Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಮಹಿಳೆಯರು ಮೂತ್ರ ವಿಸರ್ಜನೆ ಮಾಡಲೇಬೇಕು, ಏಕೆ ಗೊತ್ತಾ?
ಸಾಮಾನ್ಯವಾಗಿ ಸಂಭೋಗ ಅಥವಾ ಲೈಂಗಿಕ ಕ್ರಿಯೆಯ ಬಳಿಕ ನಿದ್ರೆಗೆ ಜಾರುತ್ತಾರೆ. ಮೂತ್ರವಿಸರ್ಜನೆ ಮಾಡಬೇಕೆಂದು ಅನಿಸಿದರೂ, ಮತ್ತೆ ಏಳಲು ಮನಸ್ಸಾಗದೇ ಅಲ್ಲೇ ಮಲಗುತ್ತಾರೆ. ಇದರ ಪರಿಣಾಮ ಅವರು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ವಿಶೇಷವಾಗಿ ಮಹಿಳೆಯರು. ಲೈಂಗಿಕ ಸಂಭೋಗದ ನಂತರ ಮೂತ್ರ ವಿಸರ್ಜನೆ ಅನುಭವವಾದರೂ, ಇಲ್ಲದಿದ್ದರೂ ಬಾತ್ರೂಮ್ಗೆ ಹೋಗಲೇಬೇಕು. ಇಲ್ಲವಾದರಲ್ಲಿ ಮೂತ್ರಕೋಶಕ್ಕೆ ಅಥವಾ ಜನನಾಂಗಕ್ಕೆ ಸಂಬಂಧಿಸಿದರೆ ಸೋಂಕಿನ ಅಪಾಯ ಉಂಟಾಗುವುದು.

ಮಹಿಳೆಯರು ಸಂಭೋಗದ ನಂತರ ಏಕೆ ಮೂತ್ರ ವಿಸರ್ಜಿಸಬೇಕು?:
ಲೈಂಗಿಕ ಆರೋಗ್ಯ ತಜ್ಞರ ಪ್ರಕಾರ, ಮಹಿಳೆಯರು ಲೈಂಗಿಕ ಕ್ರಿಯೆಯ ನಂತರ ಮೂತ್ರ ವಿಸರ್ಜನೆ ಮಾಡಬೇಕು. ಅವರ ಲೈಂಗಿಕ ಆರೋಗ್ಯಕ್ಕೆ ಇದು ಬಹಳ ಮುಖ್ಯ. ವಾಸ್ತವವಾಗಿ, ಮಹಿಳೆಯರ ಮೂತ್ರನಾಳವು ಚಿಕ್ಕದಾಗಿದ್ದು, ಸೋಂಕಿನ ಹೆಚ್ಚಿನ ಅಪಾಯವಿದೆ. ಸಂಭೋಗದ ಸಮಯದಲ್ಲಿ, ಪುರುಷರ ಮೂತ್ರದ ಬ್ಯಾಕ್ಟೀರಿಯಾವು ಮಹಿಳೆಯರ ಖಾಸಗಿ ಭಾಗಗಳನ್ನು ಸುಲಭವಾಗಿ ಪ್ರವೇಶಿಸುತ್ತದೆ. ಆದ್ದರಿಂದ, ಮಹಿಳೆಯರು ಸಂಭೋಗದ ನಂತರ 30 ನಿಮಿಷಗಳ ಒಳಗೆ ಮೂತ್ರ ವಿಸರ್ಜಿಸಲು ಮತ್ತು ನೀರಿನಿಂದ ಖಾಸಗಿ ಭಾಗವನ್ನು ಸ್ವಚ್ಛಗೊಳಿಸಬೇಕೆಂದು ತಜ್ಞರು ಸಲಹೆ ನೀಡುತ್ತಾರೆ. ಹೀಗೆ ಮಾಡುವುದರಿಂದ ಮಹಿಳೆಯರ ಖಾಸಗಿ ಭಾಗದಲ್ಲಿ ಸೋಂಕಿನ ಅಪಾಯ ಕಡಿಮೆಯಾಗುತ್ತದೆ.

ಮೂತ್ರ ವಿಸರ್ಜನೆಯ ವೇಳೆ ಉರಿಯುತ್ತಿದ್ದರೆ ಅರ್ಥವೇನು?:
ಮೂತ್ರ ವಿಸರ್ಜನೆಯ ಸಮಯದಲ್ಲಿ ನೀವು ಉರಿಯುತ್ತಿರುವ ಸಂವೇದನೆಯನ್ನು ಅನುಭವಿಸಿದರೆ ಅಥವಾ ಖಾಸಗಿ ಭಾಗದಲ್ಲಿ ಊತವನ್ನು ಅನುಭವಿಸಿದರೆ, ನಿಮಗೆ ಮೂತ್ರದ ಸೋಂಕು ಇದೆ ಎಂದು ಅರ್ಥಮಾಡಿಕೊಳ್ಳಿ. ಸಂಭೋಗದ ನಂತರ, ಮಹಿಳೆಯರ ಖಾಸಗಿ ಭಾಗದಲ್ಲಿ ಉರಿ ಮತ್ತು ಊತದಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ, ಇದು 2-3 ದಿನಗಳಲ್ಲಿ ತಾನಾಗಿಯೇ ಗುಣವಾಗುತ್ತದೆ. ನೀವು ದೀರ್ಘಕಾಲದವರೆಗೆ ಈ ಸಮಸ್ಯೆಯನ್ನು ಹೊಂದಿದ್ದರೆ, ವೈದ್ಯರನ್ನು ಸಂಪರ್ಕಿಸಿ.

ಸಂಭೋಗದ ನಂತರ ಪುರುಷರು ಮೂತ್ರ ವಿಸರ್ಜಿಸಬೇಕೇ?:
ಲೈಂಗಿಕತೆಯ ನಂತರ ಪುರುಷರು ಮೂತ್ರ ವಿಸರ್ಜಿಸುವ ಅಗತ್ಯವಿಲ್ಲ. ವಾಸ್ತವವಾಗಿ, ಲೈಂಗಿಕ ಸಮಯದಲ್ಲಿ, ಬ್ಯಾಕ್ಟೀರಿಯಾವು ಪುರುಷರ ಮೂತ್ರನಾಳವನ್ನು ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಅವುಗಳಲ್ಲಿ ಸೋಂಕಿನ ಅಪಾಯವು ಅತ್ಯಲ್ಪವಾಗಿದೆ. ಪುರುಷರು ಲೈಂಗಿಕತೆಯ ನಂತರ ಮೂತ್ರ ವಿಸರ್ಜಿಸಲು ಬಯಸಿದರೆ, ಅವರು ಮಾಡಬಹುದು. ಆದರೆ ಇದರ ಅವಶ್ಯಕತೆ ಇರುವುದು ಮಹಿಳೆಯರಿಗೆ ಹೆಚ್ಚು.

ಗರ್ಭಧಾರಣೆ ತಡೆಯಬಹುದೇ?:
ಇಲ್ಲ, ನೀವು ಸ್ಖಲನದ ಎರಡೇ ನಿಮಿಷದಲ್ಲಿ ಮೂತ್ರ ವಿಸರ್ಜನೆ ಮಾಡಿದರೂ ಗರ್ಭಧಾರಣೆ ತಡೆಯಲು ಆಗದು. ಯೋನಿಯಲ್ಲಿ ಸ್ಖಲನವಾದ ವೇಳೆ ವೀರ್ಯವು ಯೋನಿಯ ಕಣಿವೆಯಲ್ಲಿ ಬಿಡುಗಡೆ ಆಗುವುದು. ಗರ್ಭಕೋಶ ಮತ್ತು ಮೂತ್ರನಾಳಕ್ಕೆ ಬೇರೆಯೇ ಪ್ರವೇಶವಿದೆ. ಮೂತ್ರನಾಳವು ಮೂತ್ರವನ್ನು ಹೊರಗೆ ಹಾಕುವುದೇ ಹೊರತು, ಯೋನಿಯಲ್ಲಿರುವುದನ್ನು ಹೊರಹಾಕದು. ವೀರ್ಯವು ಯೋನಿಗೆ ಪ್ರವೇಶ ಮಾಡಿದ್ದರೆ ಅದು ಮತ್ತೆ ಹಿಂತಿರುಗುವುದಿಲ್ಲ. ಇದು ಮೇಲ್ಭಾಗಕ್ಕೆ ಪ್ರವೇಶ ಮಾಡಿ ಅಂಡಾಣುವನ್ನು ಫಲವತ್ತತೆ ಮಾಡಲು ಪ್ರಯತ್ನಿಸುವುದು.



Click it and Unblock the Notifications
