿಪಿ, ಸ್ಥೂಲಕಾಯತೆ ಹೀಗೆ ಹತ್ತಾರು ರೀತಿಯ ಅವಧಿ ಪೂರ್ವ ಆರೋಗ್ಯ ಸಮಸ್ಯೆಗಳಿಗೆ ಒಳಗಾಗುತ್ತಿರುವುದು ಆತಂಕ ಹೆಚ್ಚಿಸಿದೆ. ಇದೀಗ ಈ ಸಾಲಿಗೆ ಪಾರ್ಶ್ವವಾಯು ಸೇರಿಕೊಂಡಿದೆ.
ಹೌದು ಆರೋಗ್ಯವಂತ ಯುವ ಸಮುದಾಯದಲ್ಲಿ ಪಾರ್ಶ್ವವಾಯು (ಸ್ಟ್ರೋಕ್) ಹೆಚ್ಚಾಗುತ್ತಿದೆ. ಇದೀಗ ಯುವ ಉದ್ಯಮಿ ಝೆರೋಧಾ ಸಂಸ್ಥೆ ಕಟ್ಟಿ ಬೆಳೆಸಿದ್ದ ಸಹ ಸಂಸ್ಥಾಪಕ ನಿತಿನ್ ಕಾಮತ್ ಸ್ಟ್ರೋಕ್‌ಗೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾದರೆ ಮೊದಲು ಯಾರು ನಿತಿನ್ ಕಾಮತ್, ಯಾವ ಸಂಸ್ಥೆ ಕಟ್ಟಿ ಬೆಳೆಸಿದರು, ಸ್ಟ್ರೋಕ್ ಉಂಟಾಗಲು ಕಾರಣವೇನು ಎಂಬ ಕುರಿತು ನಾವಿಂದು ತಿಳಿದುಕೊಳ್ಳೋಣ.

ನಿತಿನ್ ಕಾಮತ್ ರಾಜ್ಯದ ಶಿವಮೊಗ್ಗ ಜಿಲ್ಲೆಯವರು, ಅಂದಾಜು 540 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದು, 30 ಸಾವಿರ ಕೋಟಿ ಮೌಲ್ಯದ ಝೆರೋಧಾ ಕಂಪನಿ ಕಟ್ಟಿದ್ದಾರೆ. ಇದೊಂದು ಸ್ಟಾಕ್ ಮಾರ್ಕೆಟ್ ಬ್ರೋಕರ್ ಆಫರಿಂಗ್ ಆಪ್ ಆಗಿದೆ. ಇಲ್ಲಿ ನೀವು ಹಣ ಹೂಡಿಕೆ ಮಾಡಬಹುದು. ಈ ಸಂಸ್ಥೆಯನ್ನು ಕಾಮತ್ ಸಹೋದರರು ಕಟ್ಟಿ ಬೆಳೆಸಿದ್ದು ಇಂದು ಸಾವಿರಾರು ಕೋಟಿ ಮೌಲ್ಯ ಹೊಂದಿದೆ.
ಆರೋಗ್ಯವಾಗಿದ್ದ ನಿತಿನ್ ಕಾಮತ್ ಕಳೆದ 6 ವಾರಗಳ ಹಿಂದೆ ಸಣ್ಣ ಸ್ಟ್ರೋಕ್‌ಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ತಿಳಿಸಿದ್ದರು. ಈ ಸುದ್ದಿ ಭಾರೀ ಸದ್ದು ಮಾಡಿತು. ಯುವ ಉದ್ಯಮಿ ಆರೋಗ್ಯವಂತನಿಗೆ ಸ್ಟ್ರೋಕ್ ಆಗಲು ಹೇಗೆ ಸಾಧ್ಯ ಎಂಬ ಚರ್ಚೆ ಆರಂಭವಾಯಿತು. ಈಗ ಅವರು ಚೇತರಿಸಿಕೊಳ್ಳುತ್ತಿದ್ದು, ಇನ್ನು ಕೆಲ ದಿನದಲ್ಲಿ ಎಂದಿನಂತಾಗುತ್ತಾರೆ.
ಸ್ಟ್ರೋಕ್ ಹೇಗೆ ಸಂಭವಿಸುತ್ತದೆ
ಸ್ಟ್ರೋಕ್ ಅಥವಾ ಪಾರ್ಶ್ವ ವಾಯುವಿನಲ್ಲಿ ಎರಡು ವಿಧಗಳಿವೆ. ಇಸ್ಕಿಮಿಕ್ ಸ್ಟ್ರೋಕ್ ಹಾಗೂ ಹೇಮರಾಜಿಕ್ ಸ್ಟ್ರೋಕ್. ಇಸ್ಕಿಮಿಕ್ ಸ್ಟ್ರೋಕ್ ನಲ್ಲಿ ಮೆದುಳಿನ ಒಂದು ಭಾಗದಲ್ಲಿ ರಕ್ತದ ಹರಿವು ನಿಂತು ಹೋಗಬಹುದು ಅಥವಾ ರಕ್ತದ ಹರಿವಿಗೆ ಅಡಚಣೆ ಉಂಟಾಗಬಹುದು ಆದರೆ ಈ ರೋಗ ಲಕ್ಷಣವನ್ನು ನೀವು ಮೊದಲೇ ಗುರುತಿಸಿ, ಅದಕ್ಕೆ ಚಿಕಿತ್ಸೆ ನೀಡಬಹುದು ತಕ್ಷಣಕ್ಕೆ ಕೊಡುವ ಕೆಲವು ಚುಚ್ಚುಮದ್ದುಗಳು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಇನ್ನು ಎರಡನೇ ವಿಧವಾಗಿರುವ ಹೇಮರಾಜಿಕ್ ಸ್ಟ್ರೋಕ್ ತಕ್ಷಣ ಸಂಭವಿಸುವಂತದ್ದು ಇದಕ್ಕೆ ತುರ್ತು ಶಸ್ತ್ರ ಚಿಕಿತ್ಸೆಯ ಅಗತ್ಯವಿರುತ್ತದೆ ಒಂದು ವೇಳೆ ಶಸ್ತ್ರಚಿಕಿತ್ಸೆ ಮಾಡಿಸದೆ ಇದ್ದಲ್ಲಿ ಮೆದುಳಿನಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯಿಂದ ವ್ಯಕ್ತಿ ಮರಣ ಹೊಂದುವ ಸಾಧ್ಯತೆ ಇರುತ್ತದೆ.
ಪಾರ್ಶ್ವ ವಾಯು ಸಂಭವಿಸುವುದಕ್ಕೆ ಕೆಲವು ಪ್ರಮುಖ ಕಾರಣಗಳು ಇವೆ. ಮೊದಲನೆಯದಾಗಿ ಮೆದುಳಿನ ಮೂಲಕ ರಕ್ತದ ಹರಿವಿನ ಬದಲಾವಣೆ ಪಾರ್ಶ್ವವಾಯು ಸಂಭವಿಸುವುದಕ್ಕೆ ಮುಖ್ಯ ಕಾರಣವಾಗಿರುತ್ತದೆ. ಆಮ್ಲಜನಕ ಮತ್ತು ಪೋಷಕಾಂಶಗಳು ಮೆದುಳಿನ ಕೋಶಕ್ಕೆ ತಲುಪಲು ರಕ್ತದ ಅರಿವು ಸಹಾಯ ಮಾಡುತ್ತದೆ ಆದರೆ ಈ ಹರಿವಿನಲ್ಲಿ ಅಡಚಣೆ ಉಂಟಾದಾಗ ಜೀವಕೋಶಗಳಿಗೆ ಆಮ್ಲಜನಕದ ಸರಬರಾಜು ಆಗುವುದಿಲ್ಲ ಅಂತಹ ಸಂದರ್ಭದಲ್ಲಿ ಪಾರ್ಶ್ವವಾಯು ಉಂಟಾಗುತ್ತದೆ.
ಆತಂಕಕಾರಿ ವಿಷಯವೇನೆಂದರೆ, ಇತ್ತೀಚಿಗೆ ಭಾರತದಲ್ಲಿ 19 ಲಕ್ಷಕ್ಕೂ ಹೆಚ್ಚು ಪಾರ್ಶ್ವವಾಯು ಪ್ರಕರಣಗಳು ದಾಖಲಾಗಿವೆ. ಎಐಐಎಂಎಸ್ ವರದಿಯ ಪ್ರಕಾರ ಭಾರತದಲ್ಲಿ ಅಂದಾಜು ಸುಮಾರು 40 ಸೆಕೆಂಡ್ ಗಳಿಗೆ ಒಬ್ಬ ವ್ಯಕ್ತಿ ಪಾರ್ಶ್ವವಾಯು ರೋಗಕ್ಕೆ ತುತ್ತಾಗುತ್ತಿದ್ದಾನೆ. ಅಲ್ಲದೆ ಪ್ರತಿ ನಾಲ್ಕು ನಿಮಿಷಗಳಿಗೊಮ್ಮೆ ಪಾರ್ಶ್ವವಾಯುವಿನಿಂದ ಒಬ್ಬ ವ್ಯಕ್ತಿಗೆ ಸಾವು ಕೂಡ ಸಂಭವಿಸುತ್ತದೆ ಎನ್ನುವುದು ವರದಿಯಲ್ಲಿ ಬಹಿರಂಗವಾಗಿದೆ.
ಪಾರ್ಶ್ವವಾಯುವಿನ ಲಕ್ಷಣಗಳೇನು?
ದೇಹದ ಯಾವುದೋ ಒಂದು ಭಾಗ ಮರಗಟ್ಟಿದಂತಾಗುವುದು
ಪಾರ್ಶ್ವವಾಯು ಸಂಭವಿಸಲಿದೆ ಎಂದು ಸೂಚಿಸುವ ಪ್ರಮುಖ ಲಕ್ಷಣವೆಂದರೆ ದೇಹದ ಭಾಗ ಮರಗಟ್ಟಿದಂತಾಗುವುದು, ಕಾಲು, ಕೈ ಅಥವಾ ಮುಖದಲ್ಲಿ ವ್ಯತ್ಯಾಸ ಕಂಡು ಬರುವುದು. ನಗುವುದು ಕಷ್ಟವಾಗುವುದು, ತುಟಿ ಒಂದು ಕಡೆಗೆ ತಿರುಗುತ್ತದೆ.
ಮಾತನಾಡಲು ಕಷ್ಟವಾಗುವುದು
ಮಾತು ತೊದಲುವುದು, ಮಾತನಾಡಲು ಕಷ್ಟವಾಗುವುದು ಇದು ಪಾರ್ಶ್ವವಾಯುವಿನ ಲಕ್ಷಣವಾಗಿದೆ. ಒಂದು ಸರಳ ಪದ ಹೇಳಲು ಕಷ್ಟವಾಗುವುದು, ಈ ರೀತಿಯ ಲಕ್ಷಣಗಳು ಕಂಡು ಬಂದರೆ ಅದು ಪಾರ್ಶ್ವವಾಯು ಲಕ್ಷಣವಾಗಿದೆ.
ಗೊಂದಲ
ವ್ಯಕ್ತಿಗೆ ತುಂಬಾನೇ ಗೊಂದಲ ಉಂಟಾಗುವುದು, ಎರಡು ಕೈಗಳನ್ನು ಎತ್ತಲು ಕೂಡ ಕಷ್ಟವಾಗುವುದು, ನೀವು ಏನಾದರೂ ಹೇಳಿದರೆ ಅದು ಅವರಿಗೆ ಅರ್ಥ ಆಗಲ್ಲ, ಮೈ ತುಂಬಾ ಬೆವರುತ್ತದೆ.
ಕಣ್ಣುಗಳು ಮಂಜಾಗುವುದು
ಕಣ್ಣುಗಳು ಇದ್ದಕ್ಕಿದ್ದಂತೆ ಮಂಜಾಗುವುದು, ತಲೆಸುತ್ತು ಕಂಡು ಬರುವುದು. ದೇಹದ ಬ್ಯಾಲೆನ್ಸ್ ತಪ್ಪುವುದು. ನಡೆದಾಡಲು ಕಷ್ಟವಾಗುವುದು.
ಇದ್ದಕ್ಕಿದ್ದಂತೆ ತುಂಬಾ ತಲೆನೋವು ಕಂಡು ಬಂದರೆ ಮೆದುಳಿನಲ್ಲಿ ರಕ್ತಸ್ರಾವ ಉಂಟಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications