Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ವಿಶ್ವ ಮಲೇರಿಯಾ ದಿನ 2023: ಮಲೇರಿಯಾ ತಡೆಗಟ್ಟಲು ಸೊಳ್ಳೆ ಕಚ್ಚದಂತೆ ತಡೆಗಟ್ಟುವುದು ಹೇಗೆ?
ಏಪ್ರಿಲ್ 25ನ್ನು ಮಲೇರಿಯಾ ದಿನವನ್ನಾಗಿ ಆಚರಿಸಲಾಗುವುದು. ಈ ವರ್ಷ "Time to deliver zero malaria: invest, innovate, implement" ಥೀಮ್‌ನಲ್ಲಿ ಈ ದಿನವನ್ನು ಆಚರಿಸಲಾಗುವುದು. 2018ರ ವರದಿ ಪ್ರಕಾರ ಭಾರತದ ಶೇ. 98ರಷ್ಟು ಜನಸಂಖ್ಯೆಗೆ ಮಲೇರಿಯಾದ ಅಪಾಯವಿದೆ. 2030ಕ್ಕೆ ಮಲೇರಿಯಾ ಮುಕ್ತ ಭಾರತವನ್ನಾಗಿ ಮಾಡಲು ಸರ್ಕಾರ ಶ್ರಮಿಸುತ್ತಿದೆ. ಆದರೆ ಜನರು ಕೂಡ ಇದಕ್ಕೆ ಕೈ ಜೋಡಿಸಬೇಕಾಗಿದೆ.

ಮಲೇರಿಯಾ ನಿರ್ಲಕ್ಷ್ಯ ಮಾಡಿದರೆ ಪ್ರಾಣಕ್ಕೆ ಅಪಾಯ
ಮಲೇರಿಯಾ ಎಂಬುವುದನ್ನು ನಿರ್ಲಕ್ಷ್ಯ ಮಾಡುವಂತಿಲ್ಲ, ನಿರ್ಲಕ್ಷ್ಯ ಮಾಡಿದರೆ ಇದರಿಂದ ಮನುಷ್ಯರ ಪ್ರಾಣಕ್ಕೆ ಅಪಾಯ ಉಂಟಾಗುವುದು. ಮಲೇರಿಯಾವನ್ನು ನಿಯಂತ್ರಿಸುವುದು ಮುನ್ಸಿಪಾಲಿಟಿಯವರ ಕರ್ತವ್ಯವೆಂದು ಸುಮ್ಮನಿರದೆ ಸೊಳ್ಳೆಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರು ಮುಂದಾಗಬೇಕು, ಆಗ ಮಾತ್ರ ಈ ಮಲೇರಿಯಾವನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯ.
ಸೊಳ್ಳೆಗಳ ಉತ್ಪತ್ತಿಗೆ ಅವಕಾಶ ಮಾಡಕೊಡಬೇಡಿ:
ಮಲೇರಿಯಾ ಕಾಯಿಲೆಯು ಸೊಳ್ಳೆಗಳಿಂದಾಗಿ ಉಂಟಾಗುವುದು. ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆ ಕಡಿತದಿಂದಾಗಿ ಮಲೇರಿಯಾ ರೋಗ ಹರಡುವುದು. ಮನೆಯ ಸುತ್ತ ಮುತ್ತ ನಿಂತ ನೀರು ಇದ್ದರೆ ಅದರಲ್ಲಿ ಸೊಳ್ಳೆಗಳು ಕುಳಿತು ಮೊಟ್ಟೆ ಇಡುತ್ತದೆ, ಇದರಿಂದ ಸೊಳ್ಳೆಗಳ ಸಂಖ್ಯೆ ಹೆಚ್ಚಾಗುವುದು.ಮಲೇರಿಯಾ ಸಮಸ್ಯೆ ಮಳೆಗಾಲದಲ್ಲಿ ಹೆಚ್ಚಾಗಿ ಕಂಡು ಬರುವುದು. ಬೇಸಿಗೆಯಲ್ಲೂ ಮನೆಯ ಸುತ್ತ ಮುತ್ತ ಪಾತ್ರೆ, ಬಕೆಟ್‌ನಲ್ಲಿ ನೀರು ತುಂಬಿಟ್ಟರೆ ಅದರಲ್ಲಿ ಸೊಳ್ಳೆಗಳು ಮೊಟ್ಟೆ ಇಡುವುದರಿಂದ ಈ ರೋಗ ಹರಡಬಹುದು. ಆದ್ದರಿಂದ ಬೇಸಿಗೆ ಇರಲಿ, ಮಳೆಗಾಲವಿರಲಿ ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರವಹಿಸಿ.
ಮಲೇರಿಯಾ ತಡೆಗಟ್ಟಲು ನೀವೇನು ಮಾಡಬೇಕು?
* ನಿಂತ ನೀರಿನಿಂದ ಸೊಳ್ಳೆಗಳ ಹೆಚ್ಚುವುದರಿಂದ ತೆಂಗಿನ ಚಿಪ್ಪು, ಪ್ಲಾಸ್ಟಿಕ್ ಡಬ್ಬಿ,ಬಕಟ್, ಟಯರ್ ಇವುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.
* ಮಳೆಗಾಲಕ್ಕೆ ಇನ್ನೂ ಒಂದು ತಿಂಗಳು ಇದೆಯಾದರೂ ಈಗಲೇ ರೋಡ್‌ಗಳಲ್ಲಿರುವ ಗುಂಡಿಗಳನ್ನು ಮುಚ್ಚಿಸಲು ಗ್ರಾಮ ಪಂಚಾಯಿತಿ, ನಗರಸಭೆಗೆ ಅರ್ಜಿ ಸಲ್ಲಿಸಿ.
* ಕಸ ಸೂಕ್ತ ರೀತಿಯಲ್ಲಿ ವಿಲೇವಾರಿವಾಗುತ್ತಿದೆಯೇ ನೋಡಿಕೊಳ್ಳಿ. ನೀವು ಕೂಡ ಅಷ್ಟೇ ಒಣಕಸ-ಹಸಿ ಕಸ ಪ್ರತ್ಯೇಕಿಸಿ ಪೌರಕಾರ್ಮಿಕರಿಗೆ ನೀಡಿ.
* ನೀರು ತುಂಬಿಡುವ ಪಾತ್ರೆಗಳಲ್ಲಿ ಮುಚ್ಚಳವಿರಬೇಕು
* ಮನೆಗೆ ಎಸಿ ಹಾಕಿಸಿದ್ದರೆ ನೀರನ್ನು ಸಂಗ್ರಹಿಸಲು ಒಂದು ಬಕೆಟ್ ಇಟ್ಟು ಆ ನೀರನ್ನು ನಿಯಮಿತವಾಗಿ ಬಿಸಾಡಿ.
ಸೊಳ್ಳೆ ಕಚ್ಚುವುದನ್ನು ತಡೆಗಟ್ಟುವುದು ಹೇಗೆ?
* ಸೊಳ್ಳೆ ಕಚ್ಚದಿರಲು ಕಿಟಕಿಗೆ ಸೊಳ್ಳೆ ಪರದೆ ಹಾಕಿಸಿ, ಬೆಡ್‌ಗೆ ಸೊಳ್ಳೆ ಪರದೆ ಹಾಕಿಸಿ.
* ಬೆಳಗ್ಗೆ ಹಾಗೂ ಸಂಜೆ ಹೊತ್ತು ಕಿಟಿಕಿ, ಬಾಗಿಲುಗಳನ್ನು ತೆರೆಯಬೇಡಿ
* ಉದ್ದ ತೋಳಿನ ಉಡುಪು ಧರಿಸಬೇಕು
* ಸೊಳ್ಳೆ ಕಚ್ಚದಂತೆ ಸ್ಪ್ರೇ ಬಳಸಿ.
* ಮಕ್ಕಳಿಗೂ ಸೊಳ್ಳೆ ಕಚ್ಚದಂತೆ ಸೂಕ್ತ ಮುನ್ನೆಚ್ಚರಿಕೆವಹಿಸಿ.
* ಸೊಳ್ಳೆ ಕಚ್ಚದಿರಲು ಕ್ರೀಮ್ ಅಥವಾ repellent ಬಳಸಿ.
ಸೊಳ್ಳೆ ಕಚ್ಚುವುದನ್ನು ತಡೆಗಟ್ಟುವುದರಿಂದ ಮಲೇರಿಯಾ ಮಾತ್ರವಲ್ಲ ಡೆಂಗ್ಯೂ ಕೂಡ ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications