Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಶ್ವ ಶ್ರವಣ ದಿನ 2024: ಶ್ರವಣ ದೋಷಕ್ಕೆ ಕಾರಣವೇನು? ಕಿವಿ ಕೇಳಿಸುವುದು ಕಮ್ಮಿಯಾದರೆ ಚಿಕಿತ್ಸೆಯೇನು?
ನಾವೆಲ್ಲರೂ ಮುಖದ ಸೌಂದರ್ಯಕ್ಕೆ ಪ್ರಾಮುಖ್ಯತೆ ನೀಡುತ್ತೇವೆ ಆದ್ರೆ ಪಂಚೇಂದ್ರಿಯಗಳಲ್ಲೊಂದಾದ ಕಿವಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಎಷ್ಟು ಕಾಳಜಿ ವಹಿಸುತ್ತೇವೆ ? .... ಕಿವಿ ಮತ್ತು ಅದರ ಆರೋಗ್ಯ ಅದೆಷ್ಟು ಮುಖ್ಯ? ಕಿವಿ ಆರೋಗ್ಯಕ್ಕೆ ಯಾವೆಲ್ಲಾ ಕ್ರಮಗಳು ಅಗತ್ಯ ಎಂಬುದರ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ಮಾರ್ಚ್3ರಂದು ವಿಶ್ವ ಶ್ರವಣ ದಿನವನ್ನು ಆಚರಿಸಲಾಗುತ್ತದೆ.
'ಕಿವಿ ಮತ್ತು ಶ್ರವಣದ ಆರೈಕೆ ಎಲ್ಲರಿಗೂ ಮುಖ್ಯʼ ಎಂಬುದು ಈ ವರ್ಷದ ಧ್ಯೇಯ ವಾಕ್ಯವಾಗಿದೆ. ಈ ದಿನದಂದು ಕಿವಿ ಆರೋಗ್ಯ ಜೊತೆಗೆ ಶ್ರವಣ ದೋಷ ಕುರಿತಾಗಿ ಬೆಂಗಳೂರಿನ ಕಿಂಡರ್ ಆಸ್ಪತ್ರೆಯ ಇಎನ್‌ಟಿ ತಜ್ಞರಾದ ಡಾ.ಸುನಿತಾ ಮಾಧವನ್ ವಿವರಿಸಿದ್ದಾರೆ.

ಅನೇಕರಲ್ಲಿ ಶ್ರವಣ ದೋಷ ಸಮಸ್ಯೆಯನ್ನು ಕಾಣುತ್ತಿದ್ದೇವೆ. ಈ ಸಮಸ್ಯೆಯನ್ನು ಆರಂಭಿಕ ಹಂತದಲ್ಲಿ ಗುರುತಿಸುವುದು ಅಗತ್ಯ, ಏಕೆಂದರೆ ಇದು ಮಾತು ಮತ್ತು ಭಾಷೆ ಬೆಳವಣಿಗೆಯನ್ನು ಅವಲಂಬಿಸಿರುತ್ತದೆ. ಈ ಹಿನ್ನೆಲೆಯಲ್ಲಿ ನಮ್ಮ ಕಿವಿ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ತೆಗೆದುಕೊಳ್ಳಬೇಕು ಜೊತೆಗೆ ಸಮಸ್ಯೆಗಳು ಕಂಡುಬಂದಾಗ ಯಾವ ರೀತಿ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬ ಮಾಹಿತಿಯನ್ನು ತಜ್ಞರು ಹಂಚಿಕೊಂಡಿದ್ದಾರೆ.
ಶ್ರವಣದೋಷಕ್ಕೆ ಕಾರಣಗಳೇನು ?
ವಿವಿಧ ಕಾರಣಗಳಿಂದ ಶ್ರವಣ ದೋಷ ಕಾಣಿಸಿಕೊಳ್ಳುತ್ತದೆ. ಅವುಗಳಲ್ಲಿ ಕೆಲವು ಘಟನೆಗಳು ಜೆನೆಟಿಕ್ಸ್‌ನಿಂದ, ಕೆಲವು ಸಂದರ್ಭಗಳಲ್ಲಿ ಸೋಂಕು, ಗಾಯ, ಅಧಿಕ ರಕ್ತದೊತ್ತಡ, ಮಧುಮೇಹದಂತಹ ಸಮಸ್ಯೆಗಳು, ಒಟೊಟಾಕ್ಸಿಕ್‌ಔಷಧಿಗಳ ನಿರಂತರ ಬಳಕೆ ಮತ್ತು ಭಾರೀ ಪ್ರಮಾಣದ ಶಬ್ದವನ್ನು ಆಲಿಸುವುದರಿಂದಲೂ ಶ್ರವಣ ದೋಷ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ವೈದ್ಯೆ ಸುನಿತಾ.
ಸ್ಕ್ರೀನಿಂಗ್‌ಮಾಡುವುದು ಅಗತ್ಯ
ಮಹಿಳೆಗೆ ಪ್ರಸವಪೂರ್ವದಲ್ಲಿ ವಿವಿಧ ರೀತಿಯ ರಕ್ತ ಪರೀಕ್ಷೆಗಳನ್ನು ಮಾಡಿಸುವುದು ಅಗತ್ಯ. ಈ ಮೂಲಕ ಆರಂಭಿಕ ಹಂತದಲ್ಲೇ ಸಮಸ್ಯೆ ಕಂಡುಬಂದಲ್ಲಿ ಸಾಧ್ಯವಾದರೆ ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬಹುದು ಎಂಬುದು ವೈದ್ಯರ ಸಲಹೆ.
ಕಿವಿ ಆರೋಗ್ಯದ ಬಗ್ಗೆ ಕಾಳಜಿ ಹೇಗೆ ?
ಶೀತ, ಕೆಮ್ಮಿನಿಂದ ಕಿವಿ ನೋವು ಕಂಡುಬಂದಲ್ಲಿ ಅದನ್ನು ನಿರ್ಲಕ್ಷಿಸದೆ ಚಿಕಿತ್ಸೆ ಪಡೆಯಬೇಕು.
ಜೀವನಶೈಲಿ ನಿರ್ವಹಣೆ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಥೈರಾಯ್ಡ್‌ಸಮಸ್ಯೆಗಳನ್ನು ನಿಯಂತ್ರಿಸುವ ಮೂಲಕವು ಶ್ರವಣ ದೋಷ ಉಂಟಾಗುವುದನ್ನು ನಿಯಂತ್ರಿಸಲು ಸಹಾಯವಾಗುತ್ತದೆ.
ಕಿವಿ ಸ್ವಚ್ಛತೆಗಾಗಿ ಕಿವಿಯಲ್ಲಿ ಪಿನ್, ಬಡ್ಸ್‌ಮತ್ತು ಇತರೆ ವಸ್ತುಗಳನ್ನು ಹಾಕುವುದು ಸರಿಯಲ್ಲ. ಇದರಿಂದಾಗಿಯೂ ಕಿವಿಯಲ್ಲಿ ಸೋಂಕು ಅಥವಾ ಕಿವಿಯೊಳಗಿನ ಪದರಕ್ಕೆ ಹಾನಿಯುಂಟಾಗುವ ಸಾಧ್ಯತೆ ಇರುತ್ತದೆ.
ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ಕಂಡುಬಂದಲ್ಲಿ ಮನೆಮದ್ದುಗಳ ಮೊರೆ ಹೋಗುವುದಲ್ಲ ಸರಿಯಲ್ಲ. ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳಿತು.
ಭಾರೀ ಪ್ರಮಾಣದ ಶಬ್ಧ ಆಲಿಸುವುದು, ಹೆಡ್‌ಫೋನ್‌ಬಳಸುವುದನ್ನು ತಪ್ಪಿಸುವ ಮೂಲಕವೂ ಶ್ರವಣ ದೋಷ ಉಂಟಾಗುವುದನ್ನು ತಡೆಗಟ್ಟಬಹುದು.
ಶ್ರವಣ ದೋಷ ತಡೆಗಟ್ಟುವುದು ಹೇಗೆ?
ದಡಾರ, ಮಂಪ್ಸ್, ರುಬೆಲ್ಲಾ ಮತ್ತು ನ್ಯುಮೋಕೊಕಲ್ ರೋಗಗಳ ವಿರುದ್ಧ ಲಸಿಕೆಗಳನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಏಕೆಂದರೆ ಈ ಸೋಂಕಿನ ಸಮಸ್ಯೆಗಳು ಕೂಡ ಶ್ರವಣ ದೋಷಕ್ಕೆ ಕಾರಣವಾಗಬಹುದು. ಅವಗಳನ್ನು ತಡೆಗಟ್ಟಲು ಲಸಿಕೆ ಮುಖ್ಯ ಪಾತ್ರವಹಿಸುತ್ತದೆ.
ನವಜಾತ ಶಿಶುಗಳ ಕಿವಿ ಪರಿಶೀಲನೆ ಅತ್ಯಗತ್ಯ. ಏಕೆಂದರೆ ಕುಟುಂಬದಲ್ಲಿ ಯಾರಿಗಾದರೂ ಶ್ರವಣದೋಷ ಸಮಸ್ಯೆ ಇದ್ದಲ್ಲಿ ಅದು ವಂಶಿಕವಾಗಿ ಕಂಡುಬರುವ ಸಾಧ್ಯತೆ ಇರುತ್ತದೆ.
ಈ ಸಮಸ್ಯೆಗೆ ಪರಿಹಾರವೇನು ?
ಶ್ರವಣ ದೋಷ ಹೊಂದಿರುವವರಿಗೆ ವೈದ್ಯರ ಮೂಲಕ ಪರಿಶೀಲನೆ ನಡೆಸಿ ಶ್ರವಣ ಸಾಧನಗಳನ್ನು ನೀಡುವ ಮೂಲಕ ಅವರ ಸಮಸ್ಯೆಗೆ ಪರಿಹಾರವನ್ನು ಒದಗಿಸಬಹುದು ಎಂಬ ಸಲಹೆ ನೀಡುತ್ತಾರೆ ಕಿಂಡರ್‌ಆಸ್ಪತ್ರೆಯ ವೈದ್ಯೆ ಸುನಿತಾ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications