Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಮೋದಿಯ ದಣಿವರಿಯದ ಚೈತನ್ಯದ ಹಿಂದಿನ ರಹಸ್ಯವೇನು?
ನಾವೆಲ್ಲಾ ಒಂದು ನೂರು ಕಿ. ಮೀ ಟ್ರಾವೆಲ್ ಮಾಡಿದರೆ ಸಾಕು ಅಯ್ಯೋ ಇವತ್ತು ಟ್ರಾವೆಲ್ ಮಾಡಿದ್ದೇನೆ, ನಾನು ಸ್ವಲ್ಪ ಹೊತ್ತು ರೆಸ್ಟ್ ಮಾಡುತ್ತೇನೆ ಎಂದು ಹೇಳುತ್ತೇವೆ, ಒಂದು ಸಭೆ, ಸಮಾರಂಭಕ್ಕೆ ಹೋಗಿ ಬಂದರಂತೂ ಫುಲ್ ಸುಸ್ತು ಅಲ್ವಾ? ಆದರೆ ಮೋದಿ ಮಾತ್ರ ಅಷ್ಟೊಂದು ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.
ಒಂದು ದಿನವೂ ರೆಸ್ಟ್ ಮಾಡದೆ ಪ್ರತಿದಿನ ದುಡಿಯುತ್ತಾರೆ, ದಿನದಲ್ಲಿ 20 ಗಂಟೆ ಕೆಲಸ ಮಾಡುತ್ತಾರೆ, ದೇಶದಿಂದ ದೇಶಕ್ಕೆ ಪ್ರಯಾಣಿಸಿ ಅಲ್ಲಿಯ ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಮತ್ತೆ ಭಾರತಕ್ಕೆ ಬಂದು ಸ್ವಲ್ಪವೂ ವಿಶ್ರಾಂತಿ ಮಾಡದೆ ಕೆಲಸದಲ್ಲಿ ನಿರತರಾಗುತ್ತಾರೆ. ಅವರಲ್ಲೇನು ಮ್ಯಾಜಿಕ್ ಶಕ್ತಿ ಇದೆಯೇ? ಎಂದು ಅನಿಸದೆ ಇರಲ್ಲ.

ಇದೇನು ಉತ್ಪ್ರೇಕ್ಷೆ ಅಲ್ಲ, ಯಾವುದೇ ಪಕ್ಷದ ಬಗೆಯೂ ಹೇಳುತ್ತಿಲ್ಲ, ನಮ್ಮ ದೇಶದ ಪ್ರಧಾನಿಯ ಫಿಟ್‌ನೆಸ್ ಬಗ್ಗೆ ಹೇಳುತ್ತಿದ್ದೇವೆ. ಅವರೇನು ಯುವಕರಲ್ಲ, ಅವರ ವಯಸ್ಸು 72. 50 ವರ್ಷ ದಾಟುತ್ತಿದ್ದಂತೆ ಮಂಡಿ ನೋವು, ಕೈ ನೋವು ಎಂದು ಕೂರುವಾಗ 70 ದಾಟಿದ ಮೇಲೂ ಇಷ್ಟೊಂದು ಲವಲವಿಕೆಯಿಂದ ಇರಲು ಹೇಗೆ ತಾನೆ ಸಾಧ್ಯ ಎಂಬ ಪ್ರಶ್ನೆ ಕಾಡುವುದು ಸಹಜ. ಮೋದಿಯವರ ಸಿದ್ದಾಂತವನ್ನು ವಿರೋಧಿಸಬಹುದು, ಆದರೆ ಮೋದಿಯ ಫಿಟ್ನೆಸ್ ಬಗ್ಗೆ ಇನ್ನೊಂದು ಮಾತಿಲ್ಲ.
ಮೋದಿಯವರು ದಿನದಲ್ಲಿ 3 ಗಂಟೆಯಷ್ಟೇ ಮಲಗುತ್ತಾರೆ. ನಮಗೆ ನಿದ್ದೆ ಕಡಿಮೆಯಾದರೆ ಮಾರನೇಯ ತಲೆನೋವು ಶುರುವಾಗುವುದು, ಹಾಗಾದರೆ ಈ ವಿಷಯದಲ್ಲಿ ನಮ್ಮ ದೇಶದ ಪ್ರಧಾನಿ ಯುವಕರಿಗೆ ಸ್ಪೂರ್ತಿಯೇ ಸರಿ. ಅವರು ದಣಿವರಿಯದ ಚೈತನ್ಯದ ಹಿಂದಿನ ರಹಸ್ಯವೇನು ಎಂದು ನೋಡೋಣ:
ಮೋದಿಯವರ ಫಿಟ್ನೆಸ್‌ನ ಮೊದಲ ರಹಸ್ಯ ಯೋಗ
ಯೋಗ ಬರುವವನಿಗೆ ರೋಗವಿಲ್ಲ ಎಂಬುವುದಕ್ಕೆ ಉದಾಹರಣೆ ಮೋದಿ. ಇಷ್ಟು ವರ್ಷದಲ್ಲೂ ಒಮ್ಮೆಯೂ ಕಾಯಿಲೆ ಅಂತ ಮಲಗಿದವರಲ್ಲ. ಅವರು ಪ್ರತಿದಿನವೂ ಯೋಗ ಮಾಡುತ್ತಾರೆ. ಅವರು ಯೋಗ ನಿದ್ರೆ ಮಾಡುತ್ತಾರೆ, ಇದರಿಂದಾಗಿ ಅವರು ಕಡಿಮೆ ಹೊತ್ತು ನಿದ್ದೆ ಮಾಡಿದರೂ ಅವರ ದೇಹಕ್ಕೆ ದಣಿವು ಉಂಟಾಗುವುದಿಲ್ಲ. ಯೋಗ ನಿದ್ರೆಗೆ ಅಂಥ ಶಕ್ತಿ ಇದೆ. ಇದನ್ನು ವಾರಕ್ಕೊಮ್ಮೆ ಮಾಡಿದರೂ ದೇಹಕ್ಕೆ ತುಂಬಾನೇ ಚೈತನ್ಯ ಸಿಗುವುದು.
ಧ್ಯಾನ
ಎಂಥ ಒತ್ತಡದ ಪರಿಸ್ಥಿತಿಯಲ್ಲೂ ಮೋದಿ ಮುಖದಲ್ಲಿ ಅದು ಕಾಣಿಸುವುದಿಲ್ಲ, ಆಯಾಸ, ಒತ್ತಡ ಯಾವುದೂ ಇಲ್ಲದೆ ಬಹಳ ಆರಾಮವಾಗಿ ಇದ್ದಂತೆ ಕಾಣುತ್ತಾರೆ. ಅದಕ್ಕೆ ಕಾರಣ ಧ್ಯಾನ. ಧ್ಯಾನ ಮಾನಸಿಕ ಒತ್ತಡ ಕಡಿಮೆ ಮಾಡುವುದು, ಆರೋಗ್ಯವನ್ನು ವೃದ್ಧಿಸುವುದು. ಮೋದಿ ಒಂದು ದಿನವೂ ಧ್ಯಾನ ತಪ್ಪಿಸಲ್ಲ.
ಆಹಾರದ ವಿಷಯದಲ್ಲೂ ತುಂಬಾ ಕಟ್ಟುನಿಟ್ಟು
ಮೋದಿಯವರು ತುಂಬಾ ಕಟ್ಟುನಿಟ್ಟಿನ ಡಯಟ್ ಪಾಲಿಸುತ್ತಾರೆ. ಅಪರೂಪಕ್ಕಷ್ಟೇ ಇತರ ಆಹಾರ ಸೇವಿಸುತ್ತಾರೆ, ಬಹುತೇಕ ದಿನಗಳಲ್ಲಿ ಸಿಂಪಲ್ ಗುಜರಾತಿ ಅಡುಗೆಗಳನ್ನು ಸವಿಯುತ್ತಾರೆ. ಅವರ ಇಷ್ಟದ ಖಾದ್ಯವೆಂದರೆ ಕಿಚಡಿ. ಅಲ್ಲದೆ ಅವರ ಆಹಾರದಲ್ಲಿ ಒಂದು ಬೌಲ್ ಮೊಸರು ಇದ್ದೇ ಇರುತ್ತದೆ.
ಒಮ್ಮೆ ಮೋದಿಯವರು ಹಿಮಾಚಲ ಪ್ರದೇಶದಲ್ಲಿ ಬೆಳೆಯುವ Macrula exulenta ಅಣಬೆಯನ್ನು ಆಹಾರಕ್ರಮದಲ್ಲಿ ಬಳಸುವುದಾಗಿ ಹೇಳಿದ್ದಾರೆ. ಇದು ದುಬಾರಿ ಬೆಲೆಯ ಅಣಬೆಯಾಗಿದ್ದು ಈ ಕಾರಣಕ್ಕೆ ಟೀಕೆಯನ್ನೂ ಎದುರಿಸಬೇಕಾಯಿತು.
ನವರಾತ್ರಿಯಲ್ಲಿ ಕಟ್ಟುನಿಟ್ಟಿನ ಉಪವಾಸ ಮಾಡುತ್ತಾರೆ
ಉಪವಾಸ ಮಾಡುವುದರಿಂದಲೂ ಆರೋಗ್ಯಕ್ಕೆ ತುಂಬಾನೇ ಪ್ರಯೋಜನವಿದೆ. ಮೋದಿಯವರು ನವರಾತ್ರಿಯಲ್ಲಿ 9 ದಿನಗಳಕಾಲ ಕಟ್ಟು ನಿಟ್ಟಿನ ಉಪವಾಸ ಮಾಡುತ್ತಾರೆ. ಇವೆಲ್ಲಾ ಮೋದಿ ಆರೋಗ್ಯದ ಹಿಂದಿರುವ ರಹಸ್ಯವಾಗಿದೆ.
ಫಿಟ್ನೆಸ್ ವಿಷಯದಲ್ಲಿ ಒಂದು ಅಂಶ ನಾವು ಕಲಿಯಲೇಬೇಕಾಗಿದೆ?
ದಪ್ಪಗಾಗುತ್ತಿರುವುದಕ್ಕೆ, ಕಾಯಿಲೆ ಬೀಳುತ್ತಿರುವುದಕ್ಕೆ ತುಂಬಾ ಜನ ಲೈಫ್‌ಸ್ಟೈಲ್ ದೂರುತ್ತಾರೆ. ಅಯ್ಯೋ ನನಗೆ ವರ್ಕೌಟ್ ಮಾಡೋಕೆ ಟೈಮ್ ಇಲ್ಲ, ಆಹಾರಕ್ರಮದ ಕಡೆಗೆ ಗಮನ ಕೊಡಲು ಸಾಧ್ಯವಾಗುತ್ತಿಲ್ಲ ಈ ಕಾರಣಕ್ಕೆ ಆರೋಗ್ಯ ಹಾಳು ಮಾಡಿಕೊಂಡಿದ್ದೇನೆ ಎಂದೆಲ್ಲಾ ಹೇಳುತ್ತಾರೆ. ನಾವು ಹೀಗೆ ಹೇಳುವ ಮುನ್ನ ಮೋದಿಯವರನ್ನು ನೆನೆಸಿಕೊಂಡರೆ ಈ ಬಗೆಯ ಎಕ್ಸ್‌ಕ್ಯೂಸ್ ಕೊಡುವುದು ಕಡಿಮೆ ಮಾಡುತ್ತೇವೇನೋ... ಅವರು ದೇಶದ ಪ್ರಧಾನಿ, ಅವರಷ್ಟು ಬ್ಯುಸಿ, ಅವರು ಅನುಭವಿಸುವ ಮಾನಸಿಕ ಒತ್ತಡ ಇವೆಲ್ಲಾ ಖಂಡಿತ ನಮಗಿರಲ್ಲ, ಆದರೂ ಅವರು ಫಿಟ್ನೆಸ್ ಕಾಪಾಡಿ, ಆರೋಗ್ಯ ಉಳಿಸಿಕೊಂಡಿದ್ದಾರೆ ಎಂದ ಮೇಲೆ ನಮಗ್ಯಾಕೆ ಸಾಧ್ಯವಿಲ್ಲ, ಅಲ್ವಾ?
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
