Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ವಿಶ್ವ ಮಾನಸಿಕ ಆರೋಗ್ಯ ದಿನ: ಈ ಸಣ್ಣ ಪುಟ್ಟಕಾರ್ಯ ಮಾಡಿದರಷ್ಟೇ ಸಾಕು ಖುಷಿಗೆ ಯಾವ ಭಂಗವೂ ಬರಲ್ಲ
ಅಕ್ಟೋಬರ್ 10ನ್ನು ವಿಶ್ವ ಮಾನಸಿಕ ಆರೋಗ್ಯ ದಿನವನ್ನಾಗಿ ಆಚರಿಸಲಾಗುವುದು. ಮಾನಸಿಕ ಆರೋಗ್ಯದ ಕಡೆಗೆ ಗಮನಹರಿಸುವುದು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ತುಂಬಾನೇ ಮುಖ್ಯವಾಗಿದೆ. ಅತಿಯಾದ ಮಾನಸಿಕ ಒತ್ತಡ ಅನೇಕ ಆರೋಗ್ಯ ಸಮಸ್ಯೆ ಉಂಟು ಮಾಡುತ್ತದೆ. ಬೇಡದ ಆಲೋಚನೆಗಳು ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ದೈಹಿಕವಾಗಿ ಏನಾದರು ನ್ಯೂನ್ಯತೆಯಿದ್ದರೂ ನಮ್ಮ ಮಾನಸಿಕ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಂಡರೆ ಗುರಿ ಮುಟ್ಟುವುದು ದೊಡ್ಡ ವಿಷಯವೇ ಅಲ್ಲ.
ಮಾನಸಿಕ ಆರೋಗ್ಯಕ್ಕಾಗಿ ನಾವು ಕೆಲ ಸರಳಕಾರ್ಯಗಳನ್ನು ಮಾಡಿದರಷ್ಟೇ ಸಾಕು...

ಜನರ ಜೊತೆ ಬೆರೆಯಿರಿ
ಹೌದು ನಾವು ಜನರ ಜೊತೆ ಎಷ್ಟು ಬೆರೆಯುತ್ತೀವೋ ಅಷ್ಟೊಂದು ಖುಷಿಯಾಗಿರುತ್ತೇವೆ. ಜನರ ಜೊತೆ ಬೆರೆತಾದ ಅಲ್ಲಿಂದ ಕಲಿಯುವ ಕೆಲ ಒಳ್ಳೆಯ ಅಂಶಗಳಿರುತ್ತದೆ. ಇನ್ನು ಕುಟುಂಬದ ಜೊತೆಗೆ ಹೆಚ್ಚು ಸಮಯ ಕಳೆದಾಗ ಕುಟುಂಬದ ವಾತಾವರಣ ಚೆನ್ನಾಗಿರುತ್ತದೆ, ಅವರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು, ಅಲ್ಲದೆ ಚಿಕ್ಕ ಪುಟ್ಟ ವಿಷಯಗಳು ದೊಡ್ಡದಾಗುವುದಿಲ್ಲ. ಅದೇ ನಾವು ಅವರ ಜೊತೆ ಮಾತನಾಡುತ್ತಿಲ್ಲ, ನಮ್ಮ ಪಾಡಿಗೆ ನಾವಿರುತ್ತೇವೆ ಎಂದಾದರೆ ಮನೆಯವರ ಜೊತೆಯೇ ಒಂದು ಅಂತರ ಉಂಟಾಗುವುದು.
ನಾವು ಮನೆಗೆ ಬಂದಾಗ ಎಲ್ಲರು ಅವರ ಪಾಡಿಗೆ ಇರ್ತಾರೆ ಎಂದಾದರೆ ಖುಷಿಯಾಗಿರಲು ಸಾಧ್ಯವೇ, ಆದ್ದರಿಂದ ನಾವು ಮನೆಯವರ ಜೊತೆ ,ಕ ಸ್ನೆಹಿತರ ಜೊತೆ ಬೆರೆಯಬೇಕು. ಈಗಂತೂ ಬಹುತೇಕರ ಬದುಕಿನಲ್ಲಿ ಮೊಬೈಲ್ ದೊಡ್ಡ ಸಮಸ್ಯೆ ಉಂಟು ಮಾಡುತ್ತದೆ, ಆ ತಪ್ಪು ಮಾಡಬೇಡಿ. ಮನೆಗೆ ಬಂದ ಮೇಲೆ ಮೊಬೈಲ್ ದೂರವಿಟ್ಟು ಮನೆಯವರ ಜೊತೆ ಮಾತನಾಡಿ, ಮಕ್ಕಳ ಜೊತೆ ಆಟವಾಡಿ.
ನೆಗೆಟಿವ್ ಸರ್ಕಲ್ ದೂರವಿಡಿ
ನಾವು ಖುಷಿಯಾಗಿರಬೇಕೆಂದರೆ ನಮ್ಮನ್ನು ಕಾಲೆಳೆಯುವವರನ್ನು, ನಮ್ಮ ಬಗ್ಗೆ ಕೊಂಡು ಮಾತನಾಡುವವರನ್ನು ದೂರವಿಡಬೇಕು, ಅವರ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು, ನಮ್ಮ ಬಗ್ಗೆ ಮಾತನಾಡುವವರನ್ನು ಮಾತ್ರವಲ್ಲ, ಅವರ ಬಗ್ಗೆಯೇ ಸದಾ ಕೊರಗುತ್ತಾ ಇರುವುದು, ಬದುಕಿನಲ್ಲಿ ಒಂದು ಛಲವಿಲ್ಲ, ಯಾಕೆ ಬದುಕುತ್ತಿದ್ದೇವೆ ಎಂಬ ಗುರಿಯಿಲ್ಲ ಅಂಥವರಿಂದ ಕೂಡ ಒಂದು ಅಂತ ಕಾಯ್ದುಕೊಳ್ಳಬೇಕು, ಏಕೆಂದರೆ ಅಂಥ ವ್ಯಕ್ತಿಗಳ ಜೊತೆಯಿದ್ದರೆ ಅವರು ಕೂಡ ನಮ್ಮ ಬದುಕಿನಲ್ಲಿ ಋಣಾತ್ಮಕ ಪ್ರಭಾವ ಬೀರಬಹುದು.
ಹೊಸದು ಕಲೆಯಿರಿ
ಹೊಸ ಸ್ಥಳಗಳಿಗೆ ಹೋಗುವುದು, ಹೊಸದನ್ನು ಕಲಿಯುವುದು ಇವೆಲ್ಲಾ ನಮ್ಮನ್ನು ಖುಷಿಯಾಗಿಡುತ್ತದೆ, ಮನಸ್ಸಿನಲ್ಲಿ ಹುಮ್ಮಸ್ಸು ಹೆಚ್ಚಿಸುತ್ತದೆ. ನಿಮ್ಮ ವೃತ್ತಿ ಸಂಬಂಧಿಸಿದಂತೆ ಇರಬಹುದು ಅಥವಾ ಹವ್ಯಾಸವಿರಬಹುದು ಹೊಸದು ಟ್ರೈ ಮಾಡುತ್ತಾ ಇರಿ, ಈ ಅಭ್ಯಾಸ ನಿಮ್ಮ ಮನಸ್ಸನ್ನು ಲವಲವಿಕೆಯಿಂದ ಇರುವಂತೆ ಮಾಡುತ್ತದೆ.
ದೈಹಿಕವಾಗಿ ಚಟುವಟಿಕೆಯಿಂದ ಇರಿ
ದೈಹಿಕ ಆರೋಗ್ಯಕ್ಕೆ ಇದು ತುಂಬಾ ಮುಖ್ಯ, ದಿನಾ ಅರ್ಧ ಗಂಟೆ ವ್ಯಾಯಾಮ ಮಾಡಿ, ಧ್ಯಾನ ಮಾಡಿ. ಇವೆಲ್ಲಾ ಮಾನಸಿಕ ಒತ್ತಡವನ್ನು ಹೊರದೂಡುತ್ತದೆ. ನಾವು ದೈಹಿಕವಾಗಿ ಆರೋಗ್ಯವಾಗಿರುವುದರಿಂದ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು. ನೆಗೆಟಿವ್ ಆಲೋಚನೆ ಕಡಿಮೆಯಾಗುವುದು, ನಮ್ಮಲ್ಲಿ ಧನಾತ್ಮಕ ಆಲೋಚನೆ ಹೆಚ್ಚಾಗುವುದು.
ನಿಮ್ಮ ಬದುಕನ್ನು ಆನಂದಿಸಿ, ಹೋಲಿಕೆ ಮಾಡಬೇಡಿ
ಬೇರೆಯವರ ಹತ್ರ ಕಾರು ಇರಬಹುದು, ಅದರೆ ನನ್ನ ಬಳಿ ಇಲ್ಲ ಎಂದು ಕೊರಗುವ ಗುಣವಿರಬಾರದು. ನಮ್ಮಲ್ಲಿ ಏನು ಇದೆಯೋ ಅದರಲ್ಲಿ ಖುಷಿಯಾಗಿರಲು ಪ್ರಯತ್ನಿಸಬೇಕು. ಜೀವನದಲ್ಲಿ ಎತ್ತರಕ್ಕೆ ಬೆಳೆಯಲು ಪ್ರಯತ್ನಿಸಬೇಕೆ ಹೊರತು ಹೊಟ್ಟೆಕಿಚ್ಚು ಪಡುವುದು, ನಮ್ಮ ಬಳಿ ಇಲ್ಲ ಎಂದು ಕೊರಗುವುದು ಮಾಡಬಾರದು.
ನಮ್ಮ ಕೈಯಲ್ಲಾದ ಸಹಾಯ ಮಾಡಬೇಕು
ನಮ್ಮಿಂದ ಏನು ಸಾಧ್ಯವೋ ಆ ಸಹಾಯ ಮಾಡಬೇಕು, ಇದು ಕೂಡ ಮನಸ್ಸಿಗೆ ಖುಷಿ ಕೊಡುತ್ತದೆ, ಮನಸ್ಸಿಗೆ ಸಂತೃಪ್ತಿ ನೀಡುತ್ತದೆ. ಹಾಗಾಗಿ ದಿನಾ ಇಂಥ ಸಣ್ಣ ಪುಟ್ಟ ವಿಷಯಗಳ ಕಡೆ ಗಮನ ಕೊಟ್ಟರೆ ಸಾಕು ನಮಗೆ ಖಿನ್ನತೆ ಎಂಬುವುದು ಕಾಡುವುದೇ ಇಲ್ಲ, ಸದಾ ಖುಷಿಯಾಗಿರಬಹುದು, ಏನೇ ಬರಲಿ ತುಟಿಯಂಚಿನಲ್ಲಿ ನಗು ಮಾಸದಿರಲಿ...
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












