For Quick Alerts
ALLOW NOTIFICATIONS  
For Daily Alerts

ಏಪ್ರಿಲ್ 7, ವಿಶ್ವ ಆರೋಗ್ಯ ದಿನ: ಈ 7 ಜೀವನಶೈಲಿ ಸೂತ್ರಗಳಿಂದ ಕಾಯಿಲೆ ತಡೆಗಟ್ಟಬಹುದು

|

ಜಾಗತಿಕವಾಗಿ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸಲು ಪ್ರತಿವರ್ಷ ಏಪ್ರಿಲ್ 7ರಂದು ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಗುವುದು. 1948ರಲ್ಲಿ ನಡೆದ ವಿಶ್ವ ಆರೋಗ್ಯ ಸಭೆಯಲ್ಲಿ ಈ ಕುರಿತು ನಿರ್ಧರಿಸಿ, 1950ರಿಂದ ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ.

World Health Day 2020- Lifestyle Tips To Be Healthier | Boldsky Kannada
World Health Day 2020

ಆರೋಗ್ಯವೇ ಭಾಗ್ಯ ಅಂತಾರೆ, ಎಲ್ಲಾ ಸಂಪತ್ತು ಇದ್ದು ಅದನ್ನು ಅನುಭವಿಸಲು ಮುಖ್ಯವಾಗಿ ಬೇಕಿರುವ ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನ? ಇದೀಗಲೇ ವಿಶ್ವದ ಎಲ್ಲಾ ರಾಷ್ಟ್ರಗಳು ತಮ್ಮ ಪ್ರಜೆಗಳ ಆರೋಗ್ಯ ಕಾಪಾಡಲು ಹೆಣಗಾಡುತ್ತಿವೆ. ತಾನು ಶ್ರೀಮಂತ ರಾಷ್ಟ್ರ, ನನ್ನ ಬಳಿ ಹಣವಿದೆ, ಶಸ್ತ್ರಾಸ್ತ್ರಗಳಿವೆ ಎಂದು ಬೀಗುತ್ತಿದ್ದ ವಿಶ್ವದ ದೊಡ್ಡಣ್ಣ ಅಮೆರಿಕ ಕೂಡ ಅವೆಲ್ಲಕ್ಕಿಂತ ಬೇಕಾಗಿರುವುದು ಜನರ ಸ್ವಾಸ್ಥ್ಯ ಎಂದು ಹೇಳಲಾರಂಭಿಸಿದೆ. ಹೌದು ಕೊರೊನಾವೈರಸ್‌ ಎಂಬ ಎಂಬ ವೈರಸ್‌ ಜನರ ಪ್ರಾಣಗಳಿಗೆ ಮಾರಕವಾಗಿದ್ದು, ಈ ವೈರಸ್ ತಡೆಗಟ್ಟಲು ಇಡೀ ವಿಶ್ವವೇ ಹರಸಾಹಸ ಪಡುತ್ತಿವೆ.

ಭಾರತದಲ್ಲಿಯೂ ಇದರ ಭೀತಿ ತಟ್ಟಿದ್ದು ಇದರ ಪರಿಣಾಮ ಭಾರತವೇ ಲಾಕ್‌ಡೌನ್‌ ಆಗಿದ್ದು, ಸೋಂಕಿತರ ಸಂಖ್ಯೆ 400 ಗಡಿ ದಾಟಿದೆ, ಸಾವಿನ ಸಂಖ್ಯೆ 109 ಆಗಿದೆ. ಈ ವೈರಸ್‌ ವಿರುದ್ಧ ಹೋರಾಡಲು ಎಲ್ಲರೂ ಮನೆಯಲ್ಲಿಯೇ ಇದ್ದು ಸಹಕಾರಿಸಬೇಕಾಗಿದೆ. ಹೊರಗಡೆ ಓಡಾಡುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚು.

ವಿಶ್ವ ಆರೋಗ್ಯ ದಿನದ ವಿಶೇಷವಾಗಿ ನಾವಿಲ್ಲಿ ನಮ್ಮ ಆರೋಗ್ಯ ವೃದ್ಧಿಸಲು ಪಾಲಿಸಬೇಕಾದ ಜೀವನಶೈಲಿ ಸೂತ್ರಗಳ ಬಗ್ಗೆ ಹೇಳಿದ್ದೇವೆ ನೋಡಿ:

1. ಆರೋಗ್ಯಕರ ಅಭ್ಯಾಸ ರೂಢಿಸಿಕೊಳ್ಳಿ

1. ಆರೋಗ್ಯಕರ ಅಭ್ಯಾಸ ರೂಢಿಸಿಕೊಳ್ಳಿ

ಆರೋಗ್ಯಕರ ಅಭ್ಯಾಸ ನಮ್ಮ ದೇಹ ಹಾಗೂ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಎಷ್ಟೇ ಬ್ಯುಸಿಯಾಗಿದ್ದರೂ ಆ ಆರೋಗ್ಯಕರ ಅಭ್ಯಾಸ ತಪ್ಪಿಸಬಾರದು. ಪೌಷ್ಠಿಕಾಂಶ ಸಮತೋಲನವಿರುವ ಆಹಾರ ಸೇವನೆ, ಕಡಿಮೆ ಪ್ರಮಾಣದಲ್ಲಿ ಕ್ಯಾಲೋರಿ ತೆಗೆದುಕೊಳ್ಳುವುದು, ದೈಹಿಕ ವ್ಯಾಯಾಮ ಇವೆಲ್ಲಾ ಸೇರಿವೆ. ಈ ರೂಢಿ ತಪ್ಪಿಸಬಾರದು. ಪ್ರತಿನಿತ್ಯ ಅಭ್ಯಾಸ ಮಾಡಬೇಕು. ಹಾಗಂತ ಬಾಯಿಗೆ ರುಚಿಕರವಾಗಿರುವುದು ಏನೂ ತಿನ್ನಬಾರದು ಎಂದಲ್ಲ, ತಿನ್ನಿ, ಆದರೆ ಎಲ್ಲವೂ ಮಿತಿಯಲ್ಲಿರಲಿ ಅಷ್ಟೇ.

2. ಕ್ಯಾಲೋರಿ ನಿಯಂತ್ರಣ

2. ಕ್ಯಾಲೋರಿ ನಿಯಂತ್ರಣ

ಸಿಹಿ ಪದಾರ್ಥಗಳು, ಅಧಿಕ ಕ್ಯಾಲೋರಿಯ ಪಿಜ್ಜಾ, ಬರ್ಗರ್‌, ಪೇಸ್ಟ್ರೀ ಇವುಗಳೆಲ್ಲಾ ಬಾಯಿಗೆ ತುಂಬಾ ರುಚಿ ಅನಿಸಿದರೂ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಇನ್ನು ತುಪ್ಪ, ಬೆಣ್ಣೆ ಈ ರೀತಿಯ ಆರೋಗ್ಯಕರ ಆಹಾರದಲ್ಲಿಯೂ ಕ್ಯಾಲೋರಿ ಇದೆ, ಆದ್ದರಿಂದ ಇವುಗಳನ್ನು ಮಿತಿಯಲ್ಲಿ ತಿನ್ನಬೇಕು. ನಿಮ್ಮ ಮೊಬೈಲ್‌ನಲ್ಲಿ ಕ್ಯಾಲೋರಿ ಆ್ಯಪ್ ಹಾಕಿಡಿ, ಆಗ ನಿಮಗೆ ಎಷ್ಟು ಪ್ರಮಾಣದಲ್ಲಿ ಕ್ಯಾಲೋರಿ ಸೇವನೆ ಮಾಡಬೇಕು ಎಂಬ ಲೆಕ್ಕಾಚಾರ ದೊರೆಯುತ್ತದೆ.

