Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಿಂತೆ ಬಿಡಿ.. ಕೊಬ್ಬು ಕರಗಿಸಬೇಕೆ? ಜಸ್ಟ್ ಈ ತರಕಾರಿಗಳನ್ನು ತಿನ್ನಿ
ಎಚ್ಚರ..! ದಪ್ಪಗಾಗುವ ಭೀತಿಯಿಂದ ಆಹಾರ ತಿನ್ನುವುದನ್ನೇ ಬಿಡಬೇಡಿ. ನಿಮ್ಮ ದೇಹದ ತೂಕ ಹೆಚ್ಚಾಗಿದೆ ಎಂದರೆ ಅದು ಕೊಲೆಸ್ಟ್ರಾಲ್ (cholesterol) ಪ್ರಮಾಣದಿಂಲದಲೇ ಆಗಿರುತ್ತೆ. ಹೌದು, ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ಎದುರಿಸುತ್ತಿರುವ ಆರೋಗ್ಯ ಸಮಸ್ಯೆ ಎಂದರೆ, ಅದು ಕೊಬ್ಬು. ಅನೇಕರು ಕೊಬ್ಬು (Fat) ಕಡಿಮೆ ಮಾಡಲು ಇನ್ನಿಲ್ಲದ ಕಸರತ್ತು ಮಾಡುತ್ತಾರೆ. ಕೆಲವರಂತೂ ಆಹಾರ ತಿನ್ನುವುದನ್ನೇ ಕಡಿಮೆ ಮಾಡ್ತಾರೆ. ಈ ಬಗ್ಗೆ ಚಿಂತೆ ಬೇಡ. ಕೊಲೆಸ್ಟ್ರಾಲ್ ಮಟ್ಟವನ್ನು ಆರೋಗ್ಯಕರ ರೀತಿಯಲ್ಲಿ ಕಡಿಮೆ ಮಾಡಬಹುದು. ನೀವು, ಜಸ್ಟ್ ನಾವು ಹೇಳುವ ತರಕಾರಿಗಳನ್ನು (Fat Burn Vegetables) ತಿಂದರೆ, ಕೊಬ್ಬು ಕರಗುತ್ತದೆ.
ನಿಮ್ಮ ಜೀವನಶೈಲಿಯಲ್ಲಿ ಬದಲಾವಣೆಗಳನ್ನು ಮಾಡದೆ ಕೆಲವೇ ಆಹಾರಗಳನ್ನು ಸೇವಿಸುವ ಮೂಲಕ ಉತ್ತಮ ಫಲಿತಾಂಶ ನಿರೀಕ್ಷಿಸುವುದು ಸರಿಯಲ್ಲ. ಹೆಚ್ಚು ಸಿಹಿತಿಂಡಿಗಳು ಮತ್ತು ಹುರಿದ ಆಹಾರವನ್ನು ತಿನ್ನುವುದು, ಮದ್ಯಪಾನ ಮಾಡುವುದು ಮತ್ತು ಗಂಟೆಗಟ್ಟಲೆ ಕುಳಿತುಕೊಳ್ಳುವುದು ಇನ್ನಿತರ ನಿಮ್ಮ ಅಭ್ಯಾಸಗಳನ್ನು ನೀವು ಬದಲಾಯಿಸದಿದ್ದರೆ, ನಿಮ್ಮ ದೇಹದಿಂದ ಹೆಚ್ಚುವರಿ ಕೊಬ್ಬನ್ನು ತೆಗೆದುಹಾಕಲು ನಿಮಗೆ ಸಾಧ್ಯವಾಗುವುದಿಲ್ಲ. ನೀವು ಅಧಿಕ ತೂಕ (weight) ಹೊಂದಿದ್ದರೆ, ನಿಮ್ಮ ಹೊಟ್ಟೆಯ ಸುತ್ತ ಸಂಗ್ರಹವಾಗಿರುವ ಕೊಬ್ಬನ್ನು ಕಡಿಮೆ ಮಾಡಲು ಬಯಸಿದರೆ, ಕೆಲವು ಬದಲಾವಣೆ ಅತ್ಯಗತ್ಯ.

ನೀವು ಕೆಲವೊಮ್ಮೆ ಆರೋಗ್ಯಕರ ಅಭ್ಯಾಸಗಳ ಹೊರತಾಗಿಯೂ ಹೊಟ್ಟೆಯ ಸುತ್ತಲೂ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡುವುದು ಕಷ್ಟ. ಈ ಸಂದರ್ಭಗಳಲ್ಲಿ, ಕೆಲವು ತರಕಾರಿಗಳು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ತರಕಾರಿಗಳನ್ನು ಬಳಸುವುದರಿಂದ ನಿಮ್ಮ ದೇಹವು ಆರೋಗ್ಯವಾಗಿರುತ್ತದೆ. ಅಲ್ಲದೆ, ಅವುಗಳ ಕಡಿಮೆ ಕ್ಯಾಲೋರಿಗಳು ಮತ್ತು ಹೆಚ್ಚಿನ ಫೈಬರ್ ಅಂಶದಿಂದಾಗಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ಕೊಬ್ಬು ಕಡಿಮೆ ಮಾಡುವ ತರಕಾರಿಗಳಿವು
ಹಸಿರು ತರಕಾರಿಗಳು
ಹಸಿರು ತರಕಾರಿಗಳಲ್ಲಿ (ಗ್ರೀನ್ಸ್) ಕ್ಯಾಲೋರಿಗಳು ತುಂಬಾ ಕಡಿಮೆ. ಆದರೆ, ಫೈಬರ್ ಅಂಶ ಸಮೃದ್ಧವಾಗಿದೆ. ಇದು ನಿಮ್ಮ ಹೊಟ್ಟೆಯನ್ನು ತುಂಬಿದಂತೆ ಮಾಡುತ್ತದೆ. ಹಾಗೆಯೇ ಕಡಿಮೆ ತಿನ್ನುವಂತೆ ಮಾಡುತ್ತದೆ. ಪಾಲಕ್ ಮತ್ತು ಮೆಂತ್ಯದಂತಹ ಹಸಿರು ತರಕಾರಿಯಲ್ಲಿ ವಿಟಮಿನ್ ಎ, ಸಿ ಮತ್ತು ಕೆ ನಂತಹ ಪೋಷಕಾಂಶಗಳು ಸಮೃದ್ಧವಾಗಿವೆ. ಇವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನಿಮ್ಮ ಒಟ್ಟಾರೆ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಹಸಿರು ತರಕಾರಿಗನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹವು ನಿರ್ವಿಷಗೊಳ್ಳುತ್ತದೆ.
ಕ್ರೂಸಿಫೆರಸ್ ತರಕಾರಿಗಳು
ಕ್ರೂಸಿಫೆರಸ್ ತರಕಾರಿಗಳು ಫೈಬರ್ ಮತ್ತು ನೀರಿನ ಅಂಶದಲ್ಲಿ ಸಮೃದ್ಧವಾಗಿವೆ. ನೀವು ಬ್ರೊಕೊಲಿ, ಹೂಕೋಸು, ಎಲೆಕೋಸು ಮತ್ತು ಬ್ರಸೆಲ್ಸ್ ಮೊಗ್ಗುಗಳಂತಹ ತರಕಾರಿಗಳನ್ನು ಸೇವಿಸಬಹುದು. ತೂಕ ನಷ್ಟಕ್ಕೆ ಉತ್ತಮ ಚಯಾಪಚಯ ಕ್ರಿಯೆ ನಿರ್ಣಾಯಕವಾಗಿದೆ. ಇವು ನಿಮ್ಮನ್ನು ಹೊಟ್ಟೆ ತುಂಬಿಸಿ ನಿಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತವೆ. ಈ ತರಕಾರಿಗಳು ದೇಹದಲ್ಲಿನ ಕೆಟ್ಟ ಕೊಬ್ಬನ್ನು ಸುಡಲು ಮತ್ತು ಒಳ್ಳೆಯ ಕೊಬ್ಬನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಹೆಚ್ಚು ನೀರಿನ ಅಂಶವಿರುವ ತರಕಾರಿಗಳು
ಹೆಚ್ಚು ನೀರಿನ ಅಂಶವಿರುವ ತರಕಾರಿಗಳಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ. ಸೋರೆಕಾಯಿ, ಸೌತೆಕಾಯಿ, ಕುಂಬಳಕಾಯಿ, ಬೀಟ್ರೂಟ್ ಮತ್ತು ಕಿಡ್ನಿ ಬೀನ್ಸ್ ಇತ್ಯಾದಿ ತರಕಾರಿಗಳು ಅತಿ ಹೆಚ್ಚು ನೀರಿನ ಅಂಶವನ್ನು ಹೊಂದಿರುತ್ತವೆ. ಈ ತರಕಾರಿಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಬಳಸಿದರೆ, ನಿಮ್ಮ ಹೊಟ್ಟೆ ತುಂಬಿದ್ದರೂ ಸಹ ನೀವು ಹೆಚ್ಚುವರಿ ಕ್ಯಾಲೋರಿಗಳನ್ನು ಪಡೆಯುವುದಿಲ್ಲ. ತೂಕ ಇಳಿಸಿಕೊಳ್ಳಲು ಇದು ತುಂಬಾ ಪರಿಣಾಮಕಾರಿ ಮಾರ್ಗ. ವಿಶೇಷವಾಗಿ ಬೇಸಿಗೆಯಲ್ಲಿ, ಇವು ದೇಹಕ್ಕೆ ಅಗತ್ಯವಿರುವ ನೀರನ್ನು ಒದಗಿಸುತ್ತವೆ. ಮುಖ್ಯವಾಗಿ ನಿರ್ಜಲೀಕರಣದಿಂದ ರಕ್ಷಿಸುತ್ತವೆ.
ಕ್ಯಾಪ್ಸಿಕಂ
ಕ್ಯಾಪ್ಸಿಕಂ ಅನ್ನು ಸಲಾಡ್, ಕರಿ ಮತ್ತು ಸೂಪ್‌ಗಳಲ್ಲಿ ಬಳಸಬಹುದು. ಕ್ಯಾಪ್ಸಿಕಂನಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ. ಇದರಲ್ಲಿ ವಿಟಮಿನ್ ಸಿ ಮತ್ತು ಕ್ಯಾಪ್ಸೈಸಿನ್ ನಂತಹ ಪೋಷಕಾಂಶಗಳಿವೆ. ಕ್ಯಾಪ್ಸೈಸಿನ್ ದೇಹದಲ್ಲಿ ಚಯಾಪಚಯ ದರವನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ, ದೇಹವು ಕೊಬ್ಬನ್ನು ಹೆಚ್ಚು ಪರಿಣಾಮಕಾರಿಯಾಗಿ ಕರಗಿಸುತ್ತದೆ. ಇದರಿಂದಾಗಿ ತೂಕ ಇಳಿಸುವುದು ಸುಲಭವಾಗುತ್ತದೆ.
ಅಣಬೆ
ಅಣಬೆ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದು ಪ್ರೋಟೀನ್ ಮತ್ತು ನಾರಿನ ಅತ್ಯುತ್ತಮ ಮೂಲವಾಗಿದೆ. ನೀವು ಮಾಂಸದ ಬದಲು ಅಣಬೆಗಳನ್ನು ಸೇವಿಸಿದರೆ, ನಿಮ್ಮ ಹೊಟ್ಟೆಯನ್ನು ತುಂಬುತ್ತದೆ. ಮತ್ತು ತೂಕ ಹೆಚ್ಚಾಗುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಅಣಬೆಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಾಗೆಯೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಈ ತರಕಾರಿಗಳನ್ನು ಬಳಸುವ ಮೊದಲು, ನಿಮ್ಮ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications