ಕಷ್ಟಪಟ್ಟು ಮೈ ತೂಕ ಇಳಿಸಿಕೊಂಡ ಕೆಲವೇತಿಂಗಳಿನಲ್ಲಿ ಮೈ ತೂಕ ಹೆಚ್ಚಾಗಲು ಕಾರಣವೇನು?

ಹೆಚ್ಚಿನವರು ತೂಕ ಇಳಿಸಿಕೊಳ್ಳಬೇಕೆಂದು ಡಯಟ್‌, ಫಿಟ್‌ನೆಸ್‌ ಮೊರೆಹೋಗುತ್ತಾರೆ. ಆದರೆ ಕೆಲವೊಮ್ಮೆ ಎಷ್ಟೇ ಡಯಟ್‌ ಮಾಡಿದ್ರೂ ಕಳೆದುಕೊಂಡ ತೂಕ ಮತ್ತೆ ಮರುಹೆಚ್ಚಿಸಿಕೊಳ್ಳುತ್ತಾರೆ. ಎಲ್ಲಿ ತಪ್ಪು ಮಾಡಿದ್ದೇವೆ ಎಂದು ತಿಳಿಯುವುದಿಲ್ಲ. ತೂಕ ಇಳಿಸಿಕೊಳ್ಳಲು ಹೋಗಿ ತೂಕ ಹೆಚ್ಚಿಸಿಕೊಂಡರೆ ಹೇಗಾಗಬೇಡ ಪರಿಸ್ಥಿತಿ..!

ತೂಕ ಕಳೆದುಕೊಳ್ಳುವ ನಿಟ್ಟಿನಲ್ಲಿ ಮಾಡುವ ಡೈಲಿ ರುಟೀನ್‌ನಲ್ಲಿ ಎಲ್ಲಿ ಏನೋ ಒಂದು ಮಿಸ್‌ ಹೊಡಿತಾ ಇದೆ ಅಂದುಕೊಂಡ್ರೆ ಈ ಲೇಖನ ತಪ್ಪದೇ ಓದಿ. ಹಿಂದಿನ ದಿನ ಕಡಿಮೆ ಇದ್ದ ತೂಕ ದಿನ ಬೆಳಗಾಗೋದರಲ್ಲಿ ಸ್ವಲ್ಪ ಹೆಚ್ಚಾಗಿದೆ ಅಂದ್ರೆ ಅದಕ್ಕೂ ಕೆಲವು ಕಾರಣಗಳಿದೆ ಅವೇನು ಎನ್ನುವುದನ್ನು ನೋಡೋಣ.

gaining back the weight after diet

ತೂಕ ಮರು ಹೆಚ್ಚಿಸಿಕೊಳ್ಳುವುದು ಸಾಮಾನ್ಯ
ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವಾಗ ಕೆಲವೊಂದು ಹೊಸ ಹೊಸ ಡಯಟ್‌ ಫುಡ್‌ಗೆ ಬದಲಾಗುತ್ತೀರಿ. ಈ ಡಯಟ್‌ ಫುಡ್‌ನ ಹೆಚ್ಚು ಸೇವನೆ ಅಥವಾ ಕಡಿಮೆ ಸೇವನೆಯ ಕಾರಣದಿಂದಲೂ ತೂಕದಲ್ಲಿ ಬದಲಾವಣೆ ಕಂಡುಬರುತ್ತದೆ. ಸರಾಸರಿ ವಯಸ್ಕರ ದೈನಂದಿನ ತೂಕವು 30ರಿಂದ 40 ಗ್ರಾಂನಷ್ಟು ಏರಿಳಿತಗೊಳ್ಳುತ್ತದೆ. ಇದು ಆ ದಿನ ನೀವು ಏನು ತಿನ್ನುತ್ತೀರಿ, ಕುಡಿಯುತ್ತೀರಿ ಮತ್ತು ಹೊರಹಾಕುತ್ತೀರಿ ಎನ್ನುವುದನ್ನು ಅಲವಂಬಿಸಿರುತ್ತದೆ. ತೂಕ ಇಳಿಕೆಯ ಡಯಟ್‌ನಲ್ಲಿ ಯಾವಾಗಲೂ ತೂಕ ಕಳೆದುಕೊಳ್ಳುವಿಕೆಯ ಪ್ರಮಾಣ ಹೆಚ್ಚಾಗಬೇಕೆಂದೇನಿಲ್ಲ.ಆದಾಗ್ಯೂ, ಇದು ದೇಹಕ್ಕೆ ತೂಕ ನಷ್ಟ ಮತ್ತು ತೂಕ ಹೆಚ್ಚಳ ಅಸಾಮಾನ್ಯವೆನಿಸಿದರೆ ಅದು ನೀವು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ.

ನೀರು ಸರಿಯಾಗಿ ಕುಡಿಯದೇ ಇರೋದು
ಹೌದು.. ನೀವು ಡಯಟ್‌ ಮಾಡುವವರಾದರೆ ನೀವು ಹೆಚ್ಚು ನೀರು ಕುಡಿಯಲೇಬೇಕು. ಇಲ್ಲವಾದರೆ ಕೈ ಕಾಲುಗಳಲ್ಲಿ ನೀರು ಸೇರಿಕೊಂಡು 'ಎಡಿಮಾ'ಎನ್ನುವ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಇದು ತೂಕ ಹೆಚ್ಚಾಗಲು ಒಂದು ಪ್ರಮುಖ ಕಾರಣವಾಗಬಹುದು. ಇದು ನೀರು ಕುಡಿಯದೇ ಇರುವ ಕಾರಣಕ್ಕೆ ಮಾತ್ರವಲ್ಲ ಇನ್ನಿತರ ಕಾರಣಗಳಿಂದಾಗಿಯೂ ಉಂಟಾಗಬಹುದು.

ಇನ್ನಿತರ ಕಾರಣಗಳೆಂದರೆ
ಹಿಂದಿನ ದಿನ ರಾತ್ರಿಯ ಊಟದಲ್ಲಿ ಹೆಚ್ಚಿನ ಉಪ್ಪು ಸೇವನೆ
ಸಾಕಷ್ಟು ನೀರಿನ ಸೇವನೆ
ಪೊಟ್ಯಾಷಿಯಂ ಮತ್ತು ಮೆಗ್ನೇಷಿಯಂ ಕಡಿಮೆ ಇರುವ ಆಹಾರದ ಡಯಟ್‌
ದೇಹದಲ್ಲಿ ವಿಟಮಿನ್‌ ಬಿ ಕೊರತೆ
ಮಹಿಳೆಯರಲ್ಲಿ ಋತುಚಕ್ರವು ಸಮೀಪಿಸಿದಾಗಲೂ ತೂಕ ಹೆಚ್ಚಾಗಬಹುದು

ತೂಕ ಹೆಚ್ಚಾಗುವುದು, ಕಡಿಮೆಯಾಗುವುದು ಹೃದಯಕ್ಕೆ ಅಪಾಯಕಾರಿ
ತೂಕ ಹೆಚ್ಚಾಗುವುದು ನಿಮ್ಮ ಹೃದಯ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ತೂಕವನ್ನು ಹೆಚ್ಚಾದರೂ ಮತ್ತು ಹೆಚ್ಚು ತೂಕ ಕಳೆದುಕೊಂಡರೂ ಹೃದಯದ ಸಮಸ್ಯೆ ಬರಬಹುದು. ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ ಪ್ರಕಟಿಸಿದ ಇತ್ತೀಚಿನ ಅಧ್ಯಯನವು ಹೃದ್ರೋಗದ ಅಪಾಯವು ತೂಕದಲ್ಲಿನ ಬದಲಾವಣೆಯೊಂದಿಗೆ ಪರಸ್ಪರ ಸಂಬಂಧ ಹೊಂದಿದೆ ಎಂದು ಕಂಡುಹಿಡಿದಿದೆ . ತೂಕದಲ್ಲಿ ಹೆಚ್ಚಿನ ಏರಿಳಿತವು, ಹೆಚ್ಚಿನ ಅಪಾಯ ತರುತ್ತದಂತೆ.

ಡಯಟ್‌ ಮಾಡಿದರೂ ತೂಕ ಹೆಚ್ಚಾಗುವುದನ್ನು ತಡೆಯಲು ಹೀಗೆ ಮಾಡಿ
ನಿಮ್ಮ ಡಯಟ್‌ನಲ್ಲಿ ಆಹಾರಕ್ರಮವು ಕಠಿಣವಾಗಿದ್ದಲ್ಲಿ ನೀವು ತೂಕವನ್ನು ಇಳಿಸಬಹುದು. ಆರೋಗ್ಯಕರವಾಗಿರಲು ತೂಕ ಇಳಿಸಬೇಕೆಂದೇನಿಲ್ಲ. ಆದರೂ ತೂಕವನ್ನು ಕಡಿಮೆ ಮಾಡಿಕೊಳ್ಳಲೆಂದೇ ನೀವು ಬಯಸಿದ್ದರೆ ಈ ಟಿಪ್ಸ್‌ ಅಳವಡಿಸಿಕೊಳ್ಳಿ.

ಆಹಾರಕ್ರಮ
ತೂಕ ಇಳಿಸಬೇಕೆಂದರೆ ಮೊದಲನೆಯದಾಗಿ ನಿಮ್ಮ ಆಹಾರ ಕ್ರಮ ಬದಲಾಗಬೇಕು. ನೀವು ಅನುಸರಿಸುತ್ತಿರುವ ಆಹಾರಕ್ರಮವನ್ನು ಪರಿಶೀಲಿಸಿ. ಹೆಚ್ಚು ಕಾರ್ಬೋಹೈಡ್ರೇಟ್ಸ್‌ ಇರುವ ಸಕ್ಕರೆಯಂಶ ಹೆಚ್ಚಿರುವ ಆಹಾರಗಳನ್ನು ಬಂದ್‌ ಮಾಡಿ. ಮುಖ್ಯವಾಗಿ ಏನು ತಿನ್ನಬೇಕು ಏನು ತಿನ್ನಬಾರದು ಎನ್ನುವುದನ್ನು ನೋಟ್‌ ಮಾಡಿಟ್ಟುಕೊಳ್ಳುವುದಲ್ಲದೇ, ಅದನ್ನು ಅಳವಡಿಸಿಕೊಳ್ಳಿ.

ನೀವು ಏನು ತಿನ್ನುತ್ತಿದ್ದೀರಿ ಎನ್ನುವುದನ್ನು ಯೋಚಿಸಿ
ಸಾಮಾನ್ಯವಾಗಿ ಹೆಚ್ಚಿನ ಪ್ರಮಾಣದ ಸಕ್ಕರೆ ಮತ್ತು ಸೋಡಿಯಂ ಹೆಚ್ಚಿರುವ ಆಹಾರ ತಪ್ಪಿಸುವುದು ತೂಕ ಇಳಿಸಲು ಸಹಕಾರಿ. ಆಹಾರ ಸೇವಿಸುವಾಗಲೂ ಮಿತಿಯನ್ನು ನೆನಪಿಟ್ಟುಕೊಳ್ಳಿ. ಆಹಾರಸೇವನೆಯಲ್ಲಿ ಸಮತೋಲನವಿರಲಿ. ನಿಮ್ಮ ಆರೋಗ್ಯಕ್ಕಾಗಿ ಉತ್ತಮ ಆಯ್ಕೆಗಳನ್ನು ಮಾಡಿ.

ವ್ಯಾಯಾಮ
ಆಹಾರ ಸೇವನೆ ಮಾತ್ರವಲ್ಲ ತೂಕ ಇಳಿಸಬೇಕಾದರೆ ದೈಹಿಕ ವ್ಯಾಯಾಮವೂ ಅಗತ್ಯ.ಸಕ್ರಿಯವಾಗಿರುವುದು ತೂಕ ಇಳಿಕೆಯ ಅವಧಿಯಲ್ಲಿ ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸ್ನಾಯುಗಳಲ್ಲಿನ ಕೊಬ್ಬು ಕಡಿಮೆ ಮಾಡಲು ವ್ಯಾಯಾಮವು ನಿಮಗೆ ಸಹಾಯ ಮಾಡುತ್ತದೆ.ಜೊತೆಗೆ ವಿಶ್ರಾಂತಿಯನ್ನು ತೆಗೆದುಕೊಳ್ಳುವುದನ್ನು ಮರೆಯಬೇಡಿ ಮತ್ತು ಅಗತ್ಯಕ್ಕಿಂತ ಹೆಚ್ಚು ಶ್ರಮ ಪಡಲು ಹೋಗಬೇಡಿ.

ಡಯಟಿಷಿಯನ್‌ ಸಲಹೆ ಪಡೆಯಿರಿ
ನೀವು ಅತಿಯಾಗಿ ತಿನ್ನದಿದ್ದರೂ ಊಟ ಮತ್ತು ತೂಕದ ವಿಚಾರದಲ್ಲಿ ನಿಮಗೆ ಸಂದೇಹಗಳಿದ್ದರೆ ಆಹಾರ ತಜ್ಞರನ್ನು ಭೇಟಿ ಮಾಡಿ ಸಲಹೆ ಪಡೆಯಿರಿ. ನಿಮ್ಮ ದೇಹದ ಆರೋಗ್ಯಕ್ಕೆ ತಕ್ಕಂತೆ ತೂಕವನ್ನು ಇಳಿಸಲು ಯಾವ ರೀತಿಯ ಆಹಾರಕ್ರಮವನ್ನು ಅನುಸರಿಸಬೇಕು ಎನ್ನುವುದನ್ನು ಅವರು ತಿಳಿಸಬಹುದು. ತೂಕ ಇಳಿಸುವುದೆಂದರೆ ಒಂದೇ ಬಾರಿ ತೂಕ ಇಳಿಸುವುದಲ್ಲ. ಜೊತೆಗೆ ಡಯಟ್‌ ಮಾಡಿಯೂ ನಿಮ್ಮ ತೂಕ ಹೆಚ್ಚಾಗುತ್ತಿದೆಯೆಂದರೆ ಆರೋಗ್ಯ ತಜ್ಞರ ಸಲಹೆ ಪಡೆಯಲು ಮರೆಯಬೇಡಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Why You Gain Weight So Soon After Loosing Weight

Do you why we gain weight after loosing it,
Story first published: Friday, January 26, 2024, 9:16 [IST]
X
Desktop Bottom Promotion