Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಬಿಕ್ಕಳಿಕೆ ಬಂದಾಗ ಏನು ಮಾಡಬೇಕು? ಯಾವ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ವೈದ್ಯರಿಗೆ ತೋರಿಸಬೇಕು?
ಯಾರಿಗೆ ಯಾವಾಗ ಬೇಕಾದರೂ ಬಿಕ್ಕಳಿಕೆ ಬರಬಹುದು, ಈ ಬಿಕ್ಕಳಿಕೆ ಒಂದೆರಡು ಬಂದರೆ ಓಕೆ, ಆದರೆ ಆಗಾಗ ಬಿಕ್ಕಳಿಕೆ ಬರುತ್ತಿದ್ದರೆ ತುಂಬಾನೇ ಕಿರಿಕಿರಿಯಾಗುವುದು, ತುಂಬಾ ಬಿಕ್ಕಳಿಕೆಯಾದರೆ ಸುಸ್ತಾಗುತ್ತೇವೆ. ಈ ರೀತಿ ಬಿಕ್ಕಳಿಕೆ ಬಂದಾಗ ಒಬ್ಬೊಬ್ಬರು ಒಂದೊಂದು ಟಿಪ್ಸ್ ಹೇಳುತ್ತಾರೆ. ಕೆಲವರು ಕಿವಿ ಎಳೆಯಿರಿ ಎಂದರೆ ಇನ್ನು ಕೆಲವರು ಅವರನ್ನು ಭಯಪಡಿಸಿ ಹೀಗೆ ಅನೇಕ ಐಡಿಯಾಗಳನ್ನು ಕೊಡುತ್ತಾರೆ.

ಬಿಕ್ಕಳಿಕೆ ಬಂದಾಗ ಏನು ಮಾಡಬೇಕು ಎಂಬುವುದಕ್ಕೆ ಕೆಲ ವೈಜ್ಞಾನಿಕ ಟಿಪ್ಸ್ ನೀಡಲಾಗಿದೆ ನೋಡಿ:
ಬಿಕ್ಕಳಿಕೆ ಬಂದಾಗ ಏನು ಮಾಡಬೇಕು?
ಪೇಪರ್ ಬ್ಯಾಗ್ ಇದ್ದರೆ ಅದರಲ್ಲಿ ಮುಖ ಹಿಡಿದು ಉಸಿರಾಡಿ, ಆದರೆ ಬ್ಯಾಗ್ ಅನ್ನು ತಲೆ ಮೇಲೆ ಹಾಕಬೇಡಿ.
ನಿಮ್ಮ ಮಂಡಿಯನ್ನು ಮಡಚಿ, ಎದೆ ಭಾಗಕ್ಕೆ ತನ್ನಿ, ನಂತರ ಮುಂದೆಕ್ಕೆ ಬಾಗಿ, ಈ ರೀತಿ ಮಾಡಿದರೆ ಬಿಕ್ಕಳಿಕೆ ನಿಲ್ಲುವುದು
ಐಸ್ ಕೋಲ್ಡ್ ನೀರು ಕುಡಿಯಿರಿ
ಸ್ವಲ್ಪ ಸಕ್ಕರೆ ಬಾಯಿಗೆ ಹಾಕಿ
ನಿಂಬೆಹಣ್ಣು ಕಚ್ಚಿ ಅಥವಾ ವಿನೆಗೆರ್ ಟೆಸ್ಟ್ ಮಾಡಿ
ಉಸಿರನ್ನು ಸ್ವಲ್ಪ ಹೊತ್ತು ಹಿಡಿದು ನಂತರ ಬಿಡಿ
ಏನು ಮಾಡಬಾರದು?
ಬಿಕ್ಕಳಿಕೆ ಬಂದಾಗ ಮದ್ಯ ಸೇವಿಸಬಾರದು, ಫಿಜ್ಜಿ ಅಥವಾ ಹಾಟ್ ಡ್ರಿಂಕ್ಸ್ ಸೇವಿಸಬಾರದು.
ಚ್ಯುಯಿಂಗ್‌ಗಮ್ ಜಗಿಯಬೇಡಿ, ಧೂಮಪಾನ ಮಾಡಬೇಡಿ
ಖಾರದ ಪದಾರ್ಥ ಸೇವಿಸಬೇಡಿ
ಆಹಾರವನ್ನು ಬೇಗನೆ ತಿನ್ನಬೇಡಿ
ಬಿಸಿ ಪಾನೀಯ ಕುಡಿದ ತಕ್ಷಣ ತಣ್ಣನೆಯ ಆಹಾರ ಸೇವಿಸಬೇಡಿ.
ಬಿಕ್ಕಳಿಕೆ ಏಕೆ ಬರುತ್ತದೆ?
ಬಿಕ್ಕಳಿಕೆ ಏಕೆ ಬರುತ್ತದೆ ಎಂಬುವುದಕ್ಕೆ ನಿಖರ ಕಾರಣವಿಲ್ಲ, ಆದರೆ ಈ ಪ್ರಮುಖ ಕಾರಣಗಳಿಂದಲೂ ಬರುತ್ತದೆ
ಮಾನಸಿಕ ಒತ್ತಡ
ಎಮೋಷನ್ : ಯಾವುದೋ ಕಾರಣಕ್ಕೆ ಮನಸ್ಸಿನಲ್ಲಿ ತುಂಬಾನೇ ಬೇಸರ
ವೇಗವಾಗಿ ತಿನ್ನುವುದು, ಕುಡಿಯುವುದು ಮಾಡಿದಾಗತ
ಅತ್ಯಧಿಕ ಕೊಬ್ಬಿನಂಶವಿರುವ ಆಹಾರ ಸೇವಿಸುವುದರಿಂದ
ಅತಿಯಾಗಿ ಹೆಚ್ಚಾಗಿ ನೀರು ಕುಡಿಯುವುದರಿಂದ
ನರಕ್ಕೆ ಹಾನಿ ಮಾಡುವ ಯಾವುದೇ ಕಾಯಿಲೆ, ಲಿವರ್ ಕಾಯಿಲೆ, ನ್ಯೂಮೋನಿಯಾ, ಶ್ವಾಸಕೋಶದ ಸಮಸ್ಯೆಯಿದ್ದರೆ
ಕಿಬ್ಬೊಟ್ಟೆ ಸರ್ಜರಿಯಿಂದ ನರಕ್ಕೆ ಹಾನಿಯಾಗಿದ್ದರೆ ಈ ರೀತಿ ಬಿಕ್ಕಳಿಕೆ ಬರುವುದು
ಮೈ ಉಷ್ಣತೆಯಲ್ಲಿ ಬದಲಾವಣೆಯಾದಾಗ ಕೂಡ ಬಿಕ್ಕಳಿಕೆ ಬರುವುದು.
ಅಪರೂಪದ ಪ್ರಕರಣದಲ್ಲಿ ಈ ರೀತಿ ಬಿಕ್ಕಳಿಕೆ ಬಂದರ 49 ಗಂಟೆಗಳಿಗಿಂತ ಅಧಿಕ ಹೊತ್ತು ಬಿಕ್ಕಳಿಕೆ ಇದ್ದರೆ ಯಾವುದಾದರೂ ಕಾಯಿಲೆ ಅಥವಾ ಔಷಧೀಯ ಪರಿಣಾಮದಿಂದ ಇರಬಹುದು.
ಯಾವಾಗ ವೈದ್ಯರನ್ನು ಭೇಟಿಯಾಗಬೇಕು?
ಬಿಕ್ಕಳಿಕೆ ಕಾಯಿಲೆಯಲ್ಲ ಹಾಗಾಗಿ ಬಿಕ್ಕಳಿಕೆ ಬಂದ ತಕ್ಷಣ ವೈದ್ಯರಿಗೆ ತೋರಿಸಬೇಕಾಗಿಲ್ಲ, ಆದರೆ ಬಿಕ್ಕಳಿಕೆ ಜೊತೆಗೆ ಈ ಬಗೆಯ ಲಕ್ಷಣಗಳು ಕಂಡು ಬಂದರೆ ವೈದ್ಯರಿಗೆ ತೋರಿಸಬೇಕು.
ಕಿಬ್ಬೊಟ್ಟೆ ನೋವು
ಜ್ವರ
ಉಸಿರಾಟಕ್ಕೆ ತೊಂದರೆ
ವಾಂತಿ
ಕೆಮ್ಮುವಾಗ ರಕ್ತ ಬರುವುದು
ಗಂಟಲು ಕಟ್ಟಿದಂತಾಗುವುದು (ಕತ್ತು ಹಿಸುಕಿದ ಅನುಭವ)
ಅಪರೂಪದ ಪ್ರಕರಣದಲ್ಲಿ ಈ ರೀತಿ ಬಿಕ್ಕಳಿಕೆ ಬಂದರ 49 ಗಂಟೆಗಳಿಗಿಂತ ಅಧಿಕ ಹೊತ್ತು ಬಿಕ್ಕಳಿಕೆ ಇದ್ದರೆ ಯಾವುದಾದರೂ ಕಾಯಿಲೆ ಅಥವಾ ಔಷಧೀಯ ಪರಿಣಾಮದಿಂದ ಇರಬಹುದು.
ಯಾವಾಗ ವೈದ್ಯರನ್ನು ಭೇಟಿಯಾಗಬೇಕು?
ಬಿಕ್ಕಳಿಕೆ ಕಾಯಿಲೆಯಲ್ಲ ಹಾಗಾಗಿ ಬಿಕ್ಕಳಿಕೆ ಬಂದ ತಕ್ಷಣ ವೈದ್ಯರಿಗೆ ತೋರಿಸಬೇಕಾಗಿಲ್ಲ, ಆದರೆ ಬಿಕ್ಕಳಿಕೆ ಜೊತೆಗೆ ಈ ಬಗೆಯ ಲಕ್ಷಣಗಳು ಕಂಡು ಬಂದರೆ ವೈದ್ಯರಿಗೆ ತೋರಿಸಬೇಕು.
ಕಿಬ್ಬೊಟ್ಟೆ ನೋವು
ಜ್ವರ
ಉಸಿರಾಟಕ್ಕೆ ತೊಂದರೆ
ವಾಂತಿ
ಕೆಮ್ಮುವಾಗ ರಕ್ತ ಬರುವುದು
ಗಂಟಲು ಕಟ್ಟಿದಂತಾಗುವುದು (ಕತ್ತು ಹಿಸುಕಿದ ಅನುಭವ)
ಬಿಕ್ಕಳಿಕೆಯಿಂದ ಏನಾದರೂ ತೊಂದರಯಿದೆಯೇ?
ಆಗಾಗ ಬಿಕ್ಕಳಿಕೆ ಸಮಸ್ಯೆ ಬರುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ, ಆದರೆ ನೀವು ನಿಮ್ಮ ಸಮಸ್ಯೆಗೆ ತಕ್ಕ ಸಲಹೆ ನೀಡುವ ವೈದ್ಯರನ್ನು ಕಾಣಬೇಕು.
ಆಗಾಗ ಬಿಕ್ಕಳಿಕೆ ಬರುತ್ತಿದ್ದರೆ ನಿದ್ದೆಯಲ್ಲಿ ತೊಂದರೆಯಾಗುವುದು, ತೂಕ ಇಳಿಕೆಯಾಗುವುದು
ಬಿಕ್ಕಳಿಕೆಯಿಂದ ಹೃದಯಾಘಾತ ಉಂಟಾಗಿದ್ದೂ ಇದೆ.
ದಿನಾ ಬಿಕ್ಕಳಿಕೆ ಉಂಟಾದರೆ
ನಿದ್ದೆ ಸರಿಯಾಗಿ ಬರಲ್ಲ
ತಿನ್ನಲು, ನೀರು ಕುಡಿಯಲು ಕಷ್ಟವಾಗುವುದು
ನೋವು' ತಲೆಸುತ್ತು
ಒತ್ತಡ
ಈ ಬಗೆಯ ಸಮ್ಯೆ ಕಂಡು ಬರುವುದು.
ನಿಮಗೆ ಯಾವ ಮಸಸ್ಯೆ ಕಾಡುವುದೋ ಆ ರೋಗದ ತಜ್ಞರನ್ನು ಭೇಟಿ ಮಾಡಿದರೆ ನಿಮಗೆ ಸೂಕ್ತ ಸಲಹೆ ಸಿಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications