Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಭಾರತ ಟ್ರಕೋಮಾ ಮುಕ್ತ ಎಂದು ಘೋಷಿಸಿದ ವಿಶ್ವ ಆರೋಗ್ಯ ಸಂಸ್ಥೆ..! ಏನಿದು ರೋಗ ಗೊತ್ತಾ?
ಹಲವು ರೋಗಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿರುವ ಭಾರತದ ಒಂದೊಂದೇ ವೈರಲ್ ಕಾಯಿಲೆಗಳು, ವೈರಸ್‌ಗಳಿಂದ ಮುಕ್ತಿ ಪಡೆಯುತ್ತಿದೆ. ಈಗ ವಿಶ್ವ ಆರೋಗ್ಯ ಸಂಸ್ಥೆಯು ಭಾರತವನ್ನು ಟ್ರಾಕೋಮಾ ಮುಕ್ತ ಎಂದು ಘೋಷಿಸಿದೆ. ಇದು ಆರೋಗ್ಯ ವಲಯಕ್ಕೆ ಸಂದಿರುವ ಅತೀ ದೊಡ್ಡ ಗೌರವಾಗಿದೆ. ಹಾಗೆ ಭಾರತದ ಆರೋಗ್ಯ ವಲಯದಲ್ಲಿ ಆಗುತ್ತಿರುವ ಸುಧಾರಣೆಗೆ ಕೈಗನ್ನಡಿಯಾಗಿದೆ.
ಕ್ಲಮೈಡಿಯಾ ಟ್ರಾಕೊಮಾಟಿಸ್ ಎಂಬ ಬ್ಯಾಕ್ಟೀರಿಯಂ ಸೋಂಕಿನಿಂದ ಉಂಟಾಗುವ ಈ ಸಮಸ್ಯೆಯು ಲಕ್ಷ ಲಕ್ಷ ಮಂದಿಯ ದೃಷ್ಟಿ ಸಮಸ್ಯೆಗೆ ಕಾರಣವಾಗುತ್ತಿತ್ತು. ಆದರೆ ದಶಕಗಳಿಂದ ಭಾರತ ಈ ವೈರಸ್ ಪಿಡುಗನ್ನು ಹೋಗಲಾಡಿಸಲು ಹೋರಾಟ ಮಾಡುತ್ತಲೇ ಬಂದಿತ್ತು. ಈಗ ಅಂತಿಮವಾಗಿ ಈ ವೈರಸ್ ಭಾರತದಿಂದ ಮುಕ್ತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿರುವುದಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಟ್ರಾಕೋಮಾ ಸುಮಾರು 40 ದೇಶಗಳಲ್ಲಿ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿದೆ, ಸುಮಾರು 1.9 ಮಿಲಿಯನ್ ಜನರ ಕುರುಡುತನ ಅಥವಾ ದೃಷ್ಟಿಹೀನತೆಗೆ ಕಾರಣವಾಗಿದೆ. ಟ್ರಾಕೋಮಾದಿಂದ ಉಂಟಾಗುವ ಕುರುಡುತನವನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ. ಆದರೆ ಈ ವೈರಸ್ ನಿರ್ಮೂಲನೆಯಿಂದ ಈ ರೋಗ ತಡೆಗಟ್ಟಬಹುದಾಗಿದೆ.
ಟ್ರಾಕೋಮಾ ಎಂದರೇನು?
ಟ್ರಾಕೋಮಾವು ಬ್ಯಾಕ್ಟೀರಿಯಾದಿಂದ ಹರಡುವ ಕಣ್ಣಿನ ಸೋಂಕು ಆಗಿದ್ದು ಇದರಿಂದ ಶಾಶ್ವತ ಕುರುಡುತನ ಅಥವಾ ದೃಷ್ಟಿಹೀನತೆ ಉಂಟಾಗುತ್ತದೆ. ಇದು ಕ್ಲಮೈಡಿಯ ಟ್ರಾಕೊಮಾಟಿಸ್ ಎಂಬ ಬ್ಯಾಕ್ಟೀರಿಯಾದಿಂದ ಹರಡುತ್ತದೆ. ಈ ವೈರಸ್ ಸೋಂಕಿತ ವ್ಯಕ್ತಿಯ ಕಣ್ಣೀರು, ಆತನ ಸಂಪರ್ಕ, ಶೀತ, ಬಟ್ಟೆ, ಆಹಾರ ಹೀಗೆ ಸೋಂಕಿತ ಬಳಸಿದ ವಸ್ತುಗಳ ಮೂಲಕ ಹರಡುತ್ತದೆ. ಹಾಗೆ ನೊಣಗಳು ಕೂಡ ಈ ವೈರಸ್ ಅನ್ನು ಹರಡುತ್ತವೆ ಎಂದು ತಿಳಿದುಬಂದಿದೆ.
ಈ ವೈರಸ್ ಕಣ್ಣಿನ ಕಾರ್ನಿಯಲ್ ಭಾಗಕ್ಕೆ ಹಾನಿ ಉಂಟು ಮಾಡುತ್ತದೆ. ಇದು ಟ್ರೈಚಿಯಾಸಿಸ್ ಮತ್ತು ಎಂಟ್ರೋಪಿಯಾನ್ ಎಂಬ ಕಣ್ಣಿನ ಸಮಸ್ಯೆ ಉಂಟು ಮಾಡಲಿದೆ, ಆರಂಭದಲ್ಲೇ ಈ ಸೋಂಕಿಗೆ ಚಿಕಿತ್ಸೆ ಪಡೆದರೆ ದೃಷ್ಟಿ ದೋಷದಿಂದ ಪಾರು ಮಾಡಬಹುದು.
1950 ಮತ್ತು 60 ರ ದಶಕದಲ್ಲಿ ಭಾರತದಲ್ಲಿ ಈ ವೈರಸ್ ಗಮನಾರ್ಹವಾಗಿ ನಿರ್ಮೂಲನೆಯ ಹಂತಕ್ಕೆ ತಲುಪಿತ್ತು. ಸಾರ್ವಜನಿಕ ಆರೋಗ್ಯ ಮತ್ತು ಸಮುದಾಯ ಬೆಂಬಲದ ಸಹಾಯದಿಂದ ಟ್ರಾಕೋಮಾವನ್ನು ನಾಶಪಡಿಸಲಾಗಿದೆ ಎಂದು ಸರ್ಕಾರ ಹೇಳುತ್ತದೆ. ತಜ್ಞರ ಪ್ರಕಾರ ಗುಜರಾತ್, ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಶೇ.50 ರಷ್ಟು ಜನಸಂಖ್ಯೆಯಲ್ಲಿ ಟ್ರಾಕೋಮಾ ಉಂಟಾಗಿತ್ತು.
ಆದರೆ 70ರ ದಶಕದಲ್ಲಿ ವಿಶ್ವದಾದ್ಯಂತ ದಾಖಲಾಗುತ್ತಿದ್ದ ಕುರುಡುತನ ಪ್ರಕರಣಗಳಲ್ಲಿ ಶೇ.5ರಷ್ಟು ಈ ಟ್ರಾಕೋಮಾ ಸ್ಥಿತಿಗೆ ಸಂಬಂಧಿಸಿದ್ದಾಗಿದ್ದವು. ಹಿಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸ್ಸಿನಂತೆ ಈ ವೈರಸ್ ಹರಡುವಿಕೆ ತಡೆಯಲು ಸರ್ಕಾರ ರಾಷ್ಟ್ರೀಯ ಮಟ್ಟದಲ್ಲಿ ಆರೋಗ್ಯ ಸುಧಾರಣ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿತ್ತು. ಹೀಗಾಗಿ ವೇಗವಾಗಿ ಹರಡುತ್ತಿದ್ದ ಈ ವೈರಸ್ ಅನ್ನು ತಡೆಯಲು ಸಹಕಾರಿಯಾಯಿತು.
ಹೀಗೆ ಆರೋಗ್ಯ ಇಲಾಖೆಯ ಸಹಾಯದಿಂದ ಈ ವೈರಸ್ ಅನ್ನು 2018ರ ಹೊತ್ತಿಗೆ ಕೇವಲ ಶೇ.0.008ಕ್ಕೆ ಇಳಿಸಲಾಗಿತ್ತು. ಸದ್ಯ ಈಗ ಭಾರತ ಈ ವೈರಸ್‌ನಿಂದ ಮುಕ್ತವಾಗಿದೆ ಎಂದು ಘೋಷಿಸಲಾಗಿದೆ. ಭಾರತ ಸೇರಿದಂತೆ ನೇಪಾಳ, ಮ್ಯಾನ್ಮಾರ್ ಹಾಗೂ ಇತರೆ 19 ದೇಶಗಳಲ್ಲಿ ಈ ವೈರಸ್ ಯಶಸ್ವಿಯಾಗಿ ನಿರ್ಮೂಲನೆಯಾಗಿದೆ.
ಟ್ರಾಕೋಮಾದ ಲಕ್ಷಣಗಳು
- ಊದಿಕೊಂಡ ಕಣ್ಣುರೆಪ್ಪೆಗಳು
- ದೃಷ್ಟಿ ಮಂದವಾಗುವುದು
- ಕಣ್ಣುಗಳಿಂದ ನೀರು ಬರುವುದು
- ಮೂಗಿನಿಂದ ನೀರು ಬರುವುದು
- ಕಣ್ಣುಗಳಲ್ಲಿ ನೋವು
- ಬೆಳಕಿಗೆ ಕಣ್ಣು ಬಿಡಲಾಗದ ಸ್ಥಿತಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
