Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಟ ವಿಶಾಲ್‌ಗೆ ಏನಾಗಿದೆ? ನಟನ ಸ್ಥಿತಿ ನೋಡಿ ಶಾಕ್ ಆದ ಅಭಿಮಾನಿಗಳು?
ಯಾರ ಬದುಕು ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ, ನೆನ್ನೆಯಿಂದ ಒಂದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ, ಅದು ನಟ ವಿಶಾಲ್ ವೀಡಿಯೋ. ಇವರು ತಮಿಳಿನ ಟಾಪ್ ನಟರಲ್ಲಿ ಒಬ್ಬರು, ಕನ್ನಡಿಗರಿಗೆ ಇವರ ಪರಿಚಯವಿರುತ್ತದೆ, ಪುನೀತ್ ರಾಜ್‌ಕುಮಾರ್ ಸಾವನ್ನಪ್ಪಿದ ಬಳಿಕ ಇವರು ಪುನೀತ್ ರಾಜ್‌ಕುಮಾರ್ ಸಹಾಯ ಮಾಡುತ್ತಿದ್ದ ಶಕ್ತಿಧಾಮಕ್ಕೆ ಭೇಟಿ ನೀಡಿ ಪುನೀತ್ ಕೆಲಸ ಮುಂದುವರೆಯಬೇಕು,ಯಾವ ಸಮಯದಲ್ಲಿ ಕರೆ ಮಾಡಿದ್ರೂ ಶಕ್ತಿಧಾಮದ ಸಹಾಯಕ್ಕೆ ನಿಲ್ಲುವುದಾಗಿ ಹೇಳಿದ್ದರು.

ಪುನೀತ್ ರಾಜ್‌ಕುಮಾರ್ ಮಾಡಿದ್ದ ಸೇವೆಯನ್ನು ಕೊಂಡಾಡಿ. ಶಕ್ತಿಧಾಮದ ಜೊತೆಗೆ ಎಂದೆಂದಿಗೂ ಇರುವುದಾಗಿ ಭರವಸೆ ನೀಡಿದ್ದರು. ವಿಶಾಲ್ ತಮಿಳುನಾಡಿನಲ್ಲಿಯೂ ಒಬ್ಬ ನಟನಾಗಿ ಮಾತ್ರವಲ್ಲ ಸಮಾಜಸೇವಕನಾಗಿಯೂ ಗುರುತಿಸಿಕೊಂಡಿದ್ದಾರೆ. ಇವರು ಸಹಾಯ ಮಾಡಿದ ಎಷ್ಟೋ ಮಕ್ಕಳು ಇಂದು ದೊಡ್ಡ ಹುದ್ದೆಯಲ್ಲಿದ್ದಾರೆ.
ನಟ ವಿಶಾಲ್ ದೊಡ್ಡ ಫ್ಯಾನ್‌ಫಾಲೋವಿಂಗ್ ಇದೆ, ಕೃಷ್ಣನ ಬಣ್ಣದ ಹ್ಯಾಂಡ್ಸಮ್ ಹೀರೋ ವಿಶಾಲ್. ಇನ್ನೂ ಮದುವೆಯಾಗಿರಲಿಲ್ಲ, ಎಂಗೇಜ್ಮೆಂಟ್ ಆಗಿ ಬ್ರೇಕಪ್ ಆಗಿತ್ತು, ಅವರನ್ನು ನೋಡಿದರೆ ಫಿಟ್ನೆಸ್‌ಗೆ ಎಷ್ಟೊಂದು ಮಹತ್ವಕೊಡುತ್ತಾರೆ ಎಂಬುವುದು ತಿಳಿಯುತ್ತಿತ್ತು, ಅಂಥ ನಟ ಈಗ ಗುರುತೇ ಸಿಗದ ರೀತಿಯಲ್ಲಿ ಬದಲಾಗಿದ್ದಾರೆ. 80ರ ಪ್ರಾಯದವರಂತೆ ನಡಿಗೆ, ಕೈಗಳಲ್ಲಿ ನಡುಕ, ನಿಲ್ಲಲು ಸಾಧ್ಯವಾಗದಂಥ ನಿಶ್ಯಕ್ತಿ, ನಟನ ಈ ಪರಿಸ್ಥಿತಿ ನೋಡಿದ ತಮಿಳುನಾಡಿನ ಸಿನಿಪ್ರಿಯರು ಶಾಕ್ ಆಗಿದ್ದಾರೆ. ಅಷ್ಟೊಂದು ಚೆನ್ನಾಗಿದ್ದ ನಟನಿಗೆ ಏನಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ.
ತನ್ನ ಸಿನಿಮಾದ ಪ್ರಮೋಷನ್‌ಗೆ ಬಂದಿದ್ದ ನಟ
ಅವರು 2013ರಲ್ಲಿ ಅಭಿನಯಿಸಿದ್ದ ಮದ ಗಜ ರಾಜ ಸಿನಿಮಾ ಈ ಪೊಂಗಲ್‌ಗೆ ತೆರೆ ಕಾಣುತ್ತಿದೆ, ಅದರ ಪ್ರಮೋಷನ್‌ಗೆ ಬಂದಿದ್ದರು. ನೋಡಿದರೆ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಯಂಗ್ ಅಂಡ್ ಎನರ್ಜಿಟಿಕ್ ಆಗಿದ್ದ ನಟನಿಗೆ ಏನಾಯ್ತು? ಎಂದು ಅವರನ್ನು ಆ ಕಾರ್ಯಕ್ರಮದಲ್ಲಿ ನೋಡಿದವರು ಕೇಳುತ್ತಿದ್ದಾರೆ. ಅವರ ಅಭಿಮಾನಿಗಳಿಗಂತೂ ದೊಡ್ಡ ಶಾಕ್ ತಂದಿದೆ.
ವಿಶಾಲ್‌ಗೆ ಏನಾಗಿದೆ? ಎಂದು ಕಾರ್ಯಕ್ರಮದಲ್ಲಿ ತಿಳಿಸಿದ ನಿರೂಪಕರು
ನಟ ವಿಶಾಲ್‌ಗೆ ತುಂಬಾ ಜ್ವರವಿದೆ, ಹಾಗಾಗಿ ಅವರಿಗೆ ಈ ರೀತಿಯಾಗಿದೆ ಎಂದು ನಿರೂಪಕರು ಹೇಳಿದರು. ಆದರೆ ಆ ಕಾರ್ಯಕ್ರಮವನ್ನು ಗಮನಿಸಿದಾಗ ವಿಶಾಲ್‌ಗೆ ಬಂದಿರುವುದು ಜ್ವರ ಅಲ್ಲ ಬೇರೆ ಏನೋ ಆರೋಗ್ಯ ಸಮಸ್ಯೆ ಎಂಬುವುದು ಸ್ಪಷ್ಟವಾಗಿ ಕಾಣುತ್ತದೆ.
ಕಾರ್ಯಕ್ರಮದಲ್ಲಿ ಇತರ ನಟ-ನಟಿಯರು ವಿಶಾಲ್ ಜೊತೆ ನಡೆದುಕೊಂಡ ರೀತಿ
ಜ್ವರವಿದ್ದರೆ ಅದರಲ್ಲಿಯೂ ಈ ಪಾಟಿ ಜ್ವರವಿದ್ದರೆ ಚಿತ್ರದ ಪ್ರಮೋಷನ್‌ಗೆ ಯಾರೂ ಬರಲ್ಲ, ಅಲ್ಲದೆ ಹೀಗೆ ಜ್ವರದಿಂದ ಬಳಲುತ್ತಿರುವ ವ್ಯಕ್ತಿಯನ್ನು ಅಪ್ಪಿಕೊಂಡು ಅವರ ಆರೋಗ್ಯದ ಬಗ್ಗೆ ವಿಚಾರಿಸಲ್ಲ, ಏಕೆಂದರೆ ವೈರಲ್ ಫೀವರ್ ಎಂದರೆ ಅದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲವೇ? ಆದರೆ ವಿಶಾಲ್‌ಗೆ ಬಂದಿರುವ ಜ್ವರ ನಮಗೆ ಬರಬಹುದು ಎಂಬ ಯಾವ ಆತಂಕವೂ ಅವರಲ್ಲಿ ಇರಲಿಲ್ಲ, ಅಲ್ಲದೆ ವಿಶಾಲ್ ಅವರನ್ನು ಅವರು ಅಕ್ಕರೆಯಿಂದ ಮಾತನಾಡಿಸುತ್ತಿರುವುದನ್ನು ನೋಡಿದಾಗ ವಿಶಾಲ್ ಆರೋಗ್ಯ ಸ್ಥಿತಿ ಬಗ್ಗೆ ಅವರಿಗೆ ಗೊತ್ತಿದೆ, ಆ ಮರುಕ ಅವರು ವ್ಯಕ್ತಪಡಿಸುತ್ತಿರುವ ಕಾಳಜಿಯಲ್ಲಿ ಕಾಣುತ್ತಿತ್ತು.
ಜ್ವರದಿಂದ ನಡುಗುತ್ತಿರುವ ವಿಶಾಲ್ ಮಾಸ್ಕ್ ಧರಿಸಿರಲಿಲ್ಲ
ಈವಾಗ ಅಷ್ಟೊಂದು ಜ್ವರವಿದ್ದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಮಾಸ್ಕ್ ಧರಿಸದೆ ಬರುತ್ತಾರೆಯೇ? ಏಕೆಂದರೆ ನಮ್ಮಿಂದ ಜ್ವರ ಬೇರೆಯವರಿಗೆ ಹರಡಬಾರದು ಎಂದು ಮುನ್ನೆಚ್ಚರಿಕೆವಹಿಸುತ್ತಾರೆ, ಅದರಲ್ಲಿಯೂ ಕೊರೊನಾ ನಂತರ ಜ್ವರ ಬಂದರೆ ಮಾಸ್ಕ್ ಧರಿಸಿಯೇ ಓಡಾಡುತ್ತೇವೆ, ಆದರೆ ವಿಶಾಲ್ ಮಾಸ್ಕ್ ಧರಿಸಿಲ್ಲ, ಅಲ್ಲದೆ ಅವರ ಸುತ್ತ-ಮುತ್ತ ಎಲ್ಲರೂ ಮಾಸ್ಕ್ ಧರಿಸದೆ ಇದ್ದರು, ಹಾಗಾದರೆ ವಿಶಾಲ್ ಆರೋಗ್ಯದಲ್ಲಿ ಏನಾಗಿದೆ?
ಈ ಹಿಂದೆ ಆದ ಅಪಘಾತದಿಂದ ಈ ರೀತಿಯಾಗಿರಬಹುದೇ?
ಒಂದು ಶೂಟಿಂಗ್‌ನಲ್ಲಿ ವಿಶಾಲ್‌ಗೆ ತುಂಬಾನೇ ಪೆಟ್ಟಾಗಿತ್ತು, ಅವರು ಬದುಕಿ ಬಂದಿದ್ದೇ ಪವಾಡ, ಇಲ್ಲದಿದ್ದರೆ ಲಾರಿ ಹತ್ತಿ ಏನಾಗುತ್ತಿತ್ತೋ ಗೊತ್ತಿಲ್ಲ, ನನಗೆ ಇದು ಮರುಜನ್ಮ ಎಂದು ಹೇಳಿದ್ದರು. ಆ ಘಟನೆಯಲ್ಲಿ ಅವರಿಗೆ ಪೆಟ್ಟಾಗಿತ್ತು. ಅಲ್ಲದೆ ವಿಶಾಲ್ ನನಗೆ ಮೈಗ್ರೇನ್ ಇರುವುದಾಗಿಯೂ ಹೇಳಿದ್ದರು. ಆದರೆ ಈಗ ವಿಶಾಲ್‌ಗೆ ಏನಾಗಿದೆ ಎಂಬುವುದೇ ಗೊತ್ತಿಲ್ಲ. ಜ್ವರ ಅಂತ ಹೇಳ್ತಾ ಇದ್ದಾರೆ, ಆದರೆ ಜ್ವರವಲ್ಲ.. ಬೇರೆ ಯಾವುದೋ ಆರೋಗ್ಯ ಸಮಸ್ಯೆ ಅವರನ್ನು ಕಾಡುತ್ತಿದೆ.
ಅವರು ಬೇಗನೆ ಚೇತರಿಸಿಕೊಂಡು ಮೊದಲಿನಂತಾಗಲಿ ಎಂಬುವುದೇ ಅಭಿಮಾನಿಗಳ ಪ್ರಾರ್ಥನೆ.....
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications