Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಕಲ್ಲಂಗಡಿ ಹಣ್ಣಿನ ಅಡ್ಡಪರಿಣಾಮ ತಿಳಿದರೆ ಶಾಕ್ ಆಗುತ್ತೆ.! ಯಾರೆಲ್ಲಾ ಸೇವಿಸಬಾರದು ಗೊತ್ತಾ.?
ಬೇಸಿಗೆಯಲ್ಲಿ ಐದು ನಿಮಿಷ ಹೊರಗಿನ ಬಿಸಿಲಿಗೆ ಮೈ ಒಡ್ಡಿದರೂ ವಿಪರೀತ ಸುಸ್ತಾಗುತ್ತೆ. ದೇಹಕ್ಕೆ ನೀರಿನ ಅಗತ್ಯತೆ ಹೆಚ್ಚಾಗಿ ಬೇಕಾಗುತ್ತದೆ. ಅಲ್ಲದೆ ಬೇಸಿಗೆಯಲ್ಲಿ ಹೆಚ್ಚು ನೀರು ಕುಡಿಯಬೇಕಾಗುತ್ತದೆ. ಈ ನಡುವೆ ಜ್ಯೂಸ್ ಇಲ್ಲವೆ ಹಣ್ಣು ಸೇವಿಸುವ ಕಡೆ ಜನರ ಒಲುವು ಹೆಚ್ಚುತ್ತದೆ.
ಬೇಸಿಗೆಯಲ್ಲಿ ಹೆಚ್ಚಾಗಿ ಜನ ಕಲ್ಲಂಗಡಿ ಹಣ್ಣು ಇಲ್ಲವೆ ಜ್ಯೂಸ್ ಸೇವಿಸಲು ಹೆಚ್ಚು ಇಷ್ಟ ಪಡುತ್ತಾರೆ. ಏಕೆಂದರೆ ರುಚಿಯೂ ಹೆಚ್ಚು ಜೊತೆಗ ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನಗಳಿವೆ ಎಂದು ಕಲ್ಲಂಗಡಿ ಹಣ್ಣಿಗೆ ಮಾರುಹೋಗಿರುತ್ತಾರೆ. ಇನ್ನು ಬೇಸಿಗೆಯಲ್ಲೇ ಕಲ್ಲಂಗಡಿ ತಿನ್ನಲು ಹೆಚ್ಚು ರುಚಿಯಾಗಿರುತ್ತದೆ. ಮಳೆ ಬಿತ್ತೆಂದರೆ ಕಲ್ಲಂಗಡಿ ಸಿಹಿ ಹೊರಟು ಹೋಗಿ ಬರಿ ನೀರಿನಂತಾಗುತ್ತದೆ.

ಇನ್ನು ನಿಮಗೆಲ್ಲ ಕಲ್ಲಂಗಡಿ ಹಣ್ಣು ಸೇವನೆಯಿಂದ ಯಾವೆಲ್ಲಾ ಆರೋಗ್ಯಕರ ಲಾಭವಿದೆ ಎಂಬುದು ತಿಳಿದಿರಬಹುದು. ಆದ್ರೆ ಇದೇ ಕಲ್ಲಂಗಡಿ ಸೇವನೆಯ ಅಡ್ಡಪರಿಣಾಮಗಳ ಕುರಿತು ನಿಮಗೆ ತಿಳಿದಿದ್ಯಾ? ಹೌದು ಕಲ್ಲಂಗಡಿ ಹಣ್ಣು ಸೇವನೆಯಿಂದ ಕೆಲವೊಂದು ಅಡ್ಡಪರಿಣಾಮವೂ ಸಹ ಇದೆ. ಹಾಗಾದರೆ ನಾವಿಂದು ಕಲ್ಲಂಗಡಿ ಹಣ್ಣಿನಿಂದ ಆಗುವ ಅಡ್ಡ ಪರಿಣಾಮಗಳೇನು ಎಂಬುದನ್ನು ತಿಳಿದುಕೊಳ್ಳೋಣ.
ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಕಲ್ಲಂಗಡಿ ಹಣ್ಣಿನ್ನು ಬಹಳಷ್ಟು ಇಷ್ಟಪಡುತ್ತಾರೆ. ಆದರೆ ಮಧುಮೇಹದಿಂದ ಬಳಲುತ್ತಿರುವವರು ಕಲ್ಲಂಗಡಿ ತಿನ್ನಬಾರದು. ಏಕೆಂದರೆ ಕಲ್ಲಂಗಡಿಯಲ್ಲಿ ನೈಸರ್ಗಿಕ ಸಕ್ಕರೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಮಧುಮೇಹ ರೋಗಿಗಳಿಗೆ ಇದು ತುಂಬಾ ಅಪಾಯಕಾರಿ. ಆದ್ದರಿಂದ, ಮಧುಮೇಹ ರೋಗಿಗಳು ಯಾವುದೇ ರೂಪದಲ್ಲಿ ಕಲ್ಲಂಗಡಿ ಸೇವಿಸಬಾರದು.
ಅಸ್ತಮಾವಿದ್ದರೆ ಕಲ್ಲಂಗಡಿ ತಿನ್ನಬೇಡಿ
ಅಸ್ತಮಾ ಒಂದು ಗಂಭೀರ ಕಾಯಿಲೆ. ಇದು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಅಸ್ತಮಾದಿಂದ ಬಳಲುತ್ತಿರುವವರು ಕಲ್ಲಂಗಡಿ ಹಣ್ಣನ್ನು ಸೇವಿಸಬಾರದು. ಏಕೆಂದರೆ ಕಲ್ಲಂಗಡಿ ತಂಪಾಗಿಸುವ ಪರಿಣಾಮವನ್ನು ಹೊಂದಿದೆ. ಇದು ಅಸ್ತಮಾ ರೋಗಿಗಳ ಸಮಸ್ಯೆ ಹೆಚ್ಚಿಸಬಹುದು. ಅಲ್ಲದೆ ಕಲ್ಲಂಗಡಿಯಲ್ಲಿ ಅಮೈನೀ ಆಮ್ಲ ಕಂಡುಬರುತ್ತದೆ. ಇದು ಅಸ್ತಮಾ ರೋಗಿಗಳಿಗೆ ಸಮಸ್ಯೆ ಹೆಚ್ಚಿಸಲು ಕಾರಣವಾಗುತ್ತದೆ. ಹೀಗಾಗಿ ಅಸ್ತಮಾ ಇದ್ದವರು ಅದಕ್ಕೆ ಚಿಕಿತ್ಸೆ ಪಡೆಯುತ್ತಿರುವವರು ಕಲ್ಲಂಗಡಿ ಹಣ್ಣು ಅಥವಾ ಜ್ಯೂಸ್ ಸೇವನೆಯಿಂದ ದೂರ ಇರುವುದು ಉತ್ತಮ.
ಕಿಡ್ನಿ ಸಮಸ್ಯೆ ಇದ್ದರೆ ಕಲ್ಲಂಗಡಿ ಹಣ್ಣನ್ನು ಸೇವಿಸಬೇಡಿ
ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗ. ಇದು ದೇಹದಲ್ಲಿ ಇರುವ ರಕ್ತವನ್ನು ಶುದ್ಧೀಕರಿಸುತ್ತದೆ ಮತ್ತು ತ್ಯಾಜ್ಯಗಳನ್ನು ತೆಗೆದುಹಾಕುತ್ತದೆ. ಇಂದಿನ ಕಾಲದಲ್ಲಿ ಕಿಡ್ನಿ ಸಮಸ್ಯೆ ಅತ್ಯಂತ ಗಂಭೀರವಾಗಿದೆ. ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಕಲ್ಲಂಗಡಿ ಹಣ್ಣನ್ನು ಸೇವಿಸಬಾರದು. ಏಕೆಂದರೆ ಕಲ್ಲಂಗಡಿಯಲ್ಲಿರುವ ಖನಿಜಗಳು ಮೂತ್ರಪಿಂಡಗಳಿಗೆ ಹಾನಿ ಮಾಡುತ್ತದೆ. ಜೊತೆಗೆ ಈಗಾಗಲೇ ಕಿಡ್ನಿ ಸಮಸ್ಯೆಗೆ ಒಳಗಾದವರು ಈ ಹಣ್ಣಿನ್ನು ಜೀವನದಲ್ಲಿ ಎಂದಿಗೂ ಸೇವಿಸದಿರುವುದೇ ಉತ್ತಮ.
ಕಲ್ಲಂಗಡಿ ಯಾರು ಸೇವಿಸಬೇಕು?
ಇನ್ನು ಮೇಲೆ ಹೇಳಿರುವಂತೆ ಇಷ್ಟೆಲ್ಲಾ ಸಮಸ್ಯೆಗಳಿರುವವರು ಕಲ್ಲಂಗಡಿ ಹಣ್ಣು ಮತ್ತು ಜ್ಯೂಸ್ ಅನ್ನು ಸೇವಿಸದಿರುವುದೇ ಉತ್ತಮ. ಅಥವಾ ಈ ಸಮಸ್ಯೆ ಇದ್ದವರು ಕಲ್ಲಂಗಡಿ ಸೇವಿಸಿದ ತಕ್ಷಣವೇ ಅದರ ಪ್ರಭಾವ ಉಂಟಾಗುವುದಿಲ್ಲ. ನಿರಂತರ ಸೇವನೆಯಿಂದ ನಿಮ್ಮ ಆರೋಗ್ಯದ ಮೇಲೆ ಅದು ಪರಿಣಾಮ ಬೀರಬಹುದು. ಇನ್ನು ಈ ಸಮಸ್ಯೆಗಳು ಇಲ್ಲದಿರುವವರು ಕಲ್ಲಂಗಡಿಯನ್ನು ಯಾವುದೇ ಭಯವಿಲ್ಲದೆ ಸೇವಿಸಬಹುದು. ಇದು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ ಆಯ್ಕೆಯಾಗಿರುತ್ತದೆ. ಕಲ್ಲಂಗಡಿಯಲ್ಲಿ ವಿಟಮಿನ್ ಬಿ6, ನಿಯಾಸಿನ್, ರಿಬೊಫ್ಲಾವಿನ್ ಮತ್ತು ಥೈಮೆನ್ ಎನ್ನುವ ವಿಟಮಿನ್ ಗಳಿವೆ. ಮಕ್ಕಳ ಬೆಳವಣಿಗೆಗೆ ಈ ವಿಟಮಿನ್‌ಗಳು ಅತೀ ಅಗತ್ಯ. ಕಲ್ಲಂಗಡಿ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿ ದೇಹವು ಕಬ್ಬಿನಾಂಶವನ್ನು ಬೇಗನೆ ಹೀರಿಕೊಳ್ಳಲು ನೆರವಾಗುವುದು. ಇದು ಮಕ್ಕಳಿಗೆ ತುಂಬಾ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
