Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಿಶ್ವ ಹೃದಯ ದಿನ: ಅತಿಯಾದ ವ್ಯಾಯಾಮದಿಂದ ಹೃದಯಾಘಾತ ಉಂಟಾಗುವುದೇ? ತಜ್ಞರು ಹೇಳುವುದೇನು?
ಸೆಪ್ಟೆಂಬರ್ 29 ವಿಶ್ವ ಹೃದಯ ದಿನ. ಹೃದಯ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುವುದು. ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತ ಎಂಬುವುದು ತುಂಬಾ ಚಿಕ್ಕ ಪ್ರಾಯದವರನ್ನು ಕಾಡುತ್ತಿದೆ. ಫಿಟ್ ಅಂಡ್ ಫೈನ್ ಇದ್ದವರಿಗೂ ಹೃದಯಾಘಾತ ಕಂಡು ಬರುತ್ತಿದೆ. ವರ್ಕೌಟ್ ಮಾಡುತ್ತಿರುವವಾಗಲೇ ಸಾವನ್ನಪ್ಪಿರುವ ಹಲವಾರು ಉದಾಹರಣೆಗಳಿವೆ.
ಇನ್ನು ಪುನೀತ್ ರಾಜ್‌ಕುಮಾರ್ ಅವರಿಗೆ ಹೃದಯಾಘಾತವಾದಾಗ ಅಷ್ಟೊಂದು ಫಿಟ್ ಆಗಿದ್ದವರಿಗೆ ಹೃದಯಾಘಾತ ಹೇಗಾಯ್ತು ಎಂದು ತುಂಬಾನೇ ಚರ್ಚೆ ನಡೆದಿತ್ತು. ಅತಿಯಾದ ವ್ಯಾಯಾಮ ಅವರಿಗೆ ಹೃದಯಾಘಾತಕ್ಕೆ ಕಾರಣವಾಗಿರಬಹುದು ಎಂದು ಒಂದಿಷ್ಟು ತಜ್ಞರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.
ಅತಿಯಾದ ವ್ಯಾಯಾಮ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲವೇ? ಅತ್ಯಧಿಕ ವ್ಯಾಯಾಮ ಮಾಡುವುದರಿಂದ ಹೃದಯಕ್ಕೆ ಏನಾಗುತ್ತೆ ಎಂಬುವುದನ್ನು ಹೃದ್ರೋಗ ತಜ್ಞರಾದ ಡಾ. ಸುನಿಲ್ ಕುಮಾರ್ ಎಸ್ (Consultant - Interventional Cardiologist, Manipal Hospital Hebbal) ವಿವರಿಸಿದ್ದಾರೆ ನೋಡಿ:

ವ್ಯಾಯಾಮ ಬೇಕು ಆದರೆ ಅತಿಯಾದ ವ್ಯಾಯಾಮ ಬೇಡ
ನಮ್ಮ ಆರೋಗ್ಯಕ್ಕೆ ವ್ಯಾಯಾಮ ಬೇಕು. ದೇಹದ ವ್ಯಾಯಾಮಕ್ಕೆ ಹಲವು ಬಗೆಯ ವರ್ಕೌಟ್‌ಗಳಿವೆ. ಕೆಲವೊಂದು ವ್ಯಾಯಾಮಗಳು ಹೃದಯದ ಆರೋಗ್ಯಕ್ಕೆ ತುಂಬಾನೇ ಅವಶ್ಯಕ. ಆದರೆ ಅತಿಯಾಗಿ ವ್ಯಾಯಾಮ ಮಾಡಿದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದಲ್ಲ. ವಾರದಲ್ಲಿ 150 ನಿಮಿಷ ವ್ಯಾಯಾಮ ಅಂದರೆ ದಿನದಲ್ಲಿ 30 ನಿಮಿಷ ವ್ಯಾಯಾಮ ಮಾಡಿದರೆ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ನಡೆಯುವುದು, ಓಡುವುದು, ಈಜುವುದು ಈ ಬಗೆಯ ವ್ಯಾಯಾಮಗಳು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದರೆ ತುಂಬಾನೇ ವ್ಯಾಯಾಮ ಮಾಡಿದರೆ ಹೃದಯಕ್ಕೆ ಹಾನಿಯುಂಟಾಗುವುದು.
ಅತಿಯಾದ ವ್ಯಾಯಾಮ ಮಾಡಿದಾಗ ಏನಾಗುತ್ತದೆ?
ಅತಿಯಾದ ವ್ಯಾಯಾಮ ಮಾಡಿದಾಗ ನಮ್ಮ ಹೃದಯದ ಮೇಲೆ ತುಂಬಾ ಒತ್ತಡ ಉಂಟಾಗುವುದು. ದೇಹದಲ್ಲಿ ನೀರಿನಂಶ ತುಂಬಾನೇ ಕಡಿಮೆಯಾಗುವುದು. ಹೃದಯದ ಮೇಲೆ ತುಂಬಾನೇ ಒತ್ತಡ ಉಂಟಾದಾಗ ಹೃದಯಕ್ಕೆ ಹಾನಿಯಾಗುವುದು. ಇದರಿಂದ ಹೃದಯಾಘಾತ ಉಂಟಾಗುವುದು. ಒಂದು ಅಧ್ಯಯನದಲ್ಲಿ ತುಂಬಾ ವ್ಯಾಯಾಮ ಮಾಡುವವರ ಹಾಗೂ ಹೆಚ್ಚೇನು ವ್ಯಾಯಾಮ ಮಾಡದವರನ್ನು ಪರೀಕ್ಷೆ ಮಾಡಿದಾಗ ಅತ್ಯಧಿಕ ವ್ಯಾಯಾಮ ಮಾಡಿದವರ ಹೃದಯಕ್ಕೆ ಹಾನಿಯುಂಟಾಗಿರುವುದು ತಿಳಿದು ಬಂದಿದೆ.
ಪದೇ ಪದೇ ತುಂಬಾ ವ್ಯಾಯಾಮ ಮಾಡುವುದರಿಂದ ಹೃದಯಕ್ಕೆ ಹಾನಿಯುಂಟಾಗುವುದು
ಪದೇ ಪದೇ ನಾವು ನಮ್ಮ ಹೃದಯದ ಮೇಲೆ ಅತ್ಯಧಿಕ ಒತ್ತಡ ಹಾಕಿದರೆ ಹೃದಯ ರಕ್ತನಾಳಗಳಿಗೆ ಹಾನಿಯುಂಟಾಗುವುದು. ಇದರಿಂದ ಯಾವುದೇ ಸಮಯದಲ್ಲಿ ಬೇಕಾದರೂ ಹೃದಯಾಘಾತ ಉಂಟಾಗುವುದು.
ತಜ್ಞರು ಹೇಳುವುದೇನು?
ಅತಿಯಾದ ವ್ಯಾಯಾಮದಿಂದ ಹೃದಯದ ಆರೋಗ್ಯಕ್ಕೆ ತುಂಬಾನೇ ಅಪಾಯ ಉಂಟಾಗುವುದು. ಆದ್ದರಿಂದ ಅತಿಯಾಗಿ ದೇಹ ದಂಡನೆ ಮಾಡಬೇಡಿ. ಅತಿಯಾದ ದೇಹ ದಂಡನೆಯಿಂದ ಹೃದಯಾಘಾತ ಉಂಟಾಗುವುದು.
ದೇಹದ ಮಾತು ಕೇಳಿ
ನಾವು ವ್ಯಾಯಾಮ ಮಾಡುವಾಗ ನಮ್ಮ ದೇಹದ ಮಾತು ಕೇಳಬೇಕು. ನಮ್ಮ ದೇಹವೇ ನನ್ನಿಂದ ಆಗ್ತಾ ಇಲ್ಲ ಎಂಬ ಸೂಚನೆ ನೀಡುತ್ತದೆ, ಅದನ್ನು ಕೇಳಬೇಕು. ವ್ಯಾಯಾಮ ಮಾಡಬೇಕು ಹಾಗಂತ ತುಂಬಾನೇ ದೇಹವನ್ನು ದಂಡಿಸಲು ಹೋಗಬೇಡಿ.
ತಜ್ಞರ ಸಲಹೆ ಪಡೆಯದೆ ಯಾವುದೇ ವ್ಯಾಯಾಮ ಮಾಡಬೇಡಿ
ವಾಕಿಂಗ್, ರನ್ನಿಂಗ್ ಬಿಟ್ಟು ನೀವು ಯಾವುದೇ ಕಠಿಣ ವ್ಯಾಯಾಮ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಬೇಕು, ಅಲ್ಲದೆ ನಿಮ್ಮ ಆರೋಗ್ಯದ ಬಗ್ಗೆಯೂ ತಿಳಿಸಬೇಕು. ಇದರಿಂದ ಅವರು ನಿಮಗೆ ಯಾವ ವ್ಯಾಯಾಮ ಸೂಕ್ತವಲ್ಲವೋ ಅವುಗಳನ್ನು ಮಾಡಿಸುವುದಿಲ್ಲ. ತುಂಬಾ ಸುಸ್ತಾದಾಗ ವ್ಯಾಯಾಮ ಮಾಡಲೇಬೇಡಿ.
ಪುಟ್ಟ ಹೃದಯವನ್ನು ಜೋಪಾನ ಮಾಡಿ....
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
