Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತದಲ್ಲಿ ಹೆಚ್ಚಾಗುತ್ತಿದೆ ಕ್ಯಾನ್ಸರ್ ರೋಗಿಗಳ ಸಂಖ್ಯೆ, ಇದರ ಬಗ್ಗೆ ವೈದ್ಯರು ಹೇಳುವುದೇನು?
ಡಾ, ಹರೀಶ್ ಇ ಕ್ಯಾನ್ಸರ್‌ರೋಗ ಶಸ್ತ್ರಚಿಕಿತ್ಸಾ ತಜ್ಞರು, ಕೆಎಂಸಿ ಆಸ್ಪತ್ರೆ, ಮಂಗಳೂರು
ಕ್ಯಾನ್ಸರ್ ಪ್ರಕರಣಗಳು ಸತತವಾಗಿ ಹೆಚ್ಚುತ್ತಿರುವ ಕಾರಣ, ಭಾರತ "ಜಗತ್ತಿನ ಕ್ಯಾನ್ಸರ್ ರಾಜಧಾನಿ'' ಆಗುವ ಸಂಭಾವ್ಯತೆ ಹೆಚ್ಚಿದೆ ಎಂದು ಗುರುತಿಸಲಾಗುತ್ತಿದೆ. 2020ರಲ್ಲಿ ಸುಮಾರು 14 ಲಕ್ಷದಷ್ಟಿದ್ದ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ 2025ರ ಹೊತ್ತಿಗೆ ಗಮನಾರ್ಹವಾಗಿ ಹೆಚ್ಚಾಗಿ 15,70,000ವಾಗುವ ನಿರೀಕ್ಷೆ ಇದೆ ಎಂದು ವರದಿಗಳು ತಿಳಿಸಿವೆ. ಈ ಪ್ರಕರಣಗಳ ಸಂಖ್ಯೆಯಲ್ಲಿನ ಭಾರಿ ಹೆಚ್ಚಳವು ಜಾಗತಿಕ ದರಗಳನ್ನು ಮೀರಿದ್ದು, ದೇಶ ಎದುರಿಸಬಹುದಾದ ಆರೋಗ್ಯಸೇವೆಯಲ್ಲಿನ ಕಠಿಣ ಸವಾಲುಗಳನ್ನು ಇದು ಪ್ರಮುಖವಾಗಿ ಎತ್ತಿತೋರುತ್ತದೆ.
ದೇಶದ ಜನಸಂಖ್ಯೆಯ ಮೇಲೆ ಈ ರೋಗ ಹೊರಿಸಲಿರುವ ಗಮನಾರ್ಹ ಹೊರೆಯನ್ನು ಭಾರತದಲ್ಲಿನ ಕ್ಯಾನ್ಸರ್ ಅಂಕಿ ಅಂಶಗಳು ಮುಖ್ಯವಾಗಿ ಎತ್ತಿ ತೋರುತ್ತವೆ. ಇತ್ತೀಚಿನ ದತ್ತಾಂಶ ಆಧರಿಸಿದ ಕೆಲವು ಮುಖ್ಯ ಅಂಕಿಅಂಶಗಳು ಈ ಕೆಳಗಿನಂತಿವೆ:

ಕ್ಯಾನ್ಸರ್ ಪ್ರಕರಣಗಳ ದರ
- ವಾರ್ಷಿಕವಾಗಿ ಭಾರತದಲ್ಲಿ 14 ಲಕ್ಷ ನೂತನ ಕ್ಯಾನ್ಸರ್ ಪ್ರಕರಣಗಳು ಕಂಡು ಬರುತ್ತವೆ.
- ಎಲ್ಲ ವಯೋಮಾನಗಳ 1,00,000 ಜನರ ಪೈಕಿ ಸುಮಾರು 97 ಕ್ಯಾನ್ಸರ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ.
ಸಾವಿನ ಸಾಧ್ಯತೆ
- ವಾರ್ಷಿಕವಾಗಿ ಕ್ಯಾನ್ಸರ್‌ನಿಂದ ಸುಮಾರು 7,00,000 ಸಾವುಗಳು ಸಂಭವಿಸುತ್ತವೆ.
- ಎಲ್ಲಾ ವಯೋಮಾನಗಳ 1,00,000 ಜನರ ಪೈಕಿ ಕ್ಯಾನ್ಸರ್‌ನಿಂದ ಉಂಟಾಗುವ ಸಾವಿನ ದರ 64.5ರಷ್ಟಿದೆ.
ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚಲು ಇರುವ ಪ್ರಮುಖ ಅಂಶಗಳು ಯಾವುವು?
ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕೊಡುಗೆ ನೀಡುವ ಹಲವಾರು ಅಂಶಗಳಿವೆ. ಈಗಿನ ಆಧುನಿಕ ಜೀವನಶೈಲಿಯು ಕ್ಯಾನ್ಸರ್ ಪ್ರಕರಣಗಳ ಏರಿಕೆಗೆ ದಾರಿ ಮಾಡಿಕೊಡುತ್ತವೆ. ಅನಾರೋಗ್ಯಕರ ಆಹಾರಕ್ರಮ, ಆಲಸಿ ಅಭ್ಯಾಸಗಳು ಮತ್ತು ತಂಬಾಕು ಹಾಗೂ ಮದ್ಯದ ಸೇವನೆ ಹೆಚ್ಚಾಗಿರುವುದು ಮುಂತಾದವು ಈ ಅಂಶಗಳಲ್ಲಿ ಸೇರಿವೆ.
ಕೈಗಾರಿಕಾ ಮಾಲಿನ್ಯ ಮತ್ತು ಕೃಷಿ ಹಾಗೂ ಕೈಗಾರಿಕೆಗಳಲ್ಲಿ ಕ್ಯಾನ್ಸರ್‌ಕಾರಕಗಳೊಂದಿಗೆ(ಕಾರ್ಸಿನೋಜೆನ್ಸ್) ಜನರ ಸಂಪರ್ಕ ಹೆಚ್ಚಾಗಿರುವುದು ಈ ವಿಷಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಆರೋಗ್ಯ ಸೇವೆಯ ಸಂಪರ್ಕ ನಿಯಮಿತವಾಗಿರುವುದು ರೋಗ ತಡವಾಗಿ ಪತ್ತೆ ಆಗುವುದು ಮತ್ತು ಚಿಕಿತ್ಸಾ ಸೌಲಭ್ಯಗಳು ಸೂಕ್ತ ಪ್ರಮಾಣದಲ್ಲಿ ಇಲ್ಲದಿರುವುದು ಮುಂತಾದ ಅಂಶಗಳು ಈ ತೊಂದರೆ ಹೆಚ್ಚಲು ಕಾರಣವಾಗಿವೆ.
ಹೆಚ್ಚುವರಿಯಾಗಿ, ಹಿರಿಯ ವಯಸ್ಕ ಜನರ ಸಂಖ್ಯೆ ಹೆಚ್ಚುತ್ತಿರುವುದು ಮತ್ತು ಕ್ಯಾನ್ಸರ್ ರೋಗಕ್ಕೆ ತುತ್ತಾಗುವಂತಹ ವಂಶವಾಹಿ ಗುಣಲಕ್ಷಣಗಳು ಹೆಚ್ಚಾಗುತ್ತಿರುವುದು ಈ ಹೊರೆಗೆ ಮತ್ತಷ್ಟು ಕೊಡುಗೆ ನೀಡುತ್ತಿವೆ. ಸಾಮಾಜಿಕ ಆರ್ಥಿಕ ವ್ಯತ್ಯಾಸಗಳು ಮತ್ತು ಸಾಂಸ್ಕೃತಿಕ ಅಂತರಗಳಲ್ಲಿನ ಅಡೆತಡೆಗಳು ಈ ರೋಗವನ್ನು ತಡೆಯುವಲ್ಲಿ ಮತ್ತು ಚಿಕಿತ್ಸಾ ಪ್ರಯತ್ನಗಳಿಗೆ ಅಡ್ಡಿ ಉಂಟುಮಾಡುತ್ತಿವೆ.
ಕ್ಯಾನ್ಸರ್‌ನ ಸಂಖ್ಯೆಯನ್ನು ಕಡಿಮೆ ಮಾಡಲು ಯಾವ ಕ್ರಮಗಳು ಮತ್ತು ಮುನ್ನಚ್ಚರಿಕೆಗಳನ್ನು ಕೈಗೊಳ್ಳಬೇಕು?
ಭಾರತದಲ್ಲಿ ಈ ರೋಗದ ಹೊರೆಯನ್ನು ಕಡಿಮೆ ಮಾಡುವುದಕ್ಕಾಗಿ ಈ ಕ್ಯಾನ್ಸರ್ ರೋಗವನ್ನು ತಡೆಯುವುದು, ಶೀಘ್ರ ಪತ್ತೆ ಮಾಡುವುದು, ಚಿಕಿತ್ಸೆ ಮತ್ತು ರೋಗಿಗಳ ಜೀವನದ ಗುಣಮಟ್ಟ ಸುಧಾರಿಸುವ ಆರೈಕೆ ಮುಂತಾದವುಗಳನ್ನು ಒಳಗೊಂಡ ಸಮಗ್ರ ಮಾರ್ಗವನ್ನು ಅನುಸರಿಸುವ ಅಗತ್ಯವಿದೆ.
ಜೀವನಶೈಲಿ
ತಂಬಾಕು ನಿಯಂತ್ರಣ, ಲಸಿಕೆ ನೀಡುವುದು ಮತ್ತು ಜೀವನಶೈಲಿಯ ಬದಲಾವಣೆಯನ್ನು ಪ್ರೋತ್ಸಾಹಿಸುವುದು ಮುಂತಾದವುಗಳು ಈ ರೋಗವನ್ನು ತಡೆಯುವ ಕಾರ್ಯತಂತ್ರಗಳಲ್ಲಿ ಸೇರಿರುತ್ತವೆ. ಈ ರೋಗದ ಕುರಿತು ಜಾಗೃತಿ ಮೂಡಿಸುವ ಅಭಿಯಾನಗಳ ಜೊತೆಗೆ ಸ್ತನ, ಗರ್ಭಕೋಶ, ಬಾಯಿಯ ಕ್ಯಾನ್ಸರ್‌ಗಳಿಗಾಗಿ ಪರೀಕ್ಷೆ ಕಾರ್ಯಕ್ರಮಗಳನ್ನು ನಡೆಸುವುದು ಮುಖ್ಯವಾಗಿರುತ್ತದೆ. ಆರೋಗ್ಯ ಮೂಲಸೌಕರ್ಯ ಸುಧಾರಣೆ, ವೃತ್ತಿಪರರಿಗೆ ತರಬೇತಿ ನೀಡುವುದು ಮತ್ತು ಔಷಧಗಳು ಲಭ್ಯವಾಗುವಂತೆ ಮಾಡುವ ಖಾತ್ರಿ ಮಾಡಿಕೊಳ್ಳುವುದು ಚಿಕಿತ್ಸೆಗೆ ಅತ್ಯಂತ ಮುಖ್ಯವಾಗಿರುತ್ತದೆ. ರೋಗಿಗಳ ಜೀವನ ಗುಣಮಟ್ಟ ಸುಧಾರಿಸುವ ಆರೈಕೆ, ನೋವು ನಿರ್ವಹಣೆ ಮತ್ತು ಬೆಂಬಲ ವ್ಯವಸ್ಥೆಗಳು ರೋಗಿಯ ಯೋಗಕ್ಷೇಮವನ್ನು ವಿಸ್ತರಿಸುತ್ತವೆ.
ಕ್ಯಾನ್ಸರ್ ಕುರಿತ ನೋಂದಣಿಗಳು ದತ್ತಾಂಶ ಸಂಗ್ರಹಣೆಯಲ್ಲಿ ನೆರವಾಗುತ್ತವೆ. ಸಂಶೋಧನೆ ಮತ್ತು ನೀತಿ ಬೆಂಬಲಗಳು ಪ್ರಗತಿಗೆ ಚಾಲನೆ ನೀಡುತ್ತವೆ. ಸಂಪನ್ಮೂಲಗಳ ಕೊರತೆಯನ್ನು ಇಲ್ಲವಾಗಿಸಲು ಮತ್ತು ಸಾಂಸ್ಕೃತಿಕ ಹಾಗೂ ಭೌಗೋಳಿಕ ತಡೆಗೋಡೆಗಳನ್ನು ದಾಟಲು ಸಂಪೂರ್ಣ ಹಾಗೂ ಸಮಗ್ರ ಕ್ಯಾನ್ಸರ್ ನಿಯಂತ್ರಣ ಚೌಕಟ್ಟಿನ ಅಗತ್ಯವಿರುತ್ತದೆ ಅಲ್ಲದೆ, ಸಾರ್ವಜನಿಕರು, ಖಾಸಗಿ ಮತ್ತು ಅಂತಾರಾಷ್ಟ್ರೀಯ ಸಂಸ್ಥೆಗಳ ನಡುವೆ ಸಹಭಾಗಿತ್ವ ಅಗತ್ಯವಾಗಿರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications