ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಹೆಚ್ಚಳ ಆಗಿರೋದು ಏಕೆ..? ಮನಶಾಸ್ತ್ರಜ್ಞರು ಈ ಬಗ್ಗೆ ಹೇಳೋದೇನು?

ಇತ್ತೀಚಿನ ದಿನಗಳಲ್ಲಿ ನಾವು ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿರುವುದನ್ನು ನೋಡಿರಬಹುದು. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ ಹೀಗೆ ವಿದ್ಯಾರ್ಥಿಗಳು ಓದುತ್ತಿರುವ ನಡುವೆ ಹಲವು ರೀತಿಯ ಸಮಸ್ಯೆಗೆ ಒಳಗಾಗಿ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ತೆಗೆದುಕೊಂಡಿರುವುದು ನಾವೆಲ್ಲ ನೋಡಿರುತ್ತೇವೆ.

ಇದೆಲ್ಲದರ ನಡುವೆ ಭಾರತದಲ್ಲಿ ವಿದ್ಯಾರ್ಥಿಗಳ ಆತ್ಮಗತ್ಯೆ ಪ್ರಕರಣಗಳು ಹೆಚ್ಚುತ್ತಿವೆ ಎಂದು IC3 ಸಮ್ಮೇಳನದ ಹೊಸ ವರದಿಯು ತಿಳಿಸಿದೆ. ಭಾರತದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳು ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ ಎಂದು ಎತ್ತಿ ತೋರಿಸಿದೆ. 2021 ಮತ್ತು 2022 ರ ದತ್ತಾಂಶದ ವಿಶ್ಲೇಷಣೆಯು ಕಳೆದ ಎರಡು ದಶಕಗಳಲ್ಲಿ ಈ ಘಟನೆಗಳ ಪ್ರಮಾಣವು ಅಪಾಯಕಾರಿ ದರದಲ್ಲಿ ಹೆಚ್ಚುತ್ತಿದೆ ಎಂದು ತಿಳಿಸಿದೆ.

What s Behind The Alarming Rise In Student Suicides Insights From Psychologists

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ದ ದತ್ತಾಂಶವನ್ನು ಆಧರಿಸಿ, ವಾರ್ಷಿಕ IC3 ಕಾನ್ಫರೆನ್ಸ್ ಮತ್ತು ಎಕ್ಸ್‌ಪೋ 2024 ರಲ್ಲಿ "ವಿದ್ಯಾರ್ಥಿ ಆತ್ಮಹತ್ಯೆಗಳು: ಭಾರತದಲ್ಲಿ ಒಂದು ಸಾಂಕ್ರಾಮಿಕ" ಎಂಬ ಇತ್ತೀಚಿನ ವರದಿಯನ್ನು ಬಿಡುಗಡೆ ಮಾಡಲಾಗಿದೆ.

ಒಟ್ಟಾರೆ ಆತ್ಮಹತ್ಯೆಗಳ ಸಂಖ್ಯೆ ವಾರ್ಷಿಕವಾಗಿ 2 ಪ್ರತಿಶತದಷ್ಟು ಹೆಚ್ಚಿದ್ದರೂ, ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು 4 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ವರದಿಯು ಗಮನಸೆಳೆದಿದೆ. ವಿದ್ಯಾರ್ಥಿಗಳ ಆತ್ಮಹತ್ಯೆಗಳು 6,654 ರಿಂದ 13,044 ಕ್ಕೆ ಏರಿದೆ ಎಂಬುದು ಈ ವರದಿಯಲ್ಲಿನ ಆತಂಕಕಾರಿ ಅಂಶವಾಗಿದೆ.

2022 ರಲ್ಲಿ ದಾಖಲಾದ ಎಲ್ಲಾ ವಿದ್ಯಾರ್ಥಿಗಳ ಆತ್ಮಹತ್ಯೆಗಳಲ್ಲಿ ಶೇ. 53 ಪ್ರತಿಶತ ವಿದ್ಯಾರ್ಥಿಗಳು, ಹಾಗೂ ಉಳಿದ ಪ್ರಮಾಣವು ವಿದ್ಯಾರ್ಥಿನಿಯರ ಆತ್ಮಹತ್ಯೆಯ ಪ್ರಕರಣಗಳಾಗಿವೆ. ಅಂದರೆ ಗಂಡು ಮಕ್ಕಳು ಹೆಚ್ಚಾಗಿ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಆದರೆ 2021 ಮತ್ತು 2022 ರ ನಡುವೆ, ಪುರುಷ ವಿದ್ಯಾರ್ಥಿಗಳ ಆತ್ಮಹತ್ಯೆಗಳು 6 ಪ್ರತಿಶತದಷ್ಟು ಕಡಿಮೆಯಾಗಿದೆ, ಆದರೆ ಮಹಿಳಾ ವಿದ್ಯಾರ್ಥಿಗಳ ಆತ್ಮಹತ್ಯೆಗಳು 7 ಪ್ರತಿಶತದಷ್ಟು ಹೆಚ್ಚಾಗಿದೆ.

ಹಾಗಾದ್ರೆ ಈ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಕಾರಣ ಏನಿರಬಹುದು? ಈ ಆತ್ಮಹತ್ಯೆಗಳ ಹಿಂದೆ ಅವರ ಮನಸ್ಥಿತಿಯ ಪರಿಣಾಮ ಬೀರಿದ ಅಂಶ ಯಾವುದು ಎಂಬುದನ್ನು ಕ್ಲೀನಿಕಲ್ ಸೈಕಾಲಜಿಸ್ಟ್ ಆಗಿರುವ ಅರುಣ್ ಎನ್‌.ಆರ್ ಅವರು ಈ ರೀತಿ ವಿವರಿಸುತ್ತಾರೆ.

ಶೈಕ್ಷಣಿಕ ಒತ್ತಡ: ಇತ್ತೀಚಿಗೆ ಮಕ್ಕಳ ಆತ್ಮಹತ್ಯೆ ಪ್ರಕರಣಗಳ ಹೆಚ್ಳಳಕ್ಕೆ ಕಾರಣವಾಗುತ್ತಿರುವ ಪ್ರಮುಖ ಅಂಶಗಳಲ್ಲಿ ಈ ಶೈಕ್ಷಣಿಕ ಒತ್ತಡವು ಸಹ ಒಂದಾಗಿದೆ. ಅಂದರೆ ಪೋಷಕರು ಮಾತ್ರವಲ್ಲ ಈಗ ಶಾಲೆಗಳು ಸಹ ಅವರಿಗೆ ಹೆಚ್ಚು ಅಂಕ ತೆಗೆದುಕೊಳ್ಳುವಂತೆ ಒತ್ತಡ ಹಾಕುತ್ತವೆ. ಅದರಲ್ಲೂ ಹೆಚ್ಚಾಗಿ ಖಾಸಗಿ ಶಾಲೆಯಲ್ಲಿ ಓದುವ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಬಹುದು.

ಬಲವಂತವಾಗಿ ಕೋರ್ಸ್‌ಗೆ ಸೇರಿಸುವುದು: ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಅವರಿಗೆ ಯಾವುದಾರು ಕೊರ್ಸ್ ಮಾಡಲು ಹೇಳುವುದು. ಈಗಂತು ಸೈನ್ಸ್‌ ಅನ್ನೇ ತೆಗೆದುಕೊಳ್ಳಬೇಕು ಎಂದು ಪಿಯುಸಿ ಮಕ್ಕಳಿಗೆ ಹೆಚ್ಚು ಮಂದಿ ಪೋಷಕರು ಒತ್ತಡ ಹಾಕುತ್ತಾರೆ. ಇದು ಅವರಲ್ಲಿ ಒತ್ತಡ ಹೆಚ್ಚುವಂತೆ ಮಾಡುತ್ತದೆ.

ಹಣಕಾಸಿನ ಒತ್ತಡ: ವಿದ್ಯಾರ್ಥಿ ಜೀವನ ಇತ್ತೀಚಿಗೆ ಐಷಾರಾಮಿಯಾಗಿ ಬದಲಾಗಿದೆ. ಅವರಿಗೆ ಮೊಬೈಲ್, ಬೈಕ್, ಕಾರು, ದುಬಾರಿ ವಾಚ್, ಬ್ರಾಂಡೆಡ್ ಬಟ್ಟೆ ಹೀಗೆ ಹತ್ತು ಹಲವು ಬಯಕೆ ಇರುತ್ತದೆ. ಆದರೆ ಇದೆಲ್ಲವನ್ನು ಪೋಷಕರಿಂದ ನಿಭಾಯಿಸುವುದು ಕಷ್ಟವಾಗಬಹುದು, ಇಲ್ಲದೆ ಇದೆಲ್ಲಾ ವಿದ್ಯಾರ್ಥಿಗಳಿಗೆ ಬೇಕಿಲ್ಲ ಎಂದು ಪೋಷಕರು ನಿರಾಕರಿಸಬಹುದು. ಇತ್ತೀಚಿಗೆ ಸಂಭವಿಸುತ್ತಿರುವ ಆತ್ಮಹತ್ಯೆಗಳಲ್ಲಿ ಇದ್ಯಾವುದಾದರೊಂದು ಕಾರಣವಂತೂ ಇದ್ದೇ ಇರುತ್ತೆ.

ಫಲಿತಾಂಶದ ಒತ್ತಡ: ವಿದ್ಯಾರ್ಥಿಗಳು ಇಂದು ರ್ಯಾಂಕ್ ಬರಬೇಕು ಎಂಬ ಒತ್ತಡದಲ್ಲೇ ಓದುವಂತಾಗಿದೆ. ಒಂದು ವೇಳೆ ಅವರು ಪೋಷಕರ, ಶಿಕ್ಷಕರ ಅಥವಾ ತಮಗೆ ತಾವೇ ಹಾಕಿಕೊಂಡ ಗಡಿ ದಾಟದಿದ್ದರೆ ಆತ್ಮಹತ್ಯೆಯ ದಾರಿ ಹಿಡಿಯುತ್ತಾರೆ, ಇದು ನಿಲ್ಲಬೇಕು. ಮಕ್ಕಳಿಗೆ ಎಂದಿಗೂ ಸ್ಪರ್ಧೆ ನೀಡಬಾರದು. ಅವರ ಬುದ್ಧಿಮಟ್ಟಕ್ಕೆ ಅನುಸಾರವಾಗಿ ಅಂಕಗಳ ಪಡೆಯಲು ಬಿಡಬೇಕು.

ಇದೆಲ್ಲವೂ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚಳಕ್ಕೆ ಕಾರಣ ಎಂಬುದು ಕ್ಲೀನಿಕಲ್ ಸೈಕಾಲಜಿಸ್ಟ್ ಅವರ ಅಭಿಪ್ರಾಯವಾಗಿದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

What's Behind The Alarming Rise In Student Suicides? Insights From Psychologists

What could be the reason for the increase in suicide cases of these students? Arun NR, a clinical psychologist, explains the factor behind these suicides that affected their mood.
X
Desktop Bottom Promotion