3. ಪ್ರತಿನಿತ್ಯ ವ್ಯಾಯಾಮ ಮಾಡಿ

3. ಪ್ರತಿನಿತ್ಯ ವ್ಯಾಯಾಮ ಮಾಡಿ

ಹೊಲದಲ್ಲಿ ದುಡಿಯುವ ರೈತರಿಗೆ ವ್ಯಾಯಾಮ ಮಾಡಬೇಕಾದ ಅಗ್ಯತವಿಲ್ಲ, ಅವರು ದಿನವಿಡೀ ದುಡಿಯುವುದರಿಂದ ಅವರು ಕ್ಯಾಲೋರಿ ತೆಗೆದುಕೊಳ್ಳುವುದರ ಬಗ್ಗೆಯೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಏಕೆಂದರೆ ಏನೇ ತಿಂದರು ಅದನ್ನುಅರಗಿಸಿಕೊಳ್ಳುವ ಶಕ್ತಿ ಅವರ ದೇಹಕ್ಕೆ ಇರುತ್ತದೆ. ಆದರೆ ಹೆಚ್ಚು ಕೂತುಕೊಂಡೇ ಇರುವವರು ಪ್ರತಿನಿತ್ಯ ವ್ಯಾಯಾಮ ಮಾಡಬೇಕು, ಕ್ಯಾಲೋರಿ ಹೆಚ್ಚು ತೆಗೆದುಕೊಳ್ಳದಂತೆ ಎಚ್ಚರಿಕೆ ಕೂಡ ವಹಿಸಬೇಕು.

4. ಸಾಕಷ್ಟು ನೀರು ಕುಡಿಯಿರಿ

4. ಸಾಕಷ್ಟು ನೀರು ಕುಡಿಯಿರಿ

ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಾಪಾಡಲು ಮಾತ್ರವಲ್ಲ ತೂಕವನ್ನು ನಿಯಂತ್ರಣದಲ್ಲಿ ಇಡಲೂ ಸಹಕಾರಿ. ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿಯಿರಿ. ಊಟಕ್ಕೆ ಅರ್ಧ ಗಂಟೆ ಮುಂಚೆ ಅರ್ಧ ಲೀಟರ್ ನೀರು ಕುಡಿದರೆ ಆಹಾರ ತೆಗೆದುಕೊಳ್ಳುವ ಪ್ರಮಾಣ ಕಡಿಮೆಯಾಗುವುದು, ಹೀಗೆ ತೂಕವನ್ನು ನಿಯಂತ್ರಿಸಬಹುದು. ದಿನದಲ್ಲಿ 8 ಲೋಟ ನೀರು ಕುಡಿಯಿರಿ.

5. ಚೆನ್ನಾಗಿ ನಿದ್ದೆ ಮಾಡಿ

5. ಚೆನ್ನಾಗಿ ನಿದ್ದೆ ಮಾಡಿ

ಆಧುನಿಕ ಜೀವನಶೈಲಿಯಲ್ಲಿ ನಿದ್ದೆಯ ಶೈಲಿಯೇ ಬದಲಾಗಿದೆ. ವಿವಿಧ ಶಿಫ್ಟ್‌ಗಳಲ್ಲಿ ಕೆಲಸ, ರಾತ್ರಿ ತುಂಬಾ ಹೊತ್ತು ಟಿವಿ, ಲ್ಯಾಪ್‌ಟಾಪ್, ಮೊಬೈಲ್ ಮುಂದೆ ಕೂರುವುದು ಇವೆಲ್ಲಾ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಆರೋಗ್ಯವಾಗಿ ಇರಬೇಕೆಂದರೆ ಒಬ್ಬ ಮನುಷ್ಯನಿಗೆ 6-8 ಗಂಟೆ ನಿದ್ದೆ ಅವಶ್ಯಕ.

6. ಆರೋಗ್ಯ ವೃದ್ಧಿ ಕಡೆ ಗಮನ ಕೊಡಿ

6. ಆರೋಗ್ಯ ವೃದ್ಧಿ ಕಡೆ ಗಮನ ಕೊಡಿ

ಇಷ್ಟೇ ತೂಕ ಹೊಂದಬೇಕು, ನನ್ನ ಆರೋಗ್ಯ ಶೈಲಿ ಹೀಗಿಯೇ ಇರಬೇಕು ಎಂಬ ಕೆಲವೊಂದು ನಿಯಮಗಳನ್ನು ಅನುಸರಿಸುವುದು ಒಳ್ಳೆಯದೇ. ಇದರಿಂದ ತೂಕವನ್ನು ನಿಯಂತ್ರಣದಲ್ಲಿಡಬಹುದು. ಮಧುಮೇಹ, ಕೊಲೆಸ್ಟ್ರಾಲ್ ಮುಂತಾದ ಅನೇಕ ಸಮಸ್ಯೆಗಳಿಗೆ ಕಾರಣ ಅತಿಯಾದ ತೂಕ. ಇದನ್ನು ನಿಯಂತ್ರಣದಲ್ಲಿಟ್ಟರೆ ಆರೋಗ್ಯವನ್ನು ಕಾಪಾಡುವುದು ತುಂಬಾ ಸುಲಭವಾಗುತ್ತದೆ. ಇನ್ನು ಆಹಾರದಲ್ಲಿ ಹಣ್ಣು-ತರಕಾರಿ, ನಾರಿನ ಪದಾರ್ಥಗಳು, ಧಾನ್ಯಗಳು ಇವುಗಳನ್ನು ಹೆಚ್ಚಾಗಿ ಬಳಸಿ. ಇದರಿಂದ ದೇಹಕ್ಕೆ ಅಗ್ಯತವಾದ ಪೋಷಕಾಂಶ ದೊರೆಯುವುದರ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚುವುದು.

7. ಕೆಟ್ಟದ್ದನ್ನು ಮರೆತು ಬಿಡಿ

7. ಕೆಟ್ಟದ್ದನ್ನು ಮರೆತು ಬಿಡಿ

ದೈಹಿಕ ಆರೋಗ್ಯ ಕಾಪಾಡಬೇಕೆಂದರೆ ಮೊದಲು ಮಾನಸಿಕ ಆರೋಗ್ಯ ಕಾಪಾಡಬೇಕು. ಆದರೆ ಮನಸ್ಸಿನ ಒತ್ತಡ, ಬೇಸರ ಇವುಗಳನ್ನು ಹೊರಹಾಕಬೇಕು. ಧ್ಯಾನ, ಯೋಗ, ಸಂಗೀತ, ಕಲೆ ಇವೆಲ್ಲಾ ಮನಸ್ಸಿನ ಒತ್ತಡ ಹೊರಹಾಕುವಲ್ಲಿ ತುಂಬಾ ಸಹಕಾರಿ.

ಸಲಹೆ: ಕಾಯಿಲೆ ಬಂದ ಮೇಲೆ ವಾಸಿ ಮಾಡಲು ಇದ್ದಾಡುವುದಕ್ಕಿಂತ ಕಾಯಿಲೆ ಬರದಂತೆ ತಡೆಯುವುದೇ ವಾಸಿ.ಕೊರೊನಾವೈರಸ್ ಮಾರಾಣಾಂತಿಕ ಕಾಯಿಲೆ ಆಗಿದ್ದರೂ ನೀವು ಎಲ್ಲಿಯೂ ಹೊರಗಡೆ ಓಡಾಡದಿದ್ದರೆ ಇದು ಬರದಂತೆ ತಡೆಗಟ್ಟಬಹುದು. ನಿಮ್ಮ ಹಾಗೂ ಮನೆಯವರ ಸುರಕ್ಷಿತಗಾಗಿ ಲಾಕ್‌ಡೌನ್ ಅವಧಿಯಲ್ಲಿ ಮನೆಯಲ್ಲಿಯೇ ಇರಿ.

English summary

World Health Day 2020, 7 Lifestyle Tips To Be Healthier

April 7 world health day, Here we have given seven tips to maintain your healthy lifestyle. Those who follow these lifestyle for them no need spend money hospital.
X
Desktop Bottom Promotion