ಕಿಡ್ನಿ ಟ್ರಾನ್ಸ್‌ಪ್ಲ್ಯಾಂಟ್ : ಮೂತ್ರಪಿಂಡ ಕಸಿಯಿಂದ ಮಕ್ಕಳ ಮೇಲೆ ಬೀರುವ ಮಾನಸಿಕ ಪರಿಣಾಮಗಳೇನು?

ಲೇಖಕರು
ಡಾ. ಮೊಹಮ್ಮದ್ ಫಹಾದ್ ಖಾನ್,

ಮೂತ್ರಪಿಂಡ (ಕಿಡ್ನಿ) ಕಸಿ ಚಿಕಿತ್ಸೆಯು ಕೊನೆಯ ಹಂತದಲ್ಲಿರುವ ಮೂತ್ರಪಿಂಡದ ಕಾಯಿಲೆ (End Stage Renal Disease) ಹೊಂದಿರುವ ಮಕ್ಕಳ ಜೀವನಕ್ಕೆ ಒಂದು ಭರವಸೆಯ ಬೆಳಕಾಗಿದೆ. ಈ ಚಿಕಿತ್ಸೆಯು ಜೀವಿತಾವಧಿಯನ್ನು ವಿಸ್ತರಿಸುವುದಲ್ಲದೆ ಡಯಾಲಿಸಿಸ್‌ನ ನೋವು ಹಾಗೂ ಮಿತಿಗಳನ್ನು ಮೀರಿದ ಸ್ವತಂತ್ರ ಬದುಕನ್ನು ನೀಡುತ್ತದೆ.

ಕಿಡ್ನಿ ಕಸಿ ಮಕ್ಕಳ ಮೇಲೆ ಬೀರುವ ಪ್ರಭಾವ

ಮಕ್ಕಳಲ್ಲಿ, ಯಶಸ್ವಿ ಕಿಡ್ನಿ ಕಸಿಯು ಸ್ವತಂತ್ರ ಹಾಗೂ ಆರೋಗ್ಯಕರ ಬಾಲ್ಯಕ್ಕೆ ಅನುವು ಮಾಡಿಕೊಡುತ್ತದೆ. ಡಯಾಲಿಸಿಸ್ ನ ನಿರ್ಬಂಧಗಳಿಲ್ಲದೆ ಮಕ್ಕಳು ಸ್ವಚ್ಛಂದದಿಂದ ಹೆಚ್ಚಿನ ಶಕ್ತಿಯಿಂದ ಆಟೋಟಗಳಲ್ಲಿ ಪಾಲ್ಗೊಳ್ಳುವಿಕೆ, ತಮ್ಮ ಹವ್ಯಾಸಗಳಿಗೆ ಹೆಚ್ಚಿನ ಆದ್ಯತೆ, ಮತ್ತು ಸ್ನೇಹಿತರೊಂದಿಗೆ ಒಡನಾಟದಂತಹ ಸುಮಧುರ ಅನುಭವಗಳೊಂದಿಗೆ ತಮ್ಮ ಬಾಲ್ಯವನ್ನು ಆಹ್ಲಾದಿಸಲು ಕಿಡ್ನಿ ಕಸಿಯು ಸಹಕರಿಸುತ್ತದೆ. ಇದು ಅವರ ಆರೋಗ್ಯಕರ ಬೆಳವಣಿಗೆ ಮತ್ತು ಸಾಮಾಜಿಕ ಸಂವಹನವನ್ನು ಉತ್ತೇಜಿಸುವುದಲ್ಲದೆ, ಸಹವಯಸ್ಕರೊಡನೆ ಆತ್ಮೀಯತೆಯನ್ನು ಬಲಪಡಿಸುತ್ತದೆ ತನ್ಮೂಲಕ ಮಗುವಿನ ಸ್ವಾಭಿಮಾನವನ್ನು ಹೆಚ್ಚಿಸುತ್ತದೆ.

Kidney Transplantation

ಆರ್ಥಿಕತೆ ಮೇಲೆ ಬೀರುವ ಪ್ರಭಾವ

ಕಿಡ್ನಿ ಕಸಿಯು ಡಯಾಲಿಸಿಸ್ ನಂತಹ ವೈದ್ಯಕೀಯ ಕಾರ್ಯವಿಧಾನಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಮೂಲಕ ಮಕ್ಕಳ ಪೋಷಕರಿಗೆ, ಮಕ್ಕಳ ಶಿಕ್ಷಣ ಮತ್ತು ವೈಯಕ್ತಿಕ ಅಭಿವೃದ್ಧಿಯ ಮೇಲೆ ಅಧಿಕವಾಗಿಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ಆರ್ಥಿಕ ಸ್ಥಿರತೆಯು ಆತ್ಮವಿಶ್ವಾಸವನ್ನು ಬೆಳೆಸುತ್ತದೆ ಮತ್ತು ಪೂರಕ ಭವಿಷ್ಯ ನಿರ್ಮಾಣಕ್ಕೆ ದಾರಿ ಮಾಡಿಕೊಡುತ್ತದೆ. ಕಿಡ್ನಿ ಕಸಿಯು ಮಕ್ಕಳಿಗೆ ಹಾಗೂ ಅವರ ಪರಿವಾರಕ್ಕೆ ಭರವಸೆ ಮತ್ತು ಆಶಾದಾಯಕ ಪರಿಹಾರದ ಅನುಭೂತಿಯನ್ನು ನೀಡುತ್ತದೆ. ಅವರ ಮಗುವಿನ ಏಳಿಗೆ ಮತ್ತು ಸಹಜ ಬೆಳವಣಿಗೆ ಕುಟುಂಬದ ಬಂಧಗಳನ್ನು ಬಲಪಡಿಸುತ್ತದೆ ಮತ್ತು ಹೊಂದಾಣಿಕೆ ಹಾಗೂ ಜವಾಬ್ದಾರಿ ಹಂಚಿಕೆಯಿಂದ ಸಿಗುವ ಸಾಧನೆಯ ಅನುಭೂತಿಯನ್ನು ನೀಡುತ್ತದೆ. ಅಷ್ಟೇ ಅಲ್ಲದೆ ನಿರಂತರ ವೈದ್ಯಕೀಯ ಕಾಳಜಿಯಿಂದ ಹೊರೆಯಾಗದೆ ಒಟ್ಟಾಗಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯವು ಮಗುವಿನ ಬೆಳವಣಿಗೆಗೆ ಹೆಚ್ಚು ಧನಾತ್ಮಕ ಮತ್ತು ಬೆಂಬಲಪೂರ್ವಕ ವಾತಾವರಣವನ್ನು ಸೃಷ್ಟಿಸುತ್ತದೆ.

ಡಯಾಲಿಸಿಸ್‌ ಬದಲಿಗೆ ಕಿಡ್ನಿ ಕಸಿ ಒಳ್ಳೆಯದು

ಇನ್ನು ವೈದ್ಯಕೀಯವಾಗಿ ಹೇಳುವುದಾದರೆ ಡಯಾಲಿಸಿಸ್‌ಗೆ ಹೋಲಿಸಿದರೆ, ಕಿಡ್ನಿ ಕಸಿಯು ಮಗುವಿನ ಜೀವನದ ಗುಣಮಟ್ಟದಲ್ಲಿ ಗಮನಾರ್ಹ ಪ್ರಗತಿಯನ್ನು ನೀಡುತ್ತದೆ. ಡಯಾಲಿಸಿಸ್, ನಿರ್ಣಾಯಕವಾಗಿದ್ದರೂ, ಪದೇ ಪದೇ ಆಸ್ಪತ್ರೆಯಲ್ಲಿ ದೀರ್ಘಾವಧಿಯ ಧಾಖಲಾತಿಯ ಅವಧಿಗಳ ಅಗತ್ಯವಿರುತ್ತದೆ. ಇದರಿಂದ ಮಗುವಿನ ದೈನಂದಿನ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ದೈನಂದಿನ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯನ್ನು ಮಿತಿಗೊಳಿಸುವುದಲ್ಲದೆ ಅವಲಂಬನೆಯನ್ನು ಹೆಚ್ಚಿಸುತ್ತದೆ. ಕಿಡ್ನಿ ಕಸಿ ಮಾಡುವಿಕೆಯು ಮಕ್ಕಳನ್ನು ಈ ಮಿತಿಗಳಿಂದ ಮುಕ್ತಗೊಳಿಸುತ್ತದೆ. ಅವರ ದೈನಂದಿನ ಜೀವನದ ಮೇಲೆ ಸ್ವಾತಂತ್ರ್ಯ ಮತ್ತು ನಿಯಂತ್ರಣದ ಪ್ರಜ್ಞೆಯನ್ನು ಬೆಳೆಸುತ್ತದೆ. ಹೆಚ್ಚುವರಿಯಾಗಿ, ಕಿಡ್ನಿ ಕಸಿಯ ನಂತರ ಕಡಿಮೆ ಆಹಾರದ ನಿರ್ಬಂಧಗಳನ್ನು ಅನುಭವಿಸುತ್ತಾರೆ, ಅವರಿಗೆ ವ್ಯಾಪಕ ಶ್ರೇಣಿಯ ಆಹಾರಗಳನ್ನು ಆನಂದಿಸಲು ಮತ್ತು ಸಾಮಾಜಿಕ ಕೂಟಗಳಲ್ಲಿ ಹೆಚ್ಚು ಸಂಪೂರ್ಣವಾಗಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ,

ಈ ರೀತಿಯಾಗಿ ಮಕ್ಕಳಲ್ಲಿ ಯಶಸ್ವಿ ಕಿಡ್ನಿ ಕಸಿ ಚಿಕಿತ್ಸೆಯು, ಮಕ್ಕಳ ಆರೋಗ್ಯಕರ ಮಾನಸಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಅನುವು ಮಾಡಿಕೊಟ್ಟು, ಡಯಾಲಿಸಿಸ್ ಚಿಕಿತ್ಸೆಗೆ ಅಗತ್ಯವಿರುವ ಆಗಾಗ್ಗೆ ಆಸ್ಪತ್ರೆಯ ಭೇಟಿಗಳ ಅಗತ್ಯವನ್ನು ಹಾಗೂ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದರಿಂದ ಕುಟುಂಬದ ಆರ್ಥಿಕ ಹೊಣೆಯನ್ನು ಕಡಿಮೆ ಮಾಡಿ ಕುಟುಂಬಗಳ ಸಂಬಂಧಗಳನ್ನು ಪೋಷಿಸುವಲ್ಲಿ ಅನುವು ಮಾಡಿಕೊಡುತ್ತದೆ.

(ಈ ಲೇಖನವನ್ನು ಬರೆದವರು ಡಾ. ಮೊಹಮ್ಮದ್ ಫಹಾದ್ ಖಾನ್, ಕನ್ಸಲ್ಟೆಂಟ್ - ನೆಫ್ರಾಲಜಿ, ಮತ್ತು ಮೂತ್ರಪಿಂಡ ಕಸಿ ವೈದ್ಯರು, ಮಣಿಪಾಲ್ ಆಸ್ಪತ್ರೆ ಹಳೆ ವಿಮಾನ ನಿಲ್ದಾಣ ರಸ್ತೆ)

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

What Are The Psychosocial Impacts Of Kidney Transplantation On Children And Their Families?

What are the psychological and social affect of kidney transplantation on children, how to support them, read on...
Story first published: Thursday, February 29, 2024, 22:48 [IST]
X
Desktop Bottom Promotion