Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ನಿಫಾಗೆ ಬಾಲಕ ಬಲಿ: ಕೇರಳದಲ್ಲಿ ಮಾತ್ರ ಪ್ರತಿವರ್ಷ ಈ ಭಯಾನಕ ನಿಫಾ ವೈರಸ್ ಮರುಕಳಿಸುತ್ತಿರುವುದು ಏಕೆ?
ಕೇರಳದಲ್ಲಿ 14 ವರ್ಷದ ಬಾಲಕನಿಗೆ ನಿಫಾ ವೈರಸ್ ಬಂದಿದೆ ಎಂಬುವುದು ನೆನ್ನೆಯಷ್ಟೇ ಖಚಿತವಾಗಿತ್ತು, ಆತನನ್ನು ಕೋಝಿಕೋಡ್‌ನ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು, ಅಲ್ಲಿನ ಆಸ್ಪತ್ರೆ ಸಿಬ್ಬಂದಿ ಈ ರೋಗ ಹರಡದಂತೆ ತಮ್ಮ ಸುರಕ್ಷತೆಗೆ ಎಲ್ಲಾ ಮುನ್ನೆಚ್ಚರಿಕೆವಹಿಸಿ ಆ ಮಗುವಿಗೆ ಚಿಕಿತ್ಸೆ ಪ್ರಾರಂಭಿಸಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ ಬಾಲಕ ಸಾವನ್ನಪ್ಪಿರುವ ಸುದ್ದಿ ಹೊರ ಬರುತ್ತಿದ್ದಂತೆ ಆ ಸುದ್ದಿ ಬೇಸರ ಹಾಗೂ ಆತಂಕವನ್ನು ಸೃಷ್ಟಿಸಿದೆ .

ನಿಫಾ ವೈರಸ್ ಇತ್ತೀಚೆಗೆ ಪ್ರತಿ ವರ್ಷ ಬರುತ್ತಿದೆ
ಮೊದಲಿಗೆ ಈ ಕಾಯಿಲೆಯ ಗಂಭೀರತೆ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿರಲಿಲ್ಲ, ಆದರೆ 2018ರಿಂದ ನಿಫಾ ಎಂದರೆ ಕೇರಳ ಬೆಚ್ಚಿ ಬೀಳುತ್ತಿದೆ, ಏಕೆಂದರೆ ಕೇರಳದಲ್ಲಿ ಅಂಥ ಸ್ಥಿತಿ ನಿರ್ಮಾಣ ಮಾಡಿತ್ತು, 21 ಜನರು ನಿಫಾ ವೈರಸ್‌ಗೆ ಬಲಿಯಾಗಿದ್ದರು. ಕೊರೊನಾ ಸಮಯದಲ್ಲಿಯೂ ಈ ನಿಫಾ ಬಂದಿತ್ತು, ಕಳೆದ ವರ್ಷ ಕೂಡ ಇಬ್ಬರು ನಿಫಾ ವೈರಸ್‌ಗೆ ಬಲಿಯಾಗಿದ್ದಾರೆ, ಈಗ ಮಲ್ಪುರದ 14 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ.
ಕೇರಳದಲ್ಲಿ ಈ ನಿಫಾ ವೈರಸ್ ಪ್ರತಿವರ್ಷ ಕಾಣಿಸಿಕೊಳ್ಳಲು ಕಾರಣವೇನು?
ಕೇರಳದಲ್ಲಿಯೇ ಈ ನಿಫಾ ವೈರಸ್ ಪ್ರತಿವರ್ಷ ಬರುತ್ತಿರಲು ಕಾರಣವೇನು ಎಂಬುವುದಕ್ಕೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ, ಆದರೆ ಈ ಕಾರಣಗಳಿರಬಹುದು ಎಂದು ಊಹೆ ಮಾಡಲಾಗುತ್ತಿದೆ.
ಬೇರೆ ರಾಜ್ಯಗಳಲ್ಲಿ ಇರುವುದಕ್ಕಿಂತ ಕೇರಳದಲ್ಲಿ ಬಾವಲಿಗಳ ಸಂಖ್ಯೆ 10 ಪಟ್ಟು ಹೆಚ್ಚಿದೆ: ಈ ನಿಫಾ ಬಾವಲಿಗಳಿಂದ ಬರುತ್ತಿದೆ ಎಂದು ಹೇಳಲಾಗುತ್ತಿದೆ, ಆದರೆ ಅದಕ್ಕೂ ನಿಖರ ಕಾರಣವಿಲ್ಲ, ಬಾವಲಿ ತಿಂದ ಹಣ್ಣುಗಳ ಸೇವನೆಯಿಂದ ಬರುತ್ತಿದೆ ಎಂದು ಹೇಳಲಾಗುತ್ತಿದೆ.
ಅಲ್ಲದೆ ಕೇರಳದಲ್ಲಿ ನೀರಾ ಕೂಡ ಹೆಚ್ಚಾಗಿ ತೆಗೆಯಲಾಗುವುದು, ಇದು ಕೂಡ ಎಂದು ಹೇಳಲಾಗುತ್ತಿದೆ, ನೀರಾ ತೆಗೆದು ಹಾಗೇ ಬಿಟ್ಟಾಗ ಅದು ಕಲುಷಿತವಾಗುವುದು, ಇದನ್ನು ಬಾವಲಿಗಳು ಸೇವನೆ ಮಾಡಿದಾಗ ಅವುಗಳಿಗೆ ನಿಫಾ ವೈರಸ್ ಬರುತ್ತದೆ, ಆ ಬಾವಲಿಗಳು ಹಣ್ಣುಗಳನ್ನ ಕಚ್ಚಿದಾಗ ಆ ಹಣ್ಣುಗಳನ್ನು ಸೇವಿಸಿದ ಪ್ರಾಣಿಗಳಿಗೆ, ಮನುಷ್ಯರಿಗೆ ಬರುತ್ತದೆ ಎಂದು ಹೇಳಲಾಗುತ್ತಿದೆ, ಆದರೆ ಇದುವೇ ನಿರ್ದಿಷ್ಟ ಕಾರಣ ಎಂದು ಹೇಳಲಾಗುತ್ತಿಲ್ಲ, ಇದೆಲ್ಲಾ ಊಹೆಗಳಷ್ಟೇ...
ಈ ನಿಫಾ ವೈರಸ್ ತಡೆಗಟ್ಟಲು ಆ್ಯಂಟಿಬಾಡಿ ಲಸಿಕೆ ನೀಡಲು ಚಿಂತನೆ
ಕೊರೊನಾ ಲಸಿಕೆಯಂತೆ ನಿಫಾ ವೈರಸ್ ತಡೆಗಟ್ಟಲು ಆ್ಯಂಟಿಬಾಡಿ ಲಸಿಕೆ ನೀಡುವ ಬಗ್ಗೆ ಚಿಂತನೆ ಮಾಡಿತ್ತು, ಆದರೆ ಇಂಥ ಲಸಿಕೆಯ ಅನಿವಾರ್ಯತೆ ಕೇರಳಕ್ಕೆ ತುಂಬಾನೇ ಇದೆ.
ಕೇರಳದಲ್ಲಿಯೇ ಈ ನಿಫಾ ಮೊದಲ ಬಾರಿಗೆ ಕಂಡು ಬಂದಿದ್ದಾ?
ಹೌದು, ಕೇರಳದ ಕೋಝಿಕೋಡ್‌ನಲ್ಲಿ 2018ರಲ್ಲಿ ಮೊದಲ ಬಾರಿ ಪತ್ತೆಯಾಗಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೇರಳ ಮಾತ್ರ ಈ ಕಾಯಿಲೆ ಪತ್ತೆಯಾಗಿರುವುದಾ?
ಇಲ್ಲ 2018ರಲ್ಲಿ ಪಶ್ಚಿಮ ಬಂಗಾಳದಲ್ಲಿಯೂ 5 ಕೇಸ್ ಪತ್ತೆಯಾಗಿತ್ತು, ಆದರೆ ಅದರ ಬಳಿಕ ಅಲ್ಲಿ ಮರುಕಳಿಸಿಲ್ಲ, ಕೇರಳದಲ್ಲಿ ಮಾತ್ರ ಪ್ರತಿವರ್ಷ ಮರುಕಳಿಸುತ್ತಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
