Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೆಟಿನಾ ಸಮಸ್ಯೆಯಿಂದಾಗಿ ಕುರುಡುತನ : ಮಧುಮೇಹಿಗಳು ಹೆಚ್ಚಿನ ಜಾಗ್ರತೆವಹಿಸಬೇಕು
ಕುರುಡುತನದಿಂದಾಗಿ ವಿಶ್ವದಲ್ಲಿ ಇಂದು ಬಿಲಿಯನ್ ಜನರು ಕುರುಡುತನ ಸನುಭವಿಸುತ್ತಿದ್ದಾರೆ. ಅದರೆ ಚಿಕಿತ್ಸೆಯ ಮೂಲಕ ಶೇ. 90ರಷ್ಟು ಕುರುಡುತನವನ್ನು ತಡೆಗಟ್ಟಬಹುದು. ಈ ದೃಷ್ಟಿದೋಷ ಒಬ್ಬ ವ್ಯಕ್ತಿ ಮಾತ್ರ ಪರಿಣಾಮ ಬೀರುವುದಲ್ಲ, ಅದು ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವುದು. ದೃಷ್ಟಿ ದೋಷದಿಂದಾಗಿ ಜಾಗತಿಕವಾಗಿ $410.9 ಬಿಲಿಯನ್ ಅಷ್ಟು ಆರ್ಥಿಕ ಉತ್ಪಾದಕತೆ ಕಡಿಮೆಯಾಯಿತು ಎಂದು ಅಂಕಿ ಅಂಶ ಹೇಳುತ್ತದೆ.

ಜಾಗತಿಕವಾಗಿ ಎದುರಿಸುತ್ತಿರುವ ಪ್ರಮುಖ ಆರೋಗ್ಯ ಸಮಸ್ಯೆಗಳೆಂದರೆ ರಕ್ತಹೀನತೆ, ಶ್ರವಣ ದೋಷ ಮೂರನೇಯದು ದೃಷ್ಟಿದೋಷ. ಕಣ್ಣಿನ ಪೊರೆ, ಗ್ಲುಕೋಮಾ ಮತ್ತು ವಕ್ರೀಕಾರಕ ದೋಷ ಇವುಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಿರುತ್ತದೆ, ಆದರೆ ರೆಟಿನಾ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವು ಇಲ್ಲದೆ ದೃಷ್ಟಿದೋಷ ಉಂಟಾಗುವುದು. ರೆಟಿನಾ ಸಮಸ್ಯೆಯಿಂದಾಗಿ ಶೇ. 6ರಷ್ಟು ಜನರಿಗೆ ಕುರುಡುತನ ಉಂಟಾಗಿದೆ.
ರೆಟಿನಾ ಸಮಸ್ಯೆಗೆ ಪ್ರಮುಖ ಕಾರಣಗಳು
ಮಧುಮೇಹದ ಸಮಸ್ಯೆ (ಸಕ್ಕರೆಯಂಶ ನಿಯಂತ್ರಣದಲ್ಲಿ ಇರದಿದ್ದರೆ)
ವಯಸ್ಸಾಗುತ್ತಿದ್ದಂತೆ ಈ ಬಗೆಯ ಸಮಸ್ಯೆ ಕಂಡು ಬರುವುದು.
ರೆಟಿನಾ ಸಮಸ್ಯೆಗೆ ಸಕಾಲದಲ್ಲಿ ಚಿಕಿತ್ಸೆಯಿಂದ ಕುರುಡುತನ ಹೋಗಲಾಡಿಸಬಹುದು.
ರೆಟಿನಾ ಸಮಸ್ಯೆಯ ಲಕ್ಷಣಗಳೇನು?
ಸರಿಯಾಗಿ ಕಾಣುವುದಿಲ್ಲ
ನೇರವಾದ ಗೆರೆ ಕೂಡ ವಕ್ರವಕ್ರವಾಗಿ ಕಾಣಿಸುವುದು'
ಒಂದು ಭಾಗ ಕಾಣಿಸುವುದಿಲ್ಲ
ಮಂಜು ಮಂಜಾಗಿ ಕಾಣಿಸುವುದು
ರೆಟಿನಾ ಸಮಸ್ಯೆಗೆ ಚಿಕಿತ್ಸೆ
ರೆಟಿನಾ ಸಮಸ್ಯೆಗೆ ಹೊಸ ತಂತ್ರಜ್ಞಾನ ಬಳಸಿ ಚಿಕಿತ್ಸೆ ನೀಡಲಾಗುತ್ತಿದೆ. ರೆಟಿನಾ ಸಮಸ್ಯೆ ಇರುವವರಲ್ಲಿ ಕಣ್ಣಿನ ರಕ್ತನಾಳಗಳು ಅಸ್ಥಿರವಾಗಿರುತ್ತವೆ, ಸೋರಿಕೆಯಾಗುತ್ತವೆ, ಉರಿಯೂತದ ಸಮಸ್ಯೆ ಕಂಡು ಬರುವುದು. VEGF ಎನ್ನುವುದು ರೆಟಿನಾದ ಸಮಸ್ಯೆ ಹೆಚ್ಚಿಸುವ ಒಂದು ಪ್ರಮುಖ ಮಾರ್ಗವಾಗಿದೆ.VEGF ಮಾರ್ಗವನ್ನು ನಿರ್ಬಂಧಿಸುವುದರಿಂದ ರೆಟಿನಾದಲ್ಲಿನ ನಾಳಗಳು ರಕ್ತ ಮತ್ತು ದ್ರವ ಸೋರಿಕೆ ತಡೆಗಟ್ಟುತ್ತದೆ. ಅಲ್ಲದೆ Ang-2 ಎನ್ನುವುದರಿಂದ ಕೂಡ ಕಣ್ಣಿನ ಭಾಗದ ನಾಳದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ . ಈ VEGF ಅನ್ನು ಮಾತ್ರವೇ ಗುರಿಯಾಗಿಟ್ಟುಕೊಂಡು ನೀಡುವ ಚಿಕಿತ್ಸೆಯಿಂದ ಭಾಗಶಃ ಮಾತ್ರವೇ ಸಮಸ್ಯೆ ಪರಿಹಾರವಾಗುತ್ತದೆ. ಪ್ರಸ್ತುತ ಸ್ಟ್ಯಾಂಡರ್ಡ್ IVT ಚಿಕಿತ್ಸೆಯಿದೆ, ಇನ್ನೂ ಚಿಕಿತ್ಸೆಯಲ್ಲಿ ಆಧುನಿಕ ತಂತ್ರಜ್ಞಾನ ಬರಬೇಕಾಗಿದೆ. ಆವಾಗ ಮಾತ್ರ ಈ ಕುರುಡುತನ ಸಮಸ್ಯೆ ತುಂಬಾನೇ ತಡೆಗಟ್ಟಲು ಸಹಾಯ ಮಾಡುತ್ತದೆ.
ಕಣ್ಣಿನ ಪೊರೆ ಮತ್ತು ಗ್ಲುಕೋಮಾ ಸಂಬಂಧಿತ ಕುರುಡುತನವನ್ನು ಕಡಿಮೆ ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ, ಆದರೆ ರೆಟಿನಾ ಸಂಬಂಧಿತ ದೃಷ್ಟಿದೋಷ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ಹಲವಾರು ಅಂಶಗಳು ಕಾರಣವಾಗಿದೆ:
ಜನರಿಗೆ ಇದರ ಬಗ್ಗೆ ಅರಿವಿನ ಕೊರತೆ
ರೋಗ ಪತ್ತೆಗೆ ವಿಳಂಬ ಮಾಡುವುದು
ನಿಯಂತ್ರಣದಲ್ಲಿರದ ಮಧುಮೇಹ ಜ
ವಯಸ್ಸಾಗುತ್ತಿದ್ದಂತೆ ಕಂಡು ಬರುವ ದೃಷ್ಟಿದೋಷ
ಕಣ್ಣಿನ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ
ರೆಟಿನಾ ಸಮಸ್ಯೆ ತಡೆಗಟ್ಟಲು ಅದರ ಬಗ್ಗೆ ಅರಿವು ಉಂಟಾಗಬೇಕು, ಅಲ್ಲದೆ ಸಮಸ್ಯೆ ಕಂಡು ಬರುವಾಗಲೇ ತಡ ಮಾಡದೆ ಚಿಕಿತ್ಸೆ ಪಡೆಯಬೇಕು, ಇದರಿಂದ ರೆಟಿನಾ ಸಮಸ್ಯೆಯಿಂದ ಉಂಟಾಗುವ ಕುರುಡುತನ ತಡೆಗಟ್ಟಬಹುದು ಅಂತಾರೆ ಡಾ. ಶ್ರೀಭಾರ್ಗವ ನಟೇಶ್, ನಿರ್ದೇಶಕರು ಮತ್ತು ವಿಟ್ರಿಯೊ ರೆಟಿನಾ ಸಲಹೆಗಾರರು, ನೇತ್ರಾ ಕಣ್ಣಿನ ಆಸ್ಪತ್ರೆ, ಬೆಂಗಳೂರು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications