Latest Updates
-
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು!
ಅಂಧತ್ವ ತರುವ ಗ್ಲುಕೋಮಾದ ಲಕ್ಷಣಗಳೇನು? ಇದನ್ನು ನಿಯಂತ್ರಿಸಬಹುದೇ?
ಅಕ್ಟೋಬರ್ 8 ವಿಶ್ವ ದೃಷ್ಟಿದಿನವಂತೆ. ಈ ವೇಳೆಯಲ್ಲಿ ನಾವು ಕಣ್ಣಿನ ಬಗ್ಗೆ ಮಾತನಾಡಲೇ ಬೇಕಾಗುತ್ತದೆ. ಕಣ್ಣಿಲ್ಲದಿದ್ದರೆ ಬಾಳೇ ಕತ್ತಲಾಗುತ್ತದೆ. ಒಂದು ಕ್ಷಣ ಕಣ್ಣನ್ನು ಮುಚ್ಚಿ ನೋಡಿದರೆ ಅಂಧಕಾರದ ಅರಿವಾಗುತ್ತದೆ.
ದೇವರು ನಮಗೆ ಕಣ್ಣುಕೊಟ್ಟಿದ್ದಾನೆ. ಆ ಕಣ್ಣನ್ನು ನಾವು ಆರೋಗ್ಯವಾಗಿ ನೋಡಿಕೊಳ್ಳುವುದು ಅಗತ್ಯವಾಗಿದೆ. ದೃಷ್ಟಿ ಮಾಂಧ್ಯತೆ, ದೃಷ್ಠಿ ಕೀಳುವ ಗ್ಲಾಕೋಮಾ ಸೇರಿದಂತೆ ಹಲವು ರೀತಿಯ ರೋಗಗಳು ಕಣ್ಣನ್ನು ಕಾಡುತ್ತಿದ್ದು, ನಾವು ಒಂದಷ್ಟು ಎಚ್ಚರಿಕೆ ಮತ್ತು ಕೆಲವೊಂದು ವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಕಣ್ಣನ್ನು ರಕ್ಷಿಸಿಕೊಳ್ಳುವತ್ತ ಹೆಚ್ಚಿನ ಒತ್ತು ನೀಡಬೇಕಿದೆ.

ಕಣ್ಣಿನ ದೃಷ್ಠಿ ಕೀಳಬಹುದು ಗ್ಲುಕೋಮಾ
ಇವತ್ತು ಕಣ್ಣನ್ನು ಬಾಧಿಸುವ ರೋಗದಲ್ಲಿ ಗ್ಲಾಕೋಮಾ ಒಂದಾಗಿದ್ದು, ಇದು ವ್ಯಕ್ತಿಯನ್ನು ಅಂಧನನ್ನಾಗಿ ಮಾಡುವ ರೋಗವಾಗಿದೆ. ವೈದ್ಯರು ನೀಡುವ ಮಾಹಿತಿ ಪ್ರಕಾರ ಗ್ಲುಕೋಮಾವನ್ನು ನಿಯಂತ್ರಿಸಬಹುದಂತೆ ಆದರೆ ವಾಸಿಮಾಡಲು ಸಾಧ್ಯವಿಲ್ಲವಂತೆ. ಇಷ್ಟಕ್ಕೂ ಗ್ಲುಕೋಮಾ ಎಂದರೇನು ಎಂದು ತಿಳಿಯುತ್ತಾ ಹೋದರೆ.. ಇದೊಂದು ರೀತಿಯಲ್ಲಿ ರೋಗಿಯ ಅರಿವಿಗೆ ಬಾರದೆ ಅಂಧತ್ವವನ್ನುಂಟು ಮಾಡುವ ಕಾಯಿಲೆ ಎನ್ನುವುದರಲ್ಲಿ ಎರಡು ಮಾತಿಲ್ಲ. ತಕ್ಷಣಕ್ಕೆ ರೋಗ ಲಕ್ಷಣಗಳು ಕಾಣಿಸಿಕೊಳ್ಳದೆ ಕಣ್ಣಿನ ನರ ಕ್ಷೀಣಿಸಿ ದೃಷ್ಠಿ ಕುಂದಿ ಶಾಶ್ವತ ಅಂಧತ್ವಕ್ಕೆ ದಾರಿ ಮಾಡಿಕೊಡುತ್ತದೆ. ಇಲ್ಲಿ ನರ ಕ್ಷೀಣಿಸುವುದರಿಂದ ನಶಿಸಿಹೋದ ದೃಷ್ಟಿಯನ್ನು ಮತ್ತೆ ಪಡೆಯುವುದು ಅಸಾಧ್ಯ. ಆದ್ದರಿಂದ ಗ್ಲುಕೋಮಾ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು ಎನ್ನುವುದು ವೈದ್ಯರ ಸಲಹೆಯಾಗಿದೆ.

ಗ್ಲುಕೋಮಾದ ಗುಣಲಕ್ಷಣಗಳೇನು ಗೊತ್ತಾ?
ಗ್ಲುಕೋಮಾದ ಗುಣಲಕ್ಷಣಗಳನ್ನು ನೋಡುವುದಾದರೆ ಸಕಾರಣವಿಲ್ಲದೆ ಬರುವ ತಲೆನೋವು, ಕಣ್ಣುನೋವು, ಆರದ ಕೆಂಪುಕಣ್ಣು, ಮಧುಮೇಹ, ಬೆಳಕಿನ ಸುತ್ತ ಕಾಮನಬಿಲ್ಲಿನ ಬಣ್ಣದ ಬಳೆಗಳು ಕಾಣಿಸಿಕೊಳ್ಳುವುದು, ದೃಷ್ಠಿ ಕ್ಷೇತ್ರದಲ್ಲಿ ಕಪ್ಪು ಕಲೆಗಳು ಗೋಚರಿಸುವುದು, ದೃಷ್ಟಿದೋಷ, ಪೊರೆಗೆ ಶಸ್ತ್ರಚಿಕಿತ್ಸೆ ಮಾಡಿಯೂ ಕಣ್ಣು ಕಾಣಿಸದಿರುವುದು, ದಮ್ಮು ಸೂಲಿನ ತೊಂದರೆ ಮೊದಲಾದವುಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಕಂಡು ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು ಒಳ್ಳೆಯದು. ಇನ್ನು ಕಣ್ಣಿಗೆ ಪೆಟ್ಟು ಬಿದ್ದರೂ ನಿರ್ಲಕ್ಷ್ಯ ವಹಿಸುವುದು, ಪದೇ ಪದೇ ಕನ್ನಡಕಗಳನ್ನು ವೈದ್ಯರ ಸಲಹೆ ಪಡೆಯದೆ ಬದಲಾಯಿಸುವುದು ಕೂಡ ಕಣ್ಣಿಗೆ ತೊಂದರೆ ನೀಡುತ್ತದೆ.

ಗ್ಲುಕೋಮಾ ನಿಯಂತ್ರಿಸಬಹುದಷ್ಟೆ ಆದರೆ?
ಇನ್ನು ಗ್ಲುಕೋಮಾ ಅಧಿಕ ಕಣ್ಣಿನ ಒತ್ತಡದಿಂದ, ಸ್ಟೀರಾಯ್ಡ್ ಉಪಯೋಗಿಸುವುದರಿಂದ, ಕಣ್ಣಿನ ನರಕ್ಕೆ ತೊಂದರೆಯಾಗುವುದರಿಂದ, ವಂಶಪಾರಂಪರ್ಯವಾಗಿಯೂ ಬರುವ ಸಾಧ್ಯತೆ ಇರುತ್ತದೆಯಂತೆ. ಗ್ಲುಕೋಮಾ ಕಂಡು ಹಿಡಿಯಲು ಸಾಮಾನ್ಯ ಕಣ್ಣಿನ ಪರೀಕ್ಷೆ ಜೊತೆಗೆ ಕಣ್ಣಿನ ಒತ್ತಡ ಪರೀಕ್ಷೆ, ಗೋನಿಯೋಸ್ಕೋಪಿ, ಪೆರಿಮೆಟ್ರಿ(ದೃಷ್ಠಿಕ್ಷೇತ್ರ ಪರೀಕ್ಷೆ), ಸಿಸಿಟಿ(ಕೃಷ್ಣಪಟಲದ ಗಾತ್ರದ ಮಾಪನ), ಹೆಚ್‌ಆರ್‌ಟಿ, ಜಿಡಿಎಕ್ಸ್, ಓಸಿಟಿ ಮೊದಲಾದ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಗ್ಲುಕೋಮಾದ ಜಾಡು ಹಿಡಿದು ನಿಯಂತ್ರಿಸಬಹುದು. ಆದರೆ ಶಾಶ್ವತವಾಗಿ ವಾಸಿ ಮಾಡಲು ಸಾಧ್ಯವಿಲ್ಲವಂತೆ. ಆದ್ದರಿಂದ ಪ್ರತಿಯೊಬ್ಬರು 40 ವರ್ಷ ಬಳಿಕ ಕಣ್ಣಿನ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.

ಕಣ್ಣಿನ ಆರೋಗ್ಯ ಕಾಪಾಡುವುದು ಹೇಗೆ?
ಸಾಮಾನ್ಯವಾಗಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ನಾವು ಕೆಲವೊಂದು ಕ್ರಮಗಳನ್ನು ಅನುಸರಿಸುವುದು ಉತ್ತಮ. ಮೊದಲಿಗೆ ಕಣ್ತುಂಬ ನಿದ್ದೆ ಮಾಡಬೇಕು. ಏಕೆಂದರೆ ರಾತ್ರಿ ವೇಳೆ ಚೆನ್ನಾಗಿ ನಿದ್ದೆ ಮಾಡುವುದರಿಂದ ಕಣ್ಣಿನ ಕೆಳಗೆ ಚರ್ಮದಲ್ಲಿನ ಕಣಗಳು ಶಕ್ತಿಯನ್ನು ಪಡೆದುಕೊಳ್ಳಲು ಸಹಕಾರಿಯಾಗುತ್ತದೆ. ತಡರಾತ್ರಿವರೆಗೂ ನಿದ್ದೆ ಬಂದರೂ ನಿದ್ದೆ ಮಾಡದೆ ಮೊಬೈಲ್, ಟಿವಿ ನೋಡುವ ಮೂಲಕ ಕಣ್ಣಿಗೆ ಒತ್ತಡ ನೀಡುವುದು ಒಳ್ಳೆಯ ಅಭ್ಯಾಸವಲ್ಲ.
ಕಣ್ಣಿನ ಆರೋಗ್ಯ ಕಾಪಾಡುವ ತರಕಾರಿ ಕ್ಯಾರೆಟ್‌ನ್ನು ಹೆಚ್ಚು ಸೇವಿಸಬೇಕು. ಇದು ಕಣ್ಣಿನ ನೋಟ ಚುರುಕುಗೊಳ್ಳುತ್ತದೆ. ಜತೆಗೆ ಕ್ಯಾರೆಟ್‌ನಲ್ಲಿ ಕಣ್ಣಿಗೆ ಅಗತ್ಯವಾದ ವಿಟಮಿನ್ 'ಎ' ಇರುತ್ತದೆ. ವಿಟಮಿನ್ 'ಬಿ' ಇರುವ ಸೊಪ್ಪು ತರಕಾರಿಗಳು, ಮಾವಿನಕಾಯಿ, ಕೋಳಿಮೊಟ್ಟೆ ಸೇವನೆ ಒಳ್ಳೆಯದು. ಹಿತಕರ ವಾತಾವರಣದಲ್ಲಿ ವ್ಯಾಯಾಮ, ವಾಕಿಂಗ್ ಮಾಡಬೇಕು.

ಕಣ್ಣಿಗೆ ಆಯಸವಾಗದಂತೆ ನೋಡಿಕೊಳ್ಳಿ
ಓದುವಾಗ ಅಗತ್ಯ ಬೆಳಕಿರುವಂತೆ ನೋಡಿಕೊಳ್ಳಬೇಕು. ಮಂದ ಬೆಳಕಿನಲ್ಲಿ ಓದುವ ಸಾಹಸ ಮಾಡಬಾರದು. ಅಗತ್ಯ ಬಿದ್ದಾಗಲೆಲ್ಲಾ ಕನ್ನಡಕ ಬಳಸುವುದು ಒಳ್ಳೆಯದು. ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕುಳಿತುಕೊಳ್ಳುವದರಿಂದ ಕಣ್ಣಿಗೆ ಹಾನಿಯಾಗುವುದಿಲ್ಲ ಆದರೆ ಹೆಚ್ಚು ಹೊತ್ತು ಬೆಳಕು ಬೀರುವ ಸ್ಕ್ರೀನ್ ಕಡೆ ನೋಡುವುದರಿಂದ ಕಣ್ಣುಗಳು ಬೇಗ ಆಯಾಸಗೊಳ್ಳುತ್ತವೆ. ಹೆಚ್ಚು ಸಮಯ ಸ್ಕ್ರೀನ್ ಮುಂದೆ ಕೆಲಸಮಾಡುವಾಗ ಮಧ್ಯೆ ಮಧ್ಯೆ ಕಣ್ಣಿಗೆ ವಿಶ್ರಾಂತಿ ನೀಡುವುದು, ಆಗಾಗ ಅತ್ತ ಇತ್ತ ನೋಡುವುದು ಒಳ್ಳೆಯದು.
ಸಾಮಾನ್ಯವಾಗಿ ಕಣ್ಣಿನ ಸುತ್ತಲಿನ ಪ್ರದೇಶ ಸ್ವಲ್ಪ ಲಿಂಫಾಟಿಕ್ ದ್ರವದಿಂದ ಉಬ್ಬುತ್ತದೆ. ಇದಕ್ಕೆ ತಲೆಯ ಕೆಳಗೆ ಸರಿಯಾಗಿ ದಿಂಬುಗಳನ್ನಿಟ್ಟುಕೊಂಡು ಮಲಗುವುದು ಒಳ್ಳೆಯದು. ಬಹಳಷ್ಟು ಮಂದಿಗೆ ಪಿಗ್ಮೆಂಟ್ಸ್‌ನಿಂದಾಗಿ ಸಹ ಕಣ್ಣಿನ ಕೆಳಗೆ ವಲಯಗಳೇರ್ಪಡುತ್ತವೆ. ಮೆಲಾನಿನ್ ಪಿಗ್ಮೆಂಟ್ಸ್ ಈ ಪ್ರದೇಶದಲ್ಲಿ ಸೇರಿಕೊಳ್ಳುವುದರಿಂದಲೇ ಹೀಗಾಗುತ್ತದೆ. ಕಣ್ಣಿನ ಕೆಳಗೆ ಸೌತೆಕಾಯಿ ಬಳಸುವುದರಿಂದಲೂ ಒಳ್ಳೆಯದಾಗುತ್ತದೆ.

ಕಣ್ಣಿಗೆ ಸ್ವಯಂ ಚಿಕಿತ್ಸೆ ಒಳ್ಳೆಯದಲ್ಲ..
ಕೆಲವರ ಕಣ್ಣುಗಳಲ್ಲಿ ಕೆಂಪು ಗೆರೆಗಳು ಇರುತ್ತವೆ. ಇದಕ್ಕೂ ಸಹ ಸೌತೆಕಾಯಿಯೇ ದಿವ್ಯ ಔಷಧಿ. ಸೌತೆಕಾಯಿ ರಕ್ತನಾಳಗಳನ್ನು ತಂಪಾಗಿಡುತ್ತದೆ. ಜತೆಗೆ ಹೆಚ್ಚು ಉಪ್ಪು ಇರುವ ಆಹಾರ ಸೇವಿಸಬೇಕು. ಆಲ್ಕೋ ಹಾಲ್ ಸೇವನೆ ಕಣ್ಣಿನ ಮೇಲೆ ಪರಿಣಾಮ ಬೀರಬಹುದು.
ಕಣ್ಣಿನ ಸಮಸ್ಯೆ ಉಂಟಾದಾಗ ಉದಾಸೀನ ತೋರದೆ, ಸ್ವಯಂ ಔಷಧಿ ಮಾಡಿಕೊಳ್ಳದೆ ಕಣ್ಣಿನ ತಜ್ಞ ವೈದ್ಯರನ್ನು ಸಂಪರ್ಕಿಸಿ ಅವರ ಸಲಹೆಯಂತೆ ಚಿಕಿತ್ಸೆ ಪಡೆದುಕೊಳ್ಳುವುದನ್ನು ಮರೆಯಬಾರದು.



Click it and Unblock the Notifications
