Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಮಹಿಳೆಯರು ಪುರುಷರಿಗಿಂತ ಹೆಚ್ಚು ನಿದ್ದೆ ಮಾಡಬೇಕು ಏಕೆ?
ಮಹಿಳೆಯರು ಹಾಗೂ ಪುರುಷರ ಜೀವನ ಶೈಲಿ ತುಂಬಾನೇ ವಿಭಿನ್ನವಾಗಿರುತ್ತದೆ. ಅದ್ರಲ್ಲೂ ಮಕ್ಕಳಾದ ಮೇಲೆ ಮಹಿಳೆಯರ ದೇಹದಲ್ಲಿ ಅನೇಕ ಬದಲಾವಣೆಗಳು ಆಗುತ್ತದೆ. ಒಂದು ಅಧ್ಯಯನದ ಪ್ರಕಾರ ಪುರುಷರಿಗಿಂತ ಮಹಿಳೆಯರಿಗೆ ಅತಿ ಹೆಚ್ಚಿನ ನಿದ್ರೆಯ ಅವಶ್ಯಕತೆಯಿದ್ಯಂತೆ.

ಹಾಗಾದ್ರೆ ಪುರುಷರಿಗಿಂತ ಹೆಚ್ಚಿನ ನಿದ್ರೆಯ ಅವಶ್ಯಕತೆ ಮಹಿಳೆಯರಿಗೆ ಯಾಕಿದೆ? ಅಧ್ಯಯನಗಳಿಂದ ಸಾಭೀತಾಗಿರೋದು ಏನು? ಅಷ್ಟಕ್ಕು ಮಹಿಳೆಯರಿಗೆ ನಿದ್ದೆಯ ಅವಶ್ಯಕತೆ ಎಷ್ಟಿದೆ ಅನ್ನೋದನ್ನ ತಿಳಿದುಕೊಳ್ಳೋಣ :
ಮಹಿಳೆಯರ ಮೆದುಳು ತಮ್ಮ ದಿನಚರಿಯಿಂದ ಚೇತರಿಸಿಕೊಳ್ಳಲು ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ನಿದ್ರಾ ವಂಚಿತ ಸ್ತ್ರೀಯರು ಖಿನ್ನತೆ, ಕೋಪಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಿದೆ. ಇದಿಷ್ಟೇ ಅಲ್ಲ, ವಿಶ್ರಾಂತಿಯ ವಿಚಾರದಲ್ಲೂ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚಿನ ವಿಶ್ರಾಂತಿ ಬೇಕು. ಇದರ ಹಿಂದೆ ಒಂದು ಬಲವಾದ ಕಾರಣವಿದೆ.

1. ಮಹಿಳೆಯರ ಹಾರ್ಮೋನಿನಲ್ಲಿ ಬದಲಾವಣೆ ಆಗುತ್ತದೆ
ಪ್ರೌಢಾವಸ್ಥೆಯ ಸಂದರ್ಭದಲ್ಲಿ ಅಥವಾ ಹಾರ್ಮೋನುಗಳ ನಿಯಮಿತ ಮಾಸಿಕ ವ್ಯತ್ಯಾಸಗಳು ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಇದರಲ್ಲಿ ಗರ್ಭಾವಸ್ಥೆ ಮತ್ತು ಋತುಬಂಧವನ್ನು ಕೂಡ ಒಳಗೊಂಡಿದೆ. ಋತುಮತಿಯಾದ ಸಂದರ್ಭದಲ್ಲಿ ದೈಹಿಕ ಅಸ್ವಸ್ಥತೆ ಮತ್ತು ನೋವಿನಿಂದಾಗಿ ಮಹಿಳೆಯರ ಮೆದುಳಿಗೆ ಹೆಚ್ಚು ನಿದ್ರೆಯ ಅಗತ್ಯವಿರುತ್ತದೆ. ಇದನ್ನು ಬಿಟ್ಟರೆ ಮಹಿಳೆಯರು ಆತಂಕ ಮತ್ತು ಖಿನ್ನತೆಯಂತಹ ಸಮಸ್ಯೆಗಳಿಗೆ ಹೆಚ್ಚಾಗಿ ಒಳಗಾಗುತ್ತಾರೆ. ಹೀಗಾಗಿ ಅವರಿಗೆ ಸರಿಯಾದ ನಿದ್ರೆ ಅವಶ್ಯಕತೆ ಇರುತ್ತದೆ.

2. ದಿನಪೂರ್ತಿ ಮಹಿಳೆಯರು ಕೆಲಸದಲ್ಲೇ ತೊಡಗಿರುತ್ತಾರೆ
ಮದುವೆಯಾಗಿ ಮಕ್ಕಳಿರೋ ಮಹಿಳೆಯರಿಗೆ ಬಿಡುವಿನ ವೇಳೆ ಅನ್ನೋದೆ ಇರೋದಿಲ್ಲ. ಹೆಚ್ಚಿನ ಮಹಿಳೆಯರು ಕೆಲಸಕ್ಕೆ ಹೋಗಿ ನಂತರ ಮನೆಕೆಲಸ, ಮಕ್ಕಳನ್ನು ನೋಡಿಕೊಳ್ಳೋದನ್ನ ಮಾಡುತ್ತಾರೆ. ಇನ್ನೂ ಕೆಲ ಮಹಿಳೆಯರು ಕೆಲಸಕ್ಕೆ ಹೋಗದಿದ್ದರೂ ಮನೆ ಕೆಲಸ ಮಕ್ಕಳ ಕೆಲಸವೇ ಸಾಕು ಎನ್ನುವಷ್ಟು ಇರುತ್ತದೆ. ಇನ್ನೂ ರಾತ್ರಿಯಿಡೀ ಮಕ್ಕಳು ಎದ್ದಿದ್ದರೆ ಆ ತಾಯಿಗೆ ಸರಿಯಾಗಿ ನಿದ್ದೆಯೂ ಇರುವುದಿಲ್ಲ. ಇಡೀ ದಿನ ಶ್ರಮ ಪಡಬೇಕು, ಆಕೆಗೆ ವಿಶ್ರಾಂತಿ ಅನ್ನೋದೇ ಸಿಗೋದಿಲ್ಲ. ಇದು ಆಕೆಯ ಆರೋಗ್ಯದ ಮೇಲೆ ಅತೀವ ಪರಿಣಾಮ ಬೀರುತ್ತದೆ.

3. ನಿದ್ರಾಹೀನತೆಯಿಂದ ತೂಕ ಹೆಚ್ಚಾಗುವ ಸಾಧ್ಯತೆ ಇದೆ
ಮಹಿಳೆಯರು ಸ್ಥೂಲಕಾಯತೆಯಂತಹ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಪುರುಷರು ತೂಕ ಹೆಚ್ಚಿಸಿಕೊಂಡರು ಕೂಡ ಅದನ್ನು ಸುಲಭವಾಗಿ ಕಡಿಮೆ ಮಾಡಬಹುದು. ಆದರೆ ಮಹಿಳೆಯರಿಗೆ ಹಾಗಾಗೋದಿಲ್ಲ ಅತಿಯಾದ ತೂಕವನ್ನು ಕಳೆದುಕೊಳ್ಳುವ ಕಷ್ಟ. ಸ್ಥೂಲಕಾಯದ ಸಮಸ್ಯೆ ಹೊಂದಿರುವ ಮಹಿಳೆಯರು ನಿದ್ರಾಹೀನತೆಗೆ ಒಳಗಾಗುವ ಸಾಧ್ಯತೆ ಹೆಚ್ಚು, ಆದ್ದರಿಂದ ನಿದ್ರಾಹೀನತೆ ಮತ್ತು ಅಧಿಕ ತೂಕದ ನಡುವೆ ನೇರವಾದ ಸಂಬಂಧವಿದೆ. ನಿದ್ರೆಯ ಅಭಾವದಿಂದಾಗಿ ಒತ್ತಡದ ಹಾರ್ಮೋನ್ ಆದ ಕಾರ್ಟಿಸೋಲ್ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತದೆ. ಹೆಚ್ಚಿನ ಕಾರ್ಟಿಸೋಲ್ ಬಿಡುಗಡೆಯು ಹಸಿವು ಹೆಚ್ಚಾಗಲು ಹಾಗೂ ಸ್ಥೂಲಕಾಯತೆಗೆ ಕಾರಣವಾಗುತ್ತದೆ.

4. ತನ್ನವರಿಗಾಗಿ ತುಡಿಯುವ ಜೀವ ಮಹಿಳೆಯರದ್ದಾಗಿರುತ್ತದೆ
ಮಹಿಳೆಯರು ತನ್ನ ಗಂಡ-ಮಕ್ಕಳು ಅಂತ ಚಿಂತಿಸುತ್ತಿರುತ್ತಾರೆ. ಊಟ, ನಿದ್ದೆ ಬಿಟ್ಟು ಗಂಡ, ಮಕ್ಕಳ ಸೇವೆಯನ್ನೇ ಮಾಡುತ್ತಿರುತ್ತಾರೆ. ಹೀಗಾಗಿ ಮಹಿಳೆಯರಿಗೆ ವಿಶ್ರಾಂತಿಯ ತುಂಬಾನೇ ಅವಕಾಶ ಕಡಿಮೆ. ಇದೇ ದಿನಚರಿಗೆ ಒಗ್ಗಿಕೊಂಡ ಮಹಿಳೆಯರಿಗೆ ಅವಕಾಶ ಸಿಕ್ಕರು ನಿದ್ರಿಸಲು ಕಷ್ಟವಾಗುತ್ತದೆ.
ಈ ಎಲ್ಲಾ ಕಾರಣಗಳಿಂದಾಗಿ ಮಹಿಳೆಯರಿಗೆ ನಿದ್ರೆಯ ಅವಶ್ಯಕತೆ ತುಂಬಾನೇ ಇದೆ. ಸಾಕಷ್ಟು ನಿದ್ದೆ ಮಾಡಿದರಷ್ಟೇ ಆರೋಗ್ಯವಾಗಿರಲು ಸಾಧ್ಯ.



Click it and Unblock the Notifications